ಭಾರತೀಯ ಚಿತ್ರರಂಗದಲ್ಲಿ ಪ್ರೇಕ್ಷಕರೇ ದ್ವೇಷಿಸಿದಂತಹ 'ಟಾಕ್ಸಿಕ್' ಪಾತ್ರಗಳು; ಆದರೂ ಸಿನಿಮಾ ಮೆಗಾ ಹಿಟ್ ಆಗಿದ್ದೇಗೆ?

ರಾಕಿಂಗ್ ಸ್ಟಾರ್ ಯಶ್ ನಟನೆಯ ಸಿನಿಮಾ 'ಟಾಕ್ಸಿಕ್' ಟೀಸರ್ ಕೊನೆಗೂ ರಿಲೀಸ್ ಆಗಿದೆ. ಇಷ್ಟು ದಿನ ರಾಕಿಂಗ್ ಸ್ಟಾರ್ ಅಭಿಮಾನಿಗಳು ಇದೇ ಟೀಸರ್‌ಗಾಗಿ ಕಾದು ಕೂತಿದ್ದರು. 'ಟಾಕ್ಸಿಕ್' ಟೀಸರ್ ನೋಡಿದ್ಮೇಲೆ ಇದೆಷ್ಟು ಸಿನಿಮಾ ಇನ್ನೆಷ್ಟು 'ಟಾಕ್ಸಿಕ್' ಇರಬಹುದೆಂಬ ಚರ್ಚೆ ಶುರುವಾಗಿದೆ. ಯಾಕಂದ್ರೆ, ಈ ಸಿನಿಮಾದಲ್ಲಿ ಯಶ್ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳಬಹುದೆಂದು ಅಂದಾಜು ಮಾಡಲಾಗುತ್ತಿದೆ.

ಭಾರತೀಯ ಚಿತ್ರರಂಗದಲ್ಲಿ ಸೂಪರ್‌ಸ್ಟಾರ್ ಆಗಿ ಗುರುತಿಸಿಕೊಂಡವರು ತೆರೆಮೇಲೆ ನೆಗೆಟಿವ್ ಪಾತ್ರ ಮಾಡಿದಾಗ ಆಗುವ ಇಂಪ್ಯಾಕ್ಟ್ ಬಲು ದೊಡ್ಡದು. ಪ್ರೇಕ್ಷಕರು ತಮ್ಮ ಹೀರೋನಾ ಪ್ರೀತಿಸಬೇಕಾ? ದ್ವೇಷಿಸಬೇಕಾ? ಅನ್ನೋ ಗೊಂದಲಕ್ಕೆ ಬಿದ್ದು ಬಿಡುತ್ತಾರೆ. ಇಲ್ಲಾ ಒಬ್ಬ ನಟನಾಗಿ ಮೆಚ್ಚಿಕೊಳ್ಳಬೇಕಾ? ಇಲ್ಲ ಪಾತ್ರವಾಗಿ ದ್ವೇಷಿಸಬೇಕಾ? ಪ್ರಶ್ನೆ ಹುಟ್ಟಿಕೊಳ್ಳುತ್ತವೆ. ಭಾರತೀಯ ಚಿತ್ರರಂಗದಲ್ಲಿ ಇಂತಹ ಹಲವು ಸಿನಿಮಾಗಳು ಬಂದು ಹೋಗಿವೆ.

Animal Kabir singh to Toxic Films created buzz before Yash Movie Toxic

ರಣ್‌ಬೀರ್ ಕಪೂರ್-'ಅನಿಮಲ್'

ಇತ್ತೀಚೆಗೆ ಹೀರೋಗಳೇ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುವ ಟ್ರೆಂಡ್ ಬೆಳೆದು ಬಿಟ್ಟಿದೆ. ರಣ್‌ಬೀರ್ ಕಪೂರ್ ನಟಿಸಿದ 'ಅನಿಮಲ್' ಸಿನಿಮಾ ಕೂಡ ಒಂದು. ಇದರಲ್ಲಿ ರಣ್‌ವೀರ್ ಕಪೂರ್‌ ಟಾಕ್ಸಿಕ್ ಪರ್ಸನಾಲಿಟಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಹಿಳೆಯನ್ನು ತನ್ನ ಭೋಗದ ವಸ್ತುವಿನಂತೆ ಕಾಣುವ, ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುವ ಪಾತ್ರವದು. ಹಾಗೇ ಸಿಕ್ಕಾಪಟ್ಟೆ ವೈಲೆಂಟ್ ಆಗಿಯೂ ಕಾಣಿಸಿಕೊಂಡಿದ್ದರು. ಸಿನಿಮಾದ ಟೈಟಲ್‌ಗೆ ತಕ್ಕಂತೆ 'ಅನಿಮಲ್' ಅಂತೆಯೇ ವರ್ತಿಸಿದ್ದರು.

ವಿಜಯ್ ದೇವರಕೊಂಡ-'ಅರ್ಜುನ್ ರೆಡ್ಡಿ'

ವಿಜಯ್ ದೇವರಕೊಂಡ ನಟನೆಯ 'ಅರ್ಜುನ್ ರೆಡ್ಡಿ' ಟಾಕ್ಸಿಕ್ ನೇಚರ್ ಇರುವ ಸಿನಿಮಾಗಳ ಪಟ್ಟಿಗೆ ಸೇರಿಸಬಹುದು. ವೃತ್ತಿಯಲ್ಲಿ ವೈದ್ಯನಾಗಿದ್ದರೂ, ತನ್ನ ಕೋಪದ ಸ್ವಭಾವದಿಂದ ಕೆಟ್ಟವನಾಗಿ ಕಾಣುತ್ತಾನೆ. ಪ್ರೀತಿ, ಪ್ರೇಮದ ವಿಚಾರದಲ್ಲಿ ಸಂಪೂರ್ಣ ಹಿಡಿತ ಸಾಧಿಸುವುದಕ್ಕೆ ಬಯಸುತ್ತಾನೆ. ಈ ವರ್ತನೆ ಆತನ ಗರ್ಲ್‌ಫ್ರೆಂಡ್‌ಗೆ ಹಲವು ಬಾರಿ ಸಂಕಷ್ಟಕ್ಕೆ ಸಿಲುಕಿಸುತ್ತೆ. ಇದರಲ್ಲಿ ವಿಜಯ್ ದೇವರಕೊಂಡ ಸಿನಿಮಾ ಹೀರೋ ಆಗಿದ್ದರೂ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು.

ಶಾರುಖ್ ಖಾನ್-'ಢರ್'

ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾಗಳಲ್ಲಿ ಶಾರುಖ್ ಖಾನ್ ನಟನೆಯ 'ಢರ್' ಕೂಡ ಒಂದು. ತನ್ನ ಪ್ರೀತಿಸಿದ ಹುಡುಗಿಯನ್ನು ಪಡೆಯುವುದಕ್ಕೆ ಶಾರುಖ್ ಯಾವ ಹಂತಕ್ಕೆ ಬೇಕಾದರೂ ಹೋಗುವ ಪಾತ್ರ. ಇಲ್ಲಿ ಶಾರುಖ್ ಖಾನ್ 'ಟಾಕ್ಸಿಕ್' ಸ್ವಭಾವವಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಂದಿಗೂ ಕಿಂಗ್ ಖಾನ್ ನಟಿಸಿದ ಅತ್ಯುತ್ತಮ ಸಿನಿಮಾಗಳಲ್ಲಿ 'ಢರ್' ಕೂಡ ಸ್ಥಾನ ಪಡೆದುಕೊಳ್ಳುತ್ತೆ. ಹಾಗೇ ಈ ಸಾಲಿಗೆ ಸೇರಿಕೊಳ್ಳುವ ಇನ್ನೊಂದು ಸಿನಿಮಾ 'ಭಾಜೀಘರ್'.

Animal Kabir singh to Toxic Films created buzz before Yash Movie Toxic

ಕಾಜೋಲ್-'ಗುಪ್ತ್'

ಹೀರೋಗಳೇ ನೆಗೆಟಿವ್ ಶೇಡ್‌ನಲ್ಲಿ ನಟಿಸಿದ ಸಿನಿಮಾಗಳು ಇನ್ನೂ ಸಾಕಷ್ಟಿವೆ. ಈಗ ರೊಮ್ಯಾಂಟಿಕ್ ಹೀರೋಯಿನ್ ಪಟ್ಟಿಯ ಸಾಲಿನಲ್ಲಿದ್ದ ಕಾಜೋಲ್ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು. ಅದುವೇ 'ಗುಪ್ತ್'. ಈ ಸಿನಿಮಾದಲ್ಲಿ ಕಾಜೋಲ್ ತನ್ನ ಗೆಳೆಯನನ್ನು ಪಡೆದುಕೊಳ್ಳುವುದಕ್ಕೆ ಏನು ಮಾಡುವುದಕ್ಕೂ ಸಿದ್ಧಳಾಗುವ ಪಾತ್ರ. ಗೆಳೆಯ ಸಾಹಿಲ್ ಮೇಲಿನ ಅತಿಯಾದ ವ್ಯಾಮೋಹದಿಂದ ಆಕೆ ಕೊಲೆ ಮಾಡುವ ಕೃತ್ಯಕ್ಕೆ ಕೈ ಹಾಕುತ್ತಾಳೆ. ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು.

ಕಾಜೋಲ್, ಶಾರುಖ್ ಖಾನ್, ರಣ್‌ಬೀರ್ ಕಪೂರ್, ರಣ್‌ವೀರ್ ಸಿಂಗ್, ವಿಜಯ್ ದೇವರಕೊಂಡ ಅಂತಹ ಇನ್ನು ಸಾಕಷ್ಟು ಹೀರೋ ನೆಗೆಟಿವ್ ಶೇಡ್‌ಗಳಲ್ಲಿ ನಟಿಸಿದ ಸಿನಿಮಾಗಳು ಗೆದ್ದಿವೆ. ಯಶ್ ಈಗಾಗಲೇ 'ಕೆಜಿಎಫ್‌' ಮೂಲಕ ನೆಗೆಟಿವ್ ಶೇಡ್‌ನಲ್ಲಿ ಕಂಡಿದ್ದರೂ, ಪಾತ್ರಕ್ಕೊಂದು ಸಾಫ್ಟ್‌ ಕಾರ್ನರ್ ಇತ್ತು. ಆದ್ರೀಗ 'ಟಾಕ್ಸಿಕ್'ನಲ್ಲಿ ಔಟ್ ಅಂಡ್ ಔಟ್ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Animal, Kabir singh to Toxic Films created buzz before Yash Movie Toxic.
Read more about: yash toxic indian movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X