ರಮ್ಯಾ ಕೃಷ್ಣ ಬೆಂಗಳೂರಿಗೆ ಬಂದ್ರು ಅಂತ ಹುಟ್ಟಿತೇ 'ಬಾ ಬಾರೋ ರಸಿಕ'? ಈ ಸಿನಿಮಾ ಶುರುವಾಗಿದ್ದೇಗೆ?
ಕನ್ನಡ ಚಿತ್ರರಂಗದಲ್ಲಿ 'ಬಾ ಬಾರೋ ರಸಿಕ' ಸಿನಿಮಾ ಒಂದು ಬೋಲ್ಡ್ ಅಟೆಮ್ಟ್. ದಯಾಳ್ ಪದ್ಮನಾಭ್ ಕಥೆ ಬರೆದು ನಿರ್ದೇಶಿಸಿದ ಈ ಸಿನಿಮಾ ನಿರೀಕ್ಷೆ ಮಾಡಲಾರದಷ್ಟು ಯಶಸ್ಸು ಕಂಡಿತ್ತು. ಬೋಲ್ಡ್ ಕಂಟೆಂಟ್ ಅನ್ನು ವೀಕ್ಷಕರು ಮುಂದೆ ಸೆನ್ಸಿಬಲ್ ಆಗಿ ದಯಾಳ್ ಪದ್ಮನಾಭ್ ತಂದಿಟ್ಟಿದ್ದರು. ಈ ಸಿನಿಮಾ 2004 ಜೂನ್ 18 ರಂದು ರಿಲೀಸ್ ಆಗಿ ಯಶಸ್ಸು ಕೂಡ ಕಂಡಿತು.
ಆದರೆ, 'ಬಾ ಬಾರೋ ರಸಿಕ' ಸಿನಿಮಾ ಹುಟ್ಟಿಕೊಂಡಿದ್ದೇ ಒಂದು ವಿಚಿತ್ರ ಸನ್ನಿವೇಶದಲ್ಲಿ. ರಮ್ಯಾ ಕೃಷ್ಣ ಬೆಂಗಳೂರಿಗೆ ಬರುತ್ತಿದ್ದಾರೆ ಎನ್ನುವ ಕಾರಣಕ್ಕೆ ಈ ಸಿನಿಮಾದ ಕಥೆಯನ್ನು ದಯಾಳ್ ಪದ್ಮನಾಭ್ ರೆಡಿ ಮಾಡಿದ್ದರು. ಇಂತಹದ್ದೊಂದು ಸೂಕ್ಷ್ಮ ಕಥೆಯುಳ್ಳ ಸಿನಿಮಾಗೆ ಹೇಗೆ ಪ್ರತಿಕ್ರಿಯೆ ಸಿಕ್ಕಿತು? ರಮ್ಯಾ ಕೃಷ್ಣಗಾಗಿಯೇ ಯಾಕೆ ಕಥೆ ಹುಟ್ಟಿಕೊಳ್ತು? ಅನ್ನೋದನ್ನು ಸ್ವತ: ದಯಾಳ್ ಪದ್ಮನಾಭನ್ ಡೈಲಿ ಮಾಧ್ಯಮ ಯೂಟ್ಯೂಬ್ ಚಾನೆಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ದಯಾಳ್ ಪದ್ಮನಾಭ್ 'ಓಕೆ ಸಾರ್ ಓಕೆ' ಎನ್ನುವ ಸಿನಿಮಾ ಮಾಡುತ್ತಿದ್ದರು. ಆ ಸಿನಿಮಾಗೆ ಸೆನ್ಸಾರ್ ಕೂಡ ಆಗಿ ರೆಡಿಯಾಗಿತ್ತು. ಆದರೆ ಸಿನಿಮಾ ರಿಲೀಸ್ ಆಗಿರಲಿಲ್ಲ. ಅವರ ಆಲೋಚನೆ ಒಬ್ಬ ರೈಟರ್ ಆಗಬೇಕು ಅಂತ ಇದ್ದಿದ್ದರಿಂದ ಆ ಕಡೆಗೆ ಹೆಚ್ಚು ಗಮನ ಹರಿಸಿದ್ದರು. ನಿರ್ದೇಶಕ ಶಶಾಂಕ್ ಹಾಗೂ ನಟ ಮೋಹನ್ ಇವರೆಲ್ಲ ಹಂಸಲೇಖ ಅವರ ಶಿಷ್ಯಂದಿರು. ಪ್ರತಿದಿನ ಬೆಳಗ್ಗೆಯಿಂದ ರಾತ್ರಿವರೆಗೂ ಹಂಸಲೇಖ ಅವರ ಜೊತೆಗೆ ಇರುತ್ತಿದ್ದರು. ಹೀಗೊಮ್ಮೆ ದಯಾಳ್ ಪದ್ಮನಾಭನ್ ಅವರನ್ನು ಶಶಾಂಕ್ ಸ್ಕ್ರೀನ್ ಪ್ಲೇ ಬರೆಯುವುದಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ 'ಬಾ ಬಾರೋ ರಸಿಕ' ಸಿನಿಮಾದ ಕಿಡಿ ಹೊತ್ತಿಕೊಂಡಿತ್ತು.
ಮುಂದೆ ಓದಿ.
ರಮ್ಯಾಕೃಷ್ಣ ಬೆಂಗಳೂರಿಗೆ ಬರ್ತಾರಂತೆ 'ಬಾ ಬಾರೋ ರಸಿಕ' ಶುರು
ಒಂದೇ ರಾತ್ರಿಯಲ್ಲಿ 100 ಸೀನ್‌ಗಳನ್ನು ಬರೆದಿದ್ದ ದಯಾಳ್
ಪುಟ್ಟಣ್ಣ ಕಣಗಾಲ್ ಸೆ*ಕ್ಸ್ ಕಾವ್ಯಾತ್ಮಕ ತೋರಿಸಿದ್ದಾರೆಂಬ ಮೆಚ್ಚುಗೆ

ಶಶಾಂಕ್ ನನಗಿಂತ ಸೀನಿಯರ್ ಇದ್ದರೂ ನಾನೇ ಮೊದಲು ಡೈರೆಕ್ಟ್ ಮಾಡಿದ್ದು. ಶಶಾಂಕ್ ನನ್ನನ್ನು ಸ್ಕ್ರೀನ್‌ಪ್ಲೇ ಬರೆಯುವುದಕ್ಕೆ ನನ್ನನ್ನು ಕರೆದುಕೊಂಡು ಹೋದರು. ಸ್ಕ್ರೀನ್‌ಪ್ಲೇ ಎಲ್ಲಾ ಆಯ್ತು. ಯಾವಾಗ ಶೂಟಿಂಗ್ ಎಂದು ಕೇಳಿದಾಗ, ನಾವಿಲ್ಲಿ ಕ್ಯಾಂಪೇನ್ ಮಾಡುತ್ತಿದ್ದೇವೆ. ಒಂದಷ್ಟು ವಿಷಯಗಳಿಗೋಸ್ಕರ ರಮ್ಯಾ ಕೃಷ್ಣ ಬೆಂಗಳೂರಿಗೆ ಬರುತ್ತಿದ್ದಾರೆ. 12 ದಿನ ಡೇಟ್ ಸಿಗಬಹುದು ಎಂದು ಪ್ರಡ್ಯೂಸರ್ ಹೇಳಿದರು. ರಮ್ಯಾ ಕೃಷ್ಣಗೆ ಸೂಟ್ ಆಗುವಂತಹ ಕಥೆ ಇದೆಯಾ? ಅಂತ ಕೇಳಿದರು. ಆಗ ಶಶಾಂಕ್ ಇವರು ಸ್ಟೋರಿ ಮಿಷಿನ್. ಹೂಂ ಅಂದರೆ ಒಂದು ಕಥೆ ಹೇಳಿಬಿಡುತ್ತಾರೆ ಅಂದರು. ನನ್ನ ಹತ್ತಿರ ಕಥೆಯೇ ಇರಲಿಲ್ಲ. ನಾನು ನಾಳೆ ರೆಡಿಯಾಗಿ ಬರುತ್ತೇನೆ ಎಂದು ಸುಳ್ಳು ಹೇಳಿದ ಬಂದಿದ್ದೆ. ಶಶಾಂಕ್ ಯಾವುದಾದರೂ ಇದೆಯಾ ಅಂತ ಕೇಳಿದರು. ಇಲ್ಲ ಮನೆಗೆ ಹೋಗಿ ಯೋಚನೆ ಮಾಡುತ್ತೇನೆ ಎಂದು ಹೇಳಿದೆ. ನಾನು ನನ್ನ ಮನೆಯವರು ಟ್ರಾವೆಲ್ ಮಾಡುವಾಗ ಒಂದು ಶಾರ್ಟ್ ಸ್ಟೋರಿ ಓದಿದ್ದೆ. ಅದರಲ್ಲಿ ಕೊನೆಯ ಎರಡು ಸಾಲುಗಳು ಇಷ್ಟ ಆಗಿದ್ದವು. ಹಾಗೇ ಕಥೆ ಹೊಳೆದಿದ್ದು. ನೀವು ನಂಬಲ್ಲ. ಒಂದೇ ರಾತ್ರಿಯಲ್ಲಿ 100 ಸೀನ್‌ಗಳನ್ನು ಬರೆದಿದ್ದೇನೆ." ಎಂದು ದಯಾಳ್ ಪದ್ಮನಾಭನ್ ಹೇಳಿದ್ದಾರೆ.
ಶಶಾಂಕ್ ಜೊತೆ ಕೂತು ಚರ್ಚೆ
ಮಾರನೇ ದಿನವೇ ಶಶಾಂಕ್‌ಗೆ ಸ್ಟೋರಿ ಹೇಳಿದ್ದರು. ಶಶಾಂಕ್ ಹಾಗೂ ದಯಾಳ್ ಪದ್ಮನಾಭನ್ ಕೂತು ಚರ್ಚೆ ಮಾಡಿದರು. ಸುಮಾರು 100 ಸೀನ್‌ನಿಂದ 64 ಸೀನ್‌ಗೆ ಇಳಿಸಿದ್ದರು. ನಿರ್ಮಾಪಕರಿಗೆ ಕಥೆಯನ್ನೂ ಹೇಳಿದರು. ಅದೂ ಓಕೆನೂ ಆಯ್ತು. ಕೇವಲ 15 ದಿನಗಳಲ್ಲಿ 'ಬಾ ಬಾರೋ ರಸಿಕ' ಸಿನಿಮಾದ ಶೂಟಿಂಗ್ ಕೂಡ ಶುರುವಾಯ್ತು. ರಮ್ಯಾ ಕೃಷ್ಣ ಅಂದಾಕ್ಷಣ ಸುನೀಲ್ ರಾವ್, ಆಶಿತಾ ಇವರೆಲ್ಲರೂ ಟೀಮ್ ಸೇರಿಕೊಂಡರು. ಆ ಸಿನಿಮಾ ದೊಡ್ಡ ಹಿಟ್ ಆಯ್ತು.
ಕಾವ್ಯಾತ್ಮಕ ಸೆ*ಕ್ಸ್ ಎಂದು ವಿಮರ್ಶೆ
"ಓಕೆ ಸಾರ್ ಓಕೆ ಸಿನಿಮಾದಿಂದಲೂ ಪ್ರೆಸ್ ಮೀಟ್‌ನಲ್ಲಿ ಹಿರಿಯ ಪತ್ರಕರ್ತರಾಗಿದ್ದ ಎ ಎಸ್ ಮೂರ್ತಿಯರು ನನಗೂ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಯಾವುದೋ ಒಂದು ಪಾಯಿಂಟ್‌ನಲ್ಲಿ ಆ ಸಿನಿಮಾವನ್ನು ಅವರು ನೋಡುತ್ತಾರೆ. ಅವರು ಮೈಸೂರು ಮಿತ್ರಗೆ ವಿಮರ್ಶೆ ಬರೆಯೋರು. ಅದರಲ್ಲಿ ಏನು ಬರೆದರು ಅಂದರೆ, ಪುಟ್ಟಣ್ಣ ಕಣಗಾಲ್ ಅವರು ಆದ್ಮೇಲೆ ಸೆ*ಕ್ಸ್ ಅನ್ನು ಇಷ್ಟು ಕಾವ್ಯಾತ್ಮಕವಾಗಿ ತೋರಿಸಿದರು ಅಂದರೆ ದಯಾಳ್ ಪದ್ಮನಾಭನ್ ಅಂತ ಬರೆದರು." ಎಂದು ನಿರ್ದೇಶಕರು ನೆನಪಿಸಿಕೊಂಡಿದ್ದಾರೆ.
ಬಾ ಬಾರೋ ರಸಿಕ ಸಿನಿಮಾದಲ್ಲಿ ಒಂದು ಕಡೆನೂ ಅಸಹ್ಯ ಎನ್ನುವ ಹಾಗೆ ಇರಲಿಲ್ಲ. ಆದರೆ, ಈ ಸಿನಿಮಾ ಕಥೆ ಸೆ*ಕ್ಸ್ ಬಗ್ಗೆನೇ ಆಗಿತ್ತು. ಬೆಂಗಳೂರಿನ ಕಲ್ಪನಾ ಥಿಯೇಟರ್‌ನಲ್ಲಿ ರಿಲೀಸ್ ಆಗಿತ್ತು. ನಾನು ಹಾಗೂ ಕ್ಯಾಮರಾಮ್ಯಾನ್ 8 ಗಂಟೆಗೆ ಹೋಗಿ ನಿಂತಿದ್ದೀವಿ. ಬೇರೆ ಸಿನಿಮಾಗಳಂತೆ ಕ್ಯೂ ನಿಲ್ಲುವುದಕ್ಕೆ ಶುರುವಾಯ್ತು. ಮ್ಯಾಟನಿಯಿಂದಲೇ ಹೌಸ್‌ಫುಲ್ ಆಗಿ ದೊಡ್ಡ ಹಿಟ್ ಆಯ್ತು ಎನ್ನುತ್ತಾರೆ ದಯಾಳ್ ಪದ್ಮನಾಭನ್.


Click it and Unblock the Notifications











