ಸ್ಯಾಂಡಲ್ ವುಡ್ ಪರದೆ ಮೇಲೆ ಮಿಂಚಿ ಹೋದ ಬಾಲಿವುಡ್ ನಟರಿವರು

ಸ್ಯಾಂಡಲ್ ವುಡ್ ಸ್ಟಾರ್ ಗಳು ಪರಭಾಷೆಯಲ್ಲಿ ನಟಿಸುವುದು, ಪರಭಾಷೆಯವರು ನಮ್ಮ ಇಂಡಸ್ಟ್ರಿಯಲ್ಲಿ ಬಂದು ನಟಿಸುವುದು ಈಗಿನ ಸಮಯಕ್ಕೆ ಸಾಮಾನ್ಯವಾಗಿದೆ. ತೆಲುಗು, ತಮಿಳು ಚಿತ್ರರಂಗದವರು ಕನ್ನಡ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ.

ಹಾಗ್ನೋಡಿದ್ರೆ, ಬಾಲಿವುಡ್ ಸ್ಟಾರ್ ಗಳು ಕನ್ನಡ ಸಿನಿಮಾ ಮಾಡಿರುವುದು ಬಹಳ ಅಪರೂಪ. ಬಿಟೌನ್ ಕಲಾವಿದರು ನಟಿಸೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲೊಬ್ಬ ಇಲ್ಲೊಬ್ಬ ಕಲಾವಿದರು ಕನ್ನಡದಲ್ಲಿ ಸಿನಿಮಾ ಮಾಡಿ ಹೋಗಿದ್ದಾರೆ.

ಸ್ಯಾಂಡಲ್ ವುಡ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಹೋಗಿರುವ ಬಿಟೌನ್ ತಾರೆಯರು ಯಾರೆಲ್ಲಾ ಇದ್ದಾರೆ ಎಂಬುದರ ಬಗ್ಗೆ ಒಂದು ಪಟ್ಟಿ ಸಿದ್ಧ ಮಾಡಿದ್ದೇವೆ. ಈ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ? ಮುಂದೆ ಓದಿ....

'ಸಾಕ್ಷಾತ್ಕಾರ' ಚಿತ್ರದಲ್ಲಿ ಕಪೂರ್

'ಸಾಕ್ಷಾತ್ಕಾರ' ಚಿತ್ರದಲ್ಲಿ ಕಪೂರ್

1971ರಲ್ಲಿ ಬಿಡುಗಡೆಯಾಗಿದ್ದ 'ಸಾಕ್ಷಾತ್ಕಾರ' ಸಿನಿಮಾದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಪೃಥ್ವಿರಾಜ್ ಕಪೂರ್ ನಟಿಸಿದ್ದರು. ಡಾ ರಾಜ್ ಕುಮಾರ್ ಅವರ ತಂದೆ ಪಾತ್ರದಲ್ಲಿ ಪೃಥ್ವಿರಾಜ್ ಕಪೂರ್ ಬಣ್ಣ ಹಚ್ಚಿದ್ದರು. ಹಿಂದಿ ಇಂಡಸ್ಟ್ರಿಯಲ್ಲಿ ಕಪೂರ್ ಫ್ಯಾಮಿಲಿ ಬಹಳ ದೊಡ್ಡದು ಮತ್ತು ಹಳೆಯದು. ಈ ಕಪೂರ್ ಫ್ಯಾಮಿಲಿ ಮೊದಲ ನಟ ಪೃಥ್ವಿರಾಜ್ ಕಪೂರ್.

'ಪಲ್ಲವಿ ಅನುಪಲ್ಲವಿ'ಯಲ್ಲಿ ಅನಿಲ್

'ಪಲ್ಲವಿ ಅನುಪಲ್ಲವಿ'ಯಲ್ಲಿ ಅನಿಲ್

ಮಣಿರತ್ನಂ ನಿರ್ದೇಶನದ ಮೊದಲ ಸಿನಿಮಾ 'ಪಲ್ಲವಿ ಅನುಪಲ್ಲವಿ'. 1981ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ ಅನಿಲ್ ಕಪೂರ್ ನಾಯಕರಾಗಿ ನಟಿಸಿದ್ದರು. ಮತ್ತೆ ಯಾವ ಕನ್ನಡ ಸಿನಿಮಾದಲ್ಲೂ ಅನಿಲ್ ಕಪೂರ್ ಕಾಣಿಸಿಕೊಂಡಿಲ್ಲ.

ವಿಷ್ಣುವರ್ಧನ್ ಜೊತೆ ಅಕ್ಷಯ್

ವಿಷ್ಣುವರ್ಧನ್ ಜೊತೆ ಅಕ್ಷಯ್

1993ರಲ್ಲಿ ಬಿಡುಗಡೆಯಾಗಿದ್ದ 'ವಿಷ್ಣು-ವಿಜಯ' ಚಿತ್ರದಲ್ಲಿ ಡಾ ವಿಷ್ಣುವರ್ಧನ್ ಜೊತೆ ಅಕ್ಷಯ್ ಕುಮಾರ್ ನಟಿಸಿದ್ದರು. ಹಿಂದಿಯಲ್ಲಿ ಬಂದಿದ್ದ ಅಶಾಂತ್ ಸಿನಿಮಾದ ಕನ್ನಡ ರೀಮೇಕ್ ಇದಾಗಿತ್ತು. ಹಿಂದಿಯಲ್ಲಿ ಸೋತಿದ್ದ ಸಿನಿಮಾ ಕನ್ನಡದಲ್ಲಿ ಗೆದ್ದಿತ್ತು. ಇದು ಅಕ್ಷಯ್ ಕುಮಾರ್ ನಟಿಸಿದ್ದ ಒಂದೇ ಒಂದು ಕನ್ನಡ ಸಿನಿಮಾ.

ಅಮೃತಧಾರೆಯಲ್ಲಿ ಅಮಿತಾಭ್

ಅಮೃತಧಾರೆಯಲ್ಲಿ ಅಮಿತಾಭ್

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರು ಕನ್ನಡದ 'ಅಮೃತಧಾರೆ' ಚಿತ್ರದಲ್ಲಿ ನಟಿಸಿದ್ದರು. ರಮ್ಯಾ, ಧ್ಯಾನ್ ನಟಿಸಿದ್ದ ಈ ಚಿತ್ರದಲ್ಲಿ ಅಮಿತಾಭ್, ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಪಾತ್ರದಲ್ಲೇ ಕಾಣಿಸಿಕೊಂಡಿದ್ದರು.

ಜ್ಯೂಲಿ ಚಿತ್ರದಲ್ಲಿ ಡಿನೋ

ಜ್ಯೂಲಿ ಚಿತ್ರದಲ್ಲಿ ಡಿನೋ

ಮೋಹಕತಾರೆ ರಮ್ಯಾ ಸಖತ್ ಬೋಲ್ಡ್ ಆಗಿ ನಟಿಸಿದ್ದ 'ಜ್ಯೂಲಿ' ಚಿತ್ರದಲ್ಲಿ ಹಿಂದಿ ನಟ ಡಿನೋ ಮೋರಿಯಾ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. 2006ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು.

'ಕೇರ್ ಆಫ್ ಪುಟ್ ಪಾತ್' ಚಿತ್ರದಲ್ಲಿ ಜಾಕಿ

'ಕೇರ್ ಆಫ್ ಪುಟ್ ಪಾತ್' ಚಿತ್ರದಲ್ಲಿ ಜಾಕಿ

ಮಾಸ್ಟರ್ ಕಿಶನ್ ನಟಿಸಿ, ನಿರ್ದೇಶಿಸಿದ್ದ 'ಕೇರ್ ಆಫ್ ಪುಟ್ ಪಾತ್' ಸಿನಿಮಾದಲ್ಲಿ ಜಾಕಿ ಶ್ರಾಫ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. 2006ರಲ್ಲಿ ಈ ಸಿನಿಮಾ ತೆರೆಕಂಡಿತ್ತು.

'ರುಸ್ತುಂ' ಚಿತ್ರದಲ್ಲಿ ವಿವೇಕ್ ಒಬೆರಾಯ್

'ರುಸ್ತುಂ' ಚಿತ್ರದಲ್ಲಿ ವಿವೇಕ್ ಒಬೆರಾಯ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿದ್ದ 'ರುಸ್ತುಂ' ಸಿನಿಮಾದಲ್ಲಿ ವಿವೇಕ್ ಒಬೆರಾಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪೊಲೀಸ್ ಅಫೀಸರ್ ಆಗಿ ವಿವೇಕ್ ಒಬೆರಾಯ್ ಕಾಣಿಸಿಕೊಂಡಿದ್ದರು.

ಪೈಲ್ವಾನ್ ಗೆ ಸಾಥ್ ಕೊಟ್ಟಿದ್ದ ಸುನೀಲ್ ಶೆಟ್ಟಿ

ಪೈಲ್ವಾನ್ ಗೆ ಸಾಥ್ ಕೊಟ್ಟಿದ್ದ ಸುನೀಲ್ ಶೆಟ್ಟಿ

ಕಿಚ್ಚ ಸುದೀಪ್ ನಟಿಸಿದ್ದ 'ಪೈಲ್ವಾನ್' ಸಿನಿಮಾ ಮೂಲಕ ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ, ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದರು. ಇದೇ ವರ್ಷ ಸಿನಿಮಾ ತೆರೆಕಂಡಿತ್ತು.

More from Filmibeat

English summary
Many Bollywood celebrities are making their appearances in the south film industry. Few B-town actors made their charming appearance in Kannada Cine industry popularly called as Sandalwood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X