ಟೈಗರ್ ಪ್ರಭಾಕರ್ ಕಾಲಿಗೆ ದನದ ಮಾಂಸ ಕಟ್ಟಿದ್ರಾ? ಕಾಲು ಹುಳ ತಿನ್ನುತ್ತಿತ್ತಾ? ಸರಿಗಮ ವಿಜಿ ಬಿಚ್ಚಿಟ್ಟ ಸತ್ಯವೇನು?

ಕನ್ನಡ ಚಿತ್ರರಂಗದ ಲೆಜೆಂಡರಿ ಆಕ್ಟರ್ ಟೈಗರ್ ಪ್ರಭಾಕರ್. ಸಿನಿಮಾಗಳಲ್ಲಿ ಸ್ಟಂಟ್ ಮಾಡುತ್ತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಪ್ರಭಾಕರ್, ಮುಂದೆ ಕನ್ನಡ ಚಿತ್ರರಂಗದ ಮೇರು ನಟನಾಗಿ ಮರೆದಿದ್ದರು. ಆಕ್ಷನ್ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದ ಟೈಗರ್ ಪ್ರಭಾಕರ್ ಅವರನ್ನು ಮರೆಯೋಕೆ ಸಾಧ್ಯವೇ ಇಲ್ಲ. ಹಂತ ಹಂತವಾಗಿ ಬೆಳೆದು ಬಂದಿದ್ದ ನಟನ ಅಂತ್ಯ ಮಾತ್ರ ಕಣ್ಣಲ್ಲಿ ನೀರು ತರಿಸುತ್ತೆ.

ಟೈಗರ್ ಪ್ರಭಾಕರ್ ಕೇವಲ ನಟನಷ್ಟೇ ಅಲ್ಲ. ಅವರೊಬ್ಬ ತಂತ್ರಜ್ಞರಾಗಿಯೂ ಗೆದ್ದವರು. ವೃತ್ತಿ ಬದುಕಿನಲ್ಲಿ ಯಶಸ್ಸಿನ ಹಂತಕ್ಕೆ ಹೋದ್ಮೇಲೆ ಅವರೇ ನಿರ್ದೇಶನಕ್ಕೂ ಇಳಿದಿದ್ದರು. ಆಗ ಅವರಿಗೆ ಸಹಾಯಕರಾಗಿ ನಿಂತಿದ್ದು ಸರಿಗಮ ವಿಜಿ. ಸ್ವತ: ನಿರ್ದೇಶಕರಾಗಿದ್ದರೂ, ಟೈಗರ್ ಪ್ರಭಾಕರ್‌ಗೆ ಆತ್ಮೀಯರಾಗಿದ್ದ ಸರಿಗಮ ವಿಜಿ ಅವರ ಆಗು ಹೋಗುಗಳನ್ನು ಕಣ್ಣಾರೆ ನೋಡಿದ್ದಾರೆ.

 Did Tiger Prabhakar had tied beef meat to his leg? Sarigama Viji revealed the truth

ಟೈಗರ್ ಪ್ರಭಾಕರ್ ಕೊನೆಯ ದಿನಗಳಲ್ಲಿ ಕಾಲು ಸಮಸ್ಯೆ ಕೊಟ್ಟಿತ್ತು. ಆರಂಭದ ದಿನಗಳಲ್ಲಿ ಸಿನಿಮಾದಲ್ಲಿ ಆಕ್ಷನ್ ಮಾಡುವಾಗ ಪೆಟ್ಟು ಮಾಡಿಕೊಂಡಿದ್ದರು. ಅಲ್ಲಿಂದ ಅವರಿಗೆ ಕಾಲು ನೋವು ಕಾಡುತ್ತಲೇ ಇತ್ತು. ಕೊನೆಯ ದಿನಗಳಲ್ಲಿ ಅವರ ಕಾಲು ಗ್ಯಾಂಗ್ರೀನ್ ಸ್ವರೂಪ ಪಡೆದುಕೊಂಡಿತ್ತು. ಈ ಮೇರು ನಟನ ಸಾವಿನ ಬಳಿಕ ಕಾಲಿನ ವಿಚಾರವಾಗಿಯೇ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಪ್ರಭಾಕರ್ ಕಾಲನ್ನು ಹುಳ ತಿಂದಿತ್ತು. ದನದ ಮಾಂಸ ಕಟ್ಟಿದ್ದರು ಅಂತೆಲ್ಲ ಸುದ್ದಿ ಹಂಬಿತ್ತು. ಅದಕ್ಕೀಗ ಸರಿಗಮ ವಿಜಿ ಪ್ರತಿಕ್ರಿಯೆ ನೀಡಿದ್ದಾರೆ.

ಆ ಸಿನಿಮಾ ವೇಳೆ ನೀರಿನಲ್ಲಿ ಮುಳುಗಿದ್ದ ಪ್ರಭಾಕರ್

ಟೈಗರ್ ಪ್ರಭಾಕರ್ ಕಾಲುಗಳಿಗೆ ದನದ ಮಾಂಸ ಕಟ್ಟಿತ್ತಿದ್ದರೇ...? ಈ ಪ್ರಶ್ನೆಗೆ ಉತ್ತರ ತಿಳಿಯುವ ಮುನ್ನ ಇನ್ನೊಂದು ಇಂಟ್ರೆಸ್ಟಿಂಗ್ ಘಟನೆಯಿದೆ. 'ಮಿಸ್ಟರ್ ಮಹೇಶ್ ಕುಮಾರ್' ಅನ್ನುವ ಸಿನಿಮಾ ಮಾಡುವಾಗ ಟೈಗರ್ ಪ್ರಭಾಕರ್ ನೀರಿನಲ್ಲಿ ಮುಳುಗಿ ಹೋಗಿದ್ದರು. ಆ ಘಟನೆಯನ್ನು ಸರಿಗಮ ವಿಜಿ ವಿವರಿಸಿದ್ದಾರೆ. ಆರ್‌ಆರ್ ನಗರದಲ್ಲಿದ್ದ ಬೆಸ್ಟ್‌ ಕ್ಲಬ್‌ನಲ್ಲಿ ಮಿಸ್ಟರ್ ಮಹೇಶ್ ಕುಮಾರ್ ಅನ್ನು ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಅದರಲ್ಲಿ ಕೆರೆಯಂತಹ ಒಂದು ಪೂಲ್ ಅನ್ನು ಸೃಷ್ಟಿ ಮಾಡಲಾಗಿತ್ತು. ಸಾಂಗ್‌ನಲ್ಲಿ ಒಂದು ಬಿಟ್ ತೆಗೆಯಲು ಮಂಟಪ ಕಟ್ಟಿ ಮಾಡಿದ್ದೆವು. ಹೀರೊ ಹಾಗೂ ಹೀರೊಯಿನ್ ಇಬ್ಬರೂ ಆ ಕಡೆ ಈ ಕಡೆ ನಿಂತು ಹಾಡಬೇಕಿತ್ತು. ಇಬ್ಬರೂ ಮಧ್ಯೆ ಬಂದ ಕೂಡಲೇ ಆ ಮಂಟಪ ಮುಳುಗಿ ಹೋಯ್ತು. ಟೈಗರ್ ಪ್ರಭಾಕರ್‌ಗೂ ಈಜು ಬರೋದಿಲ್ಲ. ನಾಯಕಿಗೂ ಈಜು ಬರುತ್ತಿರಲಿಲ್ಲ.

 Did Tiger Prabhakar had tied beef meat to his leg? Sarigama Viji revealed the truth

"ಪ್ರಭಾಕರ್ ಅಷ್ಟು ದೊಡ್ಡವರಿದ್ದರೂ ಈಜು ಬರುತ್ತಿರಲಿಲ್ಲ. ಓ.. ಅಂತಿದ್ದಾರೆ.. ನಮಗೆ ಯಾರಿಗೂ ಗೊತ್ತಿಲ್ಲ. ಮದ್ರಾಸ್‌ನವರು ಎಲ್ಲಾ ಇದ್ದರು. ಅವರು ನೀರಿನೊಳಗೆ ಹೋಗಿ ಎತ್ತಿಕೊಂಡು ಬಂದಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚೆಕಪ್ ಮಾಡಿಸಿ, ಎರಡು ದಿನ ಶೂಟಿಂಗ್ ಕ್ಯಾನ್ಸಲ್ ಮಾಡಿದ್ವಿ" ಎಂದು ಸರಿಗಮ ವಿಜಿ ಎಂದು ಸ್ಪೀಡ್ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.

ಕಾಲಿಗೆ ದನದ ಮಾಂಸ ಕಟ್ಟುತ್ತಿದ್ದರೇ?

ಟೈಗರ್ ಪ್ರಭಾಕರ್ ಕಾಲಿನ ಸಮಸ್ಯೆ ಎದುರಾದಾಗ ಅವರ ಕಾಲಿಗೆ ದನದ ಮಾಂಸ ಕಟ್ಟುತ್ತಿದ್ದರು. ಹುಳ ತಿಂದಿತ್ತು ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಸರಿಗಮ ವಿಜ ಪ್ರತಿಕ್ರಿಯೆ ನೀಡಿದ್ದಾರೆ. "ಅವರ ಕಾಲಿಗೆ ಮಾಂಸ ಕಟ್ಟುತ್ತಾರೆ. ಹುಳ ತಿನ್ನುತ್ತಾವೆ ಅನ್ನೋದೆಲ್ಲ ಸುಳ್ಳು. ನಾನಿದ್ದೆ ಜೊತೆಯಲ್ಲಿ. ಅವರಿಗೆ ಕಾಲಿನಲ್ಲಿ ಹಳ್ಳ ತರ ಬಿದ್ದಿತ್ತು. ಅದಕ್ಕೆ ಅವರು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ, ಸ್ಟಿಚ್ ಹಾಕಿಸಿಕೊಂಡು ಇರಬೇಕಿತ್ತು. ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರೆ, ಪ್ರಭಾಕರ್ ಜಾಗಕ್ಕೆ ಬೇರೆ ಯಾರೋ ಫೈಟರ್ ಬಂದು ಬಿಡುತ್ತಾರೆ ಅಂತ ಅದರಲ್ಲೇ ಹೋಗಿ ಫೈಟ್ ಮಾಡೋರು. " ಎಂದು ಟೈಗರ್ ಪ್ರಭಾಕರ್ ಕಾಲಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಹಾಗೇ... " ಪ್ಯಾಡ್‌ಗೆ ಔಷದಿ ಹಾಕಿಕೊಂಡು ಇವರೇ ಬ್ಯಾಂಡೇಜ್ ಕಟ್ಟಿಕೊಂಡು ಹಾಗೇ ಫೈಟ್ ಮಾಡೋರು. ಅವರೇ ಕಟ್ಟಿಕೊಂಡು ಫೈಟ್ ಮಾಡೋರು. ಡಾಕ್ಟರ್ ಕೂಡ ಇಲ್ಲ. ನಾನು ನೋಡಿದ್ದೇನೆ. ನನ್ನ ಕಣ್ಣಮುಂದೆನೇ ಅವರು ಔಷಧಿ ಹಾಕಿ ಕಟ್ಟಿದ್ದಾರೆ. ಸುಮ್ಮನೆ ಹೇಳ್ತಾರೆ. ಯಾರೋ ಮಾಂಸ ಕಟ್ಟಿದ್ದರು. ಹುಳ ಇದೆ ಅನ್ನೋದೆಲ್ಲ ಸುಳ್ಳು. ಅವರ ಜೊತೆ ನಾನಿದ್ದೆ. ಕಣ್ಣಾರೆ ನಾನು ನೋಡಿದ್ದೇನೆ. ಅವರು ಹತ್ತಿ ತೆಗೆದುಕೊಂಡು ಕ್ಲೀನ್ ಮಾಡೋದು, ಔಷಧಿ ಹಚ್ಚೋದು, ಬ್ಯಾಂಡೇಜ್ ಹಾಕೋದನ್ನು ನೋಡಿದ್ದೇನೆ." ಎಂದು ಊಹಾ ಪೋಹಗಳಿಗೆ ತೆರೆ ಎಳೆದಿದ್ದಾರೆ.

More from Filmibeat

English summary
Sarigama Viji revealed the truth about Tiger Prabhakar leg
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X