'ಜನುಮದ ಜೋಡಿ'ಗೆ ಹಂಸಲೇಖ ಮ್ಯೂಸಿಕ್ ಮಾಡಲ್ಲ ಎಂದಿದ್ದೇಕೆ? ವಿ. ಮನೋಹರ್ ಹೇಗೆ ಅವಕಾಶ ಸಿಕ್ತು?

ಶಿವರಾಜ್‌ಕುಮಾರ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾಗಳಲ್ಲಿ 'ಜನುಮದ ಜೋಡಿ' ಕೂಡ ಒಂದು. ಪಕ್ಕಾ ಹಳ್ಳಿ ಸೊಗಡಿನ ಈ ಸಿನಿಮಾವನ್ನು ಹಿರಿಯ ನಿರ್ದೇಶಕ ನಾಗಾಭರಣ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಸೂಪರ್ ಹಿಟ್ ಎಂದು ಸಾಬೀತಾಗಿತ್ತು. ಇಂದಿಗೂ ಈ ಸಿನಿಮಾದ ಹಾಡು ಸಂಗೀತ ಪ್ರಿಯರ ಕಿವಿಯಲ್ಲಿ ಗುನುಗುತ್ತಿವೆ.

'ಓಂ' ಸಿನಿಮಾ ಬಂದಿದ್ದಂತಹ ಕಾಲವದು. ಈ ಸಿನಿಮಾ ರಿಲೀಸ್ ಆಗಿ ಕೇವಲ ಒಂದು ವರ್ಷ ಆಗಿತ್ತಷ್ಟೇ. ಇದೇ ವೇಳೆ ಶಿವಣ್ಣ ಹಾಗೂ ಹಂಸಲೇಖ ಕಾಂಬಿನೇಷನ್ ಹಿಟ್ ಆಗಿತ್ತು. ಹೀಗಾಗಿ ನಾಗಾಭರಣ ನಿರ್ದೇಶನ ಮಾಡುತ್ತಿರುವ 'ಜನುಮದ ಜೋಡಿ' ಸಿನಿಮಾಗೂ ನಾದಬ್ರಹ್ಮನೇ ಟ್ಯೂನ್ ಹಾಕಬೇಕು ಅಂತ್ತಿತ್ತು.

Discover why Hamsalekha declined Shivarajkumar Janumada Jodi movie went to V Manohar

ಇಂತಹ ಸಂದರ್ಭದಲ್ಲಿ ಹಂಸಲೇಖ ಜನುಮದ 'ಜೋಡಿ' ಅಂತಹ ಸಿನಿಮಾಗೆ ಟ್ಯೂನ್ ಮಾಡೋದಿಲ್ಲ ಅಂತ ಹೇಳಿದ್ದರು. ಹೀಗಾಗಿ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಬೇರೊಬ್ಬ ಸಂಗೀತ ನಿರ್ದೇಶಕನ ಹುಡುಕಾಟದಲ್ಲಿದ್ದರು. ಆ ಅದೃಷ್ಟ ಸಂಗೀತ ನಿರ್ದೇಶಕ ವಿ.ಮನೋಹರ್ ಪಾಲಾಯ್ತು. ಈ ಸ್ವಾರಸ್ಯಕರ ಸಂಗತಿಯನ್ನು ವಿ. ಮನೋಹರ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಹಂಸಲೇಖ ಹಾಗೂ ಶಿವಣ್ಣ ಕಾಂಬಿನೇಷನ್‌ನಲ್ಲಿ ಬಂದಿದ್ದ ಸಿನಿಮಾದ ಹಾಡುಗಳು ಹಿಟ್ ಆಗಿದ್ದವು. ಅದರಲ್ಲೂ 'ಜನುಮದ ಜೋಡಿ' ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ ಆಗಿತ್ತು. ಹೀಗಾಗಿ ಹಂಸಲೇಖ ಸಂಗೀತ ನೀಡಿದರೇ ಸೂಕ್ತ ಎಂದಾಗಿತ್ತು. ಆದರೆ, ಹಂಸಲೇಖ ಮಾತ್ರ ಈ ಸಿನಿಮಾಗೆ ಟ್ಯೂನ್ ಹಾಕುವುದಿಲ್ಲ ಎಂದು ಹೇಳಿದ್ದರು.

"ನಾನು ಕೇಳಿದ ಪ್ರಕಾರ, ಮೊದಲ ಹಂಸಲೇಖ ಸರ್ ಆ ಸಿನಿಮಾಗೆ ಮ್ಯೂಸಿಕ್ ಮಾಡಬೇಕಿತ್ತು. ಆ ವೇಳೆ ಹಂಸಲೇಖ ಅವರು ಅವರ ಮಗನನ್ನು ಹಾಕಿಕೊಂಡು ಒಂದು ಸಿನಿಮಾ ಮಾಡುವುದಕ್ಕೆ ಹೊರಟಿದ್ದರು. ಅದುವೇ ಸುಗ್ಗಿ. ಅದೂ ಕೂಡ ಒಂದು ಮ್ಯೂಸಿಕಲ್ ಸಿನಿಮಾ. ಇದೂ ಕೂಡ ಮ್ಯೂಸಿಕಲ್ ಫಿಲ್ಮ್ ಆಗಿತ್ತು." ಎಂದು ವಿ. ಮನೋಹರ್ ಸಂದರ್ಶನದ ವೇಳೆ ಹೇಳಿದ್ದರು.

Discover why Hamsalekha declined Shivarajkumar Janumada Jodi movie went to V Manohar

ಹಂಸಲೇಖ ಆಗೋದೇ ಇಲ್ಲ ಅಂತ ವಿ. ಮನೋಹರ್ ಆಯ್ಕೆಯಾಗಿದ್ದರು. ಆಗ ಹಂಸಲೇಖ ಈ ಸಿನಿಮಾಗೆ ಯಾಕೆ ಮ್ಯೂಸಿಕ್ ಮಾಡುತ್ತಿಲ್ಲ ಅನ್ನೋದನ್ನು ಅಣ್ಣಾವ್ರ ಹೇಳಿದ ಸಂಗತಿಯನ್ನು ವಿ.ಮನೋಹರ್ ರಿವೀಲ್ ಮಾಡಿದ್ದಾರೆ. "ನನಗೆ ಅಣ್ಣಾವ್ರು ಹೇಳಿದ್ದಿದ್ದು. ನನಗೆ ಎರಡೂ ಕಡೆ ಏಕಾಗ್ರತೆಯಿಂದ ಕೆಲಸ ಮಾಡಲು ಆಗುತ್ತಿಲ್ಲ. ನನಗೆ ನನ್ನ ಮಗನ ಸಿನಿಮಾದ ಕೆಲಸ ತುಂಬಾನೇ ಇದೆ. ಇದೊಂದು ಸಿನಿಮಾ ಬಿಟ್ಟುಬಿಡಿ. ಬೇರೆ ಯಾರದ್ದಾದರೂ ಕೈಯಲ್ಲಿ ಮಾಡಿಸಿ ಎಂದು ಹೇಳಿದ್ದರಂತೆ. ಇದಕ್ಕೆ ಬೇರೆ ಬೇರೆ ಕಥೆಗಳಿವೆ. ನನಗೆ ಗೊತ್ತಿದ್ದಿದ್ದು ಇದು." ಎಂದಿದ್ದಾರೆ.

ಹಾಗಾಗಿ ಅಣ್ಣಾವ್ರ ಸಹಾಯಕ ಚೆನ್ನ ಬಂದು ವಿ. ಮನೋಹರ್ ಬರುವಂತೆ ಆಹ್ವಾನ ನೀಡಿದ್ದರು. "ಅಣ್ಣಾವ್ರ ರೈಟ್ ಹ್ಯಾಂಡ್ ಚೆನ್ನ ಅಂತ. ಅವರು ಸಂಕೇತ್ ಸ್ಟುಡಿಯೋಗೆ ಹೇಳಿ ಕಳುಹಿಸಿದ್ದರು. ಜನುಮದ ಜೋಡಿ ಅಂತ ಸಿನಿಮಾ ಆಗುತ್ತಿದೆ. ಅದಕ್ಕೆ ನೀವು ಸಿನಿಮಾ ಮಾಡಬೇಕು ಅಂದರು. ಹೋದರೆ, ಅಲ್ಲಿ ಬರಗೂರು ಸರ್ ಇದ್ದರು, ನಾಗಾಭರಣ ಸರ್ ಇದ್ದರು, ವರದಣ್ಣ, ಅಣ್ಣಾವ್ರು ಇಷ್ಟು ಮಂದಿ ಇದ್ದರು." ಎಂದು ವಿ.ಮನೋಹರ್ ಹೇಳಿದ್ದಾರೆ.

"ನಾಗಾಭರಣ ಸರ್ ಅಲ್ಲಿಂದ ಅವರ ಆಫೀಸ್‌ಗೆ ಕರೆದುಕೊಂಡಿ ಬಂದಿದ್ದರು. ಪೂರ್ತಿ ಕಥೆ ಹೇಳಿದ್ದರು. ನನಗೆ ಆರು ಸಾಂಗ್ ಅಷ್ಟೇ ಹೇಳಿದ್ದರು. ನಾನು ಇನ್ನು ಆರು ಕಡೆ ಹಾಡು ಮಾಡಬಹುದೆಂದು ಗುರುತಿಸಿಕೊಂಡಿದ್ದೆ. ಅದನ್ನು ಹೇಳಿದಾಗ, ಬರೀ ಹಾಡೇ ಮಾಡೋದಾ? ಡೈಲಾಗ್ ಏನೂ ಮಾಡುವುದು ಬೇಡ್ವಾ? ಅವೆಲ್ಲ ಆಗಲ್ಲ ಏಳು ಸಾಂಗ್ ಅಷ್ಟೇ ಅಂದಿದ್ರು" ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.

More from Filmibeat

English summary
Kannada music director Hamsalekha was approached to score for Shivarajkumar's Janumada Jodi but declined, leading to V Manohar taking over the project:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X