ರಜನಿ ಪುತ್ರಿ ಸಿಂಬು ಲವ್ವಿ ಡವ್ವಿ.. ಪೋನ್ ಕಾಲ್ ಲೀಕ್ ಆಗಿ ನಡೆದಿತ್ತು ರಾದ್ಧಾಂತ.. ಏನಿದು ಘಟನೆ?
ಸ್ಟಾರ್‌ಗಳ ಜೀವನದಲ್ಲಿ ವಿವಾದ, ಗಾಸಿಪ್ ಎಲ್ಲವೂ ಕಾಮನ್. ಅವರ ಬದುಕಿನಲ್ಲಿ ಒಂದಲ್ಲ ಒಂದು ವಿವಾದ ಇದ್ದೇ ಇರುತ್ತೆ. ಇಂತಹದರಲ್ಲಿ ರಜನಿಕಾಂತ್, ಧನುಷ್ ಹಾಗೂ ಸಿಂಬು ಕೂಡ ಹೊರತಾಗಿಲ್ಲ. ಈ ಮೂವರ ನಡುವೆ ನಡೆದ ಒಂದು ಘಟನೆ ಸಿನಿಮಾ ಲೋಕದಲ್ಲಿ ಅಲ್ಲೋಲ ಕಲ್ಲೋಲವನ್ನೇ ಎಬ್ಬಿಸಿತ್ತು.
ತಮಿಳು ಚಿತ್ರರಂಗದಲ್ಲಿ ಮೊದಲಿನಿಂದಲೂ ಧನುಷ್ ಹಾಗೂ ಸಿಂಬು ಎದುರಾಳಿಗಳು. ಇದು ಇಡೀ ಚಿತ್ರರಂಗಕ್ಕೆ ಗೊತ್ತು. ಧನುಷ್ ಚಿತ್ರರಂಗದಲ್ಲಿ ನೆಲೆಯೂರುವುದಕ್ಕೆ ಪರದಾಡುತ್ತಿದ್ದಾಗ, ಸಿಂಬು ಚಿತ್ರರಂಗಕ್ಕೆ ಕಾಲೂರಿದ್ದರು. ಇಬ್ಬರೂ ಸಿನಿಮಾ ಮಾಡುವುದಕ್ಕೆ ಶುರು ಮಾಡಿದಾಗ, ಆ ಪೈಪೋಟಿ ತಾರಕ್ಕೇರಿತ್ತು.

ಮೇಲ್ನೋಟಕ್ಕೆ ಧನುಷ್ ಹಾಗೂ ಸಿಂಬು ಇಬ್ಬರೂ ಸ್ನೇಹಿತರಂತೆ ವರ್ತಿಸುತ್ತಾರೆ. ಆದರೆ, ಅಂತ ವಾತಾವರಣವಿಲ್ಲ ಅಂತಾನೇ ಚಿತ್ರರಂಗ ಹೇಳುತ್ತೆ. ಧನುಷ್ ಆಗತಾನೇ ಯಶಸ್ಸು ಕಂಡಿದ್ದರು. ಆ ವೇಳೆ ಧನುಷ್ ಮದುವೆ ರಜನಿ ಪುತ್ರಿ ಐಶ್ವರ್ಯಾ ಜೊತೆ ನಡೆದಿತ್ತು. ಇದಾದಾ ಕೆಲವೇ ದಿನಗಳಲ್ಲಿ ಐಶ್ವರ್ಯಾ ಹಾಗೂ ಸಿಂಬು ನಡುವಿನ ಪೋನ್ ಸಂಭಾಷಣೆಯ ತುಣುಕು ವೈರಲ್ ಆಗಿತ್ತು. ಅದು ವಿವಾದಕ್ಕೂ ಎಡೆ ಮಾಡಿಕೊಟ್ಟಿತ್ತು.
ಕಾಲಿವುಡ್‌ನಲ್ಲಿ ಧನುಷ್ Vs ಸಿಂಬು
ಸಿಂಬು ಹುಟ್ಟಿದ ಆರು ತಿಂಗಳಿಂದಲೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಸುಮಾರು 40 ವರ್ಷಗಳ ಸಿನಿ ಜರ್ನಿ ಇದೆ. ಧನುಷ್ ಲೇಟಾಗಿ ಬಂದಿದ್ದರೂ, ಅವರದ್ದೇ ಆದ ಯಶಸ್ಸಿನ ಮಾರ್ಗವಿದೆ. ಸಿಂಬು ಆರಂಭದಲ್ಲಿ ದಿನಗಳಲ್ಲಿ ಮೆರೆದರೆ, ಧನುಷ್ ಕಾಲ ಈಗ ನಡೆಯುತ್ತಿದೆ. ಧನುಷ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗುತ್ತಿವೆ. ಒಂದಿಷ್ಟು ದಿನ ಸಿಂಬು ಕಳೆದೇ ಹೋಗಿದ್ದರು. ಈಗ ಮತ್ತೆ ಲಯಕ್ಕೆ ಬಂದಿದ್ದಾರೆ. ಇವರಿಬ್ಬರ ನಡುವಿನ ಪೈಪೋಟಿ ಇಬ್ಬರ ಖಾಸಗಿ ವಿಷಯಗಳು ಲೀಕ್ ಆಗುವವರೆಗೂ ಬಂದು ನಿಂತಿತ್ತು. ಇದು ವಿವಾದಕ್ಕೂ ಎಡೆ ಮಾಡಿಕೊಟ್ಟಿತ್ತು.

ಸಿಂಬು-ಐಶ್ವರ್ಯಾ ಆಡಿಯೋ ಲೀಕ್
2004ರಲ್ಲಿ ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಕೆಲವೇ ದಿನಗಳಲ್ಲಿ ಸಿಂಬು ಹಾಗೂ ಐಶ್ವರ್ಯಾ ರಜನಿಕಾಂತ್ ನಡುವಿನ ಆಡಿಯೋ ತುಣುಕು ಲೀಕ್ ಆಗಿತ್ತು. ಇದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಐಶ್ವರ್ಯಾ ಹಾಗೂ ಸಿಂಬು ಇಬ್ಬರೂ ಲವ್‌ನಲ್ಲಿ ಬಿದ್ದಿದ್ದರು. ಈ ಸಂಬಂಧ ಸಿಂಬು, ಐಶ್ವರ್ಯಾ ಹಾಗೂ ಐಶ್ವರ್ಯಾ ಅಮ್ಮ ಲತಾ ಮೂವರ ಸಂಭಾಷಣೆ ಲೀಕ್ ಆದ ಈ ಆಡಿಯೋ ಕ್ಲಿಪ್‌ನಲ್ಲಿ ಇತ್ತು.
ಲೀಕ್ ಆದ ಆಡಿಯೋದಲ್ಲೇನಿತ್ತು?
ಧನುಷ್ ಹಾಗೂ ಐಶ್ವರ್ಯಾ ಡೇಟಿಂಗ್ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆ ಬಳಿಕ ಧನುಷ್ ವೃತ್ತಿ ಬದುಕು ಉತ್ತುಂಗಕ್ಕೆ ಏರಿತ್ತು. ಈ ಆಡಿಯೋ ಲೀಕ್ ಆದಾಗ, ರಜನಿಕಾಂತ್ ಪುತ್ರಿ ಐಶ್ವರ್ಯಾ ನಟ ಸಿಂಬು ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಬಳಿಕ ಇಬ್ಬರು ಬೇರೆಯಾದರು ಅನ್ನೋ ಸುದ್ದಿ ಓಡಾಡಿದ್ದವು. " ನಾನು ಐದು ವರ್ಷ ಪ್ರೀತಿ ಮಾಡಿದ್ದೆವು. ಈಗ ಮದುವೆ ಫಿಕ್ಸ್ ಆಗಿದೆ ಅಂತ ಹೇಳುತ್ತಿದ್ದೀಯಾ ಅನ್ನೋ ಸಂಭಾಷಣೆ ಲೀಕ್ ಆದ ಆಡಿಯೋ ಕ್ಲಿಪ್‌ನಲ್ಲಿ ಇತ್ತು. ಇದೇ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಬಳಿಕ ಇದು ನಕಲಿ ಆಡಿಯೋ ಎಂದು ಹೇಳಲಾಯಿತು.
ಧನುಷ್-ಸಿಂಬು ನಡುವೆ ಹೆಚ್ಚಿದ ವಿವಾದ
ಈ ಆಡಿಯೋ ಲೀಕ್ ಆದ ಬಳಿಕ ಧನುಷ್ ಹಾಗೂ ಸಿಂಬು ನಡುವೆ ದ್ವೇಷ ಮತ್ತಷ್ಟು ಹೆಚ್ಚಾಗಿತ್ತು. ಇಬ್ಬರು ತಮ್ಮ ಸಿನಿಮಾಗಳಲ್ಲಿ ಹಾಡು ಹಾಗೂ ಡೈಲಾಗ್‌ಗಳಲ್ಲಿ ಟಾಂಗ್ ಕೊಟ್ಟಿದ್ದರು, ಒಮ್ಮೆ ಧನುಷ್ ನಟ ಸಿಂಬು ವೃತ್ತಿ ಬದುಕನ್ನೇ ನಾಶ ಮಾಡಲು ಹೊರಟಿದ್ದರು ಎಂದು ಗುಲ್ಲೆದ್ದಿತ್ತು. ಇತ್ತೀಚೆಗೆ ತಮಿಳಿನ ಹಾಸ್ಯ ನಟ ಸಂತಾನಂ ಸಿನಿಮಾ ಕಾರ್ಯಕ್ರಮದಲ್ಲಿ ಇಬ್ಬರೂ ಒಟ್ಟಿಗೆ ಸೇರಿದ್ದರು.


Click it and Unblock the Notifications











