ಮೋಹನ್‌ಲಾಲ್ ಸಿನಿಮಾ ನಿಂತಿದ್ದಕ್ಕೆ ಈಕೆಯನ್ನು ಲತ್ತೆ ಅಂದ್ರು.. 12 ಚಿತ್ರಗಳಿಂದ ಕಿತ್ತಾಕಿದ್ರು; ಅದೇ ಆ ನಟಿ ಇಂದು ಸ್ಟಾರ್!
ಹಲವು ಬಾರಿ ಈ ನಟಿಯ ಬಾಡಿ ಶೇಮಿಂಗ್ ಮಾಡಿದ್ದರು. ಸಿನಿಮಾಗಳು ಸೋತಾಗಾ ಲತ್ತೆ ಎಂದು ಜರಿದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು. ಕಟು ಟೀಕೆಯನ್ನು ಎದುರಿಸಿದ್ದರು. ನಿರ್ಮಾಪಕರು ಈಕೆಯನ್ನು ದೈಹಿಕ ಸೌಂದರ್ಯವನ್ನು ನೋಡಿ ಪೋಷಕರಿಗೆ ಅವಮಾನ ಮಾಡಿದ್ದರು. "ನಿಮ್ಮ ಮಗಳು ಹೀರೋಯಿನ್ ಆಗಲು ಯೋಗ್ಯನಾ?" ಅಂತ ಪ್ರಶ್ನೆ ಮಾಡಿದ್ದರು.
ಒಂದು ಸಿನಿಮಾ ನಿಂತಿದ್ದಕ್ಕೆ ನಿರ್ಮಾಪಕರ ಪಾಲಿಗೆ ನೀನು ಲತ್ತೆ ಎಂದಿದ್ದರು. ಕೇವಲ ಆರು ತಿಂಗಳಲ್ಲಿ ಕೈಯಲ್ಲಿದ್ದ ಸುಮಾರು 12 ಸಿನಿಮಾಗಳಿಂದ ಕಿತ್ತು ಹಾಕಿದ್ದರು. ಇಷ್ಟೆಲ್ಲ ಅವಮಾನಗಳನ್ನು ಎದುರಿಸಿದ್ದ ಆ ನಟಿ ಇಂದು ಬಾಲಿವುಡ್‌ನ ಸ್ಟಾರ್ ನಟಿಯಾಗಿ ಮರೆಯುತ್ತಿದ್ದಾರೆ. ಅಂದು ನಿರ್ಮಾಪಕರ ಪಾಲಿಗೆ ಅನ್‌ಲಕ್ಕಿಯಾಗಿದ್ದ ಈ ನಟಿ ಅದೃಷ್ಟವಂತೆ ಅಂತ ಸಾಬೀತು ಮಾಡಿದ್ದಾರೆ.

ಇಷ್ಟೆಲ್ಲ ಅವಮಾನಗಳನ್ನು ಎದುರಿಸಿದ್ದ ಆ ನಟಿ ಮತ್ಯಾರೂ ಅಲ್ಲ ವಿದ್ಯಾ ಬಾಲನ್. ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ಸಿನಿಮಾ ನೋಡಿ ತಾನೂ ನಟಿಯಾಗಬೇಕು ಎಂದು ಹಠಕ್ಕೆ ಬಿದ್ದಿದ್ದ ಈ ನಟಿಯ ಆರಂಭದ ದಿನಗಳು ಅಷ್ಟೊಂದು ಚೆನ್ನಾಗಿರಲಿಲ್ಲ. ವಿದ್ಯಾ ಬಾಲನ್ ಅಷ್ಟೇ ಅಲ್ಲದೆ ಅವರ ಪೋಷಕರೂ ಕೂಡ ದಕ್ಷಿಣ ಭಾರತದ ಕೆಲವು ನಿರ್ಮಾಪಕರಿಂದ ಅವಮಾನ ಎದುರಿಸಿದ್ದರು. ಅಸಲಿಗೆ ಆ ಘಟನೆ ಏನು? ವಿದ್ಯಾ ಬಾಲನ್ ಬಾಳಲ್ಲಿ ಅಂತಹದ್ದೇನಾಯ್ತು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ 'ಚಕ್ರಂ' ಅನ್ನುವ ಸಿನಿಮಾ ಮಾಡುತ್ತಿದ್ದರು. ಈ ಸಿನಿಮಾದಲ್ಲಿ ಮೋಹನ್‌ಲಾಲ್‌ಗೆ ನಾಯಕಿಯಾಗಿ ವಿದ್ಯಾ ಬಾಲನ್ ಆಯ್ಕೆಯಾಗಿದ್ದರು. ಆಗಿನ್ನೂ ಈ ನಟಿ ಚಿತ್ರರಂಗದಲ್ಲಿ ನೆಲೆಯೂರುವುದಕ್ಕೆ ಪ್ರಯಾಸ ಪಡುತ್ತಿದ್ದ ಕಾಲ. ಅದೇನಾಯ್ತೋ ಏನೋ ಮೋಹನ್‌ಲಾಲ್ ಹಾಗೂ ನಿರ್ದೇಶಕರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. 'ಚಕ್ರಂ' ಸಿನಿಮಾ ನಿಂತು ಹೋಯ್ತು. ಈ ವೇಳೆ ವಿದ್ಯಾ ಬಾಲನ್ ಸುಮಾರು 12 ಸಿನಿಮಾಗಳಿಗೆ ಸಹಿ ಮಾಡಿದ್ದರು.

'ಚಕ್ರಂ' ಸಿನಿಮಾ ನಿಂತು ಹೋದ ವಿಷಯ ಮಲಯಾಳಂ ಚಿತ್ರರಂಗದಲ್ಲಿ ಜೋರಾಗಿ ಸದ್ದು ಮಾಡಿತ್ತು. ಅದಕ್ಕೆ ವಿದ್ಯಾ ಬಾಲನ್ ಕಾರಣ ಅಂತ ಬಿಂಬಿಸಲಾಗಿತ್ತು. ಈ ನಟಿ ನಿರ್ಮಾಪಕರ ಪಾಲಿಗೆ ಲತ್ತೆ. ಆ ಕಾರಣಕ್ಕೆ ಈ ಸಿನಿಮಾ ನಿಂತು ಹೋಗಿದೆ ಅಂತ ಸುದ್ದಿಯನ್ನು ಹಬ್ಬಿಸಲಾಗಿತ್ತು. ಅಷ್ಟೊತ್ತಿಗಾಗಲೇ ತಮಿಳಿನ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಆ ಸಿನಿಮಾಗಳ ನಿರ್ಮಾಪಕರು ವಿದ್ಯಾ ಬಾಲನ್ ಲಕ್ಕಿನಾ? ಅಥವಾ ಇಲ್ಲವಾ? ಅಂತ ಜ್ಯೋತಿಷಿಗಳ ಬಳಿ ಕೇಳಿಸುವುದಕ್ಕೆ ಶುರು ಮಾಡಿದ್ದರು.
ವಿದ್ಯಾ ಬಾಲನ್‌ಗೆ ಅದೇನಾಗಿದೆ ಅಂತಲೇ ಗೊತ್ತಾಗುತ್ತಿರಲಿಲ್ಲ. ಒಂದೊಂದೇ ಸಿನಿಮಾಗಳು ಆಕೆಯ ಕೈ ಬಿಟ್ಟು ಹೋಗುತ್ತಿದ್ದವು. ಕೊನೆಗೆ ನಿರ್ಮಾಪಕ ವಿದ್ಯಾ ಬಾಲನ್ ಜಾತಕ ಪರಿಶೀಲನೇ ಮಾಡಿಸುತ್ತಿದ್ದಾರೆ ಅನ್ನೋದು ಅವರ ಪೋಷಕರಿಗೆ ಗೊತ್ತಾಯ್ತು. ತನ್ನ ಮಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ವಿಷಯವನ್ನು ನಿರ್ಮಾಪಕರಿಂದಲೇ ಕೇಳಿ ತಿಳಿದುಕೊಳ್ಳಬೇಕೆಂದು ಹೋಗಿ ಕೇಳಿದರೆ, "ನಿಮ್ಮ ಮಗಳಿಗೆ ಹೀರೋಯಿನ್ ಆಗುವ ಲಕ್ಷಣವಿದೆಯೇ?" ಎಂದು ಹೇಳಿ ಅವಮಾನ ಮಾಡುತ್ತಿದ್ದರು.
ಕೈಯಲ್ಲಿದ್ದ 12 ಸಿನಿಮಾಗಳು ಕೈ ಬಿಟ್ಟು ಹೋಗಿದ್ದವು. ಮೂರು ವರ್ಷ ವಿದ್ಯಾ ಬಾಲನ್‌ಗೆ ಕೆಲಸ ಇರಲಿಲ್ಲ. ಪ್ರತಿ ದಿನ ಈ ಹಣೆ ಪಟ್ಟಿಯಿಂದ ಹೊರಗೆ ಬರಬೇಕು ಅಂತ ಶತಪ್ರಯತ್ನ ಮಾಡಿದ್ದರು. ಕೊನೆಗೂ ಹಠಕ್ಕೆ ಬಿದ್ದ ವಿದ್ಯಾ ಬಾಲನ್ ಫಿಟ್ನೆಸ್ ಮೇಲೆ ವರ್ಕ್‌ಔಟ್ ಮಾಡಿದ್ದರು. ತನ್ನ ದೇಹದಿಂದ ಅಲ್ಲ ಪ್ರತಿಭೆಯಿಂದ ಜನರ ಮನಸ್ಸು ಗೆದ್ದರು. ಬಾಲಿವುಡ್‌ನಲ್ಲಿ ವಿದ್ಯಾ ಬಾಲನ್ ಸ್ಟಾರ್ ನಟಿಯಾಗಿ ಬೆಳೆದರು. ಇತ್ತೀಚೆಗೆ ವಿದ್ಯಾ ಬಾಲನ್ ತನ್ನ ಅಚ್ಚು ಮೆಚ್ಚಿನ ನಟಿ ಮಾಧುರಿ ದೀಕ್ಷಿತ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡ ಸಿನಿಮಾ 'ಭೂಲ್ ಭುಲಯ್ಯ 3' ಬಾಕ್ಸಾಫೀಸ್‌ನಲ್ಲಿ 400 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಕಳೆದ ವರ್ಷ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿ ಸೇರಿಕೊಂಡಿದೆ.


Click it and Unblock the Notifications











