ಸುನೀಲ್ ನಂತರ ಆ ಕುಟುಂಬದಿಂದ ಮತ್ಯಾರು ಚಿತ್ರರಂಗಕ್ಕೆ ಬಂದಿಲ್ಲ ಏಕೆ?
ಶ್ರುತಿ, ಬೆಳ್ಳಿ ಕಾಲುಂಗುರ, ಸ್ನೇಹದ ಕಡಲಲ್ಲಿ, ಸಿಂಧೂರ ತಿಲಕ ಹೀಗೆ ಉತ್ತಮ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ನಟ ಸುನೀಲ್ ಕನ್ನಡ ಚಿತ್ರರಂಗದಲ್ಲಿ ಒಬ್ಬ ಭರವಸೆಯ ಕಲಾವಿದ ಆಗಿದ್ದರು. ಕೇವಲ ನಾಲ್ಕೈದು ವರ್ಷದಲ್ಲಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ 'ಸ್ಟಾರ್ ನಟ' ಎನಿಸಿಕೊಂಡಿದ್ದರು. ಕನ್ನಡ ಇಂಡಸ್ಟ್ರಿಯಲ್ಲಿ ಸುನೀಲ್ ಬಹಳ ಎತ್ತರಕ್ಕೆ ಬೆಳೆಯಲಿದ್ದಾರೆ ಎಂಬ ಅಭಿಪ್ರಾಯಗಳು ಸಹಜವಾಗಿದ್ದವು.
ಆದರೆ, ವಿಧಿಯ ಕ್ರೂರತೆಗೆ ನಟ ಸುನೀಲ್ ಬಲಿಯಾಗಬೇಕಾಯಿತು. ಉತ್ತುಂಗದಲ್ಲಿದ್ದ ಸುನೀಲ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು. ಸುನೀಲ್ ನಿಧನರಾದಾಗ ಅವರ ವಯಸ್ಸು ಕೇವಲ 30 ವರ್ಷ. ಇನ್ನು ಮದುವೆಯಾಗಿರಲಿಲ್ಲ. ಸುನೀಲ್ ನಂತರ ಅವರ ಕುಟುಂಬದಿಂದ ಮತ್ಯಾರು ಚಿತ್ರರಂಗಕ್ಕೆ ಬಂದಿಲ್ಲ ಏಕೆ ಎಂಬ ಪ್ರಶ್ನೆಯೊಂದು ಕಾಡುವುದು ಸಾಮಾನ್ಯ. ಅಷ್ಟಕ್ಕೂ, ಸುನೀಲ್ ಕುಟುಂಬ ಎಲ್ಲಿದೆ? ಮುಂದೆ ಓದಿ...

ಸುನೀಲ್ ಕುಟುಂಬದ ಬಗ್ಗೆ....
ಮಂಗಳೂರಿನಲ್ಲಿ ಗ್ರಾಮವೊಂದರಲ್ಲಿ ಹುಟ್ಟಿದ ಸುನೀಲ್ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ಸೋದರ ಮಾವನ ಮನೆಯಲ್ಲಿ ಉಳಿದುಕೊಂಡು ಇಂಜಿನಿಯರಿಂಗ್ ಓದುತ್ತಿದ್ದರು. ಸುನೀಲ್‌ಗೆ ಇಬ್ಬರು ಅಕ್ಕಂದಿರು ಹಾಗು ಒಬ್ಬ ಅಣ್ಣ. ಹಿರಿಯ ಸಹೋದರಿ ಸುಚಿತ್ರ ಮತ್ತು ಎರಡನೇ ಅಕ್ಕನ ಮಗನ ಜೊತೆ ಸುನೀಲ್ ಹೆಚ್ಚು ಒಡನಾಟ ಹೊಂದಿದ್ದರು. ತಂದೆ ಬಹಳ ಹಿಂದೆಯೇ ತೀರಿಕೊಂಡರು. ಸುನೀಲ್ ತಾಯಿ ಈಗಲೂ ಜೀವಿಸುತ್ತಿದ್ದಾರೆ.

ಅಕ್ಕನ ಮಕ್ಕಳ ಜೊತೆ ಸುನೀಲ್ ಒಡನಾಟ
ಸುನೀಲ್ ಅಕ್ಕ ಸುಚಿತ್ರಾ ಅವರಿಗೆ ನೀರಜ್ ಮತ್ತು ಆತ್ಮಜ್ ಎಂಬ ಇಬ್ಬರು ಮಕ್ಕಳು. ಎರಡನೇ ಅಕ್ಕನ ಮಗ ಆಷ್ಟ್ರಯ್. ಈ ಮೂವರ ಜೊತೆ ಬಹಳ ಒಡನಾಟ ಹೊಂದಿದ್ದರು. ಸಿನಿಮಾ ಕಾರ್ಯಕ್ರಮಗಳಿಗೆ, ಶೂಟಿಂಗ್‌ಗಳಿಗೆ ಇವರನ್ನು ಸುನೀಲ್ ಕರೆದುಕೊಂಡು ಹೋಗುತ್ತಿದ್ದಂತೆ. ಹಬ್ಬಗಳಿಗೆ, ಶೂಟಿಂಗ್ ಹಿನ್ನೆಲೆ ಊರಿಗೆ ಬಂದಾಗ ಇವರ ಜೊತೆ ಸಮಯ ಕಳೆಯುತ್ತಿದ್ದರಂತೆ.

ಸುನೀಲ್ ಕುಟುಂಬದಿಂದ ಮತ್ಯಾರು ಬರಲಿಲ್ಲ ಏಕೆ?
ಸುನೀಲ್ ನಿಧನದ ನಂತರ ಸಿನಿಮಾ ಇಂಡಸ್ಟ್ರಿ ಜೊತೆಗಿನ ನಂಟು ಕಡಿತವಾಯಿತು. ಅಕ್ಕನ ಮಕ್ಕಳ ಆಗಿನ್ನು ಸಣ್ಣವರು. ಚಿತ್ರರಂಗದ ಜೊತೆ ಪರಿಚಯ ಇರಲಿಲ್ಲ. ಹಾಗಾಗಿ, ಚಿತ್ರರಂಗಕ್ಕೆ ಯಾರು ಬಂದಿಲ್ಲ. ಈ ಕುರಿತು ನಿರ್ದೇಶಕ ರಘುರಾಮ್ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಸುನೀಲ್ ಅಕ್ಕನ ಮಗ ನೀರಜ್ ''ಬಹುಶಃ ಸುನೀಲ್ ಅವರು ಇದ್ದಿದ್ದರೆ ನಾವು ಇಂಡಸ್ಟ್ರಿಗೆ ಬರ್ತಿದ್ವಿ. ಒಂದೆರಡು ಸಿನಿಮಾದಲ್ಲಾದರೂ ನಟಿಸುತ್ತಿದ್ವಿ. ಅವರನ್ನು ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರು'' ಎಂದು ಹೇಳಿಕೊಂಡಿದ್ದಾರೆ.
ಚಿತ್ರಕೃಪೆ: RR ಕನಸುಗಳ ಕಾರ್ಖಾನೆ
Recommended Video

30ನೇ ವಯಸ್ಸಿನಲ್ಲಿ ದುರಂತ
ಸುನೀಲ್‌ಗೆ ಅಪಘಾತವಾದ ಸಂದರ್ಭದಲ್ಲಿ ಬಹಳ ಯಶಸ್ಸಿನಲ್ಲಿದ್ದರು. ನಿರಂತರವಾಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ನಟಿ ಮಾಲಾಶ್ರೀ ಮತ್ತು ಸುನೀಲ್ ಜೋಡಿಯಲ್ಲಿ ಬಂದ ಸಿನಿಮಾಗಳು ದೊಡ್ಡ ಹಿಟ್ ಆಗಿತ್ತು. ಬಹುಶಃ ಸುನೀಲ್ ಸಿನಿಮಾ ಇಂಡಸ್ಟ್ರಿಯಲ್ಲಿ ಇನ್ನಷ್ಟು ದಿನ ಇರಬೇಕಿತ್ತು. 1994 ಜುಲೈ 24 ರಂದು ಚಿತ್ರದುರ್ಗದಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಕಾರು ಅಪಘಾತವಾಗಿ ಸುನೀಲ್ ಮೃತಪಟ್ಟರು.


Click it and Unblock the Notifications











