ಪಂಜುರ್ಲಿ, ಕೊರಗಜ್ಜ ಅಷ್ಟೇ ಅಲ್ಲ.. ತುಳುನಾಡಿನ ಆಚರಣೆಯಲ್ಲಿರುವ 100ಕ್ಕೂ ಹೆಚ್ಚು ದೈವಗಳ ಲಿಸ್ಟ್ ಇಲ್ಲಿದೆ
ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರು ದೈವಗಳ ಆರಾಧನೆಯನ್ನು ಅತ್ಯಂತ ನಿಷ್ಠೆಯಿಂದ, ಭಕ್ತಿಯಿಂದ, ನಂಬಿಕೆಯಿಂದ ಆಚರಣೆ ಮಾಡಲಾಗುತ್ತದೆ. ಅಲ್ಲಿನ ದೈವಗಳು ಅವರ ಊರು, ಕುಟುಂಬವನ್ನು ರಕ್ಷಿಸುತ್ತವೆ ಎಂಬ ನಂಬಿಕೆಯಿದೆ. 'ಕಾಂತಾರ' ತುಳುನಾಡಿನ ದೈವಗಳನ್ನು ಪರಿಚಯಿಸಿದ ಸಿನಿಮಾ. ಇತ್ತೀಚೆಗೆ ಬಂದ 'ಕಾಂತಾರ ಚಾಪ್ಟರ್ 1' ಇನ್ನಷ್ಟು ಜನಪ್ರಿಯತೆ ಗಳಿಸಿತ್ತು.
'ಕಾಂತಾರ ಚಾಪ್ಟರ್ 1' ಬೆನ್ನಲ್ಲೇ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದುವೇ 'ಕೊರಗಜ್ಜ'. ಈ ಸಿನಿಮಾ ಕೂಡ ತುಳುನಾಡಿನ ದೈವ ಸ್ವಾಮಿಯ ಪವಾಡ ಹಾಗೂ ಹಿನ್ನೆಲೆಯನ್ನಿಟ್ಟುಕೊಂಡು ಮಾಡಿರುವ ಸಿನಿಮಾ. ಶೀಘ್ರದಲ್ಲಿಯೇ ಈ ಸಿನಿಮಾ ಕೂಡ ರಿಲೀಸ್ ಆಗಲಿದೆ. ತುಳುನಾಡಿನ ಉದ್ದಗಲಕ್ಕೂ ಹೆಚ್ಚು ಪೂಜಿಸುವ ದೈವ ಈ ಕೊರಗಜ್ಜ.

ಒಂದೊಂದು ದೈವಕ್ಕೂ ಒಂದೊಂದು ಶಕ್ತಿಯಿದೆ. ಅಲ್ಲಿನ ಜನರು ಅದಕ್ಕೆ ಅನುಗುಣವಾಗಿ ಆ ದೈವ ಮೊರೆ ಹೋಗುತ್ತಾರೆ. ತಮ್ಮ ವಸ್ತು ಏನಾದರೂ ಕಳೆದು ಹೋದರೆ, ಯಾವುದೋ ಕೆಲಸ ಆಗುತ್ತಿಲ್ಲವೆಂದಾದರೆ, ಸಮಸ್ಯೆಗಳು ಎದುರಾದರೆ, ಅದನ್ನು ಬಗೆ ಹರಿಸಿಕೊಳ್ಳುವುದಕ್ಕೆ ತುಳುನಾಡಿನ ಜನರು ಮೊದಲು ಕೊರಗಜ್ಜನ ಸನ್ನಿಧಾನಕ್ಕೆ ಹೋಗಿ ಬೇಡಿಕೆ ಇಡುತ್ತಾರೆ. ತನ್ನ ಮೇಲೆ ನಂಬಿಕೆ ಇಟ್ಟು ಬಂದ ಅದೆಷ್ಟೋ ಜನರನ್ನು ಕೋರಿಕೆಗಳನ್ನು ಕೊರಗಜ್ಜ ಈಡೇರಿಸಿದ್ದಾರೆ.
ತುಳುನಾಡು ಬಿಟ್ಟು ಬೇರೆ ಭಾಗಗಲ್ಲಿ ದೈವಗಳ ಬಗ್ಗೆ ಹೆಚ್ಚಿನ ಅರಿವು ಇರಲಿಲ್ಲ. 'ಕಾಂತಾರ' ಸಿನಿಮಾ ಬಳಿಕ ಅಲ್ಲಿನ ದೈವಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಜನರಲ್ಲಿ ಆಸಕ್ತಿ ಹೆಚ್ಚಾಗಿದೆ. ಹಾಗಂತ ಕೇವಲ 'ಪಂಜುರ್ಲಿ' ಹಾಗೂ 'ಕೊರಗಜ್ಜ' ಅಷ್ಟೇ ಫೇಮಸ್ ಅಲ್ಲ. ಇಲ್ಲಿ ಸುಮಾರು 100ಕ್ಕೂ ದೈವಗಳು ನೆಲೆಯಾಗಿವೆ. ಈ ದೈವಗಳ ರಕ್ಷೆಯಲ್ಲಿ ಆಯಾ ಪ್ರದೇಶದ ಕುಟುಂಬವು ರಕ್ಷಣೆಯನ್ನು ಪಡೆದುಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಅಗ್ನ ಶೆಟ್ಟಿ ಎಂಬುವವರು ತುಳುನಾಡಿನ 102 ದೈವಗಳನ್ನು ಪಟ್ಟಿ ಮಾಡಿದ್ದಾರೆ. ಆ ಲಿಸ್ಟ್ ಇಲ್ಲಿದೆ.

ತುಳುನಾಡಿನ ದೈವಗಳ ಪಟ್ಟಿ
ಪಂಜುರ್ಲಿ (PANJURLI)
ಅಣ್ಣಪ್ಪ ಪಂಜುರ್ಲಿ (Annappa Panjurli)
ಕಲ್ಲೂರ್ಟಿ-ಪಂಜುರ್ಲಿ (Kallurti-Panjurli)
ಕುಪ್ಪೆಟ್ಟು ಪಂಜುರ್ಲಿ (Kuppettu Panjurli)
ಬಗ್ಗು ಪಂಜುರ್ಲಿ (Baggu Panjurli)
ಗೋಳಿದಾಡಿ ಪಂಜುರ್ಲಿ (Golidadi Panjurli)
ಕಲ್ಯಬೂಡು ಪಂಜುರ್ಲಿ (Kalyaboodu Panjurli)
ದೆಂಡೂರ ಪಂಜುರ್ಲಿ (Dendoora Panjurli)
ಪಾಜೈ ಪಂಜುರ್ಲಿ (Paajei Panjurli)
ಕದಂಬರೆ ಪಂಜುರ್ಲಿ (Kadambare Panjurli)
ಜೋಡು ಪಂಜುರ್ಲಿ (Jodu Panjurli)
ಮಳೆ ಪಂಜುರ್ಲಿ (Male Panjurli)
ಗುಳಿಗ ಪಂಜುರ್ಲಿ (Guliga Panjurli)
ವರ್ಣ ಪಂಜುರ್ಲಿ (Varna Panjurli)
ಆಳೇರ ಪಂಜುರ್ಲಿ (Alera Panjurli)
ಮಳಾರ ಪಂಜುರ್ಲಿ (Malara Panjurli)
ಬೊಲ್ಲೆಲ ಪಂಜುರ್ಲಿ (Bollela Panjurli)
ತೆಂಬೈಲು ಪಂಜುರ್ಲಿ (Tembailu Panjurli)
ಚೊಂಬಕಲ್ಲು ಪಂಜುರ್ಲಿ (Chombakallu Panjurli)
ಕಾಂಥಾವರ ಪಂಜುರ್ಲಿ (Kaanthavara Panjurli)
ಹೆಬ್ರಿ ಪಂಜುರ್ಲಿ (Hebri Panjurli)
ಕುಕ್ಕೆ ಪಂಜುರ್ಲಿ (Kukke Panjurli)
ಕದ್ರಿ ಪಂಜುರ್ಲಿ (Kadri Panjurli)
ಕಡಪು ಪಂಜುರ್ಲಿ (Kadapu Panjurli)
ಅಂಬದಾದಿ ಪಂಜುರ್ಲಿ (Ambadadi Panjurli)
ಪೊಟ್ಟ ಪಂಜುರ್ಲಿ (Potta Panjurli)
ಕದಂಬರೆ ಪಂಜುರ್ಲಿ (Kadambare Panjurli)
ಗುಳಿಗ ಪಂಜುರ್ಲಿ (Guliga Panjurli)
ಧೂಮಾವತಿ/ಜುಮಾದಿ ಬಂಟ (Dhumavati/Jumadi Bunta)
ಪಂಚ ಜುಮಾದಿ ಬಂಟ (Pancha Jumadi Bunta)
ಮಾರ್ಲ್ ಜುಮಾದಿ (Marl Jumadi)
ಕಾಂಟೇರಿ ಜುಮಾದಿ (Kaanteri Jumadi)
ಕೋಳಾಥ ಜುಮಾದಿ (Kolatha Jumadi)
ಕೊಳ್ಳ ಪೂಥ ಜುಮಾದಿ (Kolla Pootha Jumadi)
ಮಾರ್ಡಾಲ್ ಜುಮಾದಿ (Mardal Jumadi)
ಕಲ್ಕುಡ-ಕಲ್ಲೂರ್ಟಿ (Kalkuda-Kallurti)
ಒಡಿಲ್ಥಾಯೆ (Odilthaye)
ಪಿಲಿಚಾಮುಂಡಿ/ವ್ಯಾಘ್ರ ಚಾಮುಂಡಿ (Pilichamundi/ Vyagra Chamundi)
ಬೊಬ್ಬರ್ಯ (Bobbarya)
ಜಾರಂದಾಯ (Jaarandaya)
ಕೊಡಮಣಿತ್ತಾಯ (Kodamanithaya)
ಕುಕ್ಕಿನಂತಾಯ (Kukkinanthaya)
ಬೈಕಡ್ದಿ (Baikadthi)
ಚಿಕ್ಕಮ್ಮ (Chikkamma)
ದಾರಂ ಬಳ್ಳಾಳ್ತಿ (Daaram Ballalthi)
ಕಾಲಭೈರವ (Kalabhairava)
ಕಾಲರಾಹು (Kalarahu)
ಕಾಲಾರ್ಕಾಯಿ (Kaalarkai)
ಕುಮಾರ ಸ್ವಾಮಿ (Kumara Swamy)
ಕನ್ಯಾಕುಮಾರಿ (Kanyakumari)
ಮಹಾಕಾಳಿ (Mahakali)
ಪಾತಾಳ ಭೈರವ (Paatala Bhairava)
ಮಾಯಂದಾಳ್ (Mayandal)
ಮಳರಾಯ (Malaraya)
ಕೋಟೆದ ಬಬ್ಬು ಸ್ವಾಮಿ (Koteda Babbu Swamy)
ತನ್ನಿಮಾನಿಗ (Tannimaniga)
ಚಾಮುಂಡಿ (Chavundi)
ಗುಳಿಗ (Guliga)
ಸಂಕಳೆ ಗುಳಿಗ (Sankale Guliga)
ಸುಬ್ಬಿಯಮ್ಮ ಸುಬ್ಬಿ ಗುಳಿಗ (Subbiyamma Subbi Guliga)
ಗುಳಿಗ ಭೈರವ (Guliga Bhairava)
ರೌದ್ರಂಡಿ ಗುಳಿಗ (Raudrandi Guliga)
ರಾಹು ಗುಳಿಗ (Rahu Guliga)
ನೆತ್ತೆರ್ ಗುಳಿಗ (Netther Guliga)
ಪಾತಾಳ ಗುಳಿಗ (Paatala Guliga)
ನೀಚ (ಕೊರಗ ತನಿಯ) (Neecha - Koraga Taniya)
ಕಂಬೆರ್ಲು (Kamberlu)
ಅಬ್ಬಗ ದಾರಗ (Abbaga Daaraga)
ಕ್ಷೇತ್ರ ಪಾಲ (Kshetra Paala)
ನಂದಿಗೋಣ (Nandigona)
ಮೈಸಂದಾಯ (Maisayndaya)
ರಕ್ತೇಶ್ವರಿ/ಲೇಕ್ಕೇಸಿರಿ (Rakteshwari/Lekkesiri)
ರಾಹು (Raahu)
ಜತ್ತಿಗ (Jattiga)
ನಾಗ ಬ್ರಹ್ಮರ್ (Naga Bermer)
ಕಾಲಮ್ಮ (Kaalamma)
ಕಾಣಪಡಿತ್ತಾಯ (Kanapadithaya)
ಕುರಿಯೋಡಿತ್ತಾಯ (Kuriyodithaya)
ಕಲ್ಲೇರಿತ್ತಾಯ (Kallerithaya)
ದಯ್ಯೆಂಗುಳ್ (Dayyengul)
ಉಳ್ಳಾಳ್ತಿ (Ullalthi)
ಮೂವರ್ ದೈವಂಗಳ್ (Moovar Daivangal)
ನಾಳ್ಕತ್ತಾಯ (Naalkatthaya)
ಸತ್ಯದೇವತೆ/ಪೊಸ ಭೂತ (Satyadevate/ Posa Bhuta)
ಮಂತ್ರದೇವತೆ (Mantradevate)
ಬಂಟ ದೈವ (Bunta Daiva)
ವೈದ್ಯನಾಥ/ಮುಂಡತ್ತಾಯ (Vaidyanatha/ Mundathaya)
ಅಜ್ಜಿ ಭೂತ (Ajji Bhuta)
ಶಿರಡಿ ದೈವ (Shiradi Daiva)
ಕೊರಗಜ್ಜ (Koragajja)
ಕೊರತಿ (Korati)
ಪೊಯ್ಯತ್ತಾಯಿ (Poyyathai)
ಹಳ್ಳತ್ತಾಯಿ (Hallathayi)
ಕೋಟಿ ಚೆನ್ನಯ (Koti Chennaya)
ಭಾವನ (Bhavana)
ವಿಷ್ಣುಮೂರ್ತಿ (Vishnumurthy)
ಬಿರ್ನಚಾರಿ (Birnachari)
ಪಡ್ಕಂತಾಯ (Padkanthaya)
ಬ್ರಹ್ಮ ಮುಗೇರ (Brahma Mugera)
ಉಳಿಯತ್ತಾಯ (Uliyathaya)
ಪಟ್ಟೋರಿತ್ತಾಯ (Pattorithaya)
ಮಂತ್ರದೇವತೆ (Mantradevate)


Click it and Unblock the Notifications











