ಸ್ಯಾಂಡಲ್‌ವುಡ್‌ನ ಭವಿಷ್ಯದ ಹೀರೋಯಿನ್ಸ್ ಇವರೇ..? ಪೋಷಕರ ಹಾದಿ ಹಿಡಿಯುತ್ತಾರಾ ತಾರೆಯರ ಮಕ್ಕಳು?
ಸ್ಯಾಂಡಲ್‌ವುಡ್‌ನಲ್ಲಿ ಹೀರೋಯಿನ್‌ಗಳಿಗೆ ಕೊರತೆ ಇದೆಯೇ? ಇಂತಹದ್ದೊಂದು ಪ್ರಶ್ನೆ ಪ್ರತಿಬಾರಿಯೂ ಎದ್ದೇಳುತ್ತಲೇ ಇರುತ್ತೆ. ಕನ್ನಡದ ನಿರ್ಮಾಪಕರು ಪರಭಾಷಾ ನಾಯಕಿಯರ ಮೊರೆ ಹೋದಾಗಲೆಲ್ಲಾ ಇದೇ ಚರ್ಚೆಯಾಗುತ್ತೆ. ಈಗ ಕನ್ನಡ ಚಿತ್ರರಂಗಕ್ಕೆ ಹೊಸ ಪೀಳಿಗೆ ಕಾಲಿಡುವುದಕ್ಕೆ ಸಜ್ಜಾಗುತ್ತಿದೆ.
ಶಿವಣ್ಣ, ಸುದೀಪ್, ದರ್ಶನ್, ಯಶ್, ಧನಂಜಯ್ ಬಳಿಕ ಯುವ ಪೀಳಿಗೆ ಸ್ಯಾಂಡಲ್‌ವುಡ್ ಅನ್ನು ಟೇಕ್ ಮಾಡುವುದಕ್ಕೆ ಹೊರಟಿದೆ. ಯುವ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್, ಸುದೀಪ್ ಅಕ್ಕನ ಮಗ ಸಚಿ, ಉಪ್ಪಿ ಅಣ್ಣನ ಮಗ ನಿರಂಜನ್ ಸೇರಿದಂತೆ ಹಲವರು ಚಿತ್ರರಂಗದಲ್ಲಿ ನಾಯಕರಾಗಿ ಸ್ಟಾರ್ ಪಟ್ಟಕ್ಕೆ ಏರುವುದಕ್ಕೆ ಶತ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಇವರ ಹಿಂದೇನೆ ಕನ್ನಡ ಚಿತ್ರರಂಗದ ತಾರೆಯರ ಪುತ್ರಿಯರು ಕೂಡ ಚಿತ್ರರಂಗಕ್ಕೆ ಬರಬಹುದು. ಉಪೇಂದ್ರ, ಗುರುಕಿರಣ್, ಗಣೇಶ್, ಶ್ರುತಿ, ಸುಧಾರಾಣಿ ಪುತ್ರಿಯರು ಚಿತ್ರರಂಗದಲ್ಲಿ ನಾಯಕಿಯರಾಗಿ ಸದ್ದು ಮಾಡಬಹುದು. ಕನ್ನಡದ ಯುವ ನಾಯಕರಿಗೆ ಹೀರೋಯಿನ್ ಆಗಿ ಮಿಂಚಬಹುದು. ಒಬ್ಬರಿಗಿಂತ ಒಬ್ಬರು ಸುಂದರವಾಗಿರುವ ತಾರೆಯರ ಪುತ್ರಿಯರು ಯಾರು? ಈಗ ಏನು ಮಾಡುತ್ತಿದ್ದಾರೆ? ಇವರೆಲ್ಲರೂ ನಾಯಕಿಯರಾಗುತ್ತಾರಾ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಗುರುಕಿರಣ್ ಪುತ್ರಿ ಶ್ರಾವ್ಯ ಶೆಟ್ಟಿ
ಸ್ಯಾಂಡಲ್‌ವುಡ್‌ನ ಸ್ಟೈಲಿಶ್ ಸಂಗೀತ ನಿರ್ದೇಶಕ ಗುರುಕಿರಣ್. ಇವರ ಪುತ್ರಿ ಶ್ರಾವ್ಯಾ ಶೆಟ್ಟಿ ತಾಯಿ ಪಲ್ಲವಿಯೊಂದಿಗೆ ಪೋಸ್ ಕೊಟ್ಟು ಇತ್ತೀಚೆಗೆ ಗಮನ ಸೆಳೆದಿದ್ದರು. ಕೆಂಪು ಲೆಹೆಂಗಾದಲ್ಲಿ ಮಿಂಚಿದ್ದ ಶ್ರಾವ್ಯಾ ಶೆಟ್ಟಿಯನ್ನು ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಡಬಹುದೆಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಅವರಿಗೆ ಸಿನಿಮಾ ಬಗ್ಗೆ ಆಸಕ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚುವ ಎಲ್ಲಾ ಲಕ್ಷಣಗಳು ಇವೆ.
ಗಣೇಶ್ ಪುತ್ರಿ ಚರಿತ್ರಿಯಾ
ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ದಂಪತಿಯ ಪುತ್ರಿ ಚರಿತ್ರಿಯಾ ಕೂಡ ಭವಿಷ್ಯದಲ್ಲಿ ನಾಯಕಿಯಾಗಬಹುದು. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ತಂದೆಯೊಂದಿಗೆ ಕಾಣಿಸಿಕೊಳ್ಳುತ್ತಾರೆ. ನೋಡಲು ಲಕ್ಷಣವಾಗಿರುವ ಈಕೆಗೆ ಸಿನಿಮಾದಲ್ಲಿ ಆಸಕ್ತಿ ಇರುವಂತೆ ತೋರುತ್ತಿದೆ. ಮುಂದಿನ ದಿನಗಳಲ್ಲಿ ನಾಯಕಿಯಾಗಬಹುದಾದ ಸ್ಟಾರ್ ಪುತ್ರಿಯರಲ್ಲಿ ಇವರು ಕೂಡ ಇದ್ದಾರೆ. ಆದರೆ, ಗಣೇಶ್ ಹಾಗೂ ಪುತ್ರಿ ಚರಿತ್ರಿಯಾ ಅವರ ಭವಿಷ್ಯದ ಪ್ಲ್ಯಾನ್ ಏನಿದು ಅನ್ನೋದು ಇನ್ನೂ ರಿವೀಲ್ ಆಗಿಲ್ಲ.

ಶ್ರುತಿ ಪುತ್ರಿ ಗೌರಿ
ಇವರೊಂದಿಗೆ ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ರುತಿ ಅವರ ಪುತ್ರಿ ಗೌರಿ ಕೂಡ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚಬಹುದು. ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೊಗಳನ್ನು ನೋಡಿ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರದ್ದು ಕಲಾವಿದರ ಕುಟುಂಬ ಆಗಿದ್ದರಿಂದ ಗೌರಿ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಡುವ ಎಲ್ಲಾ ಸಾಧ್ಯತೆಗಳು ಇವೆ.
ಉಪೇಂದ್ರ ಪುತ್ರಿ ಐಶ್ವರ್ಯಾ
ಪ್ರಿಯಾಂಕಾ ಹಾಗೂ ಉಪೇಂದ್ರ ದಂಪತಿ ಪುತ್ರಿ ಐಶ್ವರ್ಯಾ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ದೇವಕಿ ಅನ್ನೋ ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಹಿಂದೆ 'ಯುವ' ರಾಜ್‌ಕುಮಾರ್ ಚೊಚ್ಚಲ ಸಿನಿಮಾಗೂ ಇವರೇ ನಾಯಕಿಯಾಗುತ್ತಾರೆ ಅನ್ನೋ ಸುದ್ದಿ ಹಬ್ಬಿತ್ತು. ಆ ವೇಳೆ ಉಪ್ಪಿ ಮಕ್ಕಳೇ ಆ ಸುದ್ದಿ ಕೇವಲ ರೂಮರ್ ಅಷ್ಟೇ ಎಂದಿದ್ದರು. ಸ್ಯಾಂಡಲ್‌ವುಡ್‌ನಲ್ಲಿ ಮಿಂಚ ಬಹುದಾದ ನಾಯಕಿಯರ ಪಟ್ಟಿಯಲ್ಲಿ ಐಶ್ವರ್ಯಾ ಉಪೇಂದ್ರ ಕೂಡ ಇದ್ದಾರೆ.
ಸುಧಾರಾಣಿ ಪುತ್ರ ನಿಧಿ
ಕನ್ನಡ ಚಿತ್ರರಂಗದ ಮತ್ತೊಬ್ಬ ತಾರೆ ಸುಧಾರಾಣಿ. ಇವರ ಮಗಳು ನಿಧಿ ಕೂಡ ನೋಡುವುದಕ್ಕೆ ಸುಂದರವಾಗಿದ್ದಾರೆ. ಸದ್ಯ ಶಿಕ್ಷಣದ ಕಡೆಗೆ ನಿಧಿ ಗಮನ ಹರಿಸುತ್ತಿದ್ದಾರೆ. ಈ ಹಿಂದೆ 'ಯುವ' ಸಿನಿಮಾಗೆ ನಾಯಕಿಯಾಗುತ್ತಾರೆ ಅನ್ನೋ ಸುದ್ದಿಯಾಗಿತ್ತು. ಆದರೆ, ಅದು ಕೇವಲ ಗಾಳಿ ಸುದ್ದಿಯಾಗಿಯೇ ಉಳಿದುಬಿಟ್ಟಿತ್ತು. ಮುಂದಿನ ದಿನಗಳಲ್ಲಿ ಇವರೂ ಕೂಡ ನಾಯಕಿಯಾಗಬಹುದು.


Click it and Unblock the Notifications