ನಿವೇದಿತಾ ಜೈನ್‌ಗೆ "ಇನ್ನೊಂದು ವರ್ಷದಲ್ಲಿ ಸಾಯ್ತೀಯ" ಎಂದಿದ್ದ ಕಲ್ಯಾಣ್ ಕುಮಾರ್; ಹಾಗೇ ನಡೆದು ಹೋಯ್ತು!

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿಯರ ಸಾಲಿನಲ್ಲಿ ನಿವೇದಿತಾ ಜೈನ್ ಕೂಡ ಒಬ್ಬರು. ದುರಾದೃಷ್ಟ ಅಂದರೆ, ಬಹುಬೇಗನೇ ನಿವೇದಿತಾ ಜೈನ್ ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದರು. ನಿವೇದಿತಾ ಜೈನ್ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಈ ನಟಿಯ ಸಾವು ಒಬ್ಬೊಬ್ಬರ ದೃಷ್ಟಿಯಲ್ಲಿ ಒಂದೊಂದು ರೀತಿ ಕಂಡಿದೆ.

ಕೆಲವರು ನಿವೇದಿತಾ ಜೈನ್ ಸಾವು ಸಹಜವಲ್ಲ. ಅದೊಂದು ವ್ಯವಸ್ಥಿತಿ ಕೊಲೆ ಎಂದು ಆರೋಪ ಮಾಡಿದ್ದರು. ಆ ವೇಳೆ ಹಲವರ ಹೆಸರುಗಳು ಕೂಡ ಬಂದಿದ್ದವು. ಇದು ಕೇವಲ ಊಹಾ ಪೋಹವೋ? ಇಲ್ಲ ನಿಜವಾಗಿಯೂ ನಿವೇದಿತಾ ಜೈನ್ ಕೊಲೆ ಆಗಿದೆಯೋ? ಇಲ್ಲ ಆಕಸ್ಮಿಕವೋ ಅನ್ನೋ ಪ್ರಶ್ನೆ ಇನ್ನೂ ಗೊಂದಲವಾಗಿಯೇ ಉಳಿದುಕೊಂಡಿದೆ.

Bhavana said that Kalyan Kumar told Nivedita Jain will die in another year after palm reading

ಆದರೆ, ಕನ್ನಡ ಚಿತ್ರರಂಗದ ಲೆಜೆಂಡ್ ದಿವಂಗತ ಕಲ್ಯಾಣ್ ಕುಮಾರ್ ಈ ನಟಿಯ ಭವಿಷ್ಯ ನುಡಿದಿದ್ದರು. ನಿವೇದಿತಾ ಜೈ ಕೈ ರೇಖೆಯನ್ನು ನೋಡಿ ಇನ್ನೊಂದು ವರ್ಷ ನಿನ್ನ ಜೀವನಕ್ಕೆ ಕಂಟಕವಿದೆ. ನೀನು ಬದುಕಿರುವುದೇ ಅನುಮಾನ ಎಂದು ಹೇಳಿದ್ದರು. ಈ ವಿಷಯವನ್ನು ರಘುರಾಮ್ ಯೂಟ್ಯೂಬ್ ಚಾನೆಲ್‌ಗೆ ಸ್ವತ: ನಟಿ ಭಾವನಾ ರಾಮಣ್ಣ ಅವರೇ ಹೇಳಿದ್ದಾರೆ. ಅದರದ್ದೊಂದು ಝಲಕ್ ಇಲ್ಲಿದೆ.

ಕಲ್ಯಾಣ್ ಕುಮಾರ್ ಹಸ್ತ ಭವಿಷ್ಯ ಹೇಳುತ್ತಿದ್ರು

"ಕಲ್ಯಾಣ್ ಕುಮಾರ್ ಸರ್ ಯಾವಾಗಲೂ ಸ್ಮೋಕ್ ಮಾಡುತ್ತಿದ್ದರು. ಶಾಟ್ ಮಧ್ಯೆ ಅವರು ಸ್ಮೋಕ್ ಮಾಡುತ್ತಿದ್ದಾಗ ನಿವೇದಿತ ಮತ್ತು ನಾನು ಹೋಗಿ ಕೂತು ಮಾತಾಡುತ್ತಿದ್ವಿ. ಮೀಟೂ ಅಂತಹದ್ದೇನೂ ಇಲ್ಲ. ಆತರದ್ದು ಫೀಲಿಂಗ್ ಯಾವುದೂ ಇಲ್ಲ. ಅವತ್ತೊಂದು ದಿನ ಆಫೀಸ್ ಸೀನ್ ಇತ್ತು. ಬೇರೆ ಕಡೆ ಶೂಟಿಂಗ್ ನಡೆಯುತ್ತಿತ್ತು. ನಾನು, ನಿವೇದಿತಾ ಮತ್ತು ಕಲ್ಯಾಣ್ ಕುಮಾರ್ ಸರ್ ಶಾಟ್ ಮಧ್ಯೆ ಮಾತಾಡುತ್ತಿದ್ವಿ. ಆಗ ಕಲ್ಯಾಣ್ ಕುಮಾರ್ ಸರ್ ಇಬ್ಬರದ್ದೂ ಕೈ ನೋಡಿದ್ರು." ಎಂದು ಭಾವನಾ ರಾಮಣ್ಣ ಹೇಳಿದ್ದಾರೆ.

Bhavana said that Kalyan Kumar told Nivedita Jain will die in another year after palm reading

ಒಂದು ವರ್ಷದಲ್ಲಿ ಕಂಟಕ

"ಕಲ್ಯಾಣ್ ಕುಮಾರ್ ಸರ್‌ಗೆ ಕೈ ರೇಖೆಗಳನ್ನು ನೋಡುವುದು ಅಂದರೆ ಇಂಟ್ರೆಸ್ಟಿಂಗ್. ನನ್ನ ಕೈ ರೇಖೆ ನೋಡಿದರು. ನಿನ್ನದೇನು ಸಮಸ್ಯೆಯಿಲ್ಲ. ಯಾರಿಗೂ ತೋರಿಸಬೇಡ ಅಂತ ಹೇಳಿದರು. ಆಗಲೇ ನಿವೇದಿತಾ ಅವರದ್ದೂ ನೋಡಿದರು. ಅದು ಮಧ್ಯಾಹ್ನದ ಸಮಯ. ಆಗ ಒಂದು ಮಾತು ಹೇಳಿದರು. ಒಂದು ವರ್ಷ ನೀನು ತುಂಬಾನೇ ಕೇರ್‌ಫುಲ್ ಆಗಿ ಇರಬೇಕು. ಆ ಒಂದು ವರ್ಷದಲ್ಲಿ ನಿನಗೆ ಸಮಸ್ಯೆಯಿದೆ ಎಂದು ಹೇಳಿದ್ದರು" ಎಂದಿದ್ದರು.

ತಮಾಷೆಯಾಗಿ ತೆಗೆದುಕೊಂಡಿದ್ದರು

"ನಿನಗೆ ಕಂಟಕವಿದೆ. ನಿನ್ನ ಜೀವ ಹೋಗಬಹುದು ಎಂದು ಹೇಳಿದ್ದರು. ನನ್ನ ಮುಂದೇನೆ ಹೇಳಿದ್ದರು. ನಿವೇದಿತಾ ಅದನ್ನು ತಮಾಷೆಯಾಗಿ ತೆಗೆದುಕೊಂಡಿದ್ದರು. ಹಾಗೇ ತಮಾಷೆಯಾಗಿ ತೆಗೆದುಕೊಂಡಿದ್ದರು." ಎಂದಿದ್ದಾರೆ.

"ಅದೊಂದು ಭಾವನೆ ಇತ್ತು"

"ಅವಳಿಗೆ ಏನೇನೋ ನೋವು ಇತ್ತು. ಆದರೆ, ಎಲ್ಲರ ಹತ್ತಿರ ತೋರಿಸಿಕೊಳ್ಳುತ್ತಿರಲಿಲ್ಲ. ಯಾವ್ಯಾವುದೋ ಏನೇನೋ ಅವಕಾಶಗಳು ಎಲ್ಲೆಲ್ಲೋ ಕರೆದುಕೊಂಡು ಬಂದಿರುತ್ತೆ. ಹಾಗೇ ಬಂದು ಬಿಟ್ಟಿರುತ್ತೇವೆ. ಮತ್ತೆ ವಾಪಾಸ್ ಹೋಗುವುದಕ್ಕೆ ಆಗುವುದಿಲ್ಲ. ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಇರಬೇಕಾಗುತ್ತೆ. ನಾವು ಅಲ್ಲಿ ಹಾಗಿದ್ದರೆ ಇರುತ್ತೇವೆ ಅಂತ ಅಂದುಕೊಳ್ಳುತ್ತೇವೆ. ಸಿನಿಮಾ ಇಂಡಸ್ಟ್ರಿಯಲ್ಲಿ ನೀವು ಸಾಕಷ್ಟು ಜನರನ್ನು ನೋಡಿರುತ್ತೀರ. ಅದು ತಪ್ಪು ಕಲ್ಪನೆ ಅಂತಾನೂ ಹೇಳುವುದಕ್ಕೆ ಆಗುವುದಿಲ್ಲ. ಇಲ್ಲಿ ಇದ್ದರೆ, ಹೀಗೆ ಇರಬೇಕು ಅಂತ ಕೆಲವರಿಗೆ ಭಾವನೆ ಇರುತ್ತೆ. ಆತರ ಭಾವನೆ ಇತ್ತು ಅಂತ ಅನಿಸುತ್ತೆ." ಎಂದು ಭಾವನಾ ಹೇಳಿದ್ದಾರೆ.

More from Filmibeat

English summary
Bhavana said that Kalyan Kumar told Nivedita Jain will die in another year after palm reading
Read more about: bhavana filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X