Don't Miss!
- News
ಲಂಡನ್ನಲ್ಲೂ ಕರ್ನಾಟಕ ಬಾವುಟ ಹಾರಿಸಿದ ವಿದ್ಯಾರ್ಥಿ: ಪದವಿ ಪ್ರಧಾನ ಸಮಾರಂಭದಲ್ಲಿ ನಡೆದಿದ್ದೇನು? ವೈರಲ್ ವಿಡಿಯೊ ನೋಡಿ
- Automobiles
ಸದ್ದಿಲ್ಲದೇ ಅನಾವರಣಗೊಂಡ ಮಾರುತಿ ಫ್ರಾಂಕ್ಸ್ ಹಿಂದೆ ಕಂಪನಿಯ ದೊಡ್ಡ ಪ್ಲಾನ್!
- Technology
ನೀವು ಸ್ಮಾರ್ಟ್ವಾಚ್ ಬಳಕೆ ಮಾಡುತ್ತೀರಾ!?... ಈ ಸೆನ್ಸರ್ಗಳ ಬಗ್ಗೆ ತಿಳಿಯಿರಿ!
- Sports
ICC T20I Team of 2022 : ಕೊಹ್ಲಿ, ಸೂರ್ಯ, ಪಾಂಡ್ಯಗೆ ಸ್ಥಾನ: ಉಳಿದಂತೆ ಸ್ಥಾನ ಪಡೆದ ಆಟಗಾರರು
- Finance
Honda Activa H-Smart : ಹೊಂಡಾ ಕಂಪನಿಯಿಂದ 3 ಹೊಸ ಆಕ್ಟಿವಾ ಮಾದರಿಗಳ ಬಿಡುಗಡೆ
- Lifestyle
ಜ್ವರ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವುದೇಕೆ? ಜ್ವರ ಕಡಿಮೆಯಾಗಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕೆಜಿಎಫ್' ಎರಡು ಚಾಪ್ಟರ್‌ಗಳಲ್ಲಿ ಯಶ್ ಬಳಸಿದ ವಿಂಟೇಜ್ ಕಾರುಗಳ ವಿಶೇಷತೆ ಏನು?
ಕೆಜಿಎಫ್ ಎರಡೂ ಚಾಪ್ಟರ್‌ಗಳೂ ವಿಶ್ವದ ಮಟ್ಟದಲ್ಲಿ ಹೊಸ ಇಮೇಜ್ ಅನ್ನು ಹುಟ್ಟು ಹಾಕಿವೆ. ಇದೊಂದು ಕೇವಲ ಸಿನಿಮಾವಾಗಿ ಉಳಿದಿಲ್ಲ. ಕೆಜಿಎಫ್ ಒಂದು ಬ್ರ್ಯಾಂಡ್ ಆಗಿ ಬದಲಾಗಿದೆ. 'ಕೆಜಿಎಫ್ ಚಾಪ್ಟರ್ 1' ಕ್ರಿಯೇಟ್ ಮಾಡಿದ್ದ ಕುತೂಹಲ 'ಚಾಪ್ಟರ್ 2' ಮೆಗಾ ಹಿಟ್ ಆಗಲು ಕಾರಣ. 'ಕೆಜಿಎಫ್' ನೋಡಿದವರಿಗೆ ಕಥೆಯ ಜೊತೆ ಜೊತೆ ಇನ್ನೂ ಹಲವು ಅಂಶಗಳು ಇಷ್ಟ ಆಗಿವೆ. ಅದರಲ್ಲಿ ರಾಕಿ ಬಳಸಿದ ಕಾರುಗಳು ಕೂಡ ಸೇರಿವೆ.
Recommended Video

ಹಲವರಿಗೆ ವಿಂಟೇಜ್ ಕಾರುಗಳ ಬಗ್ಗೆ ಕ್ರೇಜ್ ಹೆಚ್ಚಿರುತ್ತೆ. 'ಕೆಜಿಎಫ್' ಸಿನಿಮಾ ಕೂಡ 70-80ರ ದಶಕದ ಕಥೆಯಾಗಿರುವುದರಿಂದ ವಿಂಟೇಜ್ ಕಾರುಗಳ ಹೆಚ್ಚು ಬಳಕೆ ಮಾಡಲಾಗಿದೆ. 'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದು ನೋಡಿದರೆ, ಇನ್ನು ಅದ್ಯಾವ ಮಟ್ಟಕ್ಕೆ ದಾಖಲೆಗಳನ್ನು ಸೃಷ್ಟಿಸುತ್ತೋ ಅಂತ ಎದುರು ನೋಡುತ್ತಿದ್ದಾರೆ. ಈ ಮಧ್ಯೆ 'ಕೆಜಿಎಫ್ 2' ಸಿನಿಮಾದಲ್ಲಿ ಬಳಸಿರುವ ಹಳೆಯ ಐಶಾರಾಮಿಗಳ ದೊಡ್ಡ ಪಟ್ಟಿನೇ ಇಲ್ಲಿದೆ.
'KGF
2'
14ನೇ
ದಿನವೂ
ಅದ್ಭುತ
ಕಲೆಕ್ಷನ್?
ಅತೀ
ಹೆಚ್ಚು
ಗಳಿಕೆ
ಕಂಡ
3ನೇ
ಬಾಲಿವುಡ್
ಸಿನಿಮಾ!

ಚೇಸ್ ಸೀನ್‌ಗೆ ಬಳಸಿದ ಕಾರು ಮುಸ್ತಾಂಗ್
'ಕೆಜಿಎಫ್ 2' ಸಿನಿಮಾದಲ್ಲಿ ಬಳಿಸಿದ ಕಾರುಗಳು ಸಿನಿಪ್ರಿಯರ ಗಮನ ಸೆಳೆದಿವೆ. ವಿಂಟೇಜ್ ಕಾರುಗಳು ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿದೆ. 'ಕೆಜಿಎಫ್ ಚಾಪ್ಟರ್ 1' ಹಾಗೂ 2 ಸಿನಿಮಾಗಳಲ್ಲೂ ವಿಶಿಷ್ಟ ಕಾರುಗಳನ್ನು ಬಳಸಲಾಗಿದೆ. ಆರಂಭದಲ್ಲಿ 'ಕೆಜಿಎಫ್' ಸಿನಿಮಾದಲ್ಲಿ 1969 ಮ್ಯಾಕ್ 1 ಮುಸ್ತಾಂಗ್ ಕಾರು ಎನ್ನಲಾಗಿತ್ತು. ಆದರೆ, ಈ ಕಾರು ಫೋರ್ಟ್ ಮುಸ್ತಾಂಗ್ ಅಲ್ಲ. 1976ರ ಮುಸ್ತಾಂಗ್ ಮ್ಯಾಕ್ 1 ಎಂದು ಹೇಳಲಾಗಿದೆ.
ಕೊನೆಗೂ
'ಕೆಜಿಎಫ್
3'
ಸುಳಿವು
ಕೊಟ್ಟ
ರಾಕಿ
ಭಾಯ್:
ಸೀಕ್ವೆಲ್
ಬಗ್ಗೆ
ಹೇಳಿದ್ದೇನು?

'ಕೆಜಿಎಫ್' ಚಿತ್ರದಲ್ಲಿ ಕಾಂಟೆಸ್ಸಾ ಕಾರು
ನಿರ್ದೇಶಕ ಪ್ರಶಾಂತ್ ನೀಲ್ ಬಳಸಿರುವ ಕಾರುಗಳಲ್ಲಿ ಹಿಂದೂಸ್ತಾನ್ ಮೋಟರ್ಸ್ ಸಂಸ್ಥೆಯ ಕಾಂಟೆಸ್ಸಾ ಕಾರನ್ನು ಬಳಸಲಾಗಿದೆ. ಈ ಕಾರನ್ನು ಮಾಡಿಫೈಡ್ ಮಾಡಲಾಗಿದ್ದು, ಪ್ರಮುಖ ಕಾರು ಚೇಸಿಂಗ್ ಸೀನ್‌ಗಳಲ್ಲಿ ಬಳಕೆ ಮಾಡಲಾಗಿದೆ ಎಂದು ವರದಿಯಾಗಿದೆ.

ಕೆಜಿಎಫ್ ಚಿತ್ರದಲ್ಲಿ ರೋಡ್ಸ್ಟರ್
'ಕೆಜಿಎಫ್ 2' ಸಿನಿಮಾದಲ್ಲಿ 1969ರ ಎಂಜಿ ರೋಡ್ಸ್ಟರ್ ಕಾರನ್ನು ಬಳಸಲಾಗಿದೆ. ಈ ಸ್ಟೈಲಿಷ್ ಕಾರನ್ನು 'ಕೆಜಿಎಫ್ 2' ಸಿನಿಮಾದಲ್ಲಿ ನಾಯಕಿ ಶ್ರೀನಿಧಿ ಶೆಟ್ಟಿ ಬಳಸಿದ್ದಾರೆ. ಸಿನಿಮಾದಲ್ಲಿ ಕೆಂಪು ಬಣ್ಣದ ಇದೇ ಕಾರನ್ನು ಬಳಸಲಾಗಿದೆ. ಪ್ಯಾಲೇಸ್‌ನಿಂದ ಬರುವ ದೃಶ್ಯದಲ್ಲಿ ಈ ಕಾರು ಬಳಕೆಯಾಗಿದೆ.
ಮಹೇಶ್
ಬಾಬು
ಸಿನಿಮಾಗೆ
'ಕೆಜಿಎಫ್
2'
ರಮಿಕಾ
ಸೇನ್
ಎಂಟ್ರಿ?
ಏನಂತಿದೆ
ಟಾಲಿವುಡ್?

'ಕೆಜಿಎಫ್ 2'ನಲ್ಲಿ ಫೋಕ್ಸ್‌ವೆಗನ್ ಟಿ 2 ಕ್ಯಾಂಪೆರ್
'ಕೆಜಿಎಫ್ 2' ಕನ್ನಡದ ದುಬಾರಿ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಸಿನಿಮಾದ ದೃಶ್ಯಗಳೂ ಕೂಡ ರಿಚ್ ಆಗಿ ಕಾಣಬೇಕು ಎನ್ನುವ ಕಾರಣಕ್ಕೆ ದುಬಾರಿ ಹಾಗೂ ಸ್ಟೈಲಿಶ್ ಕಾರು ಹಾಗೂ ವ್ಯಾನ್‌ಗಳನ್ನು ಬಳಸಲಾಗಿದೆ. ಇಂತಹ ವಿಂಟೇಜ್ ಕಾರುಗಳ ಪಟ್ಟಿಯಲ್ಲಿ ದಿ ಫೋಕ್ಸ್‌ವೇಗನ್ ಟಿ 2 ಕ್ಯಾಂಪೆರ್ ವ್ಯಾನ್ ಅನ್ನು ಬಳಸಲಾಗಿದೆ. ನೀಲಿ ಹಾಗೂ ಬಿಳಿ ಬಣ್ಣದ ವ್ಯಾನ್ ಅನ್ನು ಈ ಸಿನಿಮಾದಲ್ಲಿ ಬಳಸಲಾಗಿದೆ. ಸಿನಿಮಾದ ಸೆಕೆಂಡ್ ಹಾಫ್‌ನಲ್ಲಿ ಈ ವ್ಯಾನ್ ಬಳಿಕೆಯಾಗಿದೆ.

ಕೆಜಿಎಫ್ ಸಿನಿಮಾದಲ್ಲಿ ಮರ್ಸಿಡೀಸ್ ಡಬ್ಲ್ಯೂ 123
ಮರ್ಸಿಡೀಸ್ ಸಂಸ್ಥೆಯ ಕಾರುಗಳನ್ನು ಮೊದಲಿನಿಂದಲೂ ಐಶಾರಾಮಿ ಕಾರುಗಳ ಸಾಲಿನಲ್ಲಿ ಅಗ್ರ ಸ್ಥಾನದಲ್ಲಿದೆ. ಈ ಸಿನಿಮಾದಲ್ಲಿ ಆಫ್-ವೈಟ್ ಬಣ್ಣದ ಕಾರನ್ನು ಬಳಸಲಾಗಿದೆ. ಯಶ್ ಇದೇ ಕಾರಿನಲ್ಲಿ ಪಾರ್ಲಿಮೆಂಟ್‌ಗೆ ಬರುತ್ತಾರೆ. ಮರ್ಸಿಡೀಸ್ ಡಬ್ಲ್ಯೂ 123 ಅಂದಿನ ಕಾಲದ ಐಶಾರಾಮಿ ಕಾರುಗಳಲ್ಲಿ ಒಂದಾಗಿತ್ತು.

ಕೆಜಿಎಫ್ ಸಿನಿಮಾದಲ್ಲಿ ರೋಲ್ಸ್ ರಾಯ್ಸ್
ರೊಲ್ಸ್ ರಾಯ್ಸ್ ಸಿಲ್ವರ್ ಶ್ಯಾಡೋ ದುಬಾರಿ ಸೆಡಾನ್ ಕಾರು. 1965 ರಿಂದ 1980ರವರೆಗೆ ಈ ಕಾರುಗಳಿಗೆ ಹೆಚ್ಚು ಬೇಡಿಕೆ ಇತ್ತು. ಕೆಜಿಎಫ್ ಚಾಪ್ಟರ್ 1ರಲ್ಲಿ ಕಂದು ಬಣ್ಣದ ರೋಲ್ಸ್ ರಾಯ್ಸ್ ಕಾರನ್ನು ಬಳಸಲಾಗಿತ್ತು. 'ಕೆಜಿಎಫ್ 1' ಸೆಕೆಂಡ್ ಹಾಫ್‌ನಲ್ಲಿ ಈ ಕಾರನ್ನು ಬಳಸಲಾಗಿತ್ತು.