ನೀವು ಕನ್ನಡದ ಈ ಸ್ಟಾರ್‌ಗಳ 10ನೇ ತರಗತಿ ಅಂಕಪಟ್ಟಿ ನೋಡಿದ್ದೀರಾ? ಒಬ್ಬೊಬ್ಬರೂ ಒಂದು ವಿಷಯದಲ್ಲಿ ಎಕ್ಸ್‌ಪರ್ಟ್!
ಸಿನಿಮಾ ಮೇಲೆ ಮಿಂಚುವ ಸೂಪರ್‌ಸ್ಟಾರ್‌ಗಳ ವೈಯಕ್ತಿಕ ಬದುಕಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅವರ ಅಭಿಮಾನಿಗಳಿಗೆ ಇದ್ದೇ ಇರುತ್ತೆ. ಅವರ ಬಳಿ ಇರುವ ದುಬಾರಿ ವಾಚ್, ದುಬಾರಿ ಕಾರುಗಳು, ಮನೆ-ತೋಟ, ಆಸ್ತಿ-ಪಾಸ್ತಿ ಬಗ್ಗೆ ಎಲ್ಲಿಲ್ಲದ ಆಸ್ತಿ ಇದ್ದೇ ಇರುತ್ತೆ. ರೀಲ್ ಮೇಲೆ ನಾನಾ ಅವತಾರಗಳನ್ನು ತಾಳುವ ಈ ಸ್ಟಾರ್‌ಗಳು ತೆರೆಯ ಹಿಂದೆ ಹೇಗಿರುತ್ತಾರೆ? ಅನ್ನೋದು ಸಿನಿಪ್ರಿಯರಿಗೆ ಕುತೂಹಲ.
ಕನ್ನಡದ ಚಿತ್ರರಂಗದಲ್ಲಿ ಎಲ್ಲ ರೀತಿಯ ನಟರೂ ಇದ್ದಾರೆ. ಕೆಲ ನಟ-ನಟಿಯರು ತುಂಬಾ ಓದಿಕೊಂಡಿದ್ದಾರೆ. ಮತ್ತೆ ಕೆಲವರಿಗೆ ಶಿಕ್ಷಣ ಅನ್ನೋದು ಆಗಿಬಂದಿಲ್ಲ. ಆದರೂ ಸಿನಿಮಾ ಕ್ಷೇತ್ರದಲ್ಲಿ ಸಕ್ಸಸ್‌ಪುಲ್ ಎನಿಸಿಕೊಂಡಿದ್ದಾರೆ. ಹೀಗಾಗಿ ಚಿತ್ರರಂಗದಲ್ಲಿ ಇಷ್ಟೊಂದು ಸಾಧನೆ ಮಾಡಿರುವ ಹೀರೋ-ಹೀರೋಯಿನ್‌ಗಳು ಏನೆಲ್ಲ ಓದಿಕೊಂಡಿದ್ದಾರೆ? ಅವರಿಗೆ ಬಂದ ಅಂಕಗಳೆಷ್ಟು ಅನ್ನೋದನ್ನು ತಿಳಿದುಕೊಳ್ಳುವ ಹಂಬಲ ಇದ್ದೇ ಇರುತ್ತೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್‌ರಿಂದ ಹಿಡಿದು ಜಗ್ಗೇಶ್, ಪ್ರಣಿತಾ ಸುಭಾಶ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಸ್ಟಾರ್‌ಗಳ 10ನೇ ತರಗತಿಯ ಅಂಕಗಳೆಷ್ಟು? ಅಂತ ನೋಡುವುದಾರೇ.

ಪ್ರಣಿತಾ ಸುಭಾಷ್
ಕನ್ನಡ ಚಿತ್ರರಂಗದ ಬಟ್ಟಲು ಕಣ್ಣುಗಳ ಚೆಲುವೆ ಹಲವು ಭಾಷೆಯ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಭಾಷೆಯ ಸಿನಿಮಾಗಳಲ್ಲೂ ಮಿಂಚಿದ್ದಾರೆ. ತಮ್ಮ ಪ್ರತಿಭೆ ಮೂಲಕದ ದೇಶಾದ್ಯಂತ ಜನಪ್ರಿಯರಾಗಿರುವ ಈ ನಟಿ ಶಿಕ್ಷಣದಲ್ಲಿಯೂ ಮುಂದಿದ್ದರು. ಪ್ರಣಿತಾ ಸುಭಾಷ್ 10ನೇ ತರಗತಿಯಲ್ಲಿ ಐಸಿಎಸ್‌ಸಿ ಸಿಲಬಸ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ಸ್ಟೇಟ್ ಸಿಲಬಸ್‌ಗೆ ಹೋಲಿಸಿದರೆ, ಸ್ವಲ್ಪ ಕಷ್ಟ ಎಂದೇ ಹೇಳಬಹುದು. ಇದರಲ್ಲಿ ಪ್ರಣಿತಾ ಸುಭಾಷ್‌ಗೆ ಸಿಕ್ಕಿದ ಅಂಕ 700ಕ್ಕೆ 625. ಅಂದರೆ, ಇವರು ಶೇ.90ರಷ್ಟು ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾರೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಪ್ರಣಿತಾ ಸುಭಾಷ್ ಸೋಶಿಯಲ್ ಮೀಡಿಯಾದಲ್ಲಿ ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿಯನ್ನು ಹಂಚಿಕೊಂಡಿದ್ದರು.

ಶ್ರೀನಿಧಿ ಶೆಟ್ಟಿ
ಇತ್ತೀಚೆಗೆ 'ಕೆಜಿಎಫ್' ಸುಂದರಿ ಶ್ರೀನಿಧಿ ಶೆಟ್ಟಿಯ 10ನೇ ತರಗತಿಯ ಅಂಕಪಟ್ಟಿ ವೈರಲ್ ಆಗಿತ್ತು. 'ಕೆಜಿಎಫ್' ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿರುವ ಈ ನಟಿ ಅಂಕ ಪಟ್ಟಿಯನ್ನು ನೋಡಿ ಕನ್ನಡಿಗರು ಭೇಷ್ ಎಂದಿದ್ದರು. ಶ್ರೀನಿಧಿ ಶೆಟ್ಟಿ 10ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದಾರೆ. ಅವರ ಅಂಕ ಪಟ್ಟಿ ಸಿಗದೇ ಹೋದರೂ, ಅವರು ಕನ್ನಡದಲ್ಲಿ 125ಕ್ಕೆ 121 ಅಂಕಗಳನ್ನು ಪಡೆದಿದ್ದಾರೆಂದು ವರದಿಗಳು ಆಗಿವೆ. ಈ ಹಿಂದೇನೆ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.

ಜಗ್ಗೇಶ್
ಹಿರಿಯ ನಟ ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ಮಾಡಿದ ಸಾಧನೆ ದೊಡ್ಡದು. ಈಗ ಎಂಪಿ ಆಗಿಯೂ ಜಗ್ಗೇಶ್ ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಗಳಿಸಿದ್ದಾರೆ. ಆದರೆ, ಜಗ್ಗೇಶ್ ವಿದ್ಯಾಭ್ಯಾಸದಲ್ಲಿ ಅಷ್ಟಕ್ಕಷ್ಟೇ. ಇವರು ತಮ್ಮ ಪ್ರತಿಭೆಯಿಂದ ಬೆಳೆದು ಮೇಲೆ ಬಂದವರು. 1979ರಲ್ಲಿ ನವರಸ ನಾಯಕ ಜಗ್ಗೇಶ್ ಎಸ್‌ಎಸ್‌ಎಲ್‌ಸಿಯನ್ನು ಎರಡನೇ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು ತಮ್ಮ ಮಾರ್ಕ್ಸ್ ಕಾರ್ಡ್ ಅನ್ನು ಅವರೇ ಹಿಂದೊಮ್ಮೆ ಹಂಚಿಕೊಂಡಿದ್ದರು. ಜಗ್ಗೇಶ್ 10ನೇ ತರಗತಿಯಲ್ಲಿ ತೆಗೆದುಕೊಂಡಿದ್ದ ಅಂಕಗಳನ್ನು ನೋಡಿ ಅವರ ತಂದೆ ನಡುರೋಡಲ್ಲಿ ಬೂಟಿನಲ್ಲಿ ಹೊಡೆದಿದ್ದರಂತೆ. ಅದಕ್ಕೆ ಮನನೊಂದು ಜಗ್ಗೇಶ್ ಅವರು ಆತ್ಮ*ಹತ್ಯೆಗೂ ಯತ್ನಿಸಿದ್ದಾಗಿ ಹೇಳಿಕೊಂಡಿದ್ದರು. 600ಕ್ಕೆ 342 ಅಂಕ ಪಡೆದು ಸೆಕೆಂಡ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದರು. ಅವರು ಪಡೆದ ಅಂಕಗಳ ವಿವರ ಹೀಗಿದೆ. ಪ್ರಥಮ ಭಾಷೆ ಕನ್ನಡದಲ್ಲಿ - 150ಕ್ಕೆ 101 ಅಂಕ ದ್ವಿತೀಯ ಭಾಷೆ - 100ಕ್ಕೆ 54 ಅಂಕ ತೃತೀಯ ಭಾಷೆ - 50ಕ್ಕೆ 20 ಅಂಕ ಗಣಿತ - 100ಕ್ಕೆ 57 ಅಂಕ ವಿಜ್ಞಾನ - 100ಕ್ಕೆ 52 ಅಂಕ ಸಮಾಜ ವಿಜ್ಞಾನ - 100ಕ್ಕೆ 58 ಅಂಕಗಳನ್ನು ಪಡೆದುಕೊಂಡಿದ್ದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಹಿಂದೆ 'ಕ್ರಾಂತಿ' ಸಿನಿಮಾದ ವೇಳೆ ಎಸ್‌ಎಸ್‌ಎಲ್‌ಸಿ ಅಂಕಗಳ ಬಗ್ಗೆ ಮಾತಾಡಿದ್ದರು. ದರ್ಶನ್ ಓದಿದ್ದೇ ಎಸ್‌ಎಸ್‌ಎಲ್‌ಸಿ. ಮೈಸೂರಿನಲ್ಲಿ ಶಿಕ್ಷಣವನ್ನು ಮುಗಿಸಿದ ದರ್ಶನ್ 10ನೇ ತರಗತಿಯಲ್ಲಿ ಎಷ್ಟು ಅಂಕಗಳನ್ನು ಪಡೆದಿದ್ದರು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಒಟ್ಟು ಎಲ್ಲಾ ಭಾಷೆಗಳಿಂದ ಅವರು 210 ಅಂಕಗಳನ್ನು ಪಡೆದಿದ್ದೆ ಎಂದು ದರ್ಶನ್ ಅವರೇ ಹೇಳಿಕೊಂಡಿದ್ದರು.
ಇತ್ತೀಚೆಗೆ ಸಿನಿಮಾ ಹಾಗೂ ಕಿರಿತೆರೆಯಲ್ಲಿ ನಟಿಸುತ್ತಿರುವ ಕಲಾವಿದರು ತಮ್ಮ ಶಿಕ್ಷಣದಲ್ಲೂ ಮುಂದಿದ್ದಾರೆ. ಒಳ್ಳೊಳ್ಳೆ ಅಂಕಗಳನ್ನು ಪಡೆದು, ಶಿಕ್ಷಣ ಹಾಗೂ ನಟನೆ ಎರಡರಲ್ಲೂ ಮಿಂಚುತ್ತಿದ್ದಾರೆ.


Click it and Unblock the Notifications











