ಎಲ್ಲರ ಎದುರೇ ಹೃತಿಕ್ ರೋಷನ್‌ ಕೆನ್ನೆಗೆ ಬಾರಿಸಿದ್ದ ನಟಿ ರೇಖಾ: ಗ್ರೀಕ್ ಗಾಢ್ ಕಣ್ಣಲ್ಲಿ ನೀರು.. ಅಂತಹದ್ದೇನಾಗಿತ್ತು?

ಬಾಲಿವುಡ್‌ನ ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್‌ಗೆ ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದಾರೆ. ಗ್ರೀಕ್ ಗಾಢ್ ಸಿನಿಮಾಗಳನ್ನು ನೋಡುವುದಕ್ಕೆ ಸಿನಿಪ್ರೇಮಿಗಳು ಸದಾ ಕ್ಯೂನಲ್ಲಿ ನಿಂತಿರುತ್ತಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮೊದಲ ಸಿನಿಮಾದಲ್ಲೇ ಸ್ಟಾರ್ ಪಟ್ಟಕ್ಕೇರಿದ ಹೃತಿಕ್ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಂಡಿದ್ದರು.

'ಕಹೋ ನಾ ಪ್ಯಾರ್ ಹೇ' ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಹೃತಿಕ್ ರೋಷನ್ ಇಲ್ಲಿವರೆಗೂ ಹಲವು ಸೂಪರ್‌ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹೃತಿಕ್ ರೋಷನ್ ಲುಕ್, ಸ್ಟೈಲ್, ಸಿಕ್ಸ್ ಪ್ಯಾಕ್, ಡ್ಯಾನ್ಸ್, ಆಕ್ಟಿಂಗ್ ಎಲ್ಲವೂ ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ.

Hrithik Roshan-Koi Mil Gaya-Rekha- Slap

ಹೃತಿಕ್ ರೋಷನ್‌ಗೆ ಹಲವು ಸಿನಿಮಾ ಸ್ಟಾರ್ ಇಮೇಜ್ ಕೊಟ್ಟಿವೆ. ಅವುಗಳಲ್ಲಿ 'ಕೋಯಿ ಮಿಲ್ ಗಯಾ' ಕೂಡ ಒಂದು. ತಂದೆ ರಾಕೇಶ್ ರೋಷನ್ ನಿರ್ದೇಶಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಾದೂನೇ ಮಾಡಿತ್ತು. ಈ ಸಿನಿಮಾ ಶೂಟಿಂಗ್ ವೇಳೆ ಹೃತಿಕ್ ರೋಷನ್‌ಗೆ ಒಂದು ಕಹಿ ಘಟನೆ ನಡೆದಿತ್ತು. ಹಿರಿಯ ನಟಿ ರೇಖಾ ಎಲ್ಲರ ಎದುರೇ ಹೃತಿಕ್ ರೋಷನ್ ಕೆನ್ನೆಗೆ ಬಾರಿಸಿದ್ದರು. ಅದ್ಯಾಕೆ? ಘಟನೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಹೃತಿಕ್ ಅಮ್ಮನ ಪಾತ್ರದಲ್ಲಿ ರೇಖಾ

'ಕೋಯಿ ಮಿಲ್ ಗಯಾ' ಬಾಲಿವುಡ್‌ನಲ್ಲಿ ಸೂಪರ್ ಹಿಟ್ ಸಿನಿಮಾ. ಇದೇ ಮುಂದೆ ಕ್ರಿಶ್ ಆಗಿ ಬದಲಾಗಿದ್ದು ಗೊತ್ತೇ ಇದೆ. ಅನ್ಯಗ್ರಹದ ಜೀವಿ ಹಾಗೂ ರೋಹನ್ ಮೆಹ್ರಾ( ಹೃತಿಕ್ ರೋಷನ್) ನಡುವಿನ ಬಾಂಧವ್ಯದ ಕಥೆಯನ್ನೇ ತೆರೆಮೇಲೆ ತರಲಾಗಿತ್ತು. ಈ ಸಿನಿಮಾಗೆ ಪ್ರೇಕ್ಷಕರಿಂದ ಮೆಚ್ಚುಗೆನೂ ಸಿಕ್ಕಿತ್ತು. ಅಲ್ಲದೇ ಬಾಕ್ಸಾಫೀಸ್‌ನಲ್ಲೂ ಸೂಪರ್ ಹಿಟ್ ಆಗಿತ್ತು.

Hrithik Roshan-Koi Mil Gaya-Rekha- Slap

ಇದೇ ಸಿನಿಮಾದಲ್ಲಿ ಬಾಲಿವುಡ್ ಹಿರಿಯ ನಟಿ ಎವರ್‌ಗ್ರೀನ್ ರೇಖಾ ನಟಿಸಿದ್ದರು. ಹೃತಿಕ್ ರೋಷನ್ ಅಮ್ಮನ ಪಾತ್ರದಲ್ಲಿ ನಟಿಸಿದ್ದ ರೇಖಾಗೂ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿತ್ತು. ಈ ಸಿನಿಮಾದ ಸೀನ್‌ ಒಂದರಲ್ಲಿ ನಟಿಸಬೇಕಾದರೆ, ರೇಖಾ ನೆರೆದಿದ್ದವರ ಎದುರಿಗೆ ಹೃತಿಕ್ ಕೆನ್ನೆಗೆ ಬಾರಿಸಿದ್ದರು. ಆ ವೇಳೆ ಹೃತಿಕ್ ರೋಷನ್ ಕಣ್ಣಲ್ಲಿ ನೀರು ಬಂದಿತ್ತು.

ಹೃತಿಕ್‌ಗೆ ಕಪಾಳ ಮೋಕ್ಷ.. ಕಣ್ಣೀರು

'ಕೋಯಿ ಮಿಲ್ ಗಯಾ' ಸಿನಿಮಾದಲ್ಲಿ ಹೃತಿಕ್ ರೋಷನ್ ತನ್ನ ತಂದೆಯ ವಿಶಿಷ್ಟ ಕಂಪ್ಯೂಟರ್ ಕದ್ದು ಮುಚ್ಚಿ ಆನ್ ಮಾಡಿದ್ದರು. ಅದು ಬೇರೆ ಬೇರೆ ಗ್ರಹಕ್ಕೆ ಸಂಪರ್ಕಿಸುವ ಸೈಂಟಿಫಿಕ್ ಕಂಪ್ಯೂಟರ್. ಇದನ್ನು ಗಮನಿಸಿದ ಅಮ್ಮ (ರೇಖಾ) ಸಿಟ್ಟಿನಲ್ಲಿ ಬಂದು ಮಗನ (ಹೃತಿಕ್ ರೋಷನ್) ಕೆನ್ನೆಗೆ ಬಾರಿಸುವ ದೃಶ್ಯವಿದೆ. ಈ ಸೀನ್ ಚಿತ್ರೀಕರಣ ಮಾಡುವಾಗಲೇ ಹೃತಿಕ್‌ಗೆ ನಟಿ ರೇಖಾ ಬಾರಿಸಿದ್ದರು.

ಹಿರಿಯ ನಟಿ ರೇಖಾ ಅದೆಷ್ಟು ಬಲವಾಗಿ ಬಾರಿಸಿದ್ದರು ಎಂದರೆ, ಹೃತಿಕ್ ರೋಷನ್ ಕಣ್ಣಲ್ಲಿ ನೀರು ಬಂದಿತ್ತಂತೆ. ಈ ವಿಷಯ ಅಂದು ಬಾಲಿವುಡ್‌ನ ಗಲ್ಲಿ ಗಲ್ಲಿಗಳಲ್ಲಿ ಓಡಾಡಿತ್ತು. ಸೀನ್ ರಿಯಲ್ ಆಗಿ ಬರಬೇಕು ಅನ್ನುವ ಕಾರಣಕ್ಕೆ ರೇಖಾ ಜೋರಾಗಿ ಹೃತಿಕ್ ಕೆನ್ನೆಗೆ ಬಾರಿಸಿದ್ದರು ಎನ್ನಲಾಗಿದೆ. ಮೊದಲೇ ಹೃತಿಕ್‌ಗೂ ತಿಳಿಸಿದ್ದರಂತೆ. ಆದರೆ, ರೇಖಾ ಹೊಡೆದ ಏಟಿಗೆ ಹೃತಿಕ್ ಕೆನ್ನೆ ಕೆಂಪಗಾಗಿತ್ತು. ಆ ನೋವಿಗೆ ಹೃತಿಕ್ ಕಣ್ಣಲ್ಲಿ ನೀರು ಬಂದಿತ್ತು ಎಂದು ವರದಿಯಾಗಿದೆ.

'ಕೋಯಿ ಮಿಲ್ ಗಯಾ' ಬಾಕ್ಸಾಫೀಸ್‌ನಲ್ಲಿ ಸಕ್ಸಸ್

ಈ ಸಿನಿಮಾದಲ್ಲಿ ತಾಯಿ ಮಗನ ಸಂಬಂಧ ತುಂಬಾನೇ ಮುಖ್ಯ. ಇಬ್ಬರ ನಡುವಿನ ಸಂಬಂಧದ ದೃಶ್ಯಗಳು ಸಿನಿಮಾ ಹೈಲೈಟ್. ಹೀಗಾಗಿ ಸಿನಿಮಾದ ಕೆಲವು ದೃಶ್ಯಗಳಲ್ಲಿ ನೈಜತೆಯನ್ನು ತರಲು ಇಂತಹ ಪ್ರಯೋಗಗಳನ್ನು ಮಾಡಲಾಗಿದೆ ಎನ್ನಲಾಗಿದೆ.

'ಕೋಯಿ ಮಿಲ್ ಗಯಾ' ಸಿನಿಮಾ ಬಾಕ್ಸಾಫೀಸ್‌ನಲ್ಲೂ ಗೆದ್ದು ಬೀಗಿತ್ತು. ಅಂದಿನ ಕಾಲಕ್ಕೆ ಬಾಲಿವುಡ್‌ನಲ್ಲಿ ನಿರ್ಮಾಣಗೊಂಡ ಬಿಗ್ ಬಜೆಟ್ ಸಿನಿಮಾ ಅಂತ ಎನಿಸಿಕೊಂಡಿತ್ತು. ಸಿನಿಮಾದ ಬಜೆಟ್ ಸುಮಾರು 25 ರಿಂದ 30 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಹಾಗೇ ಬಾಕ್ಸಾಫೀಸ್‌ನಲ್ಲಿ 82 ಕೋಟಿ ರೂ. ಕಲೆಕ್ಷನ್ ಮಾಡಿತ್ತು ಎಂದು ವರದಿಯಾಗಿದೆ.

More from Filmibeat

English summary
Buzz is that Once Rekha Slapped Hrithik Roshan During Koi Mil Gaya Shooting
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X