ಸಿನಿಮಾಗಳಲ್ಲಿ ಆಲ್ಕೋಹಾಲ್, ಸಿಗರೇಟ್ ಪ್ರಚಾರ ನಡೆಯುತ್ತಿದೆಯೇ? ಪರೋಕ್ಷವಾಗಿ ಬ್ರ್ಯಾಂಡ್‌ಗಳು ಜನರನ್ನು ಸೆಳೆಯುತ್ತಿವೆಯೇ?

ಇತ್ತೀಚೆಗೆ ಮದ್ಯಪಾನ ಮಾಡುವ, ಇಲ್ಲವೇ ಸಿಗರೇಟ್ ಸೇದುವ ದೃಶ್ಯಗಳಿಲ್ಲದ ಒಂದೇ ಒಂದು ಸಿನಿಮಾವನ್ನು ಪಟ್ಟಿ ಮಾಡಬಹುದೇ? ಈ ಪ್ರಶ್ನೆಗೆ ಬಹುಶ: ಉತ್ತರ ಹುಡುಕುವುದು ಅಷ್ಟು ಸುಲಭವಲ್ಲ.ಯಾಕಂದ್ರೆ, ಫಿಲ್ಮ್ ಮೇಕರ್‌ಗಳಿಗೆ ಮದ್ಯಪಾನ, ಸಿಗರೇಟಿನ ದೃಶ್ಯಗಳನ್ನು ಇಡದೇ ಸಿನಿಮಾ ಮಾಡುವುದಕ್ಕೆ ಪರದಾಡುತ್ತಾರೆ. ಜನರು ಕೂಡ ಸಿನಿಮಾದ ಕಲಾವಿದರು, ಹೀರೋಗಳು ಸ್ಟೈಲಿಶ್ ಆಗಿ ಸಿಗರೇಟ್ ಸೇದಿದರೆ, ಮದ್ಯಪಾನ ಮಾಡುವುದನ್ನು ಎಂಜಾಯ್ ಮಾಡುತ್ತಾರೆ.

ಅಂದರೆ, ಪ್ರೇಕ್ಷಕರು ಮದ್ಯಪಾನದ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಮಳೆ ಬರಲಿ, ಚಳಿಯೇ ಇರಲಿ. ಬರ್ತ್‌ಡೇ ಇರಲಿ, ವೀಕೆಂಡ್ ಬರಲಿ.. ಮದ್ಯಪಾನ ಮಾಡಲೇ ಬೇಕು ಎನ್ನುವ ಮೈಂಡ್ ಸೆಟ್‌ ಇಟ್ಟುಕೊಂಡಿದ್ದಾರೆ. ಕೆಲವೊಮ್ಮೆ ಕಾರಣವೇ ಇಲ್ಲದೆ ಮದ್ಯಪಾನ ಮಾಡುವುದಕ್ಕೆ ಶುರುವಿಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಬೇಸರ, ಒಂಟಿತನವನ್ನು ಮರೆಯಲು ಮದ್ಯಪಾನ ಮಾಡುತ್ತಾರೆ. ಜನರು ಸಂದರ್ಭ ಯಾವುದೇ ಇರಲಿ ಮದ್ಯಪಾನ ಮಾಡಬೇಕು ಎನ್ನುವ ಮೈಂಡ್‌ಸೆಟ್‌ ಅನ್ನು ಬೆಳೆಸಿಕೊಂಡಿದ್ದಾರೆ.

Are Viewers Indirectly Encouraged to Drink Alcohol and Smoke through Movies

ಈ ಮನ:ಸ್ಥಿತಿ ಬೆಳೆಯುವುದಕ್ಕೆ ಕಾರಣ ಸಿನಿಮಾಗಳ ಪಾತ್ರವೂ ಇದೆ. ಪಾಪ್ ಕಲ್ಚರ್‌ನಿಂದ ಮದ್ಯಪಾನದ ಟ್ರೆಂಡ್ ಶುರುವಾಯ್ತು ಅನ್ನೋ ವಾದವಿದೆ. ಯಾವುದೇ ಟಿವಿ ಶೋ ಇರಲಿ, ಸಿನಿಮಾವಿರಲಿ, 24 ರಿಂದ 34 ವಯಸ್ಸಿನವರನ್ನು ಒಟ್ಟಿಗೆ ಸೇರುವ ಸೀನ್‌ಗಳಲ್ಲಿ ಬಿಯರ್ ಇಟ್ಟಿರುತ್ತಾರೆ. ಅದೇ ಉದ್ಯಮಿಗಳನ್ನು ತೋರಿಸುವ ಸೀನ್‌ಗಳಲ್ಲಿ ವಿಸ್ಕಿಯನ್ನು ಇಟ್ಟಿರುತ್ತಾರೆ. ಹೀಗೆ ಬಿಯರ್, ವಿಸ್ಕಿಯನ್ನು ಯಾರು ಕುಡಿಯುತ್ತಾರೆ ಎನ್ನುವುದನ್ನು ಸೀನ್‌ಗಳ ಮೂಲಕ ಪರೋಕ್ಷವಾಗಿ ತೋರಿಸಲಾಗುತ್ತೆ.

ನಿಮಗೊಂದಿಷ್ಟು ಪ್ರಶ್ನೆ?

ಸಿನಿಮಾಗಳಲ್ಲಿ ಮದ್ಯಪಾನ, ಸಿಗರೇಟ್ ಸೇದುವ ದೃಶ್ಯಗಳು ಖುಷಿಕೊಡುತ್ತವೆಯೇ?
ಹೀರೋಗಳು ಸ್ಟೈಲಿಶ್ ಆಗಿ ಸಿಗರೇಟ್ ಸೇದಿದರೇ ಮಾತ್ರ ಸಿನಿಮಾ ನೋಡುತ್ತೀರಾ?
ಇಂತಹ ದೃಶ್ಯಗಳು ನಿಮ್ಮನ್ನೂ ಮದ್ಯಪಾನ ಮಾಡುವಂತೆ ಪ್ರೇರೇಪಿಸಿದ್ದಾವೆಯೇ?
ಬೇಕಂತಲೇ ದೃಶ್ಯಗಳಲ್ಲಿ ಆಲ್ಕೋಹಾಲ್, ಸಿಗರೇಟ್ ಬ್ರ್ಯಾಂಡ್‌ಗಳನ್ನು ತೋರಿಸ್ತಾರಾ?

ಇನ್ನು ಸಿನಿಮಾ, ವೆಬ್ ಸೀರಿಸ್, ಟಿವಿ ಶೋಗಳಲ್ಲಿ ಬರುವ ಮ್ಯೂಸಿಕ್ ಪಾರ್ಟಿ, ಪಿಕ್‌ನಿಕ್, ಯಾವುದೇ ಸೀನ್ ಅನ್ನು ಶೂಟ್ ಮಾಡಿದರೂ ಅಲ್ಲಿ ಮದ್ಯಪಾನದ ದೃಶ್ಯವಂತೂ ಇದ್ದೇ ಇರುತ್ತೆ.ಇನ್ನು ದು:ಖದ ದೃಶ್ಯಗಳು ಇತ್ತು ಅಂದರೆ, ಅಲ್ಲೂ ಮದ್ಯಪಾನದ ದೃಶ್ಯಗಳು ಇರಲೇಬೇಕು. ಇಂತಹ ಸಾಕಷ್ಟು ಉದಾಹರಣಗಳು ಸಿನಿಮಾಗಳಲ್ಲಿ ಸಾಕಷ್ಟು ಸಿಗುತ್ತವೆ. ಈ ಬಗ್ಗೆ ಕನ್ನಡ ಫಿಲ್ಮ್ ಮೇಕರ್ ದಯಾಳ್ ಪದ್ಮನಾಭನ್ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಈ ಸಂಗತಿಯನ್ನು ಒಪ್ಪಿಕೊಂಡಿದ್ದಾರೆ.

"ಒಂದು ಸಿನಿಮಾ ಅನ್ನೋದು ಮನರಂಜನೆಯನ್ನು ದಾಟಿ ಕೆಲವು ಸಂಗತಿಗಳಿಂದ ಪ್ರೇರಣೆ ಹೊಂದುವ ಮೀಡಿಯಾ. ಸಿನಿಮಾ ಅನ್ನೋದು ಅಷ್ಟು ಪವರ್‌ಫುಲ್. ಒಬ್ಬ ಹೀರೋ ಅವರಿಗೆ ಇಷ್ಟ ಆಗಿರುವ ವಿಷಯ ಮಾಡುತ್ತಾನೆ ಅಂದರೆ, ಅದನ್ನು ನೋಡಿ ನಾನು ಹಾಗಿದ್ದರೆ ಚೆನ್ನಾಗಿರುತ್ತೆ ಅಂದುಕೊಳ್ಳುವ ಯುವಕರು ಇದ್ದಾರೆ. ಮೈಂಡ್ ಅನ್ನು ಕಂಟ್ರೋಲ್ ಮಾಡಿಕೊಂಡು ಒಂದು ಎಂಟರ್‌ಟೈನ್ಮೆಂಟ್ ಆಗಿ ನೋಡಿ ಹೊರಗೆ ಬರುವ ಯುವಕರು ಒಂದು ಕಡೆ, ಆ ಇಂಪ್ಯಾಕ್ಟ್‌ನಲ್ಲಿ ಅಡಿಕ್ಟ್ ಆಗಿರುವ ಯುವಕರು ಇನ್ನೊಂದು ಕಡೆ ಇದ್ದಾರೆ. ಸಿನಿಮಾ ಮದ್ಯಪಾನ ಮಾಡುವುದಾಗಲಿ, ಸಿಗರೇಟ್ ಸ್ಮೋಕಿಂಗ್ ಮಾಡುವುದಾಗಲಿ, ಇದನ್ನು ತೋರಿಸುವಾಗ ಹಂಡ್ರೆಸ್ ಪರ್ಸೆಂಟ್ ನೆಗೆಟಿವ್ ಇಂಪ್ಯಾಕ್ಟ್ ಅನ್ನೇ ಕ್ರಿಯೇಟ್ ಮಾಡುತ್ತೆ." ಎನ್ನುತ್ತಾರೆ.

Are Viewers Indirectly Encouraged to Drink Alcohol and Smoke through Movies

ಆಲ್ಕೋಹಾಲ್, ಸಿಗರೇಟ್ ಸೇದುವ ಸೀನ್‌ಗಳಿಂದ ಯುವಕರು, ಮದ್ಯ ವಯಸ್ಕರು ಪ್ರೇರಿತರಾಗುತ್ತಿದ್ದಾರೆ. ಆ ಸಿನಿಮಾದಲ್ಲಿ ಬಳಸುವ ಮದ್ಯವನ್ನು ಅವರು ಬಳಸುವುದಕ್ಕೆ ಶುರು ಮಾಡುತ್ತಾರೆ. ಇನ್ನು ಕೆಲವು ಸೀನ್‌ಗಳಲ್ಲಿ ಉದ್ದೇಶ ಪೂರ್ವಕವಾಗಿಯೇ ಕೆಲವು ಮದ್ಯದ ಪ್ರಾಡಕ್ಟ್‌ಗಳನ್ನು ಇಟ್ಟಿರುತ್ತಾರೆ. ಈ ಸೀನ್‌ಗಳ ಮೂಲಕ ತಮ್ಮ ಪ್ರಾಡಕ್ಟ್ ಅನ್ನು ಸೇಲ್ ಮಾಡುತ್ತಿದ್ದಾರಾ? ಇಲ್ಲಾ ಐಡಿಯಾಲಿಜಿಯನ್ನು ಜನರ ತಲೆಯೊಳಗೆ ತುಂಬುತ್ತಿದ್ದಾರಾ? ಅದೂ ಜನರಿಗೆ ಅರಿವಿಲ್ಲದೇ.. ಈ ಬಗ್ಗೆ ಫಿಲ್ಮ್ ಮೇಕರ್ಸ್ ದಯಾಳ್ ಪದ್ಮನಾಭನ್ ಹೀಗಂತಾರೆ.

Take a Poll

"ಸ್ಟೈಲಿಶ್ ಫಿಲ್ಮ್ ಮೇಕಿಂಗ್‌ಗಾಗಿ ನಮ್ಮವರೇ ಮಾಡಿಕೊಂಡಿದ್ದಾರೆ. ಕೆಜಿಎಫ್‌ನಲ್ಲಿ ತುಂಬಾನೇ ಸಿಗರೇಟ್ ಬಳಸಿದ್ದಾರೆ. ಅದನ್ನು ಬಳಸದೆ ಇದ್ದಿದ್ದರೆ, ಕೆಜಿಎಫ್ ವರ್ಕ್ ಆಗುವುದಿಲ್ಲವೇ? ಇಲ್ಲಿ ಹೀರೋನಾ ತುಂಬಾ ಸ್ಟೈಲಿಶ್ ಆಗಿ ತೋರಿಸುವುದಕ್ಕೆ ಬಳಸಿದ್ದಾರೆ ಅಷ್ಟೇ. ಇನ್ನು ಈಗ ಆಲ್ಕೋಹಾಲ್ ಹಾಗೂ ಸಿಗರೇಟ್ ಬ್ರ್ಯಾಂಡಿಂಗ್ ಇಲ್ಲ. ಒಂದು ಕಾಲದಲ್ಲಿ ಇತ್ತು. ಕಿಂಗ್‌ಫಿಶರ್ ಅಂದರೆ, ಅದನ್ನೇ ತೋರಿಸಬೇಕು. ಈಗ ಆಲ್ಕೋಹಾಲ್ ಹಾಗೂ ಸಿಗರೇಟ್ ಬ್ರ್ಯಾಂಡ್ ಅನ್ನು ತೋರಿಸುವ ಹಾಗೆ ಇಲ್ಲ. ಬ್ರ್ಯಾಂಡಿಂಗ್‌ನಿಂದ ಹೀಗಾಗುತ್ತೆ ಅನ್ನೋದನ್ನು ಒಪ್ಪಿಕೊಳ್ಳುವುದಕ್ಕೆ ಆಗುವುದಿಲ್ಲ. ಈಗ ಒಂದು ಬ್ರ್ಯಾಂಡ್ ಅನ್ನೋ ತೋರಿಸವ ಹಾಗೆ ಇಲ್ಲವೇ" ಎನ್ನುತ್ತಾರೆ.

More from Filmibeat

English summary
Are Viewers Indirectly Encouraged to Drink Alcohol and Smoke through Movies?
Read more about: alcohol movies kannada movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X