ಮೆಕ್ಯಾನಿಕ್ ಆಗಿದ್ದವ ಈಗ ಸ್ಟಾರ್ ಯೂಟ್ಯೂಬರ್; ಇಬ್ಬರು ಹೆಂಡ್ತಿ, 10 ಫ್ಲ್ಯಾಟ್‌ಗಳ ಒಡೆಯ.. ಯಾರಿವನು?
ಸೋಶಿಯಲ್ ಮೀಡಿಯಾ ಈಗ ಸಿಕ್ಕಾಪಟ್ಟೆ ಪವರ್‌ಫುಲ್. ಟ್ಯಾಲೆಂಟ್ ಇದ್ದವರು ಸೋಶಿಯಲ್ ಮೀಡಿಯಾದಲ್ಲಿ ಲಕ್ಷ, ಕೋಟಿ ಲೆಕ್ಕದಲ್ಲಿ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ಅದರಲ್ಲೂ ಯೂಟ್ಯೂಬ್ ಸ್ಟಾರ್‌ಗಳ ಕಮಾಯಿ ದೊಡ್ಡದೇ ಇದೆ. ಅಸಲಿಗೆ ಯೂಟ್ಯೂಬರ್ ಅನ್ನೋದು ಒಂದು ವೃತ್ತಿಯಾಗಿ ಪರಿಗಣಿಸಲಾಗುತ್ತಿದೆ.
ವಿಶ್ವದಲ್ಲಿ ಅದೆಷ್ಟೋ ಮಂದಿ ಯೂಟ್ಯೂಬ್‌ನಿಂದ ಬದುಕನ್ನ ಕಟ್ಟಿಕೊಂಡಿದ್ದಾರೆ. ಕೋಟಿ ಲೆಕ್ಕದಲ್ಲಿ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ಇಂತಹದ್ದೊಂದು ಪ್ರತಿಭೆಯ ಒಟ್ಟು ಆಸ್ತಿ ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಆ ಯೂಟ್ಯೂಬ್ ಹೆಸರು ಅರ್ಮಾನ್ ಮಲಿಕ್. ಈತನ ಲೈಫ್‌ಸ್ಟೈಲ್, ಗಳಿಕೆ, ಹಿನ್ನೆಲೆ ಕೇಳಿದರೆ ನಿಮಗೂ ಆಶ್ಚರ್ಯ ಆಗುತ್ತೆ.

ಅಂದ್ಹಾಗೆ, ಈ ಸ್ಟಾರ್ ಯೂಟ್ಯೂಬರ್ ಅರ್ಮಾನ್ ಮಲಿಕ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಹರಿಯಾಣ ಮೂಲದ ಈ ಯೂಟ್ಯೂಬರ್ ಹೆಚ್ಚಾಗಿ ಫಿಟ್ನೆಸ್ ಬಗ್ಗೆ ವಿಡಿಯೋಗಳನ್ನು ಮಾಡುತ್ತಾರೆ. ಈ ವಿಡಿಯೋಗಳು ಯೂಟ್ಯೂಬ್‌ನಲ್ಲಿ ಮಿಲಿಯನ್ಸ್ ಲೆಕ್ಕದಲ್ಲಿ ವೀವ್ಸ್ ಪಡೆದುಕೊಂಡಿವೆ. ಒಂದು ಕಾಲದಲ್ಲಿ ಮೆಕ್ಯಾನಿಕ್ ಆಗಿದ್ದ ಅರ್ಮಾನ್ ಮಲಿಕ್ ಈಗ ಕೋಟಿ ವೀರ. ಹಾಗಿದ್ದರೆ, ಈತನ ಬಳಿ ಏನಿದೆ? ತಿಳಿಯಲು ಮುಂದೆ ಓದಿ..
ಇತ್ತೀಚೆಗೆ ಈ ಸ್ಟಾರ್ ಯೂಟ್ಯೂಬರ್ ಅರ್ಮಾನ್ ಮಲಿಕ್ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದರು. ಸಿದ್ದಾರ್ಥ್ ಕನನ್ ಶೋನಲ್ಲಿ ಭಾಗವಹಿಸಿದ್ದ ಅರ್ಮಾನ್ ತನ್ನ ಆರಂಭಿಕ ಕಷ್ಟಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಎಂಟನೇ ತರಗತಿಯಲ್ಲಿ ಎರಡು ಬಾರಿ ಫೇಲ್ ಆಗಿದ್ದನ್ನು ನೆನಪಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಮೆಕ್ಯಾನಿಕ್ ಆಗಿದ್ದ ಅರ್ಮಾನ್ ಮಲಿಕ್ ಈಗ ಸ್ಟಾರ್ ಯೂಟ್ಯೂಬರ್. ಇವರ ಬಳಿ ಈಗ ನೂರಾರು ಕೋಟಿ ಆಸ್ತಿಯಿದೆ.
ನೀವು ಕೇಳುತ್ತಿರೋದು ನಿಜ. ಹರಿಯಾಣ ಮೂಲಕ ಈ ಯೂಟ್ಯೂಬರ್ ಅರ್ಮಾನ್ ಮಲಿಕ್ ನೂರು ಕೋಟಿ ಒಡೆಯ. ಎಂಟನೇ ತರಗತಿ ಎರಡು ಬಾರಿ ಫೇಲ್ ಆಗಿದ್ದ ಅರ್ಮಾನ್ ಮಲಿಕ್ ಬಳಿಯೀಗ ತಾನು ಬಯಸಿದ್ದೆಲ್ಲ ಸಿಕ್ಕಿದೆ. ಈತ ಇಬ್ಬರು ಹೆಂಡಿರ ಮುದ್ದಿನ ಗಂಡ. ಕೃತಿಕಾ ಹಾಗೂ ಪಾಯಲ್ ಎಂಬ ಇಬ್ಬರು ಪತ್ನಿಯರು ಇದ್ದಾರೆ. ಈತನ ಬಳಿ ಸದ್ಯ 10 ಪ್ಲ್ಯಾಟ್‌ಗಳು ಇವೆ.

ಸಿದ್ದಾರ್ಥ್ ಕನನ್ ಶೋನಲ್ಲಿ ಅರ್ಮಾನ್ ಮಲಿಕ್‌ಗೆ ಅವರ ಆಸ್ತಿ ಎಷ್ಟು ಎಂಬ ಪ್ರಶ್ನೆ ಕೇಳಲಾಗಿತ್ತು. ಈ ಬಗ್ಗೆ ಯೂಟ್ಯೂಬರ್ ಮಾಹಿತಿ ಹಂಚಿಕೊಂಡಿದ್ದರು. ತನ್ನ ಬಳಿಕ 100 ರಿಂದ 200 ಕೋಟಿ ರೂಪಾಯಿ ಒಳಗೆ ಆಸ್ತಿಯಿದೆ ಎಂದು ಹೇಳಿಕೊಂಡಿದ್ದರು. ಹಾಗೇ ತನ್ನ ಬಳಿ ಇರುವ 10 ಪ್ಲ್ಯಾಟ್‌ಗಳಲ್ಲಿ ಎರಡೆರಡು ಫ್ಲ್ಯಾಟ್ ತನ್ನಿಬ್ಬರು ಹೆಂಡತಿಯರು ಹಾಗೂ ನಾಲ್ಕು ಮಕ್ಕಳಿಗೆ ನೀಡಿದ್ದಾರೆ.
ಇನ್ನು ಉಳಿದ ಆರು ಫ್ಲ್ಯಾಟ್‌ಗಳನ್ನು ತನ್ನನೊಂದಿಗೆ ಕೆಲಸ ಮಾಡುವ ಸಿಬ್ಬಂದಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ. ಇದರಲ್ಲಿ ಇಬ್ಬರು ಡ್ರೈವರ್, ಆರು ಮಂದಿ ಎಡಿಟರ್‌ಗಳು, ಒಂಬತ್ತು ಮಂದಿ ಸಿಬ್ಬಂದಿ ವಾಸ ಮಾಡುತ್ತಿದ್ದಾರೆ. ತಾನು ಈ ಮಟ್ಟಕ್ಕೆ ಬೆಳೆಯುವುದಕ್ಕೆ ಪೋಷಕರೇ ಕಾರಣ ಎಂದು ಅರ್ಮಾನ್ ಮಲಿಕ್ ಹೇಳಿಕೊಂಡಿದ್ದಾರೆ. ಈಗ ತನ್ನ ಸಿಬ್ಬಂದಿಗಳೇ ಕುಟುಂಬ ಎಂದು ಭಾವಿಸಿದೆ.


Click it and Unblock the Notifications











