ದರ್ಶನ್ ಬಣ್ಣ ಹಚ್ಚಿದ 55 ಸಿನಿಮಾಗಳಲ್ಲಿ 'ಬ್ಲಾಕ್‌ಬಸ್ಟರ್' ಲಿಸ್ಟ್ ಸೇರಿದ್ದೆಷ್ಟು? ಯಾಕಿಷ್ಟು ಕ್ರೇಜ್?

ಸ್ಯಾಂಡಲ್‌ವುಡ್ ಪಾಲಿಗೆ ದರ್ಶನ್ ಬಾಕ್ಸಾಫೀಸ್ ಸುಲ್ತಾನ್. ಈ ನಟ ಬಣ್ಣ ಹಚ್ಚಿದ ಸಿನಿಮಾಗಳು ಸೋತಿವೆ. ಕೆಲವು ಸಾಧಾರಾಣ ಯಶಸ್ಸು ಕಂಡಿದೆ. ಮತ್ತೆ ಕೆಲವು ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿವೆ.

ಎಲ್ಲಾ ಸೂಪರ್‌ಸ್ಟಾರ್‌ಗಳಂತೆ ದರ್ಶನ್‌ ಕೂಡ ಸೋಲು, ಗೆಲುವುಗಳ ರುಚಿ ಕಂಡಿದ್ದಾರೆ. ಅದರಲ್ಲೂ ಇತ್ತೀಚೆಗೆ ದರ್ಶನ್ ಒಂದೇ ಸಿನಿಮಾವೂ ಸೋತಿದ್ದು ಇಲ್ಲ. ಒಂದರ ಹಿಂದೊಂದು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಬರೆದಿವೆ.

ಇಲ್ಲಿವರೆಗೂ ದರ್ಶನ್ ಸುಮಾರು 55 ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟು ದೊಡ್ಡ ಪಟ್ಟಿಯಲ್ಲಿ ದರ್ಶನ್ ಹಲವು ಬ್ಲಾಕ್‌ ಬಸ್ಲರ್ ಸಿನಿಮಾಗಳನ್ನು ನೀಡಿದ್ದಾರೆ. ಇಷ್ಟು ಸಿನಿಮಾಗಳಲ್ಲಿ ಬ್ಲಾಕ್‌ಬಸ್ಟರ್ ಲಿಸ್ಟ್‌ ಸೇರಿದೆಷ್ಟು? ಅವು ಯಾವುವು? ಅನ್ನೋದನ್ನು ತಿಳಿಯಲು ಮುಂದೆ ಓದಿ..

ಹೀರೊ ಆಗಿ 21 ವರ್ಷ

ಹೀರೊ ಆಗಿ 21 ವರ್ಷ

1997ರಲ್ಲಿಯೇ ದರ್ಶನ್ ಚಿಕ್ಕಪುಟ್ಟ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಆದರೆ, ಹೀರೊ ಆಗಿ ಬಡ್ತಿ ಪಡೆದಿದ್ದು 'ಮೆಜೆಸ್ಟಿಕ್' ಸಿನಿಮಾದಿಂದ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆರಂಭದಲ್ಲಿ ತೂಗುದೀಪ ಶ್ರೀನಿವಾಸ್ ಪುತ್ರ ಹೀರೊ ಆಗಿ ಈ ಮಟ್ಟಕ್ಕೆ ಬೆಳೆಯಬಹುದು ಎಂಬುದು ಯಾರೂ ಊಸಿರಲಿಲ್ಲ. ಚಿಕ್ಕ ಪುಟ್ಟ ಪಾತ್ರ ಮಾಡಿಕೊಂಡಿದ್ದವ ಒಂದೇ ಒಂದು ಸಿನಿಮಾದ ಮೂಲಕ ಸ್ಟಾರ್ ಪಟ್ಟಕ್ಕೇರಿ, ತನ್ನ ಸಾಮ್ರಾಜ್ಯವನ್ನು ವಿಸ್ತಿರಿಸಿಕೊಂಡಿದ್ದಾರೆ. ಇಷ್ಟು ವರ್ಷಗಳ ಪಯಣದಲ್ಲಿ ದರ್ಶನ್ ಖಾತೆಯಲ್ಲಿ ಬ್ಲಾಕ್ ಬಸ್ಟರ್ ಸಿನಿಮಾಗಳಿವು.

ಮೊದಲ 10 ವರ್ಷ ಎಷ್ಟು ಬ್ಲಾಕ್‌ಬಸ್ಟರ್?

ಮೊದಲ 10 ವರ್ಷ ಎಷ್ಟು ಬ್ಲಾಕ್‌ಬಸ್ಟರ್?

ದರ್ಶನ್ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಲ್ಲಿಂದ ಮತ್ತೆಂದೂ ಹಿಂದೆ ತಿರುಗಿಯೂ ನೋಡಿಲ್ಲ. 'ಮೆಜೆಸ್ಟಿಕ್‌'ನಿಂದ ನಾಯಕನ ಪಯಣ ಶುರುವಾಗಿದ್ದು, ಇಂದಿಗೂ ಮುಂದುವರೆದಿದೆ. ಆದರೆ, ಮೊದಲ ಹತ್ತು ವರ್ಷಗಳಲ್ಲಿ ಸುಮಾರು 7 ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. 2001 ರಿಂದ 2011ರವರ ಅವಧಿಯಲ್ಲಿ 'ಮೆಜೆಸ್ಟಿಕ್', 'ಕರಿಯ','ಕಲಾಸಿಪಾಳ್ಯ', 'ದಾಸ','ಸುಂಟರಗಾಳಿ','ಗಜ', 'ಸಾರಥಿ' ಅಂತ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದ್ದವು.

ಸೆಕೆಂಡ್ ಹಾಫ್‌ನಲ್ಲೆಷ್ಟು ಬ್ಲಾಕ್‌ಬಸ್ಟರ್?

ಸೆಕೆಂಡ್ ಹಾಫ್‌ನಲ್ಲೆಷ್ಟು ಬ್ಲಾಕ್‌ಬಸ್ಟರ್?

2001ರಿಂದ 2011ರವರೆಗೆ ಒಂದ್ರಾದ್ರೆ, 2012 ರಿಂದ 2022ರವರೆಗೆ ದರ್ಶನ್ ಸೆಕೆಂಡ್ ಹಾಫ್ ಶುರುವಾಗಿತ್ತು. ಈ ಅವಧಿಯಲ್ಲಿ ದರ್ಶನ್ ಆರು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. 'ಸಂಗೊಳ್ಳಿರಾಯಣ್ಣ', 'ಬುಲ್‌ಬುಲ್', 'ಯಜಮಾನ','ಕುರುಕ್ಷೇತ್ರ', 'ರಾಬರ್ಟ್'ವರೆಗೂ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿದೆ.

ದರ್ಶನ್ 'ಕ್ರಾಂತಿ'

ದರ್ಶನ್ 'ಕ್ರಾಂತಿ'

ಇತ್ತೀಚೆಗೆ ತೆರೆಕಂಡಿದ್ದ ದರ್ಶನ್ ಅಭಿನಯದ ಸಿನಿಮಾ 'ಕ್ರಾಂತಿ'. ಈ ಸಿನಿಮಾ ಈಗಾಗಲೇ 100 ಕೋಟಿ ಕ್ಲಬ್ ಸೇರಿದೆ ಎಂದು ಚಿತ್ರತಂಡವೇ ಹೇಳಿಕೊಂಡಿದೆ. ಸದ್ಯ ಈ ಸಿನಿಮಾ ಇನ್ನೂ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದ್ದು, ಲೈಫ್ ಟೈಮ್ ಕಲೆಕ್ಷನ್ ಹೊರಬೀಳುವುದಕ್ಕೆ ಇನ್ನೂ ಸಮಯಬೇಕಿದೆ. 55 ಸಿನಿಮಾಗಳಲ್ಲಿ ಹಿಟ್, ಸೂಪರ್ ಹಿಟ್ ಬಿಟ್ಟು ಬ್ಲಾಕ್‌ಬಸ್ಟರ್ ಅಂತಲೇ 13 ಸಿನಿಮಾಗಳಿವೆ.

More from Filmibeat

English summary
Darshan appeared in 55 films, how many of which were blockbusters?, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X