ನನ್ನ ರೂಮ್‌ನಲ್ಲಿದ್ದ ಶಾಹಿದ್ ಕಪೂರ್ ದುಃಸ್ವಪ್ನದಂತೆ ಕಾಡಿದ್ದ ಎಂದಿದ್ದ ಕಂಗನಾ: ಅಂದು ನಡೆದಿದ್ದೇನು?

ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ಕಂಗನಾ ರನೌತ್ ಫಿಲ್ಟರ್ ಇಲ್ಲದೆ ಮಾತಾಡುವ ನಟಿ. ತನ್ನ ಮನಸ್ಸಿನಲ್ಲಿ ಏನಿದೆಯೋ ಅದನ್ನು ಕ್ಯಾಮರಾ ಮುಂದೆ ಹೇಳಿ ಬಿಡುತ್ತಾರೆ. ಇದೇ ಕಾರಣಕ್ಕೆ ಬಾಲಿವುಡ್ ಜೊತೆ ಕಂಗನಾ ರನೌತ್ ಸಂಬಂಧ ಚೆನ್ನಾಗಿಲ್ಲ. ಬಾಲಿವುಡ್‌ನ ಬಹುತೇಕ ಮಂದಿ ಈಕೆ ನೇರ ನುಡಿಗಳನ್ನು ದ್ವೇಷ ಮಾಡುತ್ತಾರೆ. ಕಂಗನಾ ಜೊತೆ ಶೇ.90ರಷ್ಟು ನಟ-ನಟಿಯರು ದೂರವೇ ಉಳಿದು ಬಿಟ್ಟಿದ್ದಾರೆ. ಆದರೂ ಸೋಶಿಯಲ್ ಮೀಡಿಯಾಗಳಲ್ಲಿ, ಸಂದರ್ಶನದಲ್ಲಿ ನೇರವಾಗಿ ಏನಾದರೂ ಒಂದು ಹೇಳಿಕೆ ಕೊಟ್ಟು ಪೇಚಿಗೆ ಸಿಕ್ಕಿಕೊಳ್ಳುತ್ತಾರೆ.

ಬಾಲಿವುಡ್‌ನಲ್ಲಿ ಕಂಗನಾ ರನೌತ್‌ರನ್ನು ದ್ವೇಷಿಸುವವರು ಸಾಕಷ್ಟು ಮಂದಿ ಇದ್ದಾರೆ. ಇವರಲ್ಲಿ ನಟ ಶಾಹಿದ್ ಕಪೂರ್ ಕೂಡ ಒಬ್ಬರು. ಕಂಗನಾ ಹಾಗೂ ಶಾಹಿದ್ ಕಪೂರ್ ಇಬ್ಬರೂ 'ರಂಗೂನ್' ಸಿನಿಮಾದಲ್ಲಿ ನಟಿಸಿದ್ದರೂ, ಉತ್ತಮ ಬಾಂಧವ್ಯವನ್ನು ಉಳಿಸಿಕೊಂಡಿಲ್ಲ. ಇದೇ ಕಾರಣಕ್ಕೆ ಒಂದು ಕಾರಣ, ಸಂದರ್ಶನವೊಂದರಲ್ಲಿ ಕಂಗನಾ ನೀಡಿದ ಹೇಳಿಕೆ. ಕಂಗನಾ ಒಮ್ಮೆ "ನನ್ನ ರೂಮಿನಲ್ಲಿದ್ದ ಶಾಹಿದ್ ನನ್ನನ್ನು ದುಃಸ್ವಪ್ನದಂತೆ ಕಾಡಿದ್ದ" ಎಂದು ಹೇಳಿಕೆ ಕೊಟ್ಟಿದ್ದರು. ಇವರಿಬ್ಬರ ಸ್ನೇಹ ಮುರಿದು ಬೀಳಲು ಇದೂ ಒಂದು ಕಾರಣವಾಯ್ತು.

ಕಂಗನಾ-ಶಾಹಿದ್ ನಡುವೆ ಕೋಲ್ಡ್ ವಾರ್

ಕಂಗನಾ-ಶಾಹಿದ್ ನಡುವೆ ಕೋಲ್ಡ್ ವಾರ್

ಇದು 2017ರ ಕಥೆ. ಬಾಲಿವುಡ್ ನಿರ್ದೇಶಕ ವಿಶಾಲ್ ಭಾರದ್ವಾಜ್ 'ರಂಗೂನ್' ಎಂಬ ಸಿನಿಮಾವನ್ನು ನಿರ್ದೇಶಿಸುತ್ತಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ಕಂಗನಾ ರನೌತ್ ಹಾಗೂ ಶಾಹಿದ್ ಕಪೂರ್ ಸಂಬಂಧ ಹದಗೆಟ್ಟಿತ್ತು. ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಿತ್ತು ಎಂಬ ಗಾಳಿ ಸುದ್ದಿಗಳು ಹರಿದಾಡಿದ್ದವು. ಅಲ್ಲಿಂದ ಶಾಹಿದ್ ಕಪೂರ್ ಹಾಗೂ ಕಂಗನಾ ನಡುವಿನ ಸಂಬಂಧ ಸರಿಯಾಗಿಲ್ಲ ಎಂದು ಬಾಲಿವುಡ್‌ ಗಲ್ಲಿಗಳಲ್ಲಿ ಹರಿದಾಡುತ್ತಿರುವ ಸುದ್ದಿ.

ಕೋಣೆಯಲ್ಲಿ ಶಾಹಿದ್ ಕಪೂರ್ ದುಸ್ವಪ್ನದಂತೆ ಕಾಡಿದ್ದ

ಕೋಣೆಯಲ್ಲಿ ಶಾಹಿದ್ ಕಪೂರ್ ದುಸ್ವಪ್ನದಂತೆ ಕಾಡಿದ್ದ

ಕಂಗನಾ ರನೌತ್ ಮನಸ್ಸಿಗೆ ಬಂದಿದ್ದನ್ನು ನೇರವಾಗಿ ಹೇಳಿ ಬಿಡುವ ಸ್ವಭಾವ. ಈ ಕಾರಣಕ್ಕೆ ಕಂಗನಾ ಕಂಡರೆ, ಬಾಲಿವುಡ್ ಮಂದಿ ಉರಿದು ಬೀಳುತ್ತಾರೆ. ಒಮ್ಮ ಕಂಗನಾ ಶಾಹಿದ್ ಕಪೂರ್ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದರು. "ನಾವಿಬ್ಬರೂ ಕಾಡಿನೊಳಗೆ ಶೂಟಿಂಗ್ ಮಾಡುತ್ತಿದ್ದೆವು. ಆಗ ಅಲ್ಲಿಂದ ಕಾಟೇಜ್‌ನಲ್ಲಿ ನಾನು ಮತ್ತು ಶಾಹಿದ್ ಕಪೂರ್ ಒಂದೇ ಕೋಣೆಯನ್ನು ಹಂಚಿಕೊಳ್ಳಬೇಕಾದ ಸ್ಥಿತಿ ಎದುರಾಗಿತ್ತು. ಆ ವೇಳೆ ಶಾಹಿದ್ ಕಪೂರ್ ನನ್ನನ್ನು ದುಸ್ವಪ್ನದಂತೆ ಕಾಡಿದ್ದ. ಅವನ ವರ್ತನೆಯಿಂದ ನನಗೆ ಸಾಕಾಗಿ ಹೋಗಿತ್ತು." ಎಂದು ಕಂಗನಾ ಹೇಳಿದ್ದರು.

ಶಾಹಿದ್ ಕಪೂರ್ ದುಸ್ವಪ್ನವಾಗಿ ಕಾಡಿದ್ದ ಎಂದಿದ್ದೇಕೆ?

ಶಾಹಿದ್ ಕಪೂರ್ ದುಸ್ವಪ್ನವಾಗಿ ಕಾಡಿದ್ದ ಎಂದಿದ್ದೇಕೆ?

ಶಾಹಿದ್ ಕಪೂರ್ ಹಾಗೂ ಕಂಗನಾ ನಡುವೆ ಬೇರೆ ಏನೂ ನಡೆದಿರಲಿಲ್ಲ. ಶಾಹಿದ್ ಕಪೂರ್ ಹವ್ಯಾಸಗಳು ಕಂಗನಾಗೆ ಹಿಂಸೆ ಅಂತ ಅನಿಸುವುದಕ್ಕೆ ಶುರುವಾಗಿತ್ತು."ಪ್ರತಿ ದಿನ ಬೆಳಗ್ಗೆ ಶಾಹಿದ್ ಕಪೂರ್ ಕೋಣೆಯಲ್ಲಿ ಜೋರಾಗಿ ಮ್ಯೂಸಿಕ್ ಹಾಕುತ್ತಿದ್ದರು. ದಿನಾ ಬೆಳಗ್ಗೆ ವ್ಯಾಯಾಮ ಮಾಡುವಾಗ, ಟ್ರಾನ್ಸ್ ಹಾಗೂ ಟೆನ್ನೋ ಮ್ಯೂಸಿಕ್ ಅನ್ನು ಜೋರಾಗಿ ಹಾಕುತ್ತಿದ್ದರು. ಆ ವೇಳೆ ಶಾಹಿದ್ ಕಪೂರ್ ಜೊತೆ ಕೋಣೆಯನ್ನು ಶೇರ್ ಮಾಡಿದ್ದ ದುಸ್ವಪ್ನದಂತೆ ಕಾಡಿತ್ತು. ನನಗೆ ಶಾಹಿದ್ ಸಹಿಸಿಕೊಳ್ಳಲು ಆಗಲೇ ಇಲ್ಲ." ಎಂದು ಹೇಳಿದ್ದರು. ಇದು ಶಾಹಿದ್ ಕಪೂರ್ ಹಾಗೂ ಕಂಗನಾ ನಡುವಿನ ಕೋಲ್ಡ್ ವಾರ್ ನಡೆಯುತ್ತಿತ್ತು ಎಂಬುದನ್ನು ಸಾಬೀತು ಮಾಡಿತ್ತು.

ಶೀತಲ ಸಮರದ ಬಗ್ಗೆ ಶಾಹಿದ್ ನಕಾರ

ಶೀತಲ ಸಮರದ ಬಗ್ಗೆ ಶಾಹಿದ್ ನಕಾರ

ಶಾಹಿದ್ ಕಪೂರ್‌ಗೆ ಈ ಕೋಲ್ಡ್ ವಾರ್ ಬಗ್ಗೆ ಪ್ರಶ್ನೆ ಕೇಳಿದಾಗಲೆಲ್ಲಾ ಕಂಗನಾ ಬಗ್ಗೆ ಉತ್ತಮ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ. ಶಾಹಿದ್ ಕಪೂರ್ ತಮ್ಮಬ್ಬರ ನಡುವೆ ಏನೂ ನಡೆದಿಲ್ಲವೆಂದು ಹೇಳಿದ್ದಾರೆ. ಆದರೆ, 2017ರ 'ರಂಗೂನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ವಿಶಾಲ್ ಭಾರದ್ವಾಜ್ ಅಂತಹ ನಿರ್ದೇಶಕ ಡೈರೆಕ್ಟ್ ಮಾಡಿದ್ದರೂ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯಾವಾಗಿ ಸೋತಿತ್ತು. 50 ಕೋಟಿಗೂ ಅಧಿಕ ನಷ್ಟ ಅನುಭವಿಸಿತ್ತು.

More from Filmibeat

English summary
Bollywood actress Kangana Ranaut shared room With Shahid Kapoor said it was Nightmare. The actress also claimed that I fed up with him while shooting Movie Rangoon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X