'ಹಳ್ಳಿ ಮೇಷ್ಟ್ರು' ನಟಿ ಬಿಂದಿಯಾ ಮದುವೆಯಾಗಿದ್ದು ಯಾರನ್ನು ಗೊತ್ತೆ? ಆತ ಭಾರತದ ಜನಪ್ರಿಯ ಮಾಜಿ ಕ್ರಿಕೆಟಿಗ!

ದಕ್ಷಿಣ ಭಾರತೀಯರಿಗೆ ಬಿಂದಿಯಾ ಅಂತಲೇ ಫೇಮಸ್. ಅಸಲಿಗೆ ಹೆಸರು ಫರ್ಹೀನ್. ನೋಡುವುದಕ್ಕೆ ಥೇಟ್ ಮಾಧುರಿ ದೀಕ್ಷಿತ್ ಅನ್ನೇ ಹೋಲುತ್ತಿದ್ದ ಈ ನಟಿ, ತಮಿಳು ಮುಸ್ಲಿಂ ಸಮುದಾಯದಲ್ಲಿ ಜನಿಸಿದ್ದರು. ಹಿಂದಿಯ 'ಜನ್ ತೇರೆ ನಾಮ್' ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟು ಗಮನ ಸೆಳೆದಿದ್ದರು. ಈಕೆ ನಟಿಸಿದ ಎರಡನೇ ಸಿನಿಮಾವೇ 'ಹಳ್ಳಿ ಮೇಷ್ಟ್ರು'.

ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸಿದ 'ಹಳ್ಳಿ ಮೇಷ್ಟ್ರು' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 'ಹಳ್ಳಿ ಮೇಷ್ಟ್ರು' ಸಿನಿಮಾದಿಂದ ಬಿಂದಿಯಾ ಆಗಿ ಪರಿಚಯವಾಗಿದ್ದ ನಟಿಯನ್ನು ಕನ್ನಡಿಗರು ಇನ್ನೂ ಮರೆತಿಲ್ಲ. ಈ ಸಿನಿಮಾ ಬಿಂದಿಯಾ ಪಾತ್ರ, ಚೇಷ್ಟೆ, ಎಮೋಷನಲ್ ಸೀನ್‌ಗಳು ಇನ್ನೂ ಕಣ್ಣಿಗೆ ಕಟ್ಟಿದ ಹಾಗೇ ಇದೆ.

Do you know Halli Mestru movie actress Bindiya married to former Indian cricketer Manoj Prabhakar

90ರ ದಶಕದಲ್ಲಿ ಫೇಮಸ್ ಆಗಿದ್ದ ನಟಿ ಬಿಂದಿಯಾ ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ. ಸಿನಿಮಾರಂಗದಲ್ಲಿ ನಟಿಸಿದ್ದು ಕೇವಲ 5 ವರ್ಷಗಳು ಮಾತ್ರ. ಅಷ್ಟರಲ್ಲೇ ಕನ್ನಡದಲ್ಲಿ ಮೂರು ಸಿನಿಮಾ, ತೆಲುಗು, ತಮಿಳು, ಹಾಗೂ ಮಲಯಾಳಂನಲ್ಲಿ ತಲಾ ಒಂದು ಸಿನಿಮಾದಲ್ಲಿ ನಟಿಸಿದ್ದರು. ಹಾಗೇ ಉಳಿದಿದ್ದು ಹಿಂದಿಯಲ್ಲಿಯೇ ನಟಿಸಿದ್ದಾರೆ.

ಕ್ರೇಜಿಸ್ಟಾರ್ ನಟಿಸಿದ 'ಹಳ್ಳಿ ಮೇಷ್ಟ್ರು', ವಿಷ್ಣುದಾದ ಜೊತೆ ನಟಿಸಿದ 'ರಾಯರು ಬಂದರು ಮಾವನ ಮನೆಗೆ' ಹಾಗೂ 'ಶಿವ' ಅನ್ನುವ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಇದರಲ್ಲಿ 'ಹಳ್ಳಿ ಮೇಷ್ಟ್ರು', 'ರಾಯರು ಬಂದರು ಮಾವನ ಮನೆಗೆ' ಸಿನಿಮಾಗಳು ಕನ್ನಡಿಗರಿ ಚಿರಪರಿಚಿತ. ಐದು ವರ್ಷಗಳ ಬಳಿಕ ಚಿತ್ರರಂಗದಿಂದಲೇ ಮರೆಯಾಗಿದ್ದರು. ಬಿಂದಿಯಾ ಎಲ್ಲಿಗೆ ಹೋದರು? ಮದುವೆಯಾದ ಕ್ರಿಕೆಟ್ ಆಟಗಾರ ಯಾರು? ತಿಳಿಯಲು ಮುಂದೆ ಓದಿ..

1992ರಲ್ಲಿ ಫರ್ಹೀನ್ ಊರ್ಫ್ ಬಿಂದಿಯಾ ಹಿಂದಿ ಸಿನಿಮಾ 'ಜಾನ್ ತೇರೆ ನಾಮ್' ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಈ ರೊಮ್ಯಾಂಟಿಕ್ ಡ್ರಾಮಾ ಸಿನಿಪ್ರಿಯರಿಗೆ ಇಷ್ಟ ಆಗಿತ್ತು. ಇಲ್ಲಿಂದ ಐದು ವರ್ಷಗಳ ಕಾಲ ಸುಮಾರು 17 ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ ಚಿತ್ರರಂಗದಿಂದ ದೂರವೇ ಉಳಿದುಬಿಟ್ಟರು. ಅಂದಿನ ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ಮೇಲೆ ಲವ್ ಆಗಿದ್ದೇ ಪ್ರಮುಖ ಕಾರಣ.

Do you know Halli Mestru movie actress Bindiya married to former Indian cricketer Manoj Prabhakar

ಮಾಧುರಿ ದೀಕ್ಷಿತ್ ತದ್ರೂಪಿ ಎನಿಸಿಕೊಂಡಿದ್ದ ಬಿಂದಿಯಾ ಬಾಲಿವುಡ್ ದಿಗ್ಗಜರೊಂದಿಗೆ ನಟಿಸಿದ್ದರು. ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶವಿತ್ತೇನೋ. ಅಷ್ಟರಲ್ಲೇ ಭಾರತೀಯ ಕ್ರಿಕೆಟ್ ತಂಡದ ವಿವಾದಾತ್ಮಕ ಆಟಗಾರ ಮನೋಜ್ ಪ್ರಭಾಕರ್ ಮೇಲೆ ಲವ್ ಆಗಿತ್ತು. ಇಬ್ಬರೂ ಮದುವೆ ಕೂಡ ಆದರು.

ಮನೋಜ್ ಪ್ರಭಾಕರ್‌ಗೆ ಅದಾಗಲೇ ಬಾಲ್ಯದ ಗೆಳತಿ ಸಂಧ್ಯಾರೊಂದಿಗೆ ಮದುವೆ ಆಗಿತ್ತು. ಆದರೆ, ಇಬ್ಬರ ನಡುವೆ ವೈಮನಸ್ಸು ಮೂಡಿದ್ದರಿಂದ ಸಂಧ್ಯಾ ಜೊತೆ ವಿಚ್ಛೇದನ ಪಡೆದಿದ್ದರು. ಇವರಿಗೆ ರೋಹನ್ ಪ್ರಭಾಕರ್ ಎಂಬ ಪುತ್ರನಿದ್ದಾನೆ. ವಿಚ್ಛೇದನದ ಬಳಿಕ ಬಾಲಿವುಡ್ ನಟಿ ಫರ್ಹೀನ್ ಉರ್ಫ್ ಬಿಂದಿಯಾ ಜೊತೆ ಪ್ರೀತಿ ಹುಟ್ಟಿತ್ತು. ಹೀಗಾಗಿ ಈ ಜೋಡಿ 1995ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ರಾಹಿಲ್ ಪ್ರಭಾಕರ್ ಹಾಗೂ ಮಾನವಂಶ್ ಪ್ರಭಾಕರ್ ಅನ್ನುವ ಇಬ್ಬರು ಪುತ್ರರಿದ್ದಾರೆ.

ಫರ್ಹೀನ್ ಉರ್ಫ್ ಬಿಂದಿಯಾ ವಿವಾಹದ ಬಳಿಕ ನಟನೆಯಿಂದ ಸಂಪೂರ್ಣ ದೂರ ಉಳಿದಿದ್ದರು. ಫ್ಯಾಮಿಲಿ ಲೈಫ್ ಜೊತೆ ಹೆಚ್ಚು ಗಮನ ಹರಿಸಿದ್ದರು. ಪತಿ, ಮಕ್ಕಳ ಜೊತೆ ಹೆಚ್ಚು ಕಾಲ ಕಳೆಯಲು ಇಷ್ಟ ಪಟ್ಟಿದ್ದರು. ಹೀಗಾಗಿ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ.

More from Filmibeat

English summary
Do you know Kannada movie Halli Meshtru actress Bindiya aka Farheen Prabhakar married to Former Indian cricketer Manoj Prabhakar?
Read more about: actress filmibeat news ನಟಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X