ದೀಪಿಕಾ, ಅನುಷ್ಕಾ, ಕತ್ರಿನಾ ಈ ಮೂವರಲ್ಲಿ ಯಾರು ಶ್ರೀಮಂತರು? 2024ರಲ್ಲಿ ಇವರ ಆಸ್ತಿ ಮೌಲ್ಯ ಎಷ್ಟು?

ಬಾಲಿವುಡ್‌ ಅನ್ನೋದು ಅದೆಷ್ಟೊ ನಟಿಯರ ಕನಸು. ಇಲ್ಲಿ ನಾಯಕಿಯಾಗಿ ಮೆರೆಯಬೇಕು. ಸ್ಟಾರ್ ಪಟ್ಟಕ್ಕೆ ಏರಬೇಕು ಅನ್ನೋದು ಹಲವರ ಡ್ರೀಮ್. ಆದರೆ, ಈ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುವುದು ಕೆಲವರಿಗೆ ಮಾತ್ರ. ದಶಕಗಳ ಕಾಲ ಬಾಲಿವುಡ್‌ನಲ್ಲಿ ರಾಣಿಯಂತೆ ಮೆರೆದ ನಾಯಕಿಯರ ಸಂಪಾದನೆ ಕೂಡ ಕಡಿಮೆಯೇನು ಇಲ್ಲ. ಒಬ್ಬೊಬ್ಬರೂ ನೂರಾರು ಕೋಟಿಗಳಿಗೆ ಬಾಳುತ್ತಾರೆ.

ಸದ್ಯ ಬಾಲಿವುಡ್‌ನಲ್ಲಿ ಚಾಲ್ತಿಯಲ್ಲಿರೋ ಮೂವರು ಲೀಡಿಂಗ್ ನಟಿಯರೆಂದರೆ, ಕತ್ರಿನಾ ಕೈಫ್, ಅನುಷ್ಕಾ ಶರ್ಮಾ ಹಾಗೂ ದೀಪಿಕಾ ಪಡುಕೋಣೆ. ಹೆಚ್ಚು ಕಡಿಮೆ ಒಂದೇ ಸಮಯಕ್ಕೆ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದ ಈ ಮೂವರು ನಟಿಯರು ಇಂದು ನೂರಾರು ಕೋಟಿಯ ಒಡತಿಯರು. ಹಾಗಿದ್ದರೆ, ಈ ಮೂವರು ನಟಿಯಲ್ಲಿ ಯಾರ ಬಳಿ ಎಷ್ಟು ಆಸ್ತಿಯಿದೆ? ಈ ಮೂವರಲ್ಲಿ ಯಾರು ಶ್ರೀಮಂತರು? ಅನ್ನೋದನ್ನು ತಿಳಿಯಲು ಮುಂದೆ ಓದಿ.

Deepika Padukone Anushka Sharma Katrina Kaif Net Worth in 2024

ಕತ್ರಿನಾ ಕೈಫ್

ಕತ್ರಿನಾ ಕೈಫ್ 2003ರಲ್ಲಿಯೇ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. 'ಭೂಮ್' ಅನ್ನುವ ಸಿನಿಮಾ ನಟಿಸಿದ್ದರು. ಆದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಆದರೆ, 2005ರಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಿದ 'ಮೈನೆ ಪ್ಯಾರ್ ಕ್ಯೂ ಕಿಯಾ' ಈಕೆಯ ವೃತ್ತಿ ಬದುಕಿಗೆ ಟರ್ನಿಂಗ್ ಪಾಯಿಂಟ್ ಆಗಿತ್ತು. ಇಲ್ಲಿಂದ ಕತ್ರಿನಾ ಕೈಫ್ ಮತ್ತೆಂದೂ ತಿರುಗಿ ನೋಡುವುದಕ್ಕೆ ಹೋಗಲಿಲ್ಲ. 'ಅಜಬ್ ಪ್ರೇಮ್ ಕಿ ಘಜಬ್ ಕಹಾನಿ', 'ರಾಜನೀತಿ', 'ಜಿಂದಗಿ ನಾ ಮಿಲೇಗಿ ದುಬಾರಾ', ' ಏಕ್ತಾ ಟೈಗರ್', 'ಟೈಗರ್ ಜಿಂದಾ ಹೇ' ಅಂತಹ ಸಿನಿಮಾಗಳು ಸ್ಟಾರ್ ಪಟ್ಟ ತಂದುಕೊಟ್ಟಿವೆ. ಅದೇ ಇನ್ನೊಂದು 'ಶೀಲಾ ಕಿ ಜವಾನಿ' ಅಂತಹ ಹಾಡಿಗೆ ಹೆಜ್ಜೆ ಹಾಕಿದ್ದು ಕೂಡ ಅವರ ವೃತ್ತಿ ಬದುಕಿಗೆ ಕಿಕ್ ಕೊಟ್ಟಿತ್ತು.

ಎರಡು ದಶಕಗಳ ಸಿನಿ ಜರ್ನಿಯಲ್ಲಿ ಕತ್ರಿನಾ ಕೈಫ್ 224 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಸಂಪಾದಿಸಿದ್ದಾರೆ. ನಟನೆ ಬಿಟ್ಟು ಕತ್ರಿನಾ ಕೈಫ್ ಉದ್ಯಮದಲ್ಲೂ ಬ್ಯುಸಿಯಾಗಿದ್ದಾರೆ. ಇವರದ್ದೇ ಕೇ ಬ್ಯೂಟಿ ಅನ್ನುವ ಕಾಸ್ಮೆಟಿಕ್ ಬ್ರ್ಯಾಂಡ್ ಇದೆ. 2019ರಲ್ಲಿ ಫೇಮಸ್ ಬ್ಯೂಟಿ ಬ್ರ್ಯಾಂಡ್ ನೈಕಾ ಜೊತೆ ಸೇರಿಕೊಂಡಿದ್ದರು. ಈ ಮೂಲಕ ಸುಮಾರು 100 ಕೋಟಿ ರೂಪಾಯಿ ಇವರ ಆಸ್ತಿಗೆ ಸೇರಿಕೊಂಡಿತ್ತು. ಸಿನಿಮಾ, ಜಾಹೀರಾತು, ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಎಲ್ಲಾ ಸೇರಿ ವರ್ಷಕ್ಕೆ ಕೋಟಿ ಕೋಟಿ ದುಡಿಯುತ್ತಾರೆ.

ಅನುಷ್ಕಾ ಶರ್ಮಾ

ಮತ್ತೊಬ್ಬ ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಮದುವೆ ಬಳಿಕ ಸಿನಿಮಾಗಳಲ್ಲಿ ನಟಿಸದೇ ಹೋದರೂ ನೂರಾರು ಕೋಟಿ ಆಸ್ತಿ ಒಡತಿ. ಇವರು ಒಂದು ಸಿನಿಮಾಗೆ 13-15 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಾರೆ. ಸಿನಿಮಾಗಳನ್ನು ಹೊರತು ಪಡಿಸಿ ಅನುಷ್ಕಾ ಶರ್ಮಾ ಬಳಿ ಕ್ಲೀನ್ ಸ್ಲೇಟ್ ಫಿಲ್ಮ್ಜ್ ಅನ್ನುವ ಸಿನಿಮಾ ನಿರ್ಮಾಣ ಕಂಪನಿಯಿದೆ. ಆರಂಭದಲ್ಲಿ ಇದನ್ನು ಅನುಷ್ಕಾ ಶರ್ಮಾ ಸಹೋದರ ನೋಡಿಕೊಳ್ಳುತ್ತಿದ್ದರು.

Deepika Padukone Anushka Sharma Katrina Kaif Net Worth in 2024

2022ರಲ್ಲಿ ಈ ಪ್ರೊಡಕ್ಷನ್ ಕಂಪನಿಯಿಂದ ಅನುಷ್ಕಾ ಶರ್ಮಾ ಹೊರಬಂದಿದ್ದರು. ಈಗ ಅನುಷ್ಕಾ ಶರ್ಮಾ 'ನುಷ್' ಅನ್ನುವ ಬ್ರ್ಯಾಂಡ್‌ನ ಮಾಲೀಕರಾಗಿದ್ದಾರೆ. ಅಲ್ಲದೆ ಮಿಂತ್ರಾ, ಪೂಮಾದಂತಹ ಹಲವು ಜನಪ್ರಿಯರ ಬ್ರ್ಯಾಂಡ್‌ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಪತಿ ವಿರಾಟ್ ಕೊಹ್ಲಿ ಬಳಿ ಸಾವಿರ ಕೋಟಿಗಿಂತ ಹೆಚ್ಚು ಆಸ್ತಿ ಇದೆ. ಹಾಗಂತ ಅನುಷ್ಕಾ ಏನು ಕಮ್ಮಿಯಿಲ್ಲ. ಈಕೆಯ ಬಳಿಕ 306 ಕೋಟಿ ರೂಪಾಯಿ ಆಸ್ತಿಯಿದೆ ಎಂದು ಕೊಯ್‌ಮೊಯ್ ವರದಿ ಮಾಡಿದೆ.

ದೀಪಿಕಾ ಪಡುಕೋಣೆ

ಕರ್ನಾಟಕದ ಬ್ಯೂಟಿ ದೀಪಿಕಾ ಪಡುಕೋಣೆ ಸದ್ಯ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ. 'ಪಠಾಣ್', 'ಜವಾನ್' ಅಂತಹ ಸಿನಿಮಾಗಳಲ್ಲಿ ನಟಿಸಿ ಮತ್ತೆ ಟಾಪ್‌ನಲ್ಲಿದ್ದಾರೆ. ನಟನೆ ಜೊತೆಗೆ ದೀಪಿಕಾ ಪಡುಕೋಣೆ ಉದ್ಯಮಿ ಕೂಡ ಹೌದು. ಇತ್ತೀಚೆಗೆ ಅವರದ್ದೇ ಸೌಂದರ್ಯ ವರ್ಧಕ ಉತ್ಪನ್ನ 82 ಈಸ್ಟ್ ಅನ್ನು ಲಾಂಚ್ ಮಾಡಿದ್ದರು. ಇಷ್ಟೇ ಅಲ್ಲದೆ ಎಪಿಗಾಮಿಯಾ, ಫರ್ಲೆಂಕೊ, ಬ್ಲೂ ಸ್ಮಾರ್ಟ್ ಮತ್ತು ನುವಾದಂತಹ ಬ್ರ್ಯಾಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.

Deepika Padukone Anushka Sharma Katrina Kaif Net Worth in 2024

ಸಿನಿಮಾ ಹಾಗೂ ಉದ್ಯಮಗಳಿಂದ ದೀಪಿಕಾ ಪಡುಕೋಣೆ ಸುಮಾರು 500 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ. ಕತ್ರಿನಾ ಕೈಫ್, ಅನುಷ್ಕಾ ಶೆಟ್ಟಿಗಿಂತ ದೀಪಿಕಾ ಪಡುಕೋಣೆ ಅತೀ ಹೆಚ್ಚು ಆಸ್ತಿ ಹೊಂದಿದ್ದಾರೆ. ಅಲ್ಲದೆ ಮದುವೆ ಬಳಿಕವೂ ದೀಪಿಕಾ ಪಡುಕೋಣೆ ಸಿನಿಮಾಗಳಲ್ಲಿ ಆಕ್ಟಿವ್ ಆಗಿದ್ದು, 2024ರಲ್ಲಿ ತಮ್ಮ ಆಸ್ತಿಗೆ ಮತ್ತಷ್ಟು ಹಣ ಸೇರಿಸಿಕೊಳ್ಳುವ ಸಾಧ್ಯತೆಯಿದೆ.

More from Filmibeat

English summary
Bollywood beuties Deepika Padukone, Anushka Sharma, Katrina Kaif Net Worth in 2024:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X