'ಆರ್ಯ' ಸಿನಿಮಾದ ನಟಿ ಒಂದೇ ಒಂದು ಸುಳಿವು ನೀಡದಂತೆ ಕಣ್ಮರೆಯಾಗಿದ್ದೇಕೆ? ಈಗ ಎಲ್ಲಿದ್ದಾರೆ?

2004 ಮೇ 7 ಟಾಲಿವುಡ್‌ನಲ್ಲಿ ಅಲ್ಲು ಅರ್ಜುನ್ ನಟಿಸಿದ 'ಆರ್ಯ' ಸಿನಿಮಾ ಹೊಸ ಟ್ರೆಂಡ್ ಅನ್ನೇ ಹುಟ್ಟಾಕಿತ್ತು. ಇದೊಂದು ಪಕ್ಕಾ ಲವ್ ಸ್ಟೋರಿ ಆಗಿದ್ದರೂ, ಸಿನಿಪ್ರಿಯರಿಗೆ ಹೊಸ ಅನುಭವವನ್ನು ಕೊಟ್ಟಿತ್ತು. ಅಲ್ಲು ಅರ್ಜುನ್ ಸ್ಟೈಲಿಶ್ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಈಗ 'ಪುಷ್ಪ' ಸಿನಿಮಾವನ್ನು ನಿರ್ದೇಶಿಸುತ್ತಿರುವ ಸುಕುಮಾರ್ ಅವರೇ 'ಆರ್ಯ'ಗೂ ಆಕ್ಷನ್ ಕಟ್ ಹೇಳಿದ್ದರು.

'ಆರ್ಯ' ಸಿನಿಮಾ 'ಪುಷ್ಪ' ನಿರ್ದೇಶಕ ಸುಕುಮಾರ್ ಅವರ ಮೊದಲ ಸಿನಿಮಾ ಆಗಿತ್ತು. ರಾಕ್‌ಸ್ಟಾರ್ ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಬೇರೆ ಲೆವೆಲ್‌ಗೆ ಹಿಟ್ ಆಗಿತ್ತು. 'ಆರ್ಯ' ಸಿನಿಮಾ ಕ್ರೇಜ್ ನೋಡಿ ಬೇರೆ ಭಾಷೆಗಳಲ್ಲಿ ರಿಮೇಕ್ ಕೂಡ ಮಾಡಿದ್ದರು. ಮಲಯಾಳಂನಲ್ಲಿ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. ಆ ಮಟ್ಟಿಗೆ ಈ ಸಿನಿಮಾ ಬಗ್ಗೆ ಕ್ರೇಜ್ ಇತ್ತು. ಇದೆಲ್ಲದರ ಜೊತೆ ಇನ್ನೊಂದು ಹೊಸ ಪ್ರತಿಭೆ ಟಾಲಿವುಡ್ ಮಂದಿಗೆ ಇಷ್ಟ ಆಗಿಬಿಟ್ಟಿತ್ತು. ಅವರೇ ಅನುರಾಧ ಮೆಹ್ತಾ ಉರ್ಫ್ ಅನು ಮೆಹ್ತಾ.

Do you know where is Allu Arjun starrer Arya movie actress Anuradha Mehta

'ಆರ್ಯ' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಅನು ಮೆಹ್ತಾ ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ್ದರು. ತೆಲುಗು ಮಂದಿ ಬಾಯಲ್ಲಿ 'ಆರ್ಯ' ನಟಿ ಹೆಸರೇ ಗುನುಗುತ್ತಿತ್ತು. ಈ ಸಿನಿಮಾ ಆ ಕಾಲಕ್ಕೆ ಬಾಕ್ಸಾಫೀಸ್‌ ದಾಖಲೆ ಬರೆದು ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಅನು ಮೆಹ್ತಾಗೆ ಲೆಕ್ಕವಿಲ್ಲದಷ್ಟು ಅಭಿಮಾನಿಗಳು ಹುಟ್ಟಿಕೊಂಡರು. ಆದರೂ, ಈಕೆಯ ವೃತ್ತಿ ಬದುಕು ಅಲ್ಪ ಕಾಲಕ್ಕೆ ಮುಗಿದು ಹೋಯ್ತು. 'ಆರ್ಯ' ತೆರೆಕಂಡ ಕೇವಲ ನಾಲ್ಕು ವರ್ಷಗಳಲ್ಲಿ ಅನು ಮೆಹ್ತಾ ಯಾರ ಕಣ್ಣಿಗೂ ಕಾಣದಂತೆ ಮಾಯವಾಗಿಬಿಟ್ಟರು.

ಹೌದು, ಕೇವಲ ನಾಲ್ಕು ವರ್ಷ. 2004ರಲ್ಲಿ 'ಆರ್ಯ' ಸಿನಿಮಾ ತೆರೆಕಂಡಿತ್ತು. 2008ರಲ್ಲಿ ಅನು ಮೆಹ್ತಾ ನಟಿಸಿದ ಕೊನೆಯ ಸಿನಿಮಾ ಕನ್ನಡದ ಹೊಂಗನಸು. ನೆನಪಿರಲಿ ಪ್ರೇಮ್ ಈ ಸಿನಿಮಾದಲ್ಲಿ ನಾಯಕ. 2008ರಿಂದ ಅನು ಮೆಹ್ತಾ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಅನ್ನೋ ಸುಳಿವು ಸ್ವತ: ಸಿನಿಮಾ ಮಂದಿಗೆ ಇಲ್ಲ. 'ಆರ್ಯ' ಸಿನಿಮಾ ತಂಡಕ್ಕೂ ಇಲ್ಲ.

2024, ಮೇ 7 ರಂದು 'ಆರ್ಯ' ಸಿನಿಮಾ 20 ವರ್ಷಗಳನ್ನು ಪೂರೈಸಿತ್ತು. ಈ ಬೆನ್ನಲ್ಲೇ ಇಡೀ ಚಿತ್ರತಂಡ ಸಂಭ್ರಮದಲ್ಲಿ ಭಾಗಿಯಾಗಿತ್ತು. ಆ ವೇಳೆ ಅಲ್ಲು ಅರ್ಜುನ್ ಸಿನಿಮಾದ ನೆನಪುಗಳನ್ನು ಮೆಲುಕು ಹಾಕುತ್ತಿದ್ದರು. ಈ ವೇಳೆ ತಮ್ಮೊಂದಿಗೆ ನಟಿಸಿದ ನಟ-ನಟಿಯರನ್ನೂ ನೆನಪಿಸಿಕೊಂಡಿದ್ದರು. ಆಗ "ಆರ್ಯ ಸಿನಿಮಾದ ಬಳಿಕ ಅನು ಮೆಹ್ತಾ ನನ್ನ ಸಂಪರ್ಕದಲ್ಲಿ ಇಲ್ಲ. ಎಲ್ಲಿದ್ದಾರೋ ಗೊತ್ತಿಲ್ಲ" ಎಂದು ಸ್ವತ: ಅಲ್ಲು ಅರ್ಜುನ್ ವೇದಿಕೆ ಮೇಲೆ ಹೇಳಿದ್ದರು.

Do you know where is Allu Arjun starrer Arya movie actress Anuradha Mehta

ಈ ಸಂದರ್ಭದಲ್ಲಿ ಅನು ಮೆಹ್ತಾ ಬಗ್ಗೆ ಮತ್ತೆ ಚರ್ಚೆ ಆಗಿತ್ತು. ಆಕೆಯನ್ನು ಹುಡುಕುವ ಪ್ರಯತ್ನ ಮಾಡಲಾಗಿತ್ತು. ಆದರೆ, ಸುಳಿವು ಸಿಕ್ಕಿರಲಿಲ್ಲ. ಇಂಡಿಯಾ ಹೆರಾಲ್ಡ್ ವೆಬ್‌ಸೈಟ್‌ನಲ್ಲಿ ಅನು ಮೆಹ್ತಾ ಚೆನ್ನೈನಲ್ಲಿ ಒಮ್ಮೆ ಪತ್ತೆಯಾಗಿದ್ದರು. ರೆಸಾರ್ಟ್ ಒಂದರಲ್ಲಿ ಅಗತ್ಯಕಿಂತ ಹೆಚ್ಚು ಹೊತ್ತು ಪಾರ್ಟಿ ಮಾಡಿದ್ದರು. ಹೀಗಾಗಿ ಅವರ ಮೇಲೆ ದೂರು ದಾಖಲಾಗಿತ್ತು ಎಂದು ವರದಿ ಮಾಡಿದೆ. ಅದು ಅನು ಮೆಹ್ತಾ ಬಗ್ಗೆ ಬೇರೆ ಸುಳಿವು ಇಲ್ಲ.

ನಟಿಯರು ಸಿನಿಮಾರಂಗದಿಂದ ದೂರ ಉಳಿದಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಆದರೆ, ಸೋಶಿಯಲ್ ಮೀಡಿಯಾದಿಂದಲೂ ದೂರ ಉಳಿದಿದ್ದಾರೆ. ಈ ನಟಿ ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಿದ್ದ ತೆಲುಗಿನ ಒಕ್ಕಡು ರಿಮೇಕ್ 'ಅಜಯ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಅದು ಬಿಟ್ಟರೆ 'ಹೊಂಗನಸಲು' ಅನು ಮೆಹ್ತಾ ನಟಿಸಿದ ಕೊನೆಯ ಸಿನಿಮಾ.

More from Filmibeat

English summary
Famous Telugu movie actress Anuradha Mehta disappears
Read more about: allu arjun arya filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X