ಪುಟ್ಟಣ್ಣ ಕಣಗಾಲ್-ಆರತಿ ರಹಸ್ಯವಾಗಿ ಮದುವೆ ಆಗಿದ್ಯಾವಾಗ? ಲೀಲಾವತಿಗೆ ಮೊದಲು ಗೊತ್ತಾಗಿದ್ದೇಕೆ?

ಸಿನಿಮಾರಂಗದಲ್ಲಿ ಅಫೇರ್, ಲವ್ ಸ್ಟೋರಿ, ಬ್ರೇಕಪ್, ಮದುವೆ ಇವೆಲ್ಲವೂ ಹೊಸದೇನು ಅಲ್ಲ. ಹಿಂದಿನ ಕಾಲದಿಂದಲೂ ಕಲಾವಿದರ ನಡುವೆ, ನಿರ್ದೇಶಕ-ನಟಿಯರ ಮಧ್ಯೆ ಪ್ರೀತಿ ಹುಟ್ಟುಕೊಳ್ಳುತ್ತಿತ್ತು. ಕೆಲವರದ್ದು ಮದುವೆವರೆಗೂ ಬಂದು ನಿಲ್ಲುತ್ತಿತ್ತು. ಮತ್ತೆ ಕೆಲವರದ್ದು ಮಧ್ಯದಲ್ಲಿಯೇ ಬ್ರೇಕಪ್ ಆಗುತ್ತಿತ್ತು.

ಕನ್ನಡ ಚಿತ್ರರಂಗದಲ್ಲಿ ಹೀಗೆ ಪುಟ್ಟಣ್ಣ ಕಣಗಾಲ್ ಹಾಗೂ ಆರತಿ ಮದುವೆ ರಹಸ್ಯವಾಗಿ ನಡೆದು ಹೋಗಿತ್ತು. ಸ್ವತ: ಅದೇ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿದ್ದ ಆರತಿ ತಮ್ಮನಿಗೆ ಪುಟ್ಟಣ್ಣ-ಆರತಿ ಮದುವೆ ಆದ ವಿಷಯ ಗೊತ್ತಿರಲೇ ಇಲ್ಲ. ಇವರಿಬ್ಬರ ಮದುವೆ ವಿಷಯ ಮೊದಲು ಗೊತ್ತಾಗಿದ್ದೇ ದಿವಂಗತ ನಟಿ ಲೀಲಾವತಿಯವರಿಗೆ.

Do you know how two legends of Kannada cinema Puttanna Kanagal and Aarathi got married

ಪುಟ್ಟಣ್ಣ ಕಣಗಾಲ್ ಹಾಗೂ ಲೀಲಾವತಿ ಗುಟ್ಟಾಗಿ ಮದುವೆ ಆಗಿದ್ದು ಯಾವ ಸಿನಿಮಾ ಶೂಟಿಂಗ್ ವೇಳೆ? ಮೊದಲ ಲೀಲಾವತಿ ಈ ವಿಷಯ ತಿಳಿದಿದ್ದೇಗೆ? ಇವರಿಬ್ಬರಲ್ಲೂ ಪ್ರೀತಿ ಹುಟ್ಟಿದ್ದು ಹೇಗೆ? ಅನ್ನೋದನ್ನು ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರ ಮೂರ್ತಿ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ. ಈ ಸಂಗತಿ ಸಖತ್ ಸ್ವಾರಸ್ಯಕರವಾಗಿದೆ ಮುಂದೆ ಓದಿ..

'ಎಡಕಲ್ಲು ಗುಡ್ಡದ ಮೇಲೆ' ಸಿನಿಮಾದ ಬಳಿಕ ಪುಟ್ಟಣ್ಣ ಅವರು ಆರತಿಯವರನ್ನೇ ಪ್ರಮುಖ ಪಾತ್ರವನ್ನಾಗಿಟ್ಟುಕೊಂಡು ಸಿನಿಮಾ ಮಾಡಬೇಕು ಅಂದುಕೊಂಡರು. ಅದೇ ಸಮಯದಲ್ಲಿ ದೇವಕಿಮೂರ್ತಿಯವರ ಕಾದಂಬರಿ ಆಧಾರಿತ ಚಿತ್ರ 'ಉಪಾಸನೆ' ಮಾಡಿದರು. ಆರತಿಗೆ ಈ ಸಿನಿಮಾ ಬಹಳ ದೊಡ್ಡ ಹೆಸರು ಕೊಟ್ಟಿತ್ತು. ಬಳಿಕ 'ಶುಭಮಂಗಳ' ಚಿತ್ರಕ್ಕೆ ಕೈ ಹಾಕಿದ್ದರು. ಈ ಸಿನಿಮಾದ ವೇಳೆ ಆರತಿ ಹಾಗೂ ಪುಟ್ಟಣ್ಣ ಕಣಗಾಲ್ ನಡುವೆ ಒಂದು ರೀತಿಯ ಸಲುಗೆ ಬೆಳೆದಿತ್ತು.

"ಶುಭ ಮಂಗಳ ಸಿನಿಮಾದಲ್ಲಿ ಪುಟ್ಟಣ್ಣ ಹಾಗೂ ಆರತಿ ಆರಂಭದಲ್ಲಿ ಬೇರೆ ಬೇರೆ ರೂಮಿನಲ್ಲಿ ಇರುತ್ತಿದ್ದರು. ಸಿನಿಮಾ ಮುಗಿಯುವ ಹೊತ್ತಿಗೆ ಒಂದೇ ರೂಮ್‌ನಲ್ಲಿ ಇರುವಷ್ಟು ಸ್ನೇಹ ಬೆಳೆದಿತ್ತು. ಇದಾದರೂ ಕೂಡ ಪುಟ್ಟಣ್ಣ ಸೆಟ್ ವಿಷಯದಲ್ಲಿ ಆರತಿ ಕಲಾವಿದೆಯಾಗಿಯೇ ಇರಬೇಕು. ನಾನು ನಿರ್ದೇಶಕನಾಗಿಯೇ ಇರಬೇಕು ಎಂದು ಬಯಸಿದ್ದರು. ನಾನು ಹೇಳಿದ ಹಾಗೆಯೇ ಇರಬೇಕು ಅನ್ನೋದು ಪುಟ್ಟಣ್ಣ ಅವರಿಗಿತ್ತು." ಎಂದು ಎನ್‌ ಎಸ್ ಶ್ರೀಧರ ಮೂರ್ತಿಯವರು ದಿಗ್ಗಜರಿಬ್ಬರ ಪ್ರೇಮ ಕತೆಯನ್ನು ಬಿಚ್ಚಿದ್ದಾರೆ.

Do you know how two legends of Kannada cinema Puttanna Kanagal and Aarathi got married

'ಶುಭಮಂಗಳ' ಸಿನಿಮಾದಲ್ಲಿ ಪುಟ್ಟಣ್ಣ "ಈ ಶತಮಾನ ಮಾದರಿ ಹೆಣ್ಣು" ಅನ್ನೋ ಹಾಡನ್ನು ಆರತಿಗಾಗಿಯೇ ಬರೆಸಿದ್ದರು. ವಿಜಯ್‌ ನರಸಿಂಹ ಅವರ ಬಳಿ ಬಂದು ಹೇಳಿದ್ದಾಗ ಪುಟ್ಟಣ್ಣ ಅವರೇ ಆರತಿ ತನಗೆ ಈ ಶತಮಾನ ಮಾದರಿ ಹೆಣ್ಣಿನ ಹಾಗೆ ಕಾಣಿಸುತ್ತಾಳೆ ಎಂದು ಹೇಳಿದ್ದರು. ವಿಚಿತ್ರ ಅಂದರೆ, ಈ ಹಾಡು ಚಿತ್ರೀಕರಣ ಮಾಡುವಾಗ ಪುಟ್ಟಣ್ಣ ಹಾಘೂ ಆರತಿ ನಡುವೆ ಚಿಕ್ಕದೊಂದು ಭಿನ್ನಾಬಿಪ್ರಾಯ ಬೆಳೆದಿತ್ತು. ಇದೇ ಸಮಯದಲ್ಲಿಯೇ 'ಬಿಳಿ ಹೆಂಡ್ತಿ' ಸಿನಿಮಾವನ್ನೂ ಆರಂಭಿಸಿದ್ದರು. ಈ ಸಿನಿಮಾ ವೇಳೆ ಪುಟ್ಟಣ್ಣ ಮದುವೆ ನಡೆದಿತ್ತು.

ಬಿಳಿ ಹೆಂಡ್ತಿ ಸಿನಿಮಾ ನಡೆಯುತ್ತಿರುವ ಸಂದರ್ಭದಲ್ಲಿ ಪ್ರೀಮಿಯರ್ ಸ್ಟುಡಿಯೋದಲ್ಲಿ ಬಹಳ ಮುಖ್ಯವಾದ ಘಟನೆಯ ಶೂಟಿಂಗ್. ಪುಟ್ಟಣ್ಣ ನಿಖರವಾದ ಸಮಯದಲ್ಲಿ ಶೂಟಿಂಗ್ ಶುರು ಮಾಡುವವರು. ರಾತ್ರಿ ಹೋಗುವಾಗ ಬೆಳಗ್ಗೆ 9 ಗಂಟೆಗೆ ಶೂಟಿಂಗ್ ಅಂತ ಹೇಳಿದ್ದರು. ಸೆಟ್ಟಿನಲ್ಲಿ ಜನರು ಕಾಯುತ್ತಿದ್ದಾರೆ. 11 ಗಂಟೆ ಆದರೂ ಪುಟ್ಟಣ್ಣ ಕಣಗಾಲ್ ಬಂದಿರಲಿಲ್ಲ. ಎಲ್ಲರಿಗೂ ನಿರ್ದೇಶಕರು ಹೀಗೆ ಲೇಟ್ ಮಾಡಲ್ವಲ್ಲ ಅಂತ ಆತಂಕ ಶುರುವಾಗಿತ್ತು. ಆಗ ಸ್ಟುಡಿಯೋ ಕಾರು ಎಂಟ್ರಿ ಆಗುತ್ತೆ. ಪುಟ್ಟಣ್ಣ ಹಾಗೂ ಆರತಿ ನವ ಜೋಡಿಯಾಗಿ ಕಾರಿನಿಂದ ಇಳಿಯುತ್ತೆ.

"11 ಗಂಟೆಗೆ ಪುಟ್ಟಣ್ಣ ಅವರ ಬಿಳಿಯ ಫೀಯೆಟ್ ಕಾರು ಎಂಟ್ರಿ ಆಗುತ್ತೆ. ಡ್ರೈವಿಂಗ್ ಸೀಟ್‌ನಲ್ಲಿ ಪುಟ್ಟಣ್ಣ ಕೂತಿರುತ್ತಾರೆ. ಬಿಳಿ ಜುಬ್ಬ, ಪಂಚೆ, ಶಲ್ಯ ಹೊದ್ದಿಕೊಂಡಿರುತ್ತಾರೆ. ಹಿಂದಿಂದ ಆರತಿ ಇಳಿಯುತ್ತಾರೆ ಸಂಪೂರ್ಣ ಆಭರಣ ಧರಿಸುತ್ತಾರೆ. ಅಸಿಸ್ಟೆಂಟ್‌ ಕರೆದು ಸಿನಿಮಾ ನಿರ್ಮಾಪಕ ಮುದ್ದು ಕೃಷ್ಣ ಹಾಗೂ ಲೀಲಾವತಿಯವರನ್ನು ಬರುವುದಕ್ಕೆ ಹೇಳುತ್ತಾರೆ. ಪುಟ್ಟಣ್ಣ, ಆರತಿ ಇವರಿಬ್ಬರಿಗೂ ನಮಸ್ಕಾರ ಮಾಡುತ್ತಾರೆ. ನಿರ್ಮಾಪಕ ಮುದ್ದು ಕೃಷ್ಣಗೆ ಗೊತ್ತಾಗಲ್ಲ. ಆರತಿಗೆ ಯಾಕೆ ನಮಸ್ಕಾರ ಮಾಡುತ್ತಿದ್ದೀಯಾ ಅಂತ ಕೇಳುತ್ತಾರೆ. ಅಷ್ಟರಲ್ಲಿ ಲೀಲಾವತಿ ಗಮನಿಸಿರುತ್ತಾರೆ. ಆರತಿ ಕಾಲಿನಲ್ಲಿ ಕಾಲುಂಗುರ ಇರುತ್ತೆ. ಕೊರಳಿನಲ್ಲಿ ತಾಳಿ ಇರುತ್ತೆ. ಲೀಲಾವತಿ ಮುದ್ದುಕೃಷ್ಣ ಹತ್ತಿರ ನಗುತ್ತಾ ಹೇಳುತ್ತಾರೆ. ನಿಮಗೆ ಗೊತ್ತಿಲ್ವಾ ಡೈರೆಕ್ಟರ್ ಹೀರೊಯಿನ್, ಗಂಡ ಹೆಂಡತಿ ಆಗಿದ್ದಾರೆ ಅಂತಾರೆ. ಗುಟ್ಟಾಗಿ ಮೈಸೂರಿನ ಚಾಮುಂಡೇಶ್ವರಿ ಬೆಟ್ಟದಲ್ಲಿ ಮದುವೆ ಆಗುತ್ತಾರೆ. ಆರತಿ ಅದೇ ಸಿನಿಮಾ ಅಸೋಸಿಯೇಟ್ ದತ್ತು ಅವರಿಗೆ ಹೇಳಿರುವುದಿಲ್ಲ." ಎಂದು ಎನ್‌ಎಸ್ ಶ್ರೀನಿವಾಸ್ ಮೂರ್ತಿ ಹೇಳಿದ್ದಾರೆ.

More from Filmibeat

English summary
Puttanna Kanagal and Aarathi got Married Secretly:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X