ಶಿವಣ್ಣ ಜೊತೆ ಚಿಕ್ಕು ಬುಕ್ಕು ರೈಲು ಅಂತ ಹೆಜ್ಜೆ ಹಾಕಿದ್ದ ಈ ಬ್ಯೂಟಿ ಈಗೇನು ಮಾಡ್ತಿದ್ದಾರೆ?
2005ರಲ್ಲಿ ಕನ್ನಡ ಚಿತ್ರರಂಗಕ್ಕೆ ಮೆಗಾ ಹಿಟ್ ಕೊಟ್ಟ ಸಿನಿಮಾ 'ಜೋಗಿ'. ಶಿವಣ್ಣನ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟಿದ್ದ ಸಿನಿಮಾವಿದು. 19 ವರ್ಷಗಳ ಹಿಂದೆ ಈ ಸಿನಿಮಾಗಿದ್ದ ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ. ಶಿವಣ್ಣನ ಮ್ಯಾನರಿಸಂ, ಸಾಂಗ್ಸ್, ಪ್ರೇಮ್ ಡೈರೆಕ್ಷನ್ ಎಲ್ಲವೂ 'ಜೋಗಿ'ಯ ಹೈಲೈಟ್ ಆಗಿತ್ತು.
'ಜೋಗಿ' ಸಿನಿಮಾ ನೋಡಿ ಶಿವಣ್ಣನಿಗೆ ಎಷ್ಟು ಚಪ್ಪಾಳೆಗಳು ಬಿದ್ದಿದ್ದವೋ.. ಅಷ್ಟೇ ಮುಂಬೈನಿಂದ ಬಂದಿದ್ದ ನಟಿಗೂ ಸಿಕ್ಕಿತ್ತು. ಆ ನಟಿ ಸದ್ಯ ಸಿನಿಮಾಗಳಿಂದ ದೂರ ಇದ್ದಾರೆ. ಕಳೆದ 10 ವರ್ಷಗಳಿಂದ ನಟಿಸಿಲ್ಲ. 'ಜೋಗಿ' ಬಳಿಕ ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದ ನಟಿ ದಿಢೀರನೇ ಚಿತ್ರರಂಗದಿಂದ ಕಣ್ಮರೆಯಾಗಿದ್ದು ಯಾಕೆ? ಆ ನಟಿ ಯಾರು? ನಿಮಗೆ ನೆನಪಿದೆಯೇ?

ಮುಂಬೈನಿಂದ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಈ ನಟಿಯ ಜೆನ್ನಿಫರ್ ಕೊತ್ವಾಲ್. ಮೊದಲ ಸಿನಿಮಾದಲ್ಲಿ ಶಿವಣ್ಣನ ಎನರ್ಜಿಗೆ ಮ್ಯಾಚ್ ಮಾಡಿ "ಚುಕ್ಕು ಬುಕ್ಕು ರೈಲು ನಿಲ್ಲೋದಿಲ್ಲ ಎಲ್ಲೂ.." ಅಂತ ಹೆಜ್ಜೆ ಹಾಕಿದ್ದ ನಟೀಯಿಕೆ. 'ಜೋಗಿ' ಬಳಿಕ ಜೆನ್ನಿಫರ್ ಕೊತ್ವಾಲ್ ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ ಬಳಿಕ ಈ ನಟಿ ಎಲ್ಲಿಗೆ ಹೋದರು? ಈಗೇನು ಮಾಡುತ್ತಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ. .
ಜೆನ್ನಿಫರ್ ಕೊತ್ವಾಲ್ ಮುಂಬೈ ಮೂಲದ ನಟಿ. ಕೇವಲ 15ರ ಹರೆಯದಲ್ಲಿ ಜಾಹೀರಾತು ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದರು. ಟೂತ್ ಪೇಸ್ಟ್ ಕ್ಲೋಸ್ ಅಪ್ ಜಾಹೀರಾತಿನಲ್ಲಿ ಜೆನ್ನಿಫರ್ ಕಾಣಿಸಿಕೊಂಡಿದ್ದರು. ಇದೊಂದು ಜಾಹೀರಾತು ಅವರ ವೃತ್ತಿ ಬದುಕನ್ನು ಸಂಪೂರ್ಣ ಬದಲಾಯಿಸಿತ್ತು. ಒಂದರ ಹಿಂದೊಂದು ಜಾಹೀರಾತನಲ್ಲಿ ನಟಿಸುತ್ತಿದ್ದ ಈ ನಟಿ ನಿರ್ದೇಶಕ ಪ್ರೇಮ್ ಕಣ್ಣಿಗೆ ಬಿದ್ದಿದ್ದರು.

ಮುಂಬೈನಲ್ಲಿ ಜೆನ್ನಿಫರ್ ಕೊತ್ವಾಲ್ ಜಾಹೀರಾತುಗಳಲ್ಲಿ ಬ್ಯುಸಿಯಾಗಿದ್ದಾಗ ಪ್ರೇಮ್ ನಿರ್ದೇಶಿಸುವುದಕ್ಕೆ ಹೊರಟಿದ್ದ 'ಜೋಗಿ' ಸಿನಿಮಾಗೆ ಆಫರ್ ಬಂದಿತ್ತು. ನಿರ್ದೇಶಕ ಪ್ರೇಮ್ ಹಾಗೂ ನಿರ್ಮಾಪಕರು ಮುಂಬೈಗೆ ಹೋಗಿ ಲುಕ್ ಟೆಸ್ಟ್ ಮಾಡಿ ಬಂದಿದ್ದರು. ಜೆನ್ನಿಫರ್ ಕೊತ್ವಾಲ್ ಕತೆ ಕೇಳಿದ ಬಳಿಕ ಸಿನಿಮಾದಲ್ಲಿ ನಟಿಸುವುದಕ್ಕೆ ಒಪ್ಪಿದ್ದರು. 'ಜೋಗಿ' ಸಿನಿಮಾ ನಟಿಸುವಾಗ ಜೆನ್ನಿಫರ್‌ಗೆ ಕೇವಲ 21 ವರ್ಷ. ಭಾಷೆಯೇ ಗೊತ್ತಿಲ್ಲದ ನಟಿ ಕನ್ನಡ ಸಿನಿಮಾ ನಟಿಸಿ ಗೆದ್ದಿದ್ದರು.
ಕನ್ನಡಿಗರು ಇಂದಿಗೂ 'ಜೋಗಿ' ಸಿನಿಮಾದ ಈ ನಾಯಕಿಯನ್ನು ಮರೆತಿಲ್ಲ. ಆದರೆ, ಜೆನ್ನಿಫರ್ ಕೊತ್ವಾಲ್ ಅವರೇ ಸಿನಿಮಾದಿಂದ ದೂರ ಉಳಿದಿದ್ದಾರೆ. ಜೆನ್ನಿಫರ್‌ಗೀಗ 40 ವರ್ಷ ವಯಸ್ಸು. ಸಿನಿಮಾಗಳಲ್ಲಿ ಆಕ್ಟಿವ್ ಆಗಿ ಇಲ್ಲದೇ ಇದ್ದರೂ, ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಪ್ರೆಸೆಂಟ್ ಇದ್ದಾರೆ. 2011ರಲ್ಲಿ ತೆರೆಕಂಡ 'ಮತ್ತೊಂದು ಮದುವೆನಾ?' ಜೆನ್ನಿಫರ್ ಕೊತ್ವಾಲ್ ನಟಿಸಿದ ಕೊನೆಯ ಕನ್ನಡ ಸಿನಿಮಾ. ಆ ಬಳಿಕ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ.
ಕನ್ನಡ ಬಿಟ್ಟು ತೆಲುಗಿನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಅಲ್ಲಿ ನಟಿಸಿದ ಸಿನಿಮಾಗಳು ಕೈ ಹಿಡಿಯಲಿಲ್ಲ. 2014ರಲ್ಲಿ ಕೊನೆಯದಾಗಿ ಹಿಂದಿ ಟಿವಿ ಶೋ 'ಓ ಮೈ ಗೋಲ್ಡ್'ನಲ್ಲಿ ಕಾಣಿಸಿಕೊಂಡಿದ್ದರು. ಅದು ಬಿಟ್ಟರೆ, ಜೆನ್ನಿಫರ್ ಕೊತ್ವಾಲ್ ಮತ್ತೆ ತೆರೆಮೇಲೆ ಕಾಣಿಸಿಕೊಂಡಿದ್ದಿಲ್ಲ. ಅಷ್ಟಕ್ಕೂ ಜೆನ್ನಿಫರ್ ಸಿನಿಮಾದಿಂದ ದೂರ ಉಳಿಯಲು ಕಾರಣವೊಂದಿದೆ. ಡಿಸ್ಕ್ ಇಂಜುರಿ ಆಗಿದ್ದರಿಂದ ವರ್ಕ್‌ಔಟ್ ಮಾಡಲು ಆಗುತ್ತಿಲ್ಲ. ಹೀಗಾಗಿ ಬ್ಯೂಟಿಯನ್ನು ಮೆಂಟೈನ್ ಮಾಡಲು ಸಾಧ್ಯವಾಗುತ್ತಿಲ್ಲ.
ಇಷ್ಟೇ ಅಲ್ಲದೆ, ಸದಾ ಚಿಲ್ ಆಗಿರೋ ಜೆನ್ನಿಫರ್ ಕೊತ್ವಾಲ್‌ಗೆ ಐಟಂ ಸಾಂಗ್ ಹಾಗೂ ಅತಿಥಿ ಪಾತ್ರಗಳಲ್ಲಿಯೇ ನಟಿಸಲು ಹೆಚ್ಚು ಆಫರ್ ಬರುತ್ತಿತ್ತು. ಆದರೆ, ಐಟಂ ಸಾಂಗ್‌ಗಳಿಗೆ ಬಂದ ಆಫರ್ ಅನ್ನು ಜೆನ್ನಿಫರ್ ಕೊತ್ವಾಲ್ ತಿರಸ್ಕರಿಸುತ್ತಲೇ ಬಂದಿದ್ದಾರೆ. ಸದ್ಯ ತಮ್ಮದೇ ಪ್ರಪಂಚದಲ್ಲಿ ಬ್ಯುಸಿಯಾಗಿರೋ ನಟಿ ಮುಂಬೈನಲ್ಲಿ ನೆಲೆಸಿದ್ದಾರೆ. ಆಗಾಗ ಬೆಂಗಳೂರಿಗೆ ಬಂದು ಅವರ ಸ್ನೇಹಿತರನ್ನು ಭೇಟಿ ಮಾಡುತ್ತಾರೆ. ವಿದೇಶಗಳಿಗೆ ಸ್ನೇಹಿತರೊಂದಿಗೆ ಟ್ರಾವೆಲ್ ಮಾಡುತ್ತಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿದ್ದು, ಫೋಟೊ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.


Click it and Unblock the Notifications











