Sandalwood 2023: ರಿಲೀಸ್ 179 ಸಿನಿಮಾ.. ಗೆದ್ದಿದ್ದು ಕೆಲವೇ ಕೆಲವು.. ₹200 ಕೋಟಿ ವಹಿವಾಟಿಗೂ ಪರದಾಟ!

2022 ಕನ್ನಡ ಚಿತ್ರರಂಗದ ಪಾಲಿಗೆ ಗೋಲ್ಡನ್ ಇಯರ್. ಪ್ಯಾನ್ ಇಂಡಿಯಾ ಸಿನಿಮಾಗಳು ಎಲ್ಲಾ ಚಿತ್ರರಂಗಕ್ಕೂ ಟಕ್ಕರ್ ಕೊಟ್ಟು ಮುನ್ನುಗ್ಗಿದ್ದವು. 'ಕೆಜಿಎಫ್ ಚಾಪ್ಟರ್ 2', 'ಕಾಂತಾರ', '777 ಚಾರ್ಲಿ', 'ವಿಕ್ರಾಂತ್ ರೋಣ', 'ಜೇಮ್ಸ್' ಅಂತಹ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗುಡುಗಿದ್ದವು.

ಅದರಲ್ಲೂ 'ಕೆಜಿಎಫ್ 2' ಹಾಗೂ 'ಕಾಂತಾರ' ಸಿನಿಮಾಗಳನ್ನು ಬಾಕ್ಸಾಫೀಸ್‌ನಲ್ಲಿ ಒಂದೊಂದೇ ದಾಖಲೆಗಳನ್ನು ಉಡೀಸ್ ಮಾಡಿದ್ದವು. ಆದರೆ, 2023ರಲ್ಲಿ ಒಂದೇ ಒಂದು ಮೆಗಾ ಹಿಟ್ ಕೊಡುವುದಕ್ಕೂ ಪರದಾಡುವಂತಹ ಸ್ಥಿತಿ ಇದೆ. ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ ಚಿತ್ರರಂಗ ಒಂದೇ ವರ್ಷದಲ್ಲಿ ನೆಲಕ್ಚಿದ್ದು ಹೇಗೆ?

Disaster year for the Kannada film industry: out of 179 movies, only 5 are on the hit list

ಕನ್ನಡ ಚಿತ್ರರಂಗಕ್ಕೆ ಹೊಸ ಮಾರ್ಕೆಟ್ ಹುಟ್ಟಾಕಿದ್ದ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳಿಂದಲೇ ಹೀಗಾಯ್ತಾ? ಇಂತಹದ್ದೊಂದು ಕೂಗು ಕನ್ನಡ ಚಿತ್ರರಂಗದಲ್ಲಿ ಇದೆ. 2022ರಲ್ಲಿ ತೆರೆಕಂಡ ಪ್ಯಾನ್ ಇಂಡಿಯಾ ಸಿನಿಮಾಗಳು ದೊಡ್ಡ ಮಟ್ಟಕ್ಕೆ ಸದ್ದು ಮಾಡಿಲ್ಲ. ಬಿಡುಗಡೆಯಾದ ಸಿನಿಮಾಗಳು ಕರ್ನಾಟಕ ಬಾಕ್ಸಾಫೀಸ್‌ನಲ್ಲೂ ಗೆದ್ದಿಲ್ಲ. ಹಾಗಿದ್ದರೆ, ಇದೂವರೆಗೂ ರಿಲೀಸ್ ಆದ 179 ಸಿನಿಮಾಗಳಲ್ಲಿ ಗೆದ್ದಿದ್ದೆಷ್ಟು? ಬಾಕ್ಸಾಫೀಸ್ ವಹಿವಾಟು ಏನು? ಯಾಕೆ ಹೀಗಾಯ್ತು? ತಿಳಿಯೋಕೆ ಮುಂದೆ ಓದಿ...

ಇದೂವರೆಗೂ 179 ಸಿನಿಮಾ ರಿಲೀಸ್

ಇನ್ನು ಎರಡು ತಿಂಗಳು ಮುಗಿದರೆ, 2023 ಗುಡ್ ಬೈ ಹೇಳುವುದೇ.. ಇನ್ನು ಮುಂದೆ ಏನಾದರೂ ಚಮತ್ಕಾರ ನಡೆಯುತ್ತಾ ಅಂತ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಮುಂದಿನ ಎರಡು ತಿಂಗಳಲ್ಲೂ ಮೆಗಾ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ದೊಡ್ಡದೇನೋ ಜಾದು ನಡೆಯೋದಿಲ್ಲ. 2023ರಲ್ಲಿ ಇದೂವರೆಗೂ ಸುಮಾರು 179 ಸಿನಿಮಾಗಳು ರಿಲೀಸ್ ಆಗಿವೆ. ಇವುಗಳಲ್ಲಿ ಕನಿಷ್ಟ 1% ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಗೆದ್ದಿಲ್ಲ.

2023ಯಲ್ಲಿ ಗೆದ್ದಿದ್ದೆಷ್ಟು ಸಿನಿಮಾ?

2023ಯ 44ನೇ ವಾರ (ನವೆಂಬರ್ 3) ಈ ವಾರ ಕೂಡ ಬರೋಬ್ಬರಿ ಆರು ಸಿನಿಮಾಗಳು ರಿಲೀಸ್ ಆಗಿವೆ. ಅಲ್ಲಿಗೆ ಸುಮಾರು 179 ಸಿನಿಮಾಗಳು ರಿಲೀಸ್ ಆಗಿವೆ. ಇಷ್ಟು ಸಿನಿಮಾಗಳು ರಿಲೀಸ್ ಆದರೂ, ಒಂದೇ ಒಂದು ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿಲ್ಲ. ಇದೂವರೆಗೂ ಹಿಟ್ ಅಂತ ಆಗಿದ್ದು ಬರೀ 5 ಸಿನಿಮಾಗಳು ಅಷ್ಟೇ.. ಈ ವರ್ಷ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಮೊದಲ ಹಿಟ್ ಕೊಟ್ಟ ಸಿನಿಮಾ. 'ಕೌಸಲ್ಯ ಸುಪ್ರಜಾ ರಾಮ', 'ಸಪ್ತ ಸಾಗರದಾಚೆ ಎಲ್ಲೋ', 'ಘೋಸ್ಟ್' ಹಾಗೂ ಇತ್ತೀಚೆಗೆ ರಿಲೀಸ್ ಆಗಿರೋ 'ಟಗರು ಪಲ್ಯ' ಪ್ರಾಮಿಸಿಂಗ್ ರಿಸಲ್ಟ್ ಕೊಟ್ಟಿದೆ.

Disaster year for the Kannada film industry: out of 179 movies, only 5 are on the hit list

ಈ ವರ್ಷದ ವಹಿವಾಟು ಎಷ್ಟು?

ಟ್ರೇಡ್ ಎಕ್ಸ್‌ಪರ್ಟ್‌ ಪ್ರಕಾರ, 2023ಯಲ್ಲಿ 174 ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತಿವೆ. ಕೆಲವು ಸಿನಿಮಾಗಳಿಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದರೂ, ಹಣ ಗಳಿಕೆಯಲ್ಲಿ ಸೋತಿವೆ. ವಿಶೇಷ ಅಂದರೆ, ಬಾಕ್ಸಾಫೀಸ್‌ನಲ್ಲಿ ಲಾಭ ಮಾಡಿದ 5 ಸಿನಿಮಾಗಳ ಒಟ್ಟು ಕಲೆಕ್ಷನ್ 200 ಕೋಟಿ ರೂಪಾಯಿನೂ ದಾಟೋದಿಲ್ಲ ಅಂತಾರೆ ವಿತರಕರು. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' 25 ಕೋಟಿ ರೂಪಾಯಿ, 'ಕೌಸಲ್ಯ ಸುಪ್ರಜ ರಾಮ' 15 ಕೋಟಿ ರೂಪಾಯಿ, 'ಸಪ್ತ ಸಾಗರದಾಚೆ ಎಲ್ಲೋ' 15 ರಿಂದ 20 ಕೋಟಿ ರೂಪಾಯಿ, 'ಘೋಸ್ಟ್' 20 ಕೋಟಿ ರೂಪಾಯಿ ಹಾಗೂ 'ಟಗರು ಪಲ್ಯ' ಕಲೆಕ್ಷನ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಬೇಕಿದೆ. ಇವೆಲ್ಲವನ್ನೂ ಸೇರಿಸಿದರೆ ಗೆದ್ದ ಸಿನಿಮಾಗಳ ಒಟ್ಟು ಕಲೆಕ್ಷನ್ 80 ರಿಂದ 85 ಕೋಟಿ ರೂಪಾಯಿ ಕಲೆಕ್ಷನ್ ಆಗಿರಬಹುದು ಎಂಬುದು ವಿತರಕರ ಲೆಕ್ಕಾಚಾರ.

2 ತಿಂಗಳಲ್ಲಿ ಚಮತ್ಕಾರ ನಡೆಯುತ್ತಾ?

179 ಸಿನಿಮಾಗಳಲ್ಲಿ 5 ಸಿನಿಮಾಗಳನ್ನು ಬಿಟ್ಟರೆ ಉಳಿದ ಸಿನಿಮಾಗಳು ಇವುಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿದ್ದರೂ, ಅಸಲು ಗಳಸುವಲ್ಲಿ ಹಿಂದೆ ಬಿದ್ದಿವೆ. ನವೆಂಬರ್ ತಿಂಗಳಲ್ಲಿ 'ಗರಡಿ', 'ಬ್ಯಾಡ್ ಮ್ಯಾನರ್ಸ್', 'ಸಪ್ತ ಸಾಗರದಾಚೆ ಎಲ್ಲೋ-ಸೈಡ್ ಬಿ' ಸಿನಿಮಾಗಳು ರಿಲೀಸ್ ಆಗಬೇಕಿದೆ. ಈ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಏನಾದರೂ ಜಾದು ಮಾಡಿದರೆ, ಸಕ್ಸಸ್ ಲಿಸ್ಟ್‌ಗೆ ಮತ್ತೊಂದಿಷ್ಟು ಸೇರಿಕೊಳ್ಳಬಹುದು. ಇಲ್ಲದೆ ಹೋದರೆ ಈ ವರ್ಷವನ್ನು ಡ್ರೈ ಎಂದು ಪರಿಗಣಿಸಬೇಕಾಗುತ್ತೆ.

ಪ್ಯಾನ್ ಇಂಡಿಯಾ ಎಫೆಕ್ಟ್?

ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಗೆದ್ದ ಕನ್ನಡದ ತಾರೆಯರಲ್ಲಿ ರಕ್ಷಿತ್ ಬಿಟ್ಟರೆ, ಉಳಿದವರ ಒಂದೇ ಒಂದು ಸಿನಿಮಾ ಈ ವರ್ಷ ರಿಲೀಸ್ ಆಗಿಲ್ಲ. ಕಿಚ್ಚ ಸುದೀಪ್ ಸಿನಿಮಾ ಮಾತ್ರ ಅನೌನ್ಸ್ ಆಗಿದೆ. ಅದು ಬಿಟ್ಟರೆ, ಯಶ್, ರಿಷಬ್ ಶೆಟ್ಟಿ ಸಿನಿಮಾಗಳ ಪ್ರೀ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದರೂ, ಅನೌನ್ಸ್ ಮಾಡಿಲ್ಲ. ಹೊಸ ವರ್ಷಕ್ಕೆ ಸಿನಿಮಾ ಅನೌನ್ಸ್ ಆದರೂ, ಮುಂದಿನ ವರ್ಷಕ್ಕೆ ಸಿನಿಮಾ ರಿಲೀಸ್ ಆಗೋದೂ ಕೂಡ ಅನುಮಾನವೇ.. 2024 ಕೂಡ 2023ರ ಹಾದಿಯನ್ನೇ ಹಿಡಿಯುತ್ತಾ ಅನ್ನೋ ಆತಂಕವಿದೆ.

More from Filmibeat

English summary
Disaster year for the Kannada film industry:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X