ಒಂದು ಕೋಟಿ ಸಂಭಾವನೆ ಪಡೆದ ಭಾರತದ ಮೊದಲ ನಟಿ ಯಾರು ಗೊತ್ತಾ? ರೇಖಾ, ಮಾಧುರಿ ಅಲ್ವೇ ಅಲ್ಲ!

ಮೊದಲನಿಂದಲೂ ನಟಿಯರ ಬಳಿ ಅಸಮಧಾನವಿದೆ. ಮೊದಲಿನಿಂದಲೂ ನಾಯಕರಿಗೇ ಅತೀ ಹೆಚ್ಚು ಸಂಭಾವನೆ ಸಿಗುತ್ತೆ. ಆದರೆ, ನಟಿಯರಿಗೆ ಚಿಕ್ಕ ಪುಟ್ಟ ಸಂಭಾವನೆ ನೀಡಲಾಗುತ್ತೆ ಎಂಬ ಆರೋಪವಿದೆ. ಇದು 80 ಹಾಗೂ 90ರ ದಶಕದಲ್ಲಿ ಕೊಂಚ ಮಟ್ಟಿಗೆ ಹೆಚ್ಚಿತ್ತು. ಅಂದು ನಾಯಕರಿಗೆ ನೀಡುತ್ತಿದ್ದ ಸಂಭಾವನೆಯ ಅರ್ಧದಷ್ಟನ್ನೂ ನಾಯಕಿಯರಿಗೆ ನೀಡುತ್ತಿರಲಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಭಾರತದಾದ್ಯಂತ ದುಬಾರಿ ನಟಿ ಅಂತ ಒಬ್ಬರು ಜನಪ್ರಿಯರಾಗಿಬಿಟ್ರು. ಅಂದಿನ ಆಂಗ್ರಿ ಯಂಗ್‌ಮ್ಯಾನ್ ಅಮಿತಾಭ್ ಬಚ್ಚನ್ ಸಿನಿಮಾವನ್ನು ನಯವಾಗಿ ತಿರಸ್ಕರಿಸಿದ್ದರು. ಆ ನಟಿಗೆ ನೀಡಬೇಕಿದ್ದ ಸಂಭಾವನೆ ಹಾಗೂ ಬಿಗ್ ಬಿ ಸಿನಿಮಾ ನಿರಾಕರಿಸಿದ ಸುದ್ದಿ ಆ ವೇಳೆ ಬಾಲಿವುಡ್‌ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

Do you know who is Indias first one crore remuneration rupees actress here is the details

ಕೇವಲ ನಾಲ್ಕನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಟಿಯೀಕೆ. 80 ಹಾಗೂ 90ರ ದಶಕವನ್ನು ಸೂಪರ್‌ಸ್ಟಾರ್ ಪಟ್ಟಕ್ಕೇರಿದ್ದರು. ಸುಮಾರು 5 ದಶಕಗಳ ಕಾಲ ಚಿತ್ರರಂಗದಲ್ಲಿ ಮೆರೆದ ನಟಿ ಇವರು. ಅವರೇ ಬಾಲಿವುಡ್ ಕಾ ಚಾಂದಿನಿ ಶ್ರೀದೇವಿ ಬೋನಿ ಕಪೂರ್.

ನಾಯಕರಿಗೆ ಅತೀ ಹೆಚ್ಚು ಸಂಭಾವನೆ ಸಿಗುತ್ತಿದ್ದ ಕಾಲದಲ್ಲಿ ಅವರಷ್ಟೇ, ಕೆಲವೊಮ್ಮೆ ಹೀರೊಗಳಿಗಿಂತಲೂ ಹೆಚ್ಚು ಸಂಭಾವನೆ ಪಡೆದು ಬೇಡಿಕೆಯ ನಟಿಯಾಗಿದ್ದಿದ್ದು ಈ ಬಹುಭಾಷಾ ನಟಿ ಶ್ರೀದೇವಿ. ಭಾರತೀಯ ಚಿತ್ರರಂಗದ ಅತಿಲೋಕ ಸುಂದರಿ ಶ್ರೀದೇವಿಯೇ ಒಂದು ಕೋಟಿ ಸಂಭಾವನೆ ಪಡೆದ ಮೊದಲ ನಟಿ ಎಂದು ವರದಿಗಳಾಗಿವೆ. ಆ ಮಟ್ಟಿಗೆ ಹವಾ ಹುಟ್ಟಿದ್ದು ಶ್ರೀದೇವಿ.

ಅದಾಗಲೇ ಬಾಲಿವುಡ್‌ನಲ್ಲಿ ಅದೆಷ್ಟೋ ನಟಿಯರು ಸ್ಟಾರ್ ಪಟ್ಟಕ್ಕೇರಿದ್ದರು. ದಕ್ಷಿಣ ಭಾರತದ ಮತ್ತೊಬ್ಬ ನಟಿ ರೇಖಾ ಕೂಡ ಅದಾಗಲೇ ಬಾಲಿವುಡ್‌ನಲ್ಲಿ ನೆಲೆಯೂರಿದ್ದರು. ಡ್ರೀಮ್ ಗರ್ಲ್ ಹೇಮಾ ಮಾಲಿನಿ ಇದ್ದರು. ಶ್ರೀದೇವಿ ಬಳಿಕ ಮಾಧುರಿ ದೀಕ್ಷಿತ್ ಬಂದರು. ಆದರೆ, ಈ ನಟಿಯರು ಟಾಪ್ ಸ್ಟಾರ್‌ಗಳ ಪಟ್ಟಿಯಲ್ಲಿದ್ದರೂ, ಒಂದು ಸಂಭಾವನೆ ಪಡೆಯುವ ವಿಚಾರದಲ್ಲಿ ಮಾತ್ರ ಹಿಂದೆ ಬಿದ್ದಿದ್ದರು.

Do you know who is Indias first one crore remuneration rupees actress here is the details

ಶ್ರೀದೇವಿ ಕಟ್ಟುನಿಟ್ಟಿನ ನಟಿ. ತನ್ನ ಪಾತ್ರವನ್ನು ಲೀಲಾಜಾಲವಾಗಿ ನಟಿಸಿ ಮುಗಿಸುತ್ತಿದ್ದರು. ಅದೇ ನಟನೆ ಮುಗಿದ ಬಳಿಕ ಗಂಭೀರ ಸ್ವರೂಪ ತಾಳುತ್ತಿದ್ದರು. ಈ ವಿಚಾರವನ್ನು ಬಾಲಿವುಡ್ ಮಂದಿ ಹಲವು ಬಾರಿ ಹೇಳಿಕೊಂಡಿದ್ದಾರೆ. ಬೇಡ ಅನಿಸಿದ್ದನ್ನು ನೇರವಾಗಿ ಹೇಳುತ್ತಿದ್ದ ನಟಿಯೀಕೆ. ಒಮ್ಮೆ ಅಂದು ಬಹುಬೇಡಿಕೆಯ ನಟನಾಗಿದ್ದ ಅಮಿತಾಭ್ ಬಚ್ಚನ್ ಜೊತೆ ನಟಿಸೋದಿಲ್ಲ ಅಂತ ಹೇಳಿಬಿಟ್ಟಿದ್ದರು. ಅದು ದೊಡ್ಡ ಸುದ್ದಿಯಾಗಿತ್ತು.

1986ರಲ್ಲಿ ಅಮಿತಾಭ್ ಬಚ್ಚನ್‌ಗೆ ಜೋಡಿಯಾಗಿ ಶ್ರೀದೇವಿಗೆ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ, ಶ್ರೀದೇವಿ ನೇರವಾಗಿ ಈ ಆಫರ್ ಅನ್ನು ತಿರಸ್ಕರಿಸಿದ್ದರು. ಬಳಿಕ 1992ರಲ್ಲಿ ಮತ್ತೆ 'ಖುದಾ ಗವಾ' ಸಿನಿಮಾಗೆ ಅಪ್ರೋಚ್ ಮಾಡಲಾಯ್ತು. ಈ ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮುನ್ನ ಶ್ರೀದೇವಿ ಹೇಳಿಕೆಯೊಂದನ್ನು ನೀಡಿದ್ದರು. "ಅಮಿತಾಭ್ ಬಚ್ಚನ್ ಸಿನಿಮಾದಲ್ಲಿ ನಾಯಕಿಯರಿಗೆ ಹೆಚ್ಚು ಕೆಲಸವಿರೋದಿಲ್ಲ" ಎಂದು ಹೇಳಿಕೆ ಕೊಟ್ಟಿದ್ದರು. ಹೀಗಾಗಿ 'ಖುದಾ ಗವಾ' ಸಿನಿಮಾವನ್ನು ತಿರಸ್ಕರಿಸಿದ್ದರು. ಬಳಿಕ ಸ್ಕ್ರಿಪ್ಟ್ ನೋಡಿ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದರೆ, ಶ್ರೀದೇವಿಯ ಈ ಹೇಳಿಕೆ ಅಂದು ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

More from Filmibeat

English summary
Sridevi was the first actress to charge one crore rupees as remuneration:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X