Love stories:ನಾಲ್ವರು ವಿವಾಹಿತರ ಪ್ರೀತಿಯಲ್ಲಿ ಬಿದ್ದಿದ್ದ ಕ್ರೇಜಿ ನಟಿ ನಗ್ಮಾ; ವಯಸ್ಸು 50 ಆಗಿದ್ದರೂ ಇನ್ನೂ ಸಿಂಗಲ್!
'ಕುರುಬನ ರಾಣಿ', 'ರವಿಮಾಮ' ಹಾಗೂ 'ಹೃದಯವಂತ' ಕನ್ನಡದ ಈ ಮೂರು ಸಿನಿಮಾಗಳು ಬಹುತೇಕ ಕನ್ನಡಿಗರಿಗೆ ಗೊತ್ತು. ಶಿವಣ್ಣ, ಕ್ರೇಜಿಸ್ಟಾರ್ ಹಾಗೂ ವಿಷ್ಣುವರ್ಧನ್ ನಟಿಸಿದ ಈ ಸಿನಿಮಾಗಳಿಗೆ ನಗ್ಮಾ ನಾಯಕಿಯಾಗಿದ್ದರು. ಈಕೆ ಕನ್ನಡದಲ್ಲಿ ನಟಿಸಿದ್ದು ಈ ಮೂರು ಸಿನಿಮಾಗಳಷ್ಟೇ. ಆ ಮೇಲೆ ದಕ್ಷಿಣ ಭಾರತದ ಸಿನಿಮಾಗಳಿಂದಲೇ ದೂರ ಉಳಿದು ಬಿಟ್ಟರು. ಅದಕ್ಕೆ ವಿವಾಹಿತ ನಟನೊಂದಿಗಿನ ಅಫೇರ್.
ನಗ್ಮಾ ಈಗ ರಾಜಕೀಯದ ಕಡೆಗೆ ಹೆಚ್ಚು ಒಲವು ಬೆಳೆಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿ ದಶಕಗಳ ಮೇಲಾಗಿದೆ. 90ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಎರಡು ದಶಕಗಳ ಕಾಲ ಬಣ್ಣ ಹಚ್ಚಿದ್ದರು. ಈ ವೇಳೆ ಗೆಲುವು-ಸೋಲು ಎರಡನ್ನೂ ಕಂಡಿದ್ದಾರೆ. ಹಾಗಂತ ಇವರ ಸಿನಿ ಬದುಕು ಸಕ್ಸಸ್ ಅಂತಲೇ ಹೇಳಬಹುದು. ಆದರೆ, ಲವ್ ಲೈಫ್ ಮಾತ್ರ ಯಶಸ್ಸು ಕಾಣಲೇ ಇಲ್ಲ.
ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಗ್ಮಾಗೆ ಅತೀ ಹೆಚ್ಚು ಯಶಸ್ಸು ಸಿಕ್ಕಿತ್ತು. ಆರಂಭದಲ್ಲಿ ಈಕೆ ನಟಿಸಿದ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಆಗಿದ್ದವು. ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಇವರಿಗೆ ಬೇಡಿಕೆ ಹೆಚ್ಚಿದ್ದವು. ಆದರೆ, ಸಿನಿಮಾಗಳಲ್ಲಿ ಯಶಸ್ಸು ಸಿಕ್ಕಂತೆ ಇವರ ಲವ್ ಲೈಫ್‌ಗೆ ಸಿಗಲಿಲ್ಲ. ನಗ್ಮಾ ಅದಾಗಲೇ ಮದುವೆ ಆಗಿದ್ದ ನಾಲ್ಕು ಮಂದಿಯ ಪ್ರೀತಿಯಲ್ಲಿ ಬಿದ್ದಿದ್ದರು. ಅವರಲ್ಲಿ ಮೂವರು ಸ್ಟಾರ್ ನಟರು. ಇನ್ನೊಬ್ಬರು ಕ್ರಿಕೆಟರ್. ಈ ನಾಲ್ಕು ಲವ್ ಸ್ಟೋರಿಗಳು ವಿವಾದಕ್ಕೆ ತಿರುಗಿದ್ದವು. ನಗ್ಮಾ ಲವ್ ಸ್ಟೋರಿಗಳ ಬಗ್ಗೆ ನೋಡುವುದಾರೇ.

ನಗ್ಮಾ-ಶರತ್ ಕುಮಾರ್
ನಟಿ ನಗ್ಮಾ ತಮಿಳು ಚಿತ್ರರಂಗದ ಬೇಡಿಕೆಯ ನಟಿಯಾಗಿದ್ದರು. ಆ ವೇಳೆ ತಮಿಳು ಚಿತ್ರರಂಗದ ಸ್ಟಾರ್ ನಟ ಶರತ್ ಕುಮಾರ್ ಅವರ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ, ಶರತ್ ಕುಮಾರ್‌ಗೆ ಅದಾಗಲೇ ಮದುವೆ ಆಗಿತ್ತು. ಹೀಗಿದ್ದೂ ಶರತ್ ಕುಮಾರ್ ಪ್ರೀತಿಯಲ್ಲಿ ನಗ್ಮಾ ಬಿದ್ದಿದ್ದರು. ಇದು ಅವರ ಪತ್ನಿಗೆ ತಿಳಿಯುತ್ತಿದ್ದಂತೆ ವಿಚ್ಚೇದನಕ್ಕೆ ಮುಂದಾಗಿದ್ದರು. ಇದು ವಿವಾದಕ್ಕೆ ಎಡೆ ಮಾಡಿಕೊಡುತ್ತಿದ್ದಂತೆ ಶರತ್ ಕುಮಾರ್ ಅವರಿಂದ ದೂರ ಉಳಿಯಲು ನಿರ್ಧರಿಸಿದ್ದರು. ಆದರೆ, ಶರತ್ ಕುಮಾರ್ ಈಕೆ ಬೆದರಿಕೆ ಹಾಕಿದ್ದರು ಎಂದು ಗುಲ್ಲೆದ್ದಿದ್ದರು. ಇವರಿಬ್ಬರ ಲವ್ ಅಫೇರ್ ಬಗ್ಗೆ ಈಗಾಗಲೇ ಸಾಕಷ್ಟು ವರದಿಗಳಾಗಿವೆ.

ರವಿ ಕಿಶನ್-ನಗ್ಮಾ
ಶರತ್ ಕುಮಾರ್ ಬೆದರಿಕೆಗಳಿಗೆ ಹೆದರಿ ನಗ್ಮಾ ದಕ್ಷಿಣ ಭಾರತದ ಚಿತ್ರರಂಗವನ್ನೇ ತೊರೆದಿದ್ದರು ಅನ್ನೋ ಮಾತು ಕೂಡ ಇದೆ. ಬೋಜ್ಪುರಿ ಸಿನಿಮಾಗಳ ಕಡೆಗೆ ಮುಖ ಮಾಡಿದ್ದರು. ಆ ವೇಳೆ ನಗ್ಮಾಗೆ ಮತ್ತೊಂದು ಪ್ರೀತಿ ಹುಟ್ಟಿತ್ತು. ಬೋಜ್ಪುರಿಯ ಸೂಪರ್‌ಸ್ಟಾರ್ ರವಿ ಕಿಶನ್ ಪ್ರೀತಿಯಲ್ಲಿ ಬಿದ್ದಿದ್ದರು. ಈ ನಟನಿಗೂ ಕೂಡ ಅದಾಗಲೇ ವಿವಾಹವಾಗಿತ್ತು. ಆದರೆ, ರವಿ ಕಿಶನ್ ಪತ್ನಿಗೆ ನಗ್ಮಾ ಜೊತೆಗಿನ ಅಫೇರ್ ಗೊತ್ತಿತ್ತು. ಹೀಗಿದ್ದರೂ, ತಕರಾರು ಎತ್ತಲಿಲ್ಲ. ಈ ಅಫೇರ್‌ಗೆ ಒಪ್ಪಿಗೆ ಸೂಚಿಸಿದ್ದರು. ಈ ಕಾರಣಕ್ಕೆ ರವಿ ಕಿಶನ್ ಮೊದಲ ಪತ್ನಿ ಮಕ್ಕಳನ್ನು ತೊರೆಯುವುದಿಲ್ಲ ಎಂದು ಅರಿತ ನಗ್ಮಾನೇ ದೂರ ಆಗಿದ್ದರು ಎಂಬ ವರದಿಗಳು ಸಾಕಷ್ಟು ಸಿಗುತ್ತವೆ.

ಮನೋಜ್ ತಿವಾರಿ-ನಗ್ಮಾ
ರವಿ ಕಿಶನ್ ಮೇಲಿನ ಸಿಟ್ಟಿಗೆ ಮತ್ತೊಬ್ಬ ಬೋಜ್ಪುರಿ ನಟ ಮನೋಜ್ ತಿವಾರಿ ಇಷ್ಟ ಪಡುವುದಕ್ಕೆ ಶುರು ಮಾಡಿದ್ದರು. ಮನೋಜ್ ತಿವಾರಿಗೂ ಅದಾಗಲೇ ಮದುವೆ ಆಗಿತ್ತು. ಆದರೆ, ಮನೋಜ್ ತಿವಾರಿ ಹಾಗೂ ನಗ್ಮಾ ಇಬ್ಬರೂ ತಮ್ಮ ನಡುವಿನ ಲವ್ ಸ್ಟೋರಿಯನ್ನು ಇದೂವರೆಗೂ ಒಪ್ಪಿಕೊಂಡಿಲ್ಲ.

ಸೌರವ್ ಗಂಗೂಲಿ-ನಗ್ಮಾ
ಇವರೆಲ್ಲರಿಗಿಂತಲೂ ಮುನ್ನ ನಗ್ಮಾ ಪ್ರೀತಿಯಲ್ಲಿ ಸೌರವ್ ಗಂಗೂಲಿ ಬಿದ್ದಿದ್ದರು. ಆಂಧ್ರ ಪ್ರದೇಶದ ಒಂದು ದೇವಸ್ಥಾನದಲ್ಲಿ ಇಬ್ಬರೂ ಗುಟ್ಟಾಗಿ ವಿವಾಹವಾಗಿದ್ದರು ಎಂಬ ಸುದ್ದಿ ಹರಿದಾಡಿತ್ತು. ಇಬ್ಬರೂ ಗಾಢವಾಗಿ ಪ್ರೀತಿಯಲ್ಲಿ ಬಿದ್ದಿದ್ದರು ಎಂಬ ಸುದ್ದಿ ಓಡಾಡಿತ್ತು. ಆದರೆ, ಸೌರವ್ ಗಂಗೂಲಿ ಪಂದ್ಯವನ್ನು ಸೋತಾಗಲೆಲ್ಲ ಜನರು ನಗ್ಮಾರನ್ನು ದೂರುತ್ತಿದ್ದರು. ಈ ಕಾರಣಕ್ಕೆ ಬೇಸತ್ತು ದೂರವಾದರು ಅಂತ ಬಾಲಿವುಡ್ ಶಾದೀಸ್.ಕಾಮ್ ವರದಿ ಮಾಡಿದೆ.


Click it and Unblock the Notifications











