ಪುನೀತ್ ಎಂಟ್ರಿ ಹೀಗೆ ಇರಬೇಕೆಂದು ಬಯಸಿದ್ದ ಶಿವಣ್ಣ; 'ಅಪ್ಪು' ಲಾಂಚ್‌ಗೂ ಮುನ್ನ ಹೇಳಿದ್ದೇನು ಗೊತ್ತೇ?

ಯುವ ರಾಜ್‌ಕುಮಾರ್ ಮೊದಲ ಸಿನಿಮಾ 'ಯುವ' ಬಿಡುಗಡೆ ವೇಳೆ ರಾಘಣ್ಣ ಒಂದು ಮಾತು ಹೇಳಿದ್ದರು. "ಶಿವಣ್ಣನನ್ನು, ನನ್ನನ್ನು ಅಪ್ಪುನಾ ಪರಿಚಯಿಸುವುದಕ್ಕೆ ತಂದೆ, ತಾಯಿ, ವರದಪ್ಪ ಎಲ್ಲರು ಇದ್ದರು. ಆದರೆ, ನನ್ನ ಮಗನಿಗೆ ಅನಾಥನಾಗಿ ಬಿಟ್ಟನಲ್ಲ ಅಂತ ಬೇಸರವಿತ್ತು" ಎಂದು ಹೇಳಿದ್ದರು.

ರಾಘಣ್ಣನ ಮಾತು ಈಗ್ಯಾಕೆ ಅಂದರೆ, ಯಾವುದೇ ನಿರ್ಧಾರಗಳನ್ನು ತೆಗೆಕೊಂಡರೂ, ದೊಡ್ಮೆನೆಯ ಇಡೀ ಕುಟುಂಬ ಒಟ್ಟಿಗೆ ಕೂರುತ್ತಿತ್ತು. ಹಾಗೇ ಪುನೀತ್ ರಾಜ್‌ಕುಮಾರ್‌ರನ್ನು ಹೀರೊ ಮಾಡಬೇಕು ಅಂತ ನಿರ್ಧಾರ ತೆಗೆದುಕೊಂಡಾಗ ಆರಂಭ ಆಗಿದ್ದೇ 'ಅಪ್ಪು'. ಪವರ್‌ಸ್ಟಾರ್ ಆಗಿಯೇ ಎಂಟ್ರಿ ಕೊಡಿಸಬೇಕು ಅಂತಲೇ ಬಯಸಿದ್ದರು.

Do you know how Shivrajkumar liked to watch Puneeth Rajkumar s first movie Appu before its release

ಆದರೆ, ಅಪ್ಪು ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುನ್ನವೇ ಶಿವಣ್ಣ ಸಂದರ್ಶನ ನೀಡಿದ್ದರು. ಇದರಲ್ಲಿ ಪುನೀತ್ ರಾಜ್‌ಕುಮಾರ್‌ ಅನ್ನು ಚಿತ್ರರಂಗಕ್ಕೆ ಹೇಗೆ ಪರಿಚಯಿಸಬೇಕು ಎಂಬ ಮಾಹಿತಿಯನ್ನು ರಿವೀಲ್ ಮಾಡಿದ್ದರು. ಆ ಹಳೇ ವಿಡಿಯೋದಲ್ಲಿ ಶಿವಣ್ಣ ಏನು ಹೇಳಿದ್ದರು? ತಮ್ಮ ಪುನೀತ್ ಅನ್ನು ಹೇಗೆ ನೋಡಬೇಕು ಅಂತ ಬಯಸಿದ್ದರು? ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ಪುನೀತ್ ರಾಜ್‌ಕುಮಾರ್ ನಟನೆಯ ಮೊದಲ ಸಿನಿಮಾ 'ಅಪ್ಪು'. ಈ ಸಿನಿಮಾ ರಿಲೀಸ್ ಆಗಿ ಇಂದಿಗೆ (ಏಪ್ರಿಲ್ 26) 22 ವರ್ಷಗಳಾಗಿವೆ. ಎಪ್ರಿಲ್ 26, 2002 ರಂದು 'ಅಪ್ಪು' ಮೂಲಕ ಅಣ್ಣಾವ್ರ ಮೂರನೇ ಪುತ್ರ ಎಂಟ್ರಿ ಕೊಟ್ಟಿದ್ದರು. ಆದರೆ, ಶಿವಣ್ಣನನ್ನು ಡ್ಯಾನ್ಸ್ ಚೆನ್ನಾಗಿ ಮಾಡುತ್ತಾರೆ. ಅದಕ್ಕೆ ಹೆಚ್ಚಿನ ತರಬೇತಿಗೆ ವಿದೇಶಕ್ಕೆ ಕಳಿಸಿ ಚೆನ್ನಾಗಿ ತರಬೇತಿ ಕೊಡಿಸಬೇಕು ಎಂದಿದ್ದರು. ಹಾಗೇ ಡ್ಯಾನ್ಸಿಂಗ್ ಸಿನಿಮಾ ಮೂಲಕವೇ ಪರಿಚಯ ಎಂದಿದ್ದರು. ಆ ಹಳೇ ವಿಡಿಯೋದ ಅಪ್ಪು ಬಗ್ಗೆ ಶಿವಣ್ಣ ಹೇಳಿದ್ದ ಮಾತು ಹೀಗಿದೆ.

"ಅವರು ಇನ್ನೂ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಅವನು ಮೂರರಿಂದ ನಾಲ್ಕು ವರ್ಷ ಆದ್ಮೇಲೆ ಬರುತ್ತಾನೆ. ಅವನು ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡುತ್ತಾನೆ. ನನಗೇನು ಆಸೆ ಅಂದರೆ, ಅವನನ್ನು ಅಮೆರಿಕಗೆ ಕಳಿಸಬೇಕು. ಡ್ಯಾನ್ಸ್ ಎಲ್ಲವನ್ನೂ ಚೆನ್ನಾಗಿತು, ಅವನ ಸಿನಿಮಾವನ್ನು ಚೆನ್ನಾಗಿ ಮಾಡಬೇಕು ಅಂತಿದೆ." ಎಂದು ಶಿವಣ್ಣ ಹೇಳಿದ್ದರು.

Do you know how Shivrajkumar liked to watch Puneeth Rajkumar s first movie Appu before its release

ಇನ್ನು ಇತ್ತೀಚೆಗೆ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು ಶಿವಣ್ಣ 'ಅಪ್ಪು' ಸಿನಿಮಾವನ್ನು ನೆನಪಿಸಿಕೊಂಡಿದ್ದರು. "ಅಪ್ಪು ಅಂತ ಟೈಟಲ್ ಇಡುವುದಕ್ಕೂ ಮುನ್ನ 'ಈಡಿಯಟ್' ಇಡಲಾಗಿತ್ತು. ಆದರೆ, ನಿರ್ದೇಶಕ ಪುರಿ ಜಗನ್ನಾಥ್‌ಗೆ ಈ ಟೈಟಲ್ ಬೇಡ ಅಂತ ಹೇಳಿದ್ದೆ ನಾನು" ಎಂದು ಆ ದಿನವನ್ನು ನೆನಪಿಸಿಕೊಂಡಿದ್ದರು. ಹಾಗೇ ಪವರ್‌ಸ್ಟಾರ್ ಮೊದಲು ಕರೆದಿದ್ದು ಕೂಡ ಶಿವಣ್ಣನೇ.

ಸಿನಿಮಾಗಳಲ್ಲಿ ಬಾಲ ಕಲಾವಿದನಾಗಿ ಪುನೀತ್ ರಾಜ್‌ಕುಮಾರ್ ನಟಿಸಿದ್ದರು. ಅದಾಗಲೇ 'ಬೆಟ್ಟದ ಹೂವು' ಸಿನಿಮಾಗೆ ರಾಷ್ಟ್ರ ಪ್ರಶಸ್ತಿನೂ ಸಿಕ್ಕಿತ್ತು. ಆದರೆ, ಕೆಲವು ದಿನಗಳು ಸಿನಿಮಾದಿಂದ ದೂರ ಉಳಿದಿದ್ದರು. ಹರೆಯಕ್ಕೆ ಬಂದಾಗ ಸಿನಿಮಾವೇ ಬೇಡ ಎಂದುಕೊಂಡಿದ್ದರು. ಇದ್ದಕ್ಕಿದ್ದ ಹಾಗೇ ಸಿನಿಮಾರಂಗಕ್ಕೆ ಎಂಟ್ರಿ ಕೊಡುವುದಕ್ಕೆ 'ಅಪ್ಪು' ನಿರ್ಧರಿಸಿದ್ದರು. ಮೊದಲ ಹೆಜ್ಜೆಯಲ್ಲೇ ಡ್ಯಾನ್ಸ್ ಅಷ್ಟೇ ಅಲ್ಲ ಫೈಟಿಂಗ್ ಸೀಕ್ವೆನ್ಸ್‌ನಿಂದಲೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.

More from Filmibeat

English summary
Shivarajkumar old interview about Puneeth Rajkumar before Appu release
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X