15ರ ರೇಖಾಗೆ ಬಲವಂತವಾಗಿ ಕಿಸ್ ಕೊಟ್ಟಿದ್ದ 33 ವರ್ಷದ ನಟ: 5 ನಿಮಿಷದ ದೃಶ್ಯದ ಬಳಿಕ ನಡುಗಿದ್ದ ನಟಿ

ಬಾಲಿವುಡ್‌ನ ಎವರ್‌ಗ್ರೀನ್ ಹೀರೊಯಿನ್ ರೇಖಾ. ವಯಸ್ಸು 68 ಆದರೂ, ಅವರ ಸೌಂದರ್ಯಕ್ಕೆ ಸರಿ ಸಾಟಿಯೇ ಇಲ್ಲ. ತಮಿಳಿನ ಸೂಪರ್‌ಸ್ಟಾರ್ ಜೆಮಿನಿ ಗಣೇಶನ್ ಹಾಗೂ ನಟಿ ಕೆ ಪುಷ್ಪವಲ್ಲಿ ಪುತ್ರಿಯಾಗಿದ್ದರೂ, ಎಲ್ಲೂ ಅವರ ಹೆಸರನ್ನು ಹೇಳಿಕೊಂಡು ಬೆಳೆದಿಲ್ಲ. 70ರ ದಶಕದ ವರೆಗೂ ತನ್ನ ಕುಟುಂಬದ ಹಿನ್ನೆಲೆಯನ್ನೇ ರೇಖಾ ಹೇಳಿಕೊಂಡಿರಲಿಲ್ಲ.

ತನ್ನ ಸೌಂದರ್ಯದಿಂದ, ನಟನೆಯಿಂದಲೇ ಹೆಸರು, ಹಣ ಸಂಪಾಧಿಸಿದ್ದ ನಟಿಯೀಕೆ. ರೇಖಾ ಬ್ಯೂಟಿಗೆ, ನಟನೆಗೆ ಕೇವಲ ಅಭಿಮಾನಿಗಳಷ್ಟೇ ಅಲ್ಲ. ಅಂದಿನ ಕಾಲದ ಹೀರೊಗಳು ಕೂಡ ಬೆರಗಾಗಿದ್ದರು. ಇಂದಿಗೂ ರೇಖಾ ಫ್ಯಾಷನ್ ಸೆನ್ಸ್ ಬಗ್ಗೆ ಬಾಲಿವುಡ್‌ ಮಂದಿಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ.

Anjana Safar Actor Biswajith Chatarjee kissed Rekha forcefully mentioned in Rekha:Untold Story

ಸುಮಾರು 53 ವರ್ಷಗಳ ಕಾಲ ಸಿನಿಜರ್ನಿಯಲ್ಲಿ ರೇಖಾ ತಮ್ಮ ಸಿನಿಮಾಗಳಿಂದಲೇ ಮೆಚ್ಚುಗೆ ಗಳಿಸಿದ್ದರು. ಹಾಗೇ ಅವರ ಪ್ರೇಮ ಪ್ರಕರಣಗಳು ಕೂಡ ಅಷ್ಟೇ ಸದ್ದು ಮಾಡಿದ್ದವು. ಆತ್ಮಚರಿತ್ರೆ 'ರೇಖಾ: ದಿ ಅನ್‌ಟೋಲ್ಡ್ ಸ್ಟೋರಿ'ಯಲ್ಲಿ ಅವರೇ ಸಿನಿ ಜಗತ್ತಿನಲ್ಲಿ ನಡೆದ ಕೆಲವು ಅದ್ಭುತ ಘಟನೆಗಳನ್ನು ವಿವರಿಸಿದ್ದಾರೆ. ಅದರಲ್ಲೂ ಬಲವಂತವಾಗಿ ರೇಖಾಗೆ ಚುಂಬಿಸಿದ ಘಟನೆ ಬಗ್ಗೆನೂ ವಿವರಿಸಿದ್ದಾರೆ.

ಮಾಹಿತಿ ಇಲ್ಲದೆ ಬಲವಂತವಾಗಿ ರೇಖಾಗೆ ಕಿಸ್

'ರೇಖಾ: ದಿ ಅನ್‌ಟೋಲ್ಡ್ ಸ್ಟೋರಿ'ಯಲ್ಲಿ ತಮ್ಮ ಸಿನಿ ಬದುಕಿನ ಕಹಿ ಘಟನೆಯೊಂದನ್ನು ವಿವರಿಸಿದ್ದಾರೆ. 70 ದಶಕದಲ್ಲಿ ರೇಖಾ 'ಅಂಜಾನಾ ಸಫರ್' ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದರು. ಆ ಸಿನಿಮಾದ ಒಂದು ದೃಶ್ಯದಲ್ಲಿ ರೇಖಾಗೆ ಮುತ್ತಿಡುವ ದೃಶ್ಯವಿದೆ. ಈ ಬಗ್ಗೆ ಸಿನಿಮಾ ಶೂಟಿಂಗ್ ಮಾಡುವಾಗ ನಿರ್ದೇಶಕರು ಮಾಹಿತಿಯನ್ನೇ ನೀಡಿರಲಿಲ್ಲ.

Anjana Safar Actor Biswajith Chatarjee kissed Rekha forcefully mentioned in Rekha:Untold Story

ನಿರ್ಮಾಪಕ ಕುಲ್ಜೀತ್ ಪಾಲ್ ಕಿಸ್ಸಿಂಗ್ ದೃಶ್ಯವನ್ನು ತೆಗೆಯಲು ಮೊದಲೇ ಪ್ಲ್ಯಾನ್ ಮಾಡಿದ್ದರು. ಇದನ್ನು ಅದೇ ಸಿನಿಮಾ ಹೀರೊ ಬಿಸ್ವಜಿತ್ ಚಟರ್ಜಿ ಜೊತೆ ಚರ್ಚೆನೂ ಮಾಡಿದ್ದರು. ಆದರೆ, ರೇಖಾಗೆ ಮಾತ್ರ ತಿಳಿಸಿರಲಿಲ್ಲ. ಆ ಸಿನಿಮಾ ನಟ ಬಿಸ್ವಜೀತ್, ರೇಖಾಳನ್ನು ಬಲವಂತವಾಗಿ ಎಳೆದು ಅವಳ ತುಟಿಗಳಿಗೆ ಗಟ್ಟಿಯಾಗಿ ಮುತ್ತಿಟ್ಟಿದ್ದರು. ಹಠಾತ್ ಆಗಿ ನಡೆದ ಈ ಘಟನೆಯಿಂದ ರೇಖಾ ಭಯಭೀತರಾಗಿದ್ದರು.

ಆಗ ರೇಖಾಗೆ ಕೇವಲ 15 ವರ್ಷ

'ಅಂಜಾನಾ ಸಫರ್‌' 1979ರಲ್ಲಿ ತೆರೆಕಂಡಿತ್ತು. ಆ ವೇಳೆ ರೇಖಾ ವಯಸ್ಸು ಕೇವಲ 15 ವರ್ಷ ಮಾತ್ರ. ಆದರೆ, ಈ ಸಿನಿಮಾ ಹೀರೊಗೆ 33 ವರ್ಷ ವಯಸ್ಸಾಗಿತ್ತು. ಮೊದಲೇ ನಿಗದಿಯಾದಂತೆ ಮುಂಬೈನ ಮೆಹಬೂಬ್ ಸ್ಟುಡಿಯೋದಲ್ಲಿ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ರೇಖಾಗೆ ಯಾವುದೇ ಮಾಹಿತಿಯನ್ನು ನೀಡದೆ ಈ ಸಿನಿಮಾವನ್ನು ಶೂಟಿಂಗ್ ಮಾಡುವುದಕ್ಕೆ ಪ್ಲ್ಯಾನ್ ಮಾಡಿಕೊಳ್ಳಲಾಗಿತ್ತು.

ಶೂಟಿಂಗ್ ಆರಂಭ ಆಗುತ್ತಿದ್ದಂತೆ ರೇಖಾರನ್ನು ಎಳೆದುಕೊಂಡು 5 ನಿಮಿಷಗಳ ಕಾಲ ಕಿಸ್ ಮಾಡುತ್ತಲೇ ಇದ್ದರು. ಕ್ಯಾಮರಾ ರೋಲ್ ಆಗುತ್ತಲೇ ಇತ್ತು. ಈ ದೃಶ್ಯದ ಬಳಿಕ ಸೆಟ್ಟಿನಲ್ಲಿ ಇದ್ದವರೆಲ್ಲಾ ಶಿಳ್ಳೆ ಹೊಡೆಯುತ್ತಿದ್ದರು. ಇತ್ತ ತಮ್ಮ ಕಣ್ಣುಗಳು ಒದ್ದೆಯಾಗಿದ್ದವು ಎಂದು ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ಈ ಸಿನಿಮಾಗೆ ಕಿಸ್ಸಿಂಗ್ ಸೀನ್ ತುಂಬಾನೇ ಮುಖ್ಯವಾಗಿದ್ದವು. ಅದೆಲ್ಲ ನಿರ್ದೇಶಕರ ಕಲ್ಪನೆಯಾಗಿತ್ತು ಎಂದು ಬಳಿಕ ಬಿಸ್ವಜೀತ್ ಚಟರ್ಜಿ ಪ್ರತಿಕ್ರಿಯೆ ನೀಡಿದ್ದರು.

ಜೆಮಿನಿ ಸ್ಟುಡಿಯೋದಲ್ಲೇ ಸಿಕ್ಕ ಅವಕಾಶ

'ಅಂಜಾನಾ ಸಫರ್' ಸಿನಿಮಾದಲ್ಲಿ ನಟಿಸಲು ರೇಖಾಗೆ ಅವಕಾಶ ಸಿಕ್ಕಿದ್ದೇ ಒಂದು ರೋಚಕ ಸಂಗತಿ. ಆಗತಾನೇ ರೇಖಾ ಸಿನಿಮಾಗಳಲ್ಲಿ ನಟಿಸಿದ್ದರು. ಆಗ ನೈರೋಬಿ ಮೂಲದ ಉದ್ಯಮಿ ಕುಲ್ಜಿತ್ ಪಾಲ್ ಈ ಸಿನಿಮಾ ಮಾಡಲು ನಿರ್ಧರಿಸಿದ್ದರು. ಆಗ ಜೆಮಿನಿ ಸ್ಟುಡಿಯೋದಲ್ಲಿ ಅವರ ಕಣ್ಣಿಗೆ ಬಿದ್ದಿದ್ದೇ ರೇಖಾ. ಆ ಬಳಿಕ ರೇಖಾ ಜೊತೆ 5 ವರ್ಷ ಕಾಂಟ್ರ್ಯಾಕ್‌ಗೆ ಸಹಿ ಮಾಡಿಕೊಂಡಿದ್ದರು.

ಈ ಸಿನಿಮಾ ಒಪ್ಪಿಕೊಂಡು ಅಂದಿನ ಬಾಂಬೆ ತೆರಳಿದ್ದ ರೇಖಾ, ಅಲ್ಲೇ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ಅದುವೇ ಡಾ. ರಾಜ್‌ಕುಮಾರ್ ಜೊತೆ ನಟಿಸಿದ 'ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿಐಡಿ 999'. ಈ ಸಿನಿಮಾ ರೇಖಾಗೆ ಸೂಪರ್‌ ಸಕ್ಸಸ್ ತಂದುಕೊಟ್ಟಿತ್ತು.

More from Filmibeat

English summary
Anjana Safar Actor Biswajith Chatarjee kissed Rekha forcefully mentioned in Rekha:Untold Story, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X