ಐಪಿಎಲ್ ನೋಡುತ್ತೀರಾ? ಸಿನಿಮಾ ನೋಡುತ್ತಿರಾ?: RRR, KGF 2, ಬೀಸ್ಟ್, ಆಚಾರ್ಯಗೆ ಟೆನ್ಷನ್ ಶುರು

ಭಾರತದ ಫೇಮಸ್ ಐಪಿಎಲ್ ಪಂದ್ಯಾವಳಿ ಮಾರ್ಚ್‌ನಿಂದ ಆರಂಭ ಆಗಲಿದೆ. ಮಾರ್ಷ್ 27 ರಿಂದ ಮೇ 28ರ ವರೆಗೆ ಒಂದು ತಿಂಗಳು ನಿರಂತರವಾಗಿ ಐಪಿಎಲ್ ಟೂರ್ನಿ ಆರಂಭ ಆಗಲಿದೆ. ಹೀಗಾಗಿ ಒಂದು ತಿಂಗಳು ಜನರು ಟಿವಿ ಬಿಟ್ಟು ಮೇಲೆ ಏಳುವುದು ಅನುಮಾನ. ಹೀಗಾಗಿ ಈಗಾಗಲೇ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ದೊಡ್ಡ ದೊಡ್ಡ ಸಿನಿಮಾಗಳಿಗೆ ಸಂಕಷ್ಟ ಶುರುವಾಗಿದೆ. ಇತ್ತ ಜನರಿಗೆ ಸಿನಿಮಾ ನೋಡಬೇಕಾ? ಐಪಿಎಲ್ ನೋಡಬೇಕಾ ಅನ್ನುವ ಗೊಂದಲಕ್ಕೆ ಒಳಗಾಗಿದ್ದಾರೆ.

ಐಪಿಎಲ್‌ ಟೂರ್ನಿ ಆರಂಭ ಆಗುವ ಡೇಟ್ ಅನೌನ್ಸ್ ಆಗುತ್ತಿದ್ದಂತೆ ಬಿಡುಗಡೆಗೆ ಸಜ್ಜಾಗಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಸಂಕಷ್ಟ ಎದುರಾಗಿದೆ. ರಾಜಮೌಳಿ RRR, ಯಶ್ ಅಭಿನಯದ 'ಕೆಜಿಎಫ್ 2', ದಳಪತಿ ವಿಜಯ್ ನಟನೆಯ 'ಬೀಸ್ಟ್', ಮೆಗಾಸ್ಟಾರ್ ಚಿರಂಜೀವಿಯ 'ಆಚಾರ್ಯ'. ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಚಿತ್ರಗಳಿಗೆ ಟೆನ್ಷನ್ ಶುರುವಾಗಿದೆ. ಸೂಪರ್‌ಸ್ಟಾರ್ ಸಿನಿಮಾಗಳಿಗೆ ಎದುರಾಗುವ ಆತಂಕವೇನು? ರಿಲೀಸ್ ಡೇಟ್ ಮುಂದಕ್ಕೆ ಹೋಗುತ್ತಾ? ಸಿನಿಮಾ ಮಂದಿಯ ಸ್ಟ್ರಾಟಜಿ ಏನು ಎಂದು ತಿಳಿಯಲು ಮುಂದೆ ಓದಿ.

ಐಪಿಎಲ್‌ನಿಂದ ರಾಜಮೌಳಿ ಟೆನ್ಷನ್ ಶುರು

ಐಪಿಎಲ್‌ನಿಂದ ರಾಜಮೌಳಿ ಟೆನ್ಷನ್ ಶುರು

ಹೌದು.. ಮಾರ್ಚ್ 27ರಿಂದ T20 ಕ್ರಿಕೆಟ್ ಪಂದ್ಯಾವಳಿ ಆರಂಭ ಆಗಲಿದೆ. ಹೀಗಾಗಿ ರಾಜಮೌಳಿಗೆ ಮತ್ತೆ ಟೆನ್ಷನ್ ಶುರುವಾಗಿದೆ. ಈಗಾಗಲೇ ಮಾರ್ಚ್ 25ಕ್ಕೆ RRR ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅನೌನ್ಸ್ ಮಾಡಿದೆ. ಈ ಬೆನ್ನಲ್ಲೇ ಐಪಿಎಲ್ ಕೂಡ ಮಾರ್ಚ್ 27ರಿಂದಲೇ ಆರಂಭ ಆಗುತ್ತಿರುವುದರಿಂದ ರಾಜಮೌಳಿ ಸಿನಿಮಾದ ಸಂಜೆ ಶೋಗಳಿಗೆ ಏಟು ಬೀಳಲಿದೆ. ಜನರು ಐಪಿಎಲ್ ಮ್ಯಾಚ್ ನೋಡುವ ಸಲುವಾಗಿ ಮನೆಯಿಂದ ಹೊರಗೆ ಹೋಗುವುದು ಅನುಮಾನ. ಹೀಗಾಗಿ ಅತೀ ಹೆಚ್ಚು ಗಳಿಕೆ ಕಾಣುವ ಶೋಗಳಿಗೆ ಐಪಿಎಲ್ ಏಟು ಕೊಡುವ ಸಾಧ್ಯತೆಯಿದೆ. ಹೀಗಾಗಿ ಈ ಸಂಕಷ್ಟದಿಂದ ಪಾರಾಗಲು ರಾಜಮೌಳಿ ಏನು ಮಾಡುತ್ತಾರೆ ಎನ್ನುವ ಕುತೂಹಲ ಎದುರಾಗಿದೆ.

ಮುಂದಕ್ಕೆ ಹೋಗುತ್ತಾ 'ಕೆಜಿಎಫ್ 2'

ಮುಂದಕ್ಕೆ ಹೋಗುತ್ತಾ 'ಕೆಜಿಎಫ್ 2'

ರಾಜಮೌಳಿಯ RRR, ಯಶ್ ಅಭಿನಯದ 'ಕೆಜಿಎಫ್ 2' ಈ ಎರಡು ಸಿನಿಮಾಗಳಿಗೆ ಯಾಕೋ ಬಿಡುಗಡೆ ಭಾಗ್ಯನೇ ಇಲ್ಲ ಅನಿಸುತ್ತಿದೆ. ರಿಲೀಸ್ ಡೇಟ್ ಅನೌನ್ಸ್ ಮಾಡಿದಾಗಲೆಲ್ಲಾ ಏನಾದರೂ ಒಂದು ಸಂಕಷ್ಟ ಎದುರಾಗುತ್ತಲೇ ಇರುತ್ತೆ. ಕೊರೊನಾ ಕಾಟದಿಂದ ತಪ್ಪಿಸಿಕೊಳ್ಳಲು 'ಕೆಜಿಎಫ್ 2' ಎಂಟು ತಿಂಗಳು ಬಿಡುಗಡೆ ದಿನವನ್ನು ಮುಂದೂಡಿತ್ತು. ಆದರೂ ಸಂಕಷ್ಟ ತಪ್ಪಿಲ್ಲ. ಐಪಿಎಲ್ ಪಂದ್ಯಾವಳಿ ಆರಂಭ ಆಗುತ್ತಿರುವುದರಿಂದ ಏಪ್ರಿಲ್ 14ಕ್ಕೆ ಬಿಡುಗಡೆಗೆ ಸಜ್ಜಾಗಿರುವ 'ಕೆಜಿಎಫ್ 2' ಏಟು ಬೀಳಲಿದೆ. ಈ ಚಿತ್ರಕ್ಕೂ ಸಂಜೆ ಹಾಗೂ ನೈಟ್ ಶೋಗಳ ಗಳಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಮಧ್ಯೆ 'ಕೆಜಿಎಫ್ 2' ರಿಲೀಸ್ ಡೇಟ್ ಮತ್ತೆ ಮುಂದಕ್ಕೆ ಹೋಗ್ಬಹುದು ಎನ್ನಲಾಗಿದೆ.

ಬೀಸ್ಟ್ ಗತಿಯೇನು?

ಬೀಸ್ಟ್ ಗತಿಯೇನು?

ತಮಿಳಿ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ದಳಪತಿ ವಿಜಯ್ ಅಭಿನಯದ 'ಬೀಸ್ಟ್'. ನೆಲ್ಸನ್ ದಿಲೀಪ್ ಕುಮಾರ್ ಹಾಗೂ ದಳಪತಿ ವಿಜಯ್ ಕಾಂಬಿನೇಷನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ 300 ಕೋಟಿಗೂ ಅಧಿಕ ಗಳಿಕೆ ಕಾಣಲಿದೆ ಎಂದು ಹೇಳಲಾಗುತ್ತಿದೆ. 'ಕೆಜಿಎಫ್ 2'ಗೆ ಏಪ್ರಿಲ್ 14ರಂದೇ 'ಬೀಸ್ಟ್' ಟಕ್ಕರ್ ಕೊಡಲಿದೆ ಎನ್ನಲಾಗಿದೆ. ಆದರೆ, ಐಪಿಎಲ್ ಡೇಟ್ ಅನೌನ್ಸ್ ಆದಮೇಲೆ ವಿಜಯ್ ಬೀಸ್ಟ್ ಕೂಡ ಮುಂದಕ್ಕೆ ಹೋಗುತ್ತಾ? ಅನ್ನುವ ಅನುಮಾನ ಶುರುವಾಗಿದೆ.

ಸರ್ಕಾರು ವಾರಿ ಪಾಟ ಕಥೆಯೇನು?

ಸರ್ಕಾರು ವಾರಿ ಪಾಟ ಕಥೆಯೇನು?

ಮಹೇಶ್ ಬಾಬು ಅಭಿನಯದ ಸಿನಿಮಾ 'ಸರ್ಕಾರು ವಾರಿ ಪಾಟ' ಮೇ 12ಕ್ಕೆ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಆದರೆ, ಐಪಿಎಲ್ ಮುಗಿಯುವುದೇ ಮೇ 28ಕ್ಕೆ. ಒಂದು ಸಿನಿಮಾಗೆ ಮೊದಲ ಎರಡು ವಾರ ತುಂಬಾನೇ ಮುಖ್ಯ ಆಗಿರುತ್ತೆ. ಆದರೆ, ಸರ್ಕಾರು ವಾರಿ ಪಾಟ'ಐಪಿಎಲ್ ಮುಗಿಯುವ ವಾರ ಬಿಡುಗಡೆಯಾಗಿದ್ದರೂ, ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಹೆಚ್ಚು ಕಡಿಮೆ 16 ದಿನ ಗ್ಯಾಪ್ ಇದೆ. ಹೀಗಾಗಿ ಸೂಪರ್‌ಸ್ಟಾರ್ ಮಹೇಶ್ ಬಾಬು ಕೂಡ ಮುಂದಕ್ಕೆ ಹೋಗುವ ಸಾಧ್ಯತೆಯಿದೆ.

'ಆಚಾರ್ಯ', 'F3'ಗೂ ಟೆನ್ಷನ್

'ಆಚಾರ್ಯ', 'F3'ಗೂ ಟೆನ್ಷನ್

ಐಪಿಎಲ್‌ನಿಂದ ಮೆಗಾಸ್ಟಾರ್ ಚಿರಂಜೀವಿಗೂ ಟೆನ್ಷನ್ ಶುರುವಾಗಿದೆ. ಕೊರಟಾಲ ಶಿವ ಹಾಗೂ ಚಿರಂಜೀವಿ ಕಾಂಬಿನೇಷನ್ ಸಿನಿಮಾ 'ಆಚಾರ್ಯ' ಏಪ್ರಿಲ್ 29ಕ್ಕೆ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಇತ್ತ ವಿಕ್ಟರಿ ವೆಂಕಟೇಶ್ ಹಾಗೂ ವರುಣ್ ತೇಜ್ ಅಭಿನಯದ 'F3' ಕೂಡ ಮೇ 27ಕ್ಕೆ ಬಿಡುಗಡೆಯಾಗಲಿದೆ. 'F3' ಹೇಗೋ ಒಂದೆರಡು ದಿನ ಸಹಿಸಿಕೊಳ್ಳಬಹುದು. ಆದರೆ, ಮೆಗಾಸ್ಟಾರ್ ಅಭಿನಯದ 'ಆಚಾರ್ಯ' ಒಂದು ತಿಂಗಳು ಸಂಕಷ್ಟ ಎದುರಿಸಬೇಕಾಗುತ್ತೆ. ಹೀಗಾಗಿ ಈ ಎಲ್ಲಾ ಸಿನಿಮಾಗಳು ಮತ್ತೆ ಬಿಡುಗಡೆ ದಿನವನ್ನು ಮುಂದೂಡುವ ಸಾಧ್ಯತೆಯಿದೆ. ಪ್ರೇಕ್ಷಕರು ಥಿಯೇಟರ್‌ಗೆ ಬಾರದೆ ಹೋದರೆ ಎನ್ನುವ ಆತಂಕವಿದೆ. ಕೊರೊನಾ ಕಾಟದಿಂದ ತಪ್ಪಿಸಿಕೊಂಡ ಬಳಿಕ ಐಪಿಎಲ್ ಕಾಟ ಶುರುವಾದಂತೆ ಆಗಿದೆ.

More from Filmibeat

English summary
Big tension for RRR, KGF2, Beast, Acharya, and Sarkaru Vaari Paata due to IPL. 15th edition of IPL will start by March 27th and ends with May 28th. During this period Big budget movies will be suffer in evenig Shows.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X