ಬೆಂಗಳೂರಿನ ಹೋಟೆಲ್‌ನಲ್ಲಿ ರವಿಚಂದ್ರನ್ ಹೆಸರಿನಲ್ಲೊಂದು ರೆಸಿಪಿ; ಆ ಹೋಟೆಲ್ ಯಾವುದು? ರೆಸಿಪಿ ಹೆಸರೇನು?

ಕ್ರೇಜಿಸ್ಟಾರ್ ರವಿಚಂದ್ರನ್ ಇಂದು (ಮೇ 30) 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕ್ರೇಜಿಸ್ಟಾರ್‌ಗೆ ಸಿನಿಮಾ ಮೇಕಿಂಗ್ ಮಾಡುವುದರಲ್ಲಿ ಎಷ್ಟು ಕ್ರೇಜ್ ಇದೆಯೋ? ಅಷ್ಟೇ ಆಹಾರ ಪ್ರಿಯರು ಕೂಡ ಹೌದು. ಕನ್ನಡ ಚಿತ್ರರಂಗದಲ್ಲಿ ರಾಜ್‌ಕುಮಾರ್, ಅಂಬರೀಶ್, ಪುನೀತ್ ರಾಜ್‌ಕುಮಾರ್ ಫುಡ್‌ ಲವರ್ಸ್ ಅನ್ನೋದು ಗೊತ್ತಿದೆ. ಆದರೆ, ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಅವರ ಸಾಲಿಗೆ ಸೇರುತ್ತಾರೆ.

ರವಿಚಂದ್ರನ್‌ಗೆ ಬಿರಿಯಾನಿ ಅಂದರೆ ಬಲು ಇಷ್ಟ. ಎಲ್ಲಿ ಬಿರಿಯಾನಿ ಸಿಕ್ಕಾಪಟ್ಟೆ ರುಚಿಯಾಗಿರುತ್ತೋ ಅಲ್ಲಿಗೆ ಸವಿದು ಬರುತ್ತಾರೆ. ಇಲ್ಲವೇ ಮನೆಗೆ ತರಿಸಿಕೊಳ್ಳುತ್ತಾರೆ. ಹೀಗಾಗಿ ರವಿಚಂದ್ರನ್ ಊಟದ ವಿಚಾರದಲ್ಲಿ ಅಚ್ಚುಕಟ್ಟು. ಬಿರಿಯಾನಿಯಿಂದ ಹಿಡಿದು ಅವರು ಪ್ರತಿ ನಿತ್ಯ ಸೇವಿಸುವ ಆಹಾರ ರುಚಿ ಕಟ್ಟಾಗಿ ಇರಬೇಕು. ಬೆಳಬೆಳಗ್ಗೆನೇ ಬಿರಿಯಾನಿ ತಿನ್ನುವುದು ಅಂದರೆ, ಇವರಿಗೆ ಸಿಕ್ಕಾಪಟ್ಟೆ ಇಷ್ಟ.

Chicken recipe named Ravichandran in a popular hotel in Bangalore What is its name

ಆದರೆ, ಬೆಂಗಳೂರಿನ ಐಷಾರಾಮಿ ಹೋಟೆಲ್ ಒಂದರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್‌ ಹೆಸರಿನಲ್ಲಿ ಒಂದು ಚಿಕನ್ ರೆಸಿಪಿ ಇದೆ. ವಿಶೇಷ ಅಂದರೆ, ಅದನ್ನು ಸ್ವತ: ರವಿಚಂದ್ರನ್ ಅವರೇ ಕೊಟ್ಟ ರೆಸಿಪಿ. ಈ ಕಾರಣಕ್ಕೆ ಆ ಶೆಫ್ ಆ ರೆಸಿಪಿಗೆ ಅವರದ್ದೇ ಹೆಸರು ಇಟ್ಟಿದ್ದಾರೆ. ಹಾಗಿದ್ದರೆ, ಆ ರೆಸಿಪಿಯ ಹೆಸರೇನು? ಯಾವುದು ಆ ಹೋಟೆಲ್? ಆ ಶೆಫ್ ಹೆಸರು ಏನು? ತಿಳಿಯುವುದಕ್ಕೆ ಮುಂದೆ ಓದಿ.

ಕ್ರೇಜಿ ಸ್ಟಾರ್ ಬಿರಿಯಾನಿ ಕ್ರೇಜ್ ರಿವೀಲ್ ಆಗಿದ್ದು ಜೀ ಕನ್ನಡದ ಜನಪ್ರಿಯ ಶೋ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ. ಇಲ್ಲಿಗೆ ಅತಿಥಿಯಾಗಿ ಬಂದಿದ್ದ ರವಿಚಂದ್ರನ್ ತಮ್ಮ ಬಿರಿಯಾನಿ ಪ್ರೀತಿಯನ್ನು ಹಂಚಿಕೊಂಡಿದ್ದರು. ಜೊತೆಗೆ ಮೈಸೂರಿನಲ್ಲಿರುವ ಹನುಮಂತು ಬಿರಿಯಾನಿ ಯಾಕಿಷ್ಟು? ಯಾರು ಪರಿಚಯಿಸಿದ್ದು ಎಂದೂ ಹೇಳಿದ್ದರು.

"ಮೈಸೂರಿನಲ್ಲಿ ಅಂಬರೀಶ್ ಅಭ್ಯಾಸ ಮಾಡಿಸಿದ್ದರು. ಹನುಮಂತು ಬಿರಿಯಾನಿ ನನಗೂ ಇಷ್ಟ ನಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟ. ಮೈಸೂರಿಗೆ ಹೋದರೆ, ಬೆಳಗ್ಗೆ ಅಂತೂ ಹನುಮಂತು ಬಿರಿಯಾನಿ ಬರಲೇಬೇಕು. ತುಂಬಾ ನೆನಪಾದರೆ, ಬೆಳಗ್ಗೆ ಫೋನ್ ಮಾಡಿ ಹೇಳಿ, ಇಲ್ಲಿಂದ ಯಾರನ್ನಾದರೂ 6 ಗಂಟೆಗೆ ಕಳಿಸಿದರೆ, 10 ಗಂಟೆಗೆ ಬಂದು ಬಿಡುತ್ತೆ. ಈ ಬಿರಿಯಾನಿಯನ್ನು ಮಧ್ಯಾಹ್ನ ತಿನ್ನುವುದಿಲ್ಲ. ಬೆಳಗ್ಗೆ ತಿನ್ನುತ್ತೇವೆ." ಎಂದು ರವಿಚಂದ್ರನ್ ಹೇಳಿಕೊಂಡಿದ್ದರು.

Chicken recipe named Ravichandran in a popular hotel in Bangalore What is its name

ಇದೇ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಚಿಕನ್ ರೆಸಿಪಿಗೆ ರವಿಚಂದ್ರನ್ ಹೆಸರು ಇಟ್ಟಿದ್ದನ್ನು ರಿವೀಲ್ ಮಾಡಿದ್ದರು. ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ 37 ಕ್ರೆಸೆಂಟ್ ಹೋಟೆಲ್‌ನಲ್ಲಿ ಕ್ರೇಜಿಸ್ಟಾರ್ ಹೆಸರಿನಲ್ಲಿ 'ರವಿಚಂದ್ರನ್ ಸ್ಪೆಷಲ್ ಚಿಕನ್' ಐಟಂ ಇದೆ. ಇದಕ್ಕೆ ರವಿಚಂದ್ರನ್ ಅವರೇ ಸ್ವತ: ರೆಸಿಪಿ ಕೊಟ್ಟಿದ್ದರು. "37 ಕ್ರೆಸೆಂಟ್. ಮಿಸ್ಟರ್ ಜಯಪಾಲ್ ಅಂತ. ಅವರೇ ನನಗೆ ಕುಕ್ ಮಾಡೋದು. ಅಶೋಕ ಹೋಟೆಲ್‌ನಲ್ಲಿ ಇದ್ದಿದ್ದು ಅವನು. ಅಲ್ಲಿಂದ ಅವನು 37 ಕ್ರೆಸೆಂಟ್‌ಗ ಬಂದ. ಅಲ್ಲಿ ನನಗೋಸ್ಕರ ಚಿಕನ್ ಮಾಡುತ್ತಾನೆ. ಅದಕ್ಕೆ ಹೆಸರೇ ರವಿಚಂದ್ರನ್ ಚಿಕನ್ ಅಂತ. ಅದೇನೋ ಗೊತ್ತಿಲ್ಲ ಅವನು ಮಾಡುವ ಚಿಕನ್ ನನಗೆ ಇಷ್ಟ." ಎಂದು ರವಿಚಂದ್ರನ್ ಹೇಳಿದ್ದರು.

'ವೀಕೆಂಡ್ ವಿಥ್ ರಮೇಶ್' ಕಾರ್ಯಕ್ರಮದಲ್ಲಿ ಶೆಫ್ ಜಯಪಾಲ್ ಕೂಡ ಬಂದಿದ್ದರು. ರವಿಚಂದ್ರನ್ ಪರಿಚಯ ಆಗಿದ್ದು ಹೇಗೆ? ರೆಸಿಪಿ ಹುಟ್ಟಿದ್ದೇಗೆ? ಎಂದು ರಿವೀಲ್ ಮಾಡಿದ್ದರು. "1995-96ನಲ್ಲಿ ಅಶೋಕಾ ಹೋಟೆಲ್‌ನಲ್ಲಿ ಫಸ್ಟ್ ಟೈಮ್ ನೋಡಿದ್ದು. ಯಾವುದಾದರೂ ಹೊಸದು ಮಾಡು ಅಂತ ಹೇಳಿದ್ದರು. ಈ ಚಿಕನ್ ಬಂತು. ಈ ರೆಸಿಪಿಯನ್ನು ಅವರೇ ಕೊಟ್ಟಿದ್ದು. ಖಾರವಾಗಿರಬೇಕು, ಕ್ರಿಸ್ಪಿಯಾಗಿರಬೇಕು. ಅದೇನು ಮಾಡುತ್ತಿಯೋ ನೋಡು ಅಂದರು. ಅದನ್ನು ಟ್ರೈ ಮಾಡುವಾಗ ಕರೆಕ್ಟ್ ಆಗಿ ಬಂತು. ಅಂದಿನಿಂದ ಅವರ ಹೆಸರೇ ಇಟ್ಟು ರವಿಚಂದ್ರನ್ ಸ್ಪೆಷಲ್ ಚಿಕನ್ ಎಂದು ಕೊಡುತ್ತಿದ್ದೇವೆ. ಅವರ ಫ್ರೆಂಡ್ ಯಾರೇ ಬಂದರೂ ರವಿಚಂದ್ರನ್ ಸ್ಪೆಷಲ್ ಚಿಕನ್ ಅಂತಾನೇ ಫೇಮಸ್ ಆಗಿದೆ." ಎಂದು ಹೇಳಿಕೊಂಡಿದ್ದರು.

More from Filmibeat

English summary
Chicken recipe named Ravichandran in a popular hotel in Bangalore. What is its name?
Read more about: ravichandran hotel recipe
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X