ದಿನಕರ್ ಜನ್ಮ ದಿನ ಕೇಳಿ 'ಸಾರಥಿ' ಭವಿಷ್ಯ ನುಡಿದಿದ್ದ ಜಗ್ಗೇಶ್: ಅಂದು ಏನಂದಿದ್ರು ಜಗ್ಗಣ್ಣ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿ ಬದುಕಿನಲ್ಲಿ ಮರೆಯಲಾಗದ ಸಿನಿಮಾ 'ಸಾರಥಿ'. ಈ ಸಿನಿಮಾ ಗೆಲ್ಲದೇ ಹೋಗಿದ್ದರೆ, ದರ್ಶನ್ ಭವಿಷ್ಯ ಮುಗಿದೇ ಹೋಗುತ್ತೆಅಂತ ಸ್ಯಾಂಡಲ್‌ವುಡ್ ಮಂದಿ ಭವಿಷ್ಯ ನುಡಿದಿದ್ದರು. ಆ ಸಿನಿಮಾವನ್ನು ದರ್ಶನ್ ಸಹೋದರ ದಿನಕರ್ ತೂಗುದೀಪ್ ನಿರ್ದೇಶನ ಮಾಡುತ್ತಿದ್ದರು.

ಹೀಗಾಗಿ ಒಂದು ಸಿನಿಮಾದಲ್ಲಿ ಇಬ್ಬರ ಭವಿಷ್ಯ ಅಡಗಿತ್ತು. 'ಸಾರಥಿ' ಸಿನಿಮಾ ವೇಳೆ ದರ್ಶನ್ ಸಾಂಸಾರಿಕ ಜೀವನದಲ್ಲಿ ಸಮಸ್ಯೆಯಾಗಿತ್ತು. ಹೀಗಾಗಿ ದರ್ಶನ್ ಕೆಲವು ದಿನಗಳ ಕಾಲ ಜೈಲಿನಲ್ಲಿ ಇರಬೇಕಾಗಿತ್ತು. ಆ ವೇಳೆ ದರ್ಶನ್ ವೃತ್ತಿ ಬದುಕು ಮುಗಿದೇ ಹೋಯ್ತು ಅಂತ ಬಹಳಷ್ಟು ಮಂದಿ ಮಾತಾಡಿಕೊಂಡಿದ್ದರು.

Dinakar remembers Jaggesh s words that Sarathi movie will become a hit when Darshan was arrested

ಇತ್ತ ದಿನಕರ್ ತೂಗುದೀಪ ಆ ಸಂಕಷ್ಟದ ಸಮಯದಲ್ಲಿಯೇ 'ಸಾರಥಿ' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಆ ವೇಳೆ ಅಚಾನಕ್ ಆಗಿ ಎದುರಾಗಿದ್ದ ನವರಸ ನಾಯಕ ಜಗ್ಗೇಶ್ ಸಿನಿಮಾ ಬಗ್ಗೆ ಭವಿಷ್ಯ ನುಡಿದಿದ್ದರು. ಹಾಗಂತ ಅವರು ಸಿನಿಮಾ ನೋಡಿರಲಿಲ್ಲ. ದಿನಕರ್ ತೂಗುದೀಪ ಅವರ ಜನ್ಮ ದಿನಾಂಕವನ್ನು ನೋಡಿ ಸಿನಿಮಾ ಬಗ್ಗೆ ಒಂದು ಮಾತು ಹೇಳಿಕೊಂಡಿದ್ದರು. ಆ ಮಾತನ್ನು ದಿನಕರ್ ಫಿಲ್ಮಿ ಫಸ್ಟ್ ಯೂಟ್ಯೂನ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

'ಸಾರಥಿ' ಸಿನಿಮಾ ದರ್ಶನ್ ವೃತ್ತಿ ಬದುಕಿಗೆ ಅತೀ ದೊಡ್ಡ ಟರ್ನಿಂಗ್ ಪಾಯಿಂಟ್ ಕೊಟ್ಟ ಸಿನಿಮಾ. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು ಈಗ ಇತಿಹಾಸ. ಆದರೆ, ಆ ಸಮಯದಲ್ಲಿ ಈ ಸಿನಿಮಾದ ಭವಿಷ್ಯ ಏನು ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಅದೇ ಸಮಯದಲ್ಲಿ ನಿರ್ದೇಶಕ ದಿನಕರ್‌ಗೆ ಜಗ್ಗೇಶ್ ಭರವಸೆಯ ಮಾತುಗಳನ್ನು ಆಡಿದ್ದರು.

"ರೇಣುಕಾಂಬ ಸ್ಟುಡಿಯೋದಲ್ಲಿ ಸಾರಥಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾಡುತ್ತಿದ್ದೆ. ಅಲ್ಲಿ ಜಗ್ಗೇಶ್ ಸಿಕ್ಕಿದ್ದರು. ಅಲ್ಲಿ ಅವರು ದಿನಾಕರ್ ನಿನ್ನ ಡೇಟ್ ಆಫ್ ಬರ್ತ್‌ ಏನು ಅಂತ ಕೇಳಿದ್ದರು. ನಾನು ಅಣ್ಣ ಸೆಪ್ಟೆಂಬರ್ 21ನೇ ತಾರೀಕು ಅಂತ ಹೇಳಿದೆ. ಕಣ್ಮುಚ್ಚಿಕೊಂಡು ಸಿನಿಮಾ ಸೂಪರ್ ಹಿಟ್ ಆಗುತ್ತೆ ಹೋಗು ಅಂತ ಹೇಳಿದ್ರು." ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.

Dinakar remembers Jaggesh s words that Sarathi movie will become a hit when Darshan was arrested

'ಸಾರಥಿ' ಸೂಪರ್ ಹಿಟ್ ಆಗುತ್ತೆ ಅಂತ ಜಗ್ಗೇಶ್ ಹೇಳುತ್ತಿದ್ದಂತೆ ದಿನಕರ್ ಅಚ್ಚರಿ ವ್ಯಕ್ತಪಡಿಸಿದ್ದರು. "ಏನು ಅಣ್ಣ ಹೀಗೆ ಹೇಳುತ್ತಿದ್ದೀರಾ ಅಂದೆ. ಇಲ್ಲ ಆಗತ್ತೆ ಹೋಗುತ್ತೆ ಹೋಗು. ಆಗದೇ ಇದ್ದಾಗ ಬಂದು ನನಗೆ ಪ್ರಶ್ನೆ ಕೇಳು ಅಂದಿದ್ದರು. ಸಿನಿಮಾ ಹಿಟ್ ಆಗಿ ಹೋಯ್ತು. ಅವರಿಗೆ ಪ್ರಶ್ನೆ ಕೇಳುವ ಪ್ರಮೇಯವೇ ಬಂದಿಲ್ಲ." ಎಂದು ಆ ದಿನವನ್ನು ಜಗ್ಗೇಶ್ ನೆನಪಿಸಿಕೊಂಡಿದ್ದಾರೆ.

ಒಂದ್ವೇಳೆ ದರ್ಶನ್ 'ಸಾರಥಿ' ಸಿನಿಮಾ ಸೋತಿದ್ದರೆ, ಮತ್ತೆ ಜೀರೊದಿಂದ ಶುರು ಮಾಡಬೇಕಿತ್ತು. ಅಲ್ಲಿವರೆಗೂ ಗಳಿಸಿದ್ದ ಖ್ಯಾತಿ ಎಲ್ಲಾ ನೀರು ಪಾಲಾಗುತ್ತಿತ್ತು. "ಅದೇ ಹೇಳಿದ್ನಲ್ಲ ಅವನು ಏನೂ ಡಿಸೈಡ್ ಮಾಡೋದಿಲ್ಲ. ಹೇಗೆ ಬರುತ್ತೋ ಹಾಗೇ ಹೋಗುತ್ತಿರುತ್ತಾನೆ. ಮತ್ತೆ ಅವನ ಮನಸ್ಸಿಗೆ ಏನು ಅನಿಸುತ್ತೋ ಅದನ್ನು ಹೇಳುತ್ತಾನೆ. ಬೇರೆಯವರ ಹತ್ತಿರ ಹೇಳುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೆ, ನವಗ್ರಹ, ಸಾರಥಿ ಮಾಡುವ ಹೊತ್ತಲ್ಲಿ ಶಾಟ್ ಹೀಗೆ ತೆಗೆದರೆ ಚೆನ್ನಾಗಿರುತ್ತೆ ಅಂತ ನನ್ನ ಬಳಿ ಹೇಳುತ್ತಿದ್ದ. ಬೇರೆಯವರ ಬಳಿ ಅವನು ಸ್ಕ್ರಿಪ್ಟ್‌ ಬಗ್ಗೆ ಮಾತಾಡೋದಿಲ್ಲ." ಎಂದಿದ್ದಾರೆ.

More from Filmibeat

English summary
Dinakar Thoogudeepa about Jaggesh words on Sarathi movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X