6 ತಿಂಗಳು ಕಾಲ್‌ಶೀಟ್ ಸಿಗದ ಕಿಶೋರ್ ಕುಮಾರ್ ಬಳಿ ದ್ವಾರಕೀಶ್ ಕನ್ನಡ ಹಾಡು ಹಾಡಿಸಿದ್ದೇಗೆ? ಈ ಕಥೆಯೇ ರೋಚಕ

ದ್ವಾರಕೀಶ್‌ಗೆ ಹಿಡಿದ ಕೆಲಸ ಆಗಬೇಕು. ಅದು ಎಷ್ಟೇ ದೊಡ್ಡದಿದ್ದರೂ ಅದನ್ನು ಮುಗಿಸುವ ತನಕ ನೆಮ್ಮದಿ ಇರುತ್ತಿರಲಿಲ್ಲ. ಹಾಗೇ ದ್ವಾರಕೀಶ್‌ ತಮ್ಮ ಸಿನಿಮಾಗೆ ಇಂತಹವರು ಬೇಕು ಅಂದರೆ, ಅವರನ್ನು ಹೇಗಾದರೂ ಮಾಡಿ ಒಪ್ಪಿಸುವವರೆಗೂ ಬಿಡುತ್ತಿರಲಿಲ್ಲ. ಅಂತಹ ಹಠವಾದಿಯಾಗಿದ್ದಿದ್ದು 'ಪ್ರಚಂಡ ಕುಳ್ಳ' ದ್ವಾರಕೀಶ್.

ಆರಂಭದ ದಿನಗಳಲ್ಲಿ ದ್ವಾರಕೀಶ್ ಸಿನಿಮಾಗಳ ಹಿಂದೆ ಇರುತ್ತಿದ್ದಿದ್ದು ಸಿನಿ ಸಾಹಿತಿ ಹಾಗೂ ಕಥೆಗಾರ ಉದಯ್ ಶಂಕರ್. ಯಾವುದೇ ಹೊಸ ಹೆಜ್ಜೆ ಇಡಬೇಕು ಅಂದರೂ ಅಲ್ಲಿ ಉದಯ ಶಂಕರ್ ಇರಬೇಕಿತ್ತು. ದ್ವಾರಕೀಶ್ ಹೀರೊ ಆಗಿ ನಟಿಸುವುದಕ್ಕೆ ಕಥೆಯೊಂದನ್ನು ಹುಡುಕಾಡುತ್ತಿದ್ದರು. ಆ ವೇಳೆ ಎಂಜಿಆರ್‌ಗೆ ಕಥೆ ಬರೆಯುತ್ತಿದ್ದ ಕಥೆಗಾರ ಅಚಾನಕ್ ಆಗಿ ಸಿಕ್ಕಿದೆ. ಆ ವೇಳೆ ಸಿಕ್ಕಿ ಕಥೆಯನ್ನೇ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು. ಅದುವೇ 'ಕುಳ್ಳ ಏಜೆಂಟ್ 000'

Do you know how Dwarakish made Kishore Kumar sing the Kannada song after being busy for 6 months

ದ್ವಾರಕೀಶ್‌ಗೆ 'ಕುಳ್ಳ ಏಜೆಂಟ್ 000' ಕಥೆ ಸಿಕ್ಕಿದ್ದು, ಅದಕ್ಕೆ ಉದಯ್ ಶಂಕರ್ ಸ್ಕ್ರಿಪ್ಟ್ ಮಾಡಿದ್ದು, ಕಿಶೋರ್ ಕುಮಾರ್ ಬಳಿಕ ಹಾಡಿಸಬೇಕು ಅಂತ ಆಸೆ ಪಟ್ಟಿದ್ದು ಎಲ್ಲವೂ ಒಂದು ರೋಚಕ ಕಥೆ. ಇದನ್ನು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಹಿರಿಯ ಪತ್ರಕರ್ತ ಎನ್‌ ಎಸ್ ಶ್ರೀಧರ ಮೂರ್ತಿ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಅದೇನು ಅಂತ ತಿಳಿಯಲು ಮುಂದೆ ಓದಿ..

ಚೆನ್ನೈನಲ್ಲಿ ದ್ವಾರಕೀಶ್ ಯಾವುದೋ ಆಲೋಚನೆಯಲ್ಲಿ ಬರುತ್ತಿದ್ದರು. ಅವರ ಗಾಡಿ ಪೆಟ್ರೋಲ್ ಹಾಕಿಸಬೇಕಿತ್ತು. ಆಗ ಒಬ್ಬ ವ್ಯಕ್ತಿ ತೂರಾಡುತ್ತಾ ಬರುತ್ತಿದ್ದರು. ದ್ವಾರಕೀಶ್ ಅವರನ್ನು ಗುರುತಿಸಿ, ತನಗೆ ಅದೆಲ್ಲೋ ಡ್ರಾಪ್ ಮಾಡುವಂತೆ ಕೇಳಿಕೊಂಡಿದ್ದರು. ಆಗ ದ್ವಾರಕೀಶ್‌ಗೆ ಇವರು ಎಂಜಿಆರ್‌ ಸಿನಿಮಾಗಳಿಗೆ ಬರೆಯೋ ರೈಟರ್ ಅಂತ ಗೊತ್ತಾಗುತ್ತೆ. ಆಗ ಕಾರಿನಲ್ಲಿ ಕೂರಿಸಿಕೊಂಡು ತನಗೊಂದು ಕಥೆ ಹೇಳುವಂತೆ ಹೇಳುತ್ತಾರೆ.

" ಆ ವ್ಯಕ್ತಿ ಯಾವ ತರಹದ ಕಥೆ ಬೇಕು ಅಂತ ಹೇಳುತ್ತಾರೆ. ಆಗ ನೋಡಯ್ಯ ನಾನು ಕುಳ್ಳಗೆ ಇದ್ದೀನಿ. ಕುಳ್ಳನಿಗೆ ಆಗುವಂತಹ ಕಥೆ ಹೇಳು. ನಾನು ಮಾಡಿಸುತ್ತೇನೆ ಎಂದು ಹೇಳುತ್ತಾರೆ. ಅವನು ಪೆಟ್ರೋಲ್ ಬಂಕ್‌ನಿಂದ ಹೋಟೆಲ್ ಬರೋವರೆಗೂ ಏನೋ ಒಂದು ಕಥೆ ಹೇಳಿಕೊಂಡು ಬಂದ. ಅವನನ್ನು ಇಳಿಸಿ, ದ್ವಾರಕೀಶ್ ಸೀದಾ ಉದಯ್ ಶಂಕರ್ ತಂಗಿದ್ದ ಸ್ವಾಗತ್ ಹೋಟೆಲ್‌ಗೆ ಬಂದಿದ್ದರು." ಎಂದು ಆ ಘಟನೆಯನ್ನು ಎನ್‌ ಎಸ್ ಶ್ರೀಧರ ಮೂರ್ತಿ ವಿವರಿಸಿದ್ದಾರೆ.

ಉದಯ್ ಶಂಕರ್ ಬೆಂಗಳೂರಿನಲ್ಲಿ ಇದ್ದಾಗ ಜನಾರ್ಧನ್ ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ಹಾಗೇ ಚೆನ್ನೈನಲ್ಲಿ ಇರುವಾಗ ಸ್ವಾಗತ್‌ ಹೋಟೆಲ್‌ನಲ್ಲಿ ಇರುತ್ತಿದ್ದರು. ಉದಯ್ ಶಂಕರ್ ಚೆನ್ನೈನಲ್ಲಿ ತಂಗಿದ್ದ ಸ್ವಾಗತ್ ಹೋಟೆಲ್‌ನಲ್ಲಿ ರೂಂ ನಂ 108ಗೆ ನುಗ್ಗಿದ ದ್ವಾರಕೀಶ್ ಕಥೆ ಹೇಳಿದ್ದರು. "ಉದಯ್ ಶಂಕರ್‌ಗೆ ಎಂಜಿಆರ್ ಕಥೆಗಾರ ಹೇಳಿದ ಕತೆಯನ್ನು ಹೇಳಿದರು. ಆಗ ಉದಯ್ ಶಂಕರ್ ಎರಡು ದಿನ ಬಿಟ್ಟು ಬಾ ಹೇಳ್ತೀನಿ ಅಂದಿದ್ರು. ದ್ವಾರಕೀಶ್ ಎರಡು ದಿನ ಬಿಟ್ಟು ಹೋದಾಗ ಕಥೆಗೆ ಸ್ಕ್ರಿಪ್ಟ್, ಡೈಲಾಗ್ ಜೊತೆ ರೆಡಿಯಿತ್ತು. ಅದೇ ಕುಳ್ಳ ಏಜೆಂಟ್ 000" ಎಂದು ಹೇಳಿದ್ದಾರೆ.

Do you know how Dwarakish made Kishore Kumar sing the Kannada song after being busy for 6 months

ದ್ವಾರಕೀಶ್‌ ಏನಕ್ಕಾದರೂ ಕೈ ಹಾಕಿದರೆ, ಬಹಳ ದೊಡ್ಡದೇ ಮಾಡಬೇಕು ಅನ್ನೋ ಹಂಬಲ. 'ಕುಳ್ಳ ಏಜೆಂಟ್ 000' ಸ್ಕ್ರಿಪ್ಟ್ ರೆಡಿಯಾಗುತ್ತಿದ್ದಂತೆ ಆಗ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ಕಿಶೋರ್ ಕುಮಾರ್ ಕಾಲ್‌ ಶೀಟ್‌ ಸಿಗುವುದೇ ಕಷ್ಟವಾಗಿತ್ತು. ಆದರು ದ್ವಾರಕೀಶ್ ಅವರ ಬಳಿ ಕನ್ನಡ ಹಾಡು ಹಾಡಿಸುತ್ತೇನೆ ಎಂದು ಪಟ್ಟು ಹಿಡಿದು ಕೂತಿದ್ದರು. "ಕಥೆ ಮಾಡಿದ ಮೇಲೆ ದ್ವಾರಕೀಶ್ ಬಾಲಿವುಡ್ ಗಾಯಕ ಕಿಶೋರ್ ಕುಮಾರ್ ಬಳಿ ಹಾಡಿಸುತ್ತೇನೆ ಅಂದರು. ಎಲ್ಲರೂ ನಕ್ಕು ಬಿಟ್ಟರು. ಆಗ ಕಿಶೋರ್ ಕುಮಾರ್ ಭಾರತದ ನಂ 1 ಗಾಯಕ. ಅವರನ್ನು ಯಾರೂ ಹಿಡಿಯೋಕೆ ಸಾಧ್ಯವಿಲ್ಲ." ಎಂದು ಕಿಶೋರ್ ಕುಮಾರ್ ಜನಪ್ರಿಯತೆ ಬಗ್ಗೆ ಹೇಳಿದ್ದಾರೆ.

ದ್ವಾರಕೀಶ್ ಯಾರ್‍ಯಾರಿಂದಲೋ ಕಿಶೋರ್ ಕುಮಾರ್‌ಗೆ ಹೇಳಿಸುವುದಕ್ಕೆ ಪ್ರಯತ್ನ ಪಟ್ಟಿದ್ದರು. ಆದರೆ, ಕಿಶೋರ್ ಕುಮಾರ್ ಕನ್ನಡ ಹಾಡು ಹಾಡುವುದಕ್ಕೆ ರೆಡಿಯಿರಲಿಲ್ಲ. ಒಮ್ಮೆ ದ್ವಾರಕೀಶ್ ಅವರೇ ಬಾಂಬೆಗೆ ಹೋದರು. ಎರಡು ಮೂರು ಗಂಟೆ ಕಿಶೋರ್ ಕುಮಾರ್ ಮನೆ ಮುಂದೆ ಕಾದರು. ಬಳಿಕ ಕಿಶೋರ್ ಕುಮಾರ್ ಬಾಲ್ಕನಿಯಲ್ಲಿ ನಿಂತಿದ್ದಾರೆ. ಆಗ ಅವರು ದ್ವಾರಕೀಶ್ ನೋಡಿ ಸ್ಮೈಲ್ ಮಾಡಿದರು. ಗೇಟ್‌ ಕೀಪರ್‌ಗೆ ಅವರು ಕರೆಯುತ್ತಿದ್ದಾರೆ ಅಂತ ಒಳಗೆ ಬಿಟ್ಟರು. ಒಳಗೆ ಹೋಗಿ ಕಿಶೋರ್ ಕುಮಾರ್‌ಗೆ ಕನ್ನಡ ಹಾಡು ಹಾಡಲೇ ಬೇಕು ಅಂತ ಪಟ್ಟು ಹಿಡಿಯುತ್ತಾರೆ.

ಕಾಮಿಡಿ ಹಾಡು ಹಾಡಿಲ್ಲ. ಅಂತಹ ಹಾಡಿಗೆ ಹಾಡುವುದಾದರೆ ಹಾಡುತ್ತೇನೆ ಎಂದಿದ್ದರು. ಬಳಿಕ ದ್ವಾರಕೀಶ್ ಬಂದು ಉದಯ ಶಂಕರ್ ಬಳಿ ಬಂದು ವಿಷಯ ತಿಳಿಸಿದ್ದರು. ಆಗ ಉದಯ ಶಂಕರ್ ಇಸ್ಪೀಟ್ ಇಟ್ಕೊಂಡು "ಆಡು ಆಟ ಆಟು.." ಅಂತ ಬರೆದರು. ಅದನ್ನು ಮರು ದಿನವೇ ಕಿಶೋರ್ ಕುಮಾರ್‌ಗೆ ಲಿರಿಕ್ಸ್ ಕೊಟ್ಟರು. ಆ ಹಾಡು ಓಕೆ ಆಗಿತ್ತು ಎಂದು ಸ್ವಾರಸ್ಯಕರ ಸಂಗತಿಯನ್ನು ಹಿರಿಯ ಪತ್ರಕರ್ತ ಎನ್‌ ಎಸ್ ಶ್ರೀಧರ ಮೂರ್ತಿ ವಿವರಿಸಿದ್ದಾರೆ.

More from Filmibeat

English summary
Dwarakish made Kishore Kumar to sing Kannada song for Kulla Agent 000 movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X