ರಾಜ್‌ಕುಮಾರ್‌ಗೆ ಇಂಗ್ಲಿಷ್ ಬರಲ್ಲ ಅಂತ ಆಡಿಕೊಳ್ತಿದ್ರು: ಆಂಗ್ಲ ಭಾಷೆ ಕಲಿಯಲು ವರದಪ್ಪ ಮಾಡಿದ್ದ ವ್ಯವಸ್ಥೆ ಏನು?

ಡಾ.ರಾಜ್‌ಕುಮಾರ್ ಓದಿದ್ದು ಬರೀ ನಾಲ್ಕನೇ ತರಗತಿ ಅಷ್ಟೇ. ಆದರೆ, ಅವರಲ್ಲಿದ್ದ ಬದುಕಿನ ಜ್ಞಾನ ಯಾವ ಪದವಿಗೂ ಕಮ್ಮಿಯಿರಲಿಲ್ಲ. ಅದನ್ನು ಅವರು ತಮ್ಮ ಜೀವಿತಾವಧಿಯಲ್ಲಿ ಸಾಬೀತು ಮಾಡಿದ್ದಾರೆ. ಅಣ್ಣಾವ್ರು ಆಡುತ್ತಿದ್ದ ಮಾತುಗಳು, ಭಾಷೆಯ ಮೇಲಿದ್ದ ಹಿಡಿತ ಇವೆಲ್ಲವೂ ಸಾಕ್ಷಿ ಎಂಬಂತೆ ಇತ್ತು. ಆದರೆ, ವರನಟನಿಗೆ ಒಂದು ದಿನ ಇಂಗ್ಲಿಷ್ ಕಲಿಯಬೇಕು ಅಂತ ಅನಿಸಿಬಿಡ್ತು.

ಸಿನಿಮಾ ಸೆಟ್ಟಿನಲ್ಲಿ ಅಣ್ಣಾವ್ರಿಗೆ ಇಂಗ್ಲಿಷ್ ಕಲೀಬೇಕು ಅಂತ ಅನಿಸೋಕೆ ಕಾರಣವಿದೆ. 60ರ ದಶಕದಲ್ಲಿ ರಾಜ್‌ಕುಮಾರ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಸೆಟ್ಟಲ್ಲಿ ಇದ್ದವರು, ತಂತ್ರಜ್ಞರು, ಅಣ್ಣಾವ್ರ ಸಹನಟರು ಇಂಗ್ಲಿಷ್ ಪದ ಬಳಸುತ್ತಿದ್ದರು.

Do you know why Rajkumar learned English while he was at the peak of his career

ಈ ಸಂದರ್ಭದಲ್ಲಿ ಕೆಲವರು ಅಣ್ಣಾವ್ರಿಗೆ ಇಂಗ್ಲಿಷ್ ಬರೋದಿಲ್ಲ ಅಂತ ಅವಮಾನ ಮಾಡಿದ್ದರಂತೆ. ಇದು ರಾಜ್‌ಕುಮಾರ್‌ಗೆ ಬೇಸರ ಆಗಿತ್ತಂತೆ. ಅದಕ್ಕೆ ಇಂಗ್ಲಿಷ್ ಕಲಿಯಲೇಬೇಕು ಅಂತ ನಿರ್ಧರಿಸಿದ್ದರು. ರಾಜ್‌ಕುಮಾರ್ ಇಂಗ್ಲಿಷ್ ಕಲೀಬೇಕು ಅಂತ ವರದಪ್ಪ ಅವರ ಬಳಿ ಹೇಳಿದ್ದೇಗೆ? ಹೇಗೆ ಕಲಿತರು ಅನ್ನೋದನ್ನು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಹಿರಿಯ ನಿರ್ದೇಶಕ ಆದಿತ್ಯ ಚಿಕ್ಕಣ್ಣ ಸ್ವಾರಸ್ಯಕರವಾಗಿ ಹೇಳಿಕೊಂಡಿದ್ದಾರೆ.

ಅಣ್ಣಾವ್ರು ತನಗೆ ಏನೇ ಬೇಕು ಅಂತಿದ್ದರೂ ಅದನ್ನು ವರದಪ್ಪ ಅವರ ಬಳಿ ಹೇಳುತ್ತಿದ್ದರು. ಹೀಗೊಮ್ಮೆ ವರದಪ್ಪ ಅವರ ಬಳಿ ರಾಜ್‌ಕುಮಾರ್ ಒಮ್ಮೆ ಇಂಗ್ಲಿಷ್ ಕಲಿಯಬೇಕು ಅಂದರು. ಆ ಕ್ಷಣವನ್ನು ಅದಿತ್ಯ ಚಿಕ್ಕಣ್ಣ ಹೀಗೆ ವಿವರಿಸಿದ್ದಾರೆ. "ಅಣ್ಣಾವ್ರಿಗೆ ಇಂಗ್ಲಿಷ್ ಬರೋದಿಲ್ಲ ಆಡಿಕೊಳ್ಳುವವರಂತೆ. ಅವರ ಜೊತೆಯಲ್ಲಿ ಇದ್ದವರು. ಸಹನಟರು ಎಲ್ಲರೂ ಹೇಳುತ್ತಿದ್ದರಂತೆ. ಎಡಕ್ಕೆ ಬನ್ನಿ, ಬಲಕ್ಕೆ ಬನ್ನಿ, ಸ್ವಲ್ಪ ಕ್ಯಾಮರಾ ಮುಂದಕ್ಕೆ ಹೋಗಿ, ಕ್ಯಾಮರಾದಿಂದ ಹಿಂದಕ್ಕೆ ಬನ್ನಿ ಅಂತ ಹೇಳೋರಂತೆ. ಇದು ಅಣ್ಣಾವ್ರಿಗೆ ಬಹಳ ಮುಜುಗರ ಆಗೋದಂತೆ. ಅಪ್ಪಣ್ಣನ (ವರದಣ್ಣ) ಬಳಿ ಈ ನೋವನ್ನು ತೋರಿಕೊಂಡರಂತೆ. ನನಗೆ ಇಂಗ್ಲಿಷ್ ಪದಗಳು ಗೊತ್ತಿಲ್ಲ. ಸ್ವಲ್ಪನಾದರೂ ಕಲಿತುಕೊಳ್ಳಲು ವ್ಯವಸ್ಥೆ ಮಾಡು ಎಂದಿದ್ದರಂತೆ." ಎಂದು ವಿವರಿಸಿದ್ದಾರೆ.

Do you know why Rajkumar learned English while he was at the peak of his career

ರಾಜ್‌ಕುಮಾರ್ ಬೇಡಿಕೆ ಇಡುತ್ತಿದ್ದಂತೆ ವರದಪ್ಪ ಅವರು ಇಂಗ್ಲಿಷ್ ಕಲಿಯಲು ಬೇಕಿರುವ ವ್ಯವಸ್ಥೆಯನ್ನು ಮಾಡಿದ್ದರು. ಇಂಗ್ಲೆಂಡ್‌ನಿಂದ ವಿಶೇಷ ಉಪಕರಣವನ್ನು ತರಿಸಿದ್ದರು. "ವರದಣ್ಣ ಅವರು ಇಂಗ್ಲೆಂಡ್‌ನಿಂದ ಲಿಂಕಾ ಫೋನ್ ಅಂತ ಒಂದು ಬುಕ್ ಬರುತ್ತೆ. ಒಂದು ಕ್ಯಾಸೆಟ್, ಹೆಡ್ ಫೋನ್ ಎಲ್ಲ ಬರುತ್ತಿತ್ತು. ಅದನ್ನು ತರಿಸಿಕೊಟ್ಟಿದ್ದರು. ಪ್ರಶ್ನೆ ಮತ್ತು ಅದಕ್ಕೆ ಉತ್ತರ ಇರುತ್ತಿತ್ತು. ಜೊತೆಗೆ ಎರಡು ಬುಕ್‌ಗಳು ಇರುತ್ತಿತ್ತು. ಅದರಲ್ಲಿ ಇಂಗ್ಲಿಷ್ ಇರುತ್ತೆ. ಅದನ್ನು ಓದಿಕೊಂಡು ಇವರು ಮಾತಾಡೋದು, ಇವರು ಮಾತಾಡಿದ್ದನೇ ಕೇಳುವುದು ಮಾಡುತ್ತಿದ್ದರು."

ರಾಜ್‌ಕುಮಾರ್ ಇಂಗ್ಲಿಷ್ ಕಲಿಯುತ್ತಿರೋದು ಬಹುತೇಕ ಮಂದಿಗೆ ಗೊತ್ತಿರಲಿಲ್ಲ. ಆದರೆ, ಈ ಸಮಯದಲ್ಲಿ ರಾಜ್‌ಕುಮಾರ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಅದ್ಯಾವ ಸಮಯದಲ್ಲಿ ಕಲಿತರೋ ಗೊತ್ತೇ ಇಲ್ಲ ಅಂತಾರೆ ಆದಿತ್ಯ ಚಿಕ್ಕಣ್ಣ. "ಇದ್ಯಾರಿಗೂ ಗೊತ್ತಿಲ್ಲ. ಅದೆಷ್ಟು ಹೊತ್ತಿನಲ್ಲಿ ಓದುತ್ತಿದ್ದರೋ ಆ ಪುಣ್ಯಾತ್ಮ ಗೊತ್ತಿಲ್ಲ. 62ರಿಂದ 67ನೇ ಇಸವಿ ವರೆಗೂ ಅವರು ಸಿಕ್ಕಾಪಟ್ಟೆ ಬ್ಯುಸಿ. ಅದರಲ್ಲಿ ಕಲಿತುಕೊಂಡು ಸ್ವಚ್ಚವಾಗಿ ಅಷ್ಟು ನಿಧಾನವಾಗಿ ಮಾತಾಡುತ್ತಿದ್ದರು. ಉಚ್ಚಾರಣೆ ಬಿಡಿ. ಇಂಗ್ಲಿಷ್‌ನಲ್ಲಿ ಒಂದು ಸಾಂಗ್ ಅನ್ನೇ ಹಾಡಿದ್ದಾರೆ." ಎಂದು ಹೇಳಿದ್ದಾರೆ.

ಇಂಗ್ಲಿಷ್ ಪದಗಳನ್ನು ಅರ್ಥ ಮಾಡಿಕೊಳ್ಳುವಷ್ಟು, ಹಾಡಿನಲ್ಲಿ ಡೈಲಾಗ್‌ಗಳಲ್ಲಿ ಬಳಸುವಷ್ಟು ಕಲಿತರು. ಹಲವು ಸಿನಿಮಾಗಳಲ್ಲಿ ರಾಜ್‌ಕುಮಾರ್ ಅವರ ಇಂಗ್ಲಿಷ್‌ ಅನ್ನು ನೋಡಬಹುದು. 'ಆಪರೇಷನ್ ಡೈಮಂಡ್ ರಾಕೆಟ್‌' ಸಿನಿಮಾದಲ್ಲಿ "ಇಫ್ ಯು ಕಮ್ ಟು ಡೇ..", 'ಶಂಕರ್ ಗುರು' ಸಿನಿಮಾದ "ಲವ್ ಮಿ ಔರ್ ಹೇಟ್ ಮೀ.." ಹಾಡುಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಇದರ ಜೊತೆ 'ಎರಡು ಕನಸು' ಸಿನಿಮಾದಲ್ಲಿ ಇಂಗ್ಲಿಷ್ ಪಾಠ ಮಾಡುವ ಪ್ರಾದ್ಯಾಪಕರಾಗಿಯೂ ಜನರಿಂದ ಮೆಚ್ಚುಗೆ ಗಳಿಸಿದ್ದರು.

More from Filmibeat

English summary
Someone insulted Rajkumar in the set of his film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X