ಬಾಲಿವುಡ್ ನಟ ಸಂಜಯ್ ದತ್ ಅಣ್ಣಾವ್ರನ್ನು ಭೇಟಿಯಾಗಿದ್ದು ಯಾವಾಗ? ಈ ಫೋಟೋದ ಕಥೆಯೇನು?
'ಕೆಜಿಎಫ್ 2' ರಿಲೀಸ್ ಬಳಿಕ ಬಾಲಿವುಡ್ ನಟ ಸಂಜಯ್ ದತ್ ದಕ್ಷಿಣ ಭಾರತದ ಬ್ಯುಸಿಯಾಗಿದ್ದಾರೆ. ಕನ್ನಡ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ಗಿಂತ ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಅಧೀರನಾಗಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ. ಇನ್ನೊಂದು ಕಡೆ ದಕ್ಷಿಣ ಭಾರತದ ಸಿನಿಪ್ರಿಯರು ಕೂಡ ಸಂಜಯ್ ದತ್‌ರನ್ನು ಇಷ್ಟ ಪಡುವುದಕ್ಕೆ ಶುರು ಮಾಡಿದ್ದಾರೆ.
'ಕೆಜಿಎಫ್ 2' ಬಳಿಕ ಸಂಜಯ್ ದತ್ ಮತ್ತೊಂದು ಕನ್ನಡ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ 'ಕೆಡಿ' ಸಿನಿಮಾದಲ್ಲೂ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಮತ್ತೆ ಸಂಜಯ್ ದತ್‌ರನ್ನು ಕನ್ನಡ ಸಿನಿಮಾದಲ್ಲಿ ನೋಡುವುದಕ್ಕೆ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ಇಂಟರ್‌ನೆಟ್‌ನಲ್ಲಿ ಅಣ್ಣಾವ್ರ ಜೊತೆಗಿರುವ ಹಳೆಯ ಫೋಟೊ ಒಂದು ವೈರಲ್ ಆಗುತ್ತಿದೆ.

ಅರೇ.. ಸಂಜಯ್ ದತ್ ಕನ್ನಡದ ವರನಟ ರಾಜ್‌ಕುಮಾರ್ ಅನ್ನು ಯಾವ ಸಂದರ್ಭದಲ್ಲಿ ಭೇಟಿ ಮಾಡಿದರು? ಅನ್ನೋ ಕುತೂಹಲ ಈ ಫೋಟೋ ನೋಡಿದ ಬಳಿಕ ಬಂದೇ ಬರುತ್ತೆ. ಆಗಿನ್ನೂ ಸಂಜಯ್ ದತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಸಮಯ. ಕಾರ್ಯಕ್ರಮವೊಂದರಲ್ಲಿ ಅಣ್ಣಾವ್ರು ಹಾಗೂ ಸಂಜಯ್ ದತ್ ಇಬ್ಬರೂ ಮುಖಾ ಮುಖಿಯಾಗಿದ್ದರು. ಅದೇ ಫೋಟೋ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.
ಇತ್ತೀಚೆಗೆ ಸಂಜಯ್ ದತ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆ 'ಕೆಡಿ' ಸಿನಿಮಾದ ಅವರ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಲಾಗಿತ್ತು. ಮೇಲ್ನೋಟಕ್ಕೆ ಸಂಜಯ್ ದತ್ ಖತರ್ನಾಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಕೊಳ್ಳುತ್ತಿರಬಹುದು ಎಂದು ಫ್ಯಾನ್ಸ್ ಅಂದಾಜಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಲುಕ್ ಟ್ರೆಂಡಿಂಗ್‌ನಲ್ಲಿ ಕೂಡ ಇತ್ತು. ಸಂಜಯ್ ಲುಕ್ ಖದರ್ ಎಲ್ಲದಲ್ಲೂ ಮೆಚ್ಚುಗೆ ವ್ಯಕ್ತವಾಗಿತ್ತು.

ಇದೇ ಗ್ಯಾಪ್‌ನಲ್ಲಿ ಸಂಜಯ್ ದತ್ ಮತ್ತು ಅಣ್ಣಾವ್ರ ಮುಖಾ ಮುಖಿಯಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇವರಿಬ್ಬರೂ ಯಾವುದೋ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದಾರೆ ಅನ್ನೋದು ಸ್ಪಷ್ಟವಾಗಿದೆ. ಆದರೆ, ಯಾವ ಸಂದರ್ಭ ಅನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅಣ್ಣಾವ್ರ ಕಾರ್ಯಕ್ರಮಕ್ಕೆ ಸಂಜಯ್ ದತ್ ಬಂದಿದ್ರಾ? ಯಾವ ಸಂದರ್ಭ ಅನ್ನೋದು ಎಲ್ಲೂ ವರದಿಯಾಗಿಲ್ಲ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿರುವ ಸಂಜಯ್ ದತ್‌ಗೆ ಅಣ್ಣಾವ್ರ ಕುಟುಂಬ ಹಳೆ ಪರಿಚಯ ಅನ್ನೋದು ಈ ಫೋಟೋ ಮೂಲಕ ಸಾಬೀತಾಗಿದೆ.
'ಕೆಜಿಎಫ್ 2' ಸಿನಿಮಾ ಟ್ರೈಲರ್ ಬಿಡುಗಡೆ ಸಮಯದಲ್ಲಿ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಸಂಜಯ್ ದತ್ ಭೇಟಿ ನೀಡಿದ್ದರು. ಪುನೀತ್ ರಾಜ್‌ಕುಮಾರ್ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದರು. ಈ ವೇಳೆ ರಾಘಣ್ಣನ ಕುಟುಂಬ ಕೂಡ ಜೊತೆಯಲ್ಲಿ ಇತ್ತು. ಸದ್ಯ ಕನ್ನಡಿಗರಿಗೆ ತೀರ ಹತ್ತಿರವಾಗಿರುವ ಸಂಜಯ್ ದತ್ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಾನಕ್ಕೂ ಭೇಟಿ ಕೊಟ್ಟಿದ್ದರು. ಧ್ರುವ ಸರ್ಜಾ ಮಕ್ಕಳ ನಾಮಕರಣಕ್ಕೂ ಆಗಮಿಸಿ ಹರಸಿದ್ದರು.
ಈಗ ಎಲ್ಲರ ಕಣ್ಣು ಸಂಜಯ್ ದತ್ ನಟಿಸಿರುವ ಮತ್ತೊಂದು ಸಿನಿಮಾ 'ಕೆಡಿ' ಮೇಲೆ ಇದೆ. ಧ್ರುವ ಸರ್ಜಾ ಹಾಗೂ ಸಂಜಯ್ ದತ್ ಕಾದಾಟವನ್ನು ತೆರೆ ಮೇಲೆ ನೋಡುವುದಕ್ಕೆ ಕನ್ನಡಿಗರು ತುದಿಗಾಲಲ್ಲಿ ನಿಂತಿದ್ದಾರೆ. ಇದೇ ವರ್ಷದ ಕೊನೆಯಲ್ಲಿ 'ಕೆಡಿ' ಸಿನಿಮಾ ತೆರೆಕಾಣುತ್ತಿದ್ದು, ಜೋಗಿ ಪ್ರೇಮ್ ನಿಧಾನವಾಗಿ ಪ್ರಚಾರವನ್ನು ಆರಂಭಿಸಿದ್ದಾರೆ. ಈ ಮಧ್ಯೆ ಅಣ್ಣಾವ್ರು ಹಾಗೂ ಸಂಜಯ್ ದತ್ ಭೇಟಿ ಮಾಡಿದ್ದ ಹಳೇ ಫೋಟೋ ಕೂಡ ಟ್ರೆಂಡಿಂಗ್‌ನಲ್ಲಿದೆ.


Click it and Unblock the Notifications











