ಸೂಪರ್‌ಸ್ಟಾರ್‌ಗಳ ಕುಟುಂಬದ ನಟಿಯ ವೃತ್ತಿ ಬದುಕು ಹಾಳು ಮಾಡಿತ್ತು ಆ ವಿಡಿಯೋ; ಆ ನಟಿ ಯಾರು?

ಈ ನಟಿ ಒಂದು ಕಾಲದಲ್ಲಿ ಹುಡುಗರ ಕ್ರಶ್. ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಈ ನಟಿ ಅಷ್ಟೇ ಬೇಗ ಸ್ಟಾರ್ ಪಟ್ಟಕ್ಕೆ ಏರಿದ್ದರು. ಹಿಂದಿ, ಬೆಂಗಾಲಿ ಚಿತ್ರರಂಗದಲ್ಲಿ ಬಾಲನಟಿಯಾಗಿ ನಟಿಸಿದ್ದರೂ, ನಾಯಕಿಯಾಗಿ ತಮಿಳು ಚಿತ್ರರಂಗ ಬ್ರೇಕ್ ಕೊಟ್ಟಿತ್ತು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸಿಕ್ಕಿದವು. ಬಾಲಿವುಡ್ ಚಿತ್ರರಂಗ ಕೂಡ ಕೈ ಬೀಸಿ ಕರೆದಿತ್ತು.

ತಮಿಳು ಚಿತ್ರರಂಗದಲ್ಲೇ ಮುಂದುವರೆದಿದ್ದರೆ ಬಹುಶ: ಈಕೆಯ ವೃತ್ತಿ ಬದುಕು ಇನ್ನೂ ಅದ್ಭುತವಾಗಿ ಇರುತ್ತಿತ್ತೋ ಏನೋ? ಆದರೆ, ಬಾಲಿವುಡ್‌ಗೆ ಕಾಲಿಡುತ್ತಿದ್ದಂತೆ ದಿಢೀರನೇ ಫೇಮಸ್ ಆಗಿಬಿಟ್ಟರು. ಹಾಗಂತ ಈಕೆ ಸ್ಟಾರ್‌ಡಮ್ ಅದೇ ಮೊದಲ ಬಾರಿ ನೋಡಿದ್ದೇನೂ ಅಲ್ಲ. ಈ ನಟಿ ಹುಟ್ಟಿದ್ದೇ ಸೂಪರ್‌ಸ್ಟಾರ್‌ಗಳ ಕುಟುಂಬದಲ್ಲಿ. ಹಾಗಿ ನೇಮು ಫೇಮು ಎಲ್ಲವೂ ಈಕೆ ಕಾಮನ್ ಆಗಿತ್ತು.

Riya sen once a bollywood crush destroyed her career

ವೃತ್ತಿ ಬದುಕಿನಲ್ಲಿ ಎಲ್ಲವೂ ಸರಿಯಾಗಿದೆ ಅನ್ನುವಾಗಲೇ ಒಂದೇ ವಿಡಿಯೋ ಈ ಸ್ಟಾರ್ ನಟಿಯ ಬದುಕನ್ನೇ ಹಾಳು ಮಾಡಿತ್ತು. ಸ್ಟಾರ್ ನಟರೊಂದಿಗೆ ನಟಿಸಬೇಕಿದ್ದ ಈ ನಟಿಗೆ ಆಫರ್‌ಗಳು ಕಡಿಮೆ ಆಗುವುದಕ್ಕೆ ಶುರುವಾಗಿದ್ದವು. ಅಷ್ಟಕ್ಕೂ ಈ ನಟಿ ಯಾರು ಗೊತ್ತಾ? ಆ ನಟಿಯ ಬದುಕಿನಲ್ಲಿ ಅಂತಹದ್ದೇನಾಯ್ತು? ಆ ವಿಡಿಯೋದಲ್ಲಿ ಏನಿತ್ತು? ತಿಳಿಯಲು ಮುಂದೆ ಓದಿ.

ಸೂಪರ್‌ಸ್ಟಾರ್ ಕುಟುಂಬದಿಂದ ಬಂದ ಈ ನಟಿಯ ಹೆಸರು ರಿಯಾ ಸೇನ್. 2001ರಲ್ಲಿ ಬಾಲಿವುಡ್‌ನಲ್ಲಿ 'ಸ್ಟೈಲ್' ಅನ್ನುವ ಸಿನಿಮಾ ಬಂದಿತ್ತು. ಆ ಸಿನಿಮಾ ನೋಡಿದವರಿಗೆ ರಿಯಾ ಸೇನ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಸಪೂರ ಸುಂದರಿಯ ಕಂಡು ಅದೆಷ್ಟು ಮಂದಿ ಹುಡುಗರು ಫಿದಾ ಆಗಿದ್ದರೋ? ರಿಯಾ ಸೇನ್ ಬಾಲಿವುಡ್‌ನಲ್ಲಿ ಇನ್ನೇನು ಸೆಟಲ್ ಆದಲು ಅನ್ನುವಾಗಲೇ ಒಂದು ವಿಡಿಯೋ ಆಕೆಯ ಬದುಕನ್ನೇ ಬದಲಿಸಿ ಬಿಟ್ಟಿತ್ತು.

ರಿಯಾ ಸೇನ್ ಬಂಗಾಳ ಮೂಲದವರು. ಈಕೆಯ ಅಮ್ಮ ಬೆಂಗಾಲಿ ಚಿತ್ರರಂಗದ ಜನಪ್ರಿಯ ನಟಿ ಮೂನ್ ಮೂನ್ ಸೇನ್. ಹಾಗೇ ಬೆಂಗಾಲಿ ಚಿತ್ರರಂಗದ ಲೆಜೆಂಡರಿ ನಟಿ ಸುಚಿತ್ರಾ ಸೇನ್ ಮೊಮ್ಮಗಳು. ರಿಯಾ ಸೇನ್ ತಂದೆ ಭರತ್ ಸೇನ್ ವರ್ಮಾ ತ್ರಿಪುರದ ರಾಜ ಮನೆತನಕ್ಕೆ ಸೇರಿದವರು. ರಿಯಾ ಸೇನ್ ಸಹೋದರಿ ರೈಮಾ ಸೇನ್ ಕೂಡ ಬಾಲಿವುಡ್ ನಟಿ. ಇಂತಹ ಹಿನ್ನೆಲೆಯಿಂದ ಬಂದ ರಿಯಾ ಸೇನ್ ವೃತ್ತಿ ಬದುಕು ಒಂದು ವಿಡಿಯೋದಿಂದ ಸರ್ವನಾಶವಾಗಿತ್ತು.

Riya sen once a bollywood crush destroyed her career

ರಿಯಾ ಸಿನಿಮಾಗಳಷ್ಟೇ ಅಲ್ಲ. ಹಿಂದಿಯ ಮ್ಯೂಸಿಕ್ ಅಲ್ಬಮ್‌ಗಳಲ್ಲೂ ನಟಿಸಿದ್ದರು. ಆ ಹಾಡುಗಳ ಕೂಡ ಸೂಪರ್ ಡೂಪರ್ ಹಿಟ್ ಆಗಿದ್ದವು. ಹೀಗೆ ಎಲ್ಲರೂ ಸರಿಯಾಗಿದೆ ಅನ್ನುವ ಸಮಯದಲ್ಲಿ ರಿಯಾ ಸೇನ್ ಹಾಗೂ ಬಾಲಿವುಡ್ ನಟ ಅಶ್ಮಿತ್ ಪಟೇಲ್ ನಡುವಿನ ಅಫೇರ್ ಸುದ್ದಿಯಾಗಿತ್ತು. ಇದೇ ವೇಳೆ ಇಬ್ಬರ ಎಂಎಂಎಸ್ ವಿಡಿಯೋ ಲೀಕ್ ಆಗಿತ್ತು. ಇದು ವಿವಾದಕ್ಕೂ ಎಡೆ ಮಾಡಿಕೊಟ್ಟಿತ್ತು. ವಿಡಿಯೋ ಲೀಕ್ ಆದ ಬಳಿಕ ರಿಯಾ ಸೇನ್ ಒತ್ತಾಯ ಪೂರ್ವಕವಾಗಿ ಬಾಲಿವುಡ್‌ನಿಂದ ದೂರ ಉಳಿಬೇಕಾಯ್ತು.

ಎಂಎಂಎಸ್ ವಿಡಿಯೋ ಲೀಕ್ ಆದ ಬಳಿಕ ರಿಯಾ ಸೇನ್ ಹಾಗೂ ಅಶ್ಮಿತ್ ಪಟೇಲ್ ಇಬ್ಬರೂ ಈ ವಿಡಿಯೋ ನಕಲಿ ಎಂದು ಹೇಳಿದ್ದರು. ಅಷ್ಟೊತ್ತಿಗಾಗಲೇ ಇವರ ಬಾಲಿವುಡ್‌ ಕರಿಯರ್‌ಗೆ ದೊಡ್ಡ ಪೆಟ್ಟು ಬಿದ್ದಿತ್ತು. ಇಷ್ಟೇ ಅಲ್ಲ ರಿಯಾ ಸೇನ್ ಹೆಸರು ಬಾಲಿವುಡ್ ನಟ ಅಕ್ಷಯ್ ಖನ್ನಾ, ಬರಹಗಾರ ಸಲ್ಮಾನ್ ರಶ್ದಿ ಜೊತೆನೂ ಕೇಳಿ ಬಂದಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಯಾರೂ ಹೇಳಿಕೆ ಕೊಟ್ಟಿಲ್ಲ.

ಬೇರೆ ಭಾಷೆಯ ಸಿನಿಮಾಗಳಲ್ಲಿ ರಿಯಾ ನಟಿಸಿದರೂ ಯಶಸ್ಸು ಸಿಗಲಿಲ್ಲ. ಬಳಿಕ 2016 ರಿಂದ 2019ರವರೆಗೆ 4 ವೆಬ್ ಸೀರಿಸ್‌ಗಳಲ್ಲಿ ರಿಯಾ ಸೇನ್ ನಟಿಸಿದ್ದರು. 'ಅಲಿಶಾ', 'ರಾಗಿಣಿ ಎಂಎಂಎಸ್: ರಿಟರ್ನ್', 'ಪಾಯಿಸನ್', 'ಮಿಸ್‌ಮ್ಯಾಚ್ 2'ನಲ್ಲಿ ನಟಿಸಿದ್ದರು. ಆದರೆ, ಅವು ಕೂಡ ರಿಯಾ ಸೇನ್ ಕೈ ಹಿಡಿಯಲಿಲ್ಲ.

More from Filmibeat

English summary
Bollywood Star Actor career destroyed by single video who is she?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X