ಇನ್‌ಸ್ಟಾಗ್ರಾಂನಲ್ಲಿ ಕನ್ನಡ ಹೀರೊಗಳನ್ನೇ ಮೀರಿದ ಡಾ.ಬ್ರೋ;ಯಾವ್ಯಾವ ಹೀರೋ ಎಷ್ಟೆಷ್ಟು ಫಾಲೋವರ್ಸ್?

ಇದು ಡಿಜಿಟಲ್ ಜಮಾನ. ಇಲ್ಲಿ ಪ್ರತಿಭೆ ಇದ್ದರೆ ಯಾರು ಬೇಕಾದರೂ ಹೀರೊ ಆಗಬಹುದು. ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಂಡು ಬದುಕು ಕಟ್ಟಿಕೊಂಡಿರುವ ಅದೆಷ್ಟೋ ಮಂದಿ ಇದ್ದಾರೆ. ಇಂತಹದ್ದೇ ಒಂದು ಪ್ರತಿಭೆ ಡಾ.ಬ್ರೋ ಊರ್ಫ್ ಗಗನ್ ಶ್ರೀನಿವಾಸ್.

ಬಹುಶ: ಗಗನ್ ಶ್ರೀನಿವಾಸ್ ಗುರುತು ಹಿಡಿಯೋದು ಕಡಿಮೆ ಮಂದಿ. ಅದೇ ಡಾ.ಬ್ರೋ ಅಂದ್ರೆ ನೆಟ್ಟಿಗರ ಕಣ್ಣು ಕಿವಿಗಳೆಲ್ಲ ನೆಟ್ಟಗಾಗುತ್ತವೆ. ಇವರ ಮಾತಿಗೆ ಶೈಲಿಗೆ ಅದೆಷ್ಟೋ ಮಂದಿ ಫಿದಾ ಆಗಿದ್ದಾರೆ. ಕನ್ನಡದಲ್ಲೇ ಮಾಹಿತಿ ನೀಡುತ್ತಾ ಪ್ರಪಂಚ ತೋರಿಸೋ ಡಾ.ಬ್ರೋ ಈಗ ಯಾವ ಸೆಲೆಬ್ರೆಟಿಗಳಿಗೂ ಕಮ್ಮಿಯಿಲ್ಲ. ಸದ್ಯ ಅಯೋಧ್ಯೆಯಲ್ಲಿ ಬೀಡುಬಿಟ್ಟಿರೋ ಡಾ.ಬ್ರೋ ಶ್ರೀರಾಮ ಮಂದಿರ ಹಾಗೂ ಪ್ರಾಣ ಪ್ರತಿಷ್ಠಾಪನೆ ಬಗ್ಗೆ ಇಂಚಿಂಚು ಮಾಹಿತಿ ನೀಡುತ್ತಿದ್ದಾರೆ.

Dr Bro instagram followers more than Kichcha Sudeep, Darshan, Rakshit, Rishab

ಯಾಕಂದ್ರೆ, ಇನ್‌ಸ್ಟಾಗ್ರಾಂನಲ್ಲಿ, ಯೂಟ್ಯೂಬ್‌ನಲ್ಲಿ ಡಾ.ಬ್ರೋಗೆ ಮಿಲಿಯನ್‌ಗಟ್ಟೆ ಫಾಲೋವರ್ಸ್ ಇದ್ದಾರೆ. ಕನ್ನಡದ ಸ್ಟಾರ್ ನಟರಿಗೆ ಅಷ್ಟೊಂದು ಫಾಲೋವರ್ಸ್ ಇಲ್ಲ ಆ ಮಟ್ಟಿಗೆ ಡಾ.ಬ್ರೋಗೆ ಫಾಲೋವರ್ಸ್ ಇದ್ದಾರೆ. ಹಾಗಿದ್ರೆ, ಡಾ. ಬ್ರೋಗೆ ಎಷ್ಟು ಮಂದಿ ಫಾಲೋವರ್ಸ್ ಇದ್ದಾರೆ? ಕನ್ನಡದ ಯಾವ್ಯಾವ ಸೂಪರ್‌ಸ್ಟಾರ್‌ಗೆ, ಸ್ಟಾರ್‌ಗಳಿಗೆ ಎಷ್ಟೆಷ್ಟು ಬೆಂಬಲಿಗರಿದ್ದಾರೆ ಅನ್ನೋದನ್ನು ನೋಡೋಣ.

ಡಾ. ಬ್ರೋಗೆ ಫಾಲೋವರ್ಸ್ ಎಷ್ಟು?

"ನಮಸ್ಕಾರ ದೇವ್ರು.." ಇದು ಡಾ.ಬ್ರೋ ಟ್ರೇಡ್ ಮಾರ್ಕ್. ವಿಡಿಯೋ ಶುರು ಮಾಡುವುದಕ್ಕೆ ಮುಂಚೆ ಈ ಡೈಲಾಗ್‌ಬಿದ್ದರೆ, ಆ ವಿಡಿಯೋ ಹಿಟ್ ಆದಂತೆ. ಹೀಗೆ ತನ್ನದೇ ಶೈಲಿಯಲ್ಲಿ ಮಾತಾಡುತ್ತಾ, ವೀಕ್ಷಕರನ್ನು ರಂಜಿಸುತ್ತಿರುವ ಡಾ.ಬ್ರೋಗೆ ಇನ್‌ಸ್ಟಾಗ್ರಾಂನಲ್ಲಿ ಸುಮಾರು 2.2 ಮಿಲಿಯನ್ ಫಾಲೋವರ್ಸ್‌ ಇದ್ದಾರೆ. ಟ್ರಾವೆಲ್ ವ್ಲಾಗ್ ಮಾಡಿ ಇಷ್ಟೊಂದು ಜನರನ್ನು ಅತೀ ಕಡಿಮೆ ಸಮಯದಲ್ಲಿ ಸಂಪಾದಿಸಿದ ಯೂಟ್ಯೂಬರ್ ಡಾ.ಬ್ರೋ ಉರ್ಫ್ ಗಗನ್ ಶ್ರೀನಿವಾಸ್.

Dr Bro instagram followers more than Kichcha Sudeep, Darshan, Rakshit, Rishab

ಕಿಚ್ಚ ಸುದೀಪ್‌ಗೆ ಎಷ್ಟು ಫಾಲೋವರ್ಸ್?

ಕನ್ನಡದ ಸೂಪರ್‌ಸ್ಟಾರ್, ಬಹುಭಾಷಾ ನಟ ಕಿಚ್ಚ ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ತಮ್ಮ ಅಭಿಮಾನಿಗಳಿಗೆ ಯಾವುದೇ ರೀತಿಯ ಮಾಹಿತಿ ನೀಡಬೇಕು ಅಂದರೂ ಸೋಶಿಯಲ್ ಮೀಡಿಯಾವನ್ನೇ ಬಳಸುತ್ತಾರೆ. ಅದರಲ್ಲೂ ಹೆಚ್ಚಾಗಿ ಇನ್‌ಸ್ಟಾಗ್ರಾಂನಲ್ಲೆ ಹೆಚ್ಚು ಆಕ್ಟಿವ್ ಆಗಿರುತ್ತಾರೆ. ಇವರಿಗೂ ಡಾ.ಬ್ರೋ ಇರುವಷ್ಟೇ 2.2 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ದರ್ಶನ್ ಫಾಲೋವರ್ಸ್ ಎಷ್ಟು?

ಸ್ಯಾಂಡಲ್‌ವುಡ್‌ನಲ್ಲಿ ಅತಿ ದೊಡ್ಡ ಅಭಿಮಾನಿ ಬಳಗ ಹೊಂದಿರೋ ನಟ ದರ್ಶನ್. 'ಕಾಟೇರ' ಯಶಸ್ಸು ಕಂಡ ಮೇಲಂತೂ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದಾರೆ. ಸದ್ಯ ಇನ್‌ಸ್ಟಾಗ್ರಾನಲ್ಲಿ ದರ್ಶನ್‌ಗೆ ಸುಮಾರು 2 ಮಿಲಿಯನ್ ಮಂದಿ ಫಾಲೋವರ್ಸ್ ಇದ್ದಾರೆ.

Dr Bro instagram followers more than Kichcha Sudeep, Darshan, Rakshit, Rishab

ಯಶ್‌ಗೆ ಅತೀ ಹೆಚ್ಚು ಫಾಲೋವರ್ಸ್

ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದ್ಮೇಲೆ ಇನ್‌ಸ್ಟಾಗ್ರಾಂ ಫಾಲೋವರ್ಸ್‌ಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕನ್ನಡದ ಮಟ್ಟಿಗೆ ಅತೀ ಹೆಚ್ಚು ಫಾಲೋವರ್ಸ್ ಇರೋದು ಇವರಿಗೇನೆ. ಸುಮಾರು 13.4 ಮಿಲಿಯನ್‌ನಷ್ಟು ಫಾಲೋವರ್ಸ್ ಯಶ್‌ಗೆ ಇದ್ದಾರೆ.

ರಿಷಬ್, ರಕ್ಷಿತ್ ಧ್ರುವಾ ಸರ್ಜಾಗೆಷ್ಟು ಫಾಲೋವರ್ಸ?

ಕಿಚ್ಚ ಸುದೀಪ್, ದರ್ಶನ್‌ಗಿಂತ ಹೆಚ್ಚು ಫಾಲೋವರ್ಸ್ ಹೊಂದಿರೋ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ನಟಿಸಿದ್ದು ಕಡಿಮೆ ಸಿನಿಮಾ ಆದರೂ, ಸುಮಾರು 3.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ರಿಷಬ್ ಶೆಟ್ಟಿಗೆ 9.72 ಲಕ್ಷ ಫಾಲೋವರ್ಸ್ ಇದ್ದರೆ, ರಕ್ಷಿತ್ ಶೆಟ್ಟಿಗೆ 1.3 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಹಾಗೇ ಶಿವಣ್ಣ 5 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.

Dr Bro instagram followers more than Kichcha Sudeep, Darshan, Rakshit, Rishab

ಸದ್ಯ ಯೂಟ್ಯೂಬರ್ ಅಯೋಧ್ಯೆಯಲ್ಲಿ ರಾಮಮಂದಿರ ಕವರೇಜ್ ಮಾಡುತ್ತಿದ್ದಾರೆ. ಹೀಗಾಗಿ ಇನ್‌ಸ್ಟಾಗ್ರಾಂ ಫಾಲೋವರ್ಸ್‌ಗಳ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಹಾಗೇ ಯೂಟ್ಯೂಬ್‌ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ ಕೂಡ 2.3 ಮಿಲಿಯನ್‌ಗೆ ಏರಿಕೆಯಾಗಿದೆ.

More from Filmibeat

English summary
Dr Bro Instagram followers;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X