For Quick Alerts
  ALLOW NOTIFICATIONS  
  For Daily Alerts

  ಎಸ್ ಎಂ ಕೃಷ್ಣಗೆ ಕರೆ ಮಾಡಿದ್ದ ವೀರಪ್ಪನ್ ಕೊಟ್ಟ ಎಚ್ಚರಿಕೆ ಏನಾಗಿತ್ತು?

  |

  ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಬರೆದಿರುವ 'ಸ್ಮೃತಿವಾಹಿನಿ' ಆತ್ಮಕಥೆಯಲ್ಲಿ ರಾಜ್ ಕುಮಾರ್ ಕಿಡ್ನಾಪ್ ಕುರಿತು ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹಿಂದಿನ ಸ್ಟೋರಿಯಲ್ಲಿ ಅಣ್ಣಾವ್ರು ಕಿಡ್ನಾಪ್ ಆದ ಸಂದರ್ಭ ವಿವರಿಸಲಾಗಿತ್ತು. ಇದೀಗ, ಮುಂದೆ ಏನಾಯಿತು ಎಂಬುದನ್ನು ಈ ಸ್ಟೋರಿಯಲ್ಲಿ ತಿಳಿಸಲಾಗಿದೆ.

  ಎಸ್ ಎಂ ಕೃಷ್ಣ ಆತ್ಮಕಥೆಯಲ್ಲಿ ಡಾ ರಾಜ್ ಕಿಡ್ನಾಪ್ ಪ್ರಕರಣದ ರೋಚಕ ಕಥೆ ಬಹಿರಂಗಎಸ್ ಎಂ ಕೃಷ್ಣ ಆತ್ಮಕಥೆಯಲ್ಲಿ ಡಾ ರಾಜ್ ಕಿಡ್ನಾಪ್ ಪ್ರಕರಣದ ರೋಚಕ ಕಥೆ ಬಹಿರಂಗ

  ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರನ್ನು ಭೇಟಿ ಮಾಡಿ, ರಾಜ್ ಕುಮಾರ್ ಅವರನ್ನು ಬಿಡಿಸುವ ಸಲುವಾಗಿ ಮಾತುಕತೆ ಮುಗಿಸಿ ಬೆಂಗಳೂರಿಗೆ ವಾಪಸ್ ಆದ ಎಸ್ ಎಂ ಕೃಷ್ಣ ಅವರಿಗೆ ಆತಂಕ ಎದುರಾಗಿತ್ತು.

  ಏರ್ ಪೋರ್ಟ್ ನಿಂದ ಮನೆಗೆ ಬರಬೇಕಾದರೆ ಅನೇಕ ವೃತ್ತಗಳಲ್ಲಿ ಟೈರ್ ಸುಟ್ಟು ಪ್ರತಿಭಟನೆ ಮಾಡುತ್ತಿದ್ದರು. ಇದನ್ನು ಕಂಟ್ರೋಲ್ ಮಾಡದೆ ಇದ್ದರೆ 1991ರಲ್ಲಿ ನಡೆದ ಕಾವೇರಿ ಜಲವಿವಾದ ಘಟನೆ ಮರುಕಳಿಸಬಹುದು ಎಂಬ ಯೋಚನೆ ಅವರಲ್ಲಿ ಮೂಡಿತು. ಬಳಿಕ ಏನಾಯಿತು ಎಂಬುದನ್ನು ಮುಂದಿರುವ ಸ್ಲೈಡ್ ಗಳಲ್ಲಿ ಓದಿ....

  ತಮಿಳರ ಸುರಕ್ಷಿತ ಬಗ್ಗೆ ಜಾಗೃತಿ ವಹಿಸಲಾಯಿತು

  ತಮಿಳರ ಸುರಕ್ಷಿತ ಬಗ್ಗೆ ಜಾಗೃತಿ ವಹಿಸಲಾಯಿತು

  ಡಿಜಿ ಹಾಗೂ ಗೃಹಕಾರ್ಯದರ್ಶಿಗಳನ್ನು ಅನುಗ್ರಹಕ್ಕೆ ಕರೆಸಿದೆ. ಏನೇ ಬಂದರೂ ಕಾನೂನು ಮತ್ತು ಸುವ್ಯವಸ್ಥೆಗೆ ಮೊದಲ ಆಧ್ಯತೆ ಕೊಡಿ, ದುಷ್ಟಶಕ್ತಿಗಳು ಎಷ್ಟೇ ದೊಡ್ಡವರಾಗಿದ್ದರೂ ಅಥವಾ ಬಲಶಾಲಿಗಳಾಗಿದ್ದರೂ ಅವರನ್ನು ಮಟ್ಟ ಹಾಕಿ, ಒಬ್ಬನೇ ಒಬ್ಬ ತಮಿಳನ ಪ್ರಾಣ ಅಥವಾ ಅವರ ಆಸ್ತಿಪಾಸ್ತಿಗಳು ನಷ್ಟ ಆಗಬಾರದು, ಕರ್ನಾಟಕ ಶಾಂತಿ ಸೌಹಾರ್ದತೆಗೆ ಹೆಸರಾದ ಸ್ಥಳ, ಇದನ್ನು ಕಾಯ್ದುಕೊಳ್ಳಬೇಕೆಂದು ಕಠಿಣವಾದ ನಿರ್ದೇಶನ ನೀಡಿದೆ.

  ಪ್ರತ್ಯೇಕ ಕಂಟ್ರೋಲ್ ರೂಂ

  ಪ್ರತ್ಯೇಕ ಕಂಟ್ರೋಲ್ ರೂಂ

  ಮಾರನೆ ದಿನ ಬೆಳಗ್ಗೆ ವಿಧಾನಸೌಧದಲ್ಲಿ ಕಂಟ್ರೋಲ್ ರೂಂ ಮಾಡಿದೆ. ಮಾನಿಟರ್ ಟೀಂ ಮಾಡಿದೆ. ರಾಜ್ ಕುಮಾರ್ ಅಪಹರಣ ಸಂಬಂಧಪಟ್ಟಂತೆ ವರ್ತಮಾನಗಳು, ವೃತ್ತಾಂತಗಳು, ಗಾಸಿಪ್ ಗಳು, ದೂರದರ್ಶನ, ರೇಡಿಯೋ ಹಾಗೂ ಖಾಸಗಿ ಚಾನಲ್ ಗಳು ವರದಿಗಳಯ ಇದೆಲ್ಲವನ್ನು ಕಂಟ್ರೋಲ್ ರೂಂ ಪರಿಶೀಲಿಸಿ ಸಂಬಂಧಪಟ್ಟವರಿಗೆ ಕಳುಹಿಸುತ್ತಿದ್ದರು.

  ಕ್ಯಾಸೆಟ್ ಕಳುಹಿಸಿದ ವೀರಪ್ಪನ್

  ಕ್ಯಾಸೆಟ್ ಕಳುಹಿಸಿದ ವೀರಪ್ಪನ್

  ಕರುಣಾನಿಧಿಯವರ ಪ್ರಯತ್ನದಿಂದಾಗಿ ನಕ್ಕೀರನ್ ಗೋಪಾಲನ್ ಕಾಡಿಗೆ ಹೋದ. ವೀರಪ್ಪನ್ ಅವರನ್ನು ಭೇಟಿ ಮಾಡಿ, ರಾಜ್ ಕುಮಾರ್ ರವರ ಆರೋಗ್ಯ ಚೆನ್ನಾಗಿ ಇದ್ದ ಬಗ್ಗೆ ಹಾಗೂ ವೀರಪ್ಪನ್ ನನಗೆ ಕಳುಹಿಸಿದ ಕ್ಯಾಸೆಟ್ ವೊಂದರನ್ನು ತಂದುಕೊಟ್ಟ. ಒಂದು ವಿಚಾರ ಸ್ಪಷ್ಟವಾಯಿತು. ರಾಜ್ ಕುಮಾರ್ ಆರೋಗ್ಯವಾಗಿದ್ದು, ಪ್ರಾರ್ಥನೆ ಮಾಡುತ್ತಿದ್ದರು. ಯೋಗ ಮಾಡುತ್ತಿದ್ದರು. ಹಾಡನ್ನು ಹೇಳುತ್ತಿದ್ದರು. ಒಟ್ಟಾರೆ ರಾಜ್ ಕುಮಾರ್ ರವರು ಆ ಪರಿಸರಕ್ಕೆ ಒಗ್ಗಿಕೊಂಡಿದ್ದರು.

  ಡಾ.ರಾಜ್ ಬಗ್ಗೆ ಗೊತ್ತಿರಬೇಕಾದ ವಿಚಾರ: ನೀವು ತಿಳಿಯಿರಿ, ಬೇರೆಯವರಿಗೂ ಹೇಳಿರಿಡಾ.ರಾಜ್ ಬಗ್ಗೆ ಗೊತ್ತಿರಬೇಕಾದ ವಿಚಾರ: ನೀವು ತಿಳಿಯಿರಿ, ಬೇರೆಯವರಿಗೂ ಹೇಳಿರಿ

  ಬೇಡಿಕೆಯಿಟ್ಟಿದ್ದ ವೀರಪ್ಪನ್

  ಬೇಡಿಕೆಯಿಟ್ಟಿದ್ದ ವೀರಪ್ಪನ್

  ವೀರಪ್ಪನ್ ನನಗೆ ಕಳುಹಿಸಿದ ಕ್ಯಾಸೆಟ್ ನಲ್ಲಿ ಒಂದಿಷ್ಟು ಡಿಮ್ಯಾಂಡ್ ಇಟ್ಟಿದ್ದ. ಅದರಲ್ಲಿ ಹಣವು ಸೇರಿದಂತೆ ಅನೇಕ ಡಿಮ್ಯಾಂಡ್ ಗಳಿದ್ದವು. ಐದು ಸಾರಿ ಚೆನ್ನೈಗೆ ಹೋಗಿ ಕರುಣಾನಿಧಿಯವರನ್ನು ಭೇಟಿ ಮಾಡಿದೆ. ಅವರು ಒಂದು ಸಾರಿ ಬಂದರೆ ಒಳ್ಳೆಯದು ಅಂತ ಹೇಳಿ ಅವರನ್ನು ಬೆಂಗಳೂರಿಗೆ ವಿಧಾನಸೌಧಕ್ಕೆ ಕರೆಸಿದೆ. ಅರ್ಧಗಂಟೆ ವಿಧಾನಸೌಧದಲ್ಲಿದ್ದು ವೀರಪ್ಪನ್ ನಿಂದ ರಾಜ್ ಕುಮಾರ್ ರವನ್ನು ಬಿಡಿಸಿಕೊಂಡು ಬರುವುದಕ್ಕೆ ನಮ್ಮೆಲ್ಲರ ಸಹಕಾರವಿದೆಯೆಂಬ ಆಶ್ವಾಸನೆ ಕೊಟ್ಟು ಹೋದರು.

  ಅಂಬುಮಣಿ ರಾಮದಾಸ್ ಒಪ್ಪಲಿಲ್ಲ

  ಅಂಬುಮಣಿ ರಾಮದಾಸ್ ಒಪ್ಪಲಿಲ್ಲ

  ಪಟ್ಟಾಳಿ ಮಕ್ಕಳ್ ಕಟ್ಟಿ ಪಕ್ಷದ ಸ್ಥಾಪಕ ರಾಮದಾಸ್. ಅವರ ಮಗ ಅಂಬುಮಣಿ ರಾಮದಾಸ್ ಯುಪಿಎ ಮೊದಲಲ್ಲಿ ಅಂದರೆ ಪ್ರಧಾನಿ ಡಾ ಮನಮೋಹನ ಸಿಂಗ್ ರವರ ಸಚಿವಸಂಪುಟದಲ್ಲಿ ಆರೋಗ್ಯ ಸಚಿವ ಆಗಿದ್ದರು. ಅಂಬುಮಣಿ ರಾಮದಾಸ್ ಅವರ ತಂದೆಗೂ ವೀರಪ್ಪನ್ ಗೂ ಸಂಪರ್ಕವಿದೆ, ಅಂದ್ರೆ ಅವರು ಇಬ್ಬರು ವೆಣ್ಣಿಯಾರ್ ಜಾತಿಯವರು ಎಂದು, ಅವರನ್ನು ಹೋಗಿ ಸಂಪರ್ಕ ಮಾಡಿದ್ದಾಯಿತು. ಅದಕ್ಕೆ ಅವರು ಅಯ್ಯೂ ನಮಗೆ ಅವನ ಸಂಪರ್ಕವೇ ಇಲ್ಲ ಅಂತ ಹೇಳಿದರು. ಅನಂತರ ಮತ್ತೆ ಗೋಪಾಲನ್ ನನ್ನೇ ಕಾಡಿಗೆ ಕಳುಹಿಸಲಾಯಿತು.

  ಡಾ.ರಾಜ್ ಬಗ್ಗೆ ಗೊತ್ತಿರಬೇಕಾದ ವಿಚಾರ: ನೀವು ತಿಳಿಯಿರಿ, ಬೇರೆಯವರಿಗೂ ಹೇಳಿರಿಡಾ.ರಾಜ್ ಬಗ್ಗೆ ಗೊತ್ತಿರಬೇಕಾದ ವಿಚಾರ: ನೀವು ತಿಳಿಯಿರಿ, ಬೇರೆಯವರಿಗೂ ಹೇಳಿರಿ

  ಫೋನ್ ಮಾಡಿದ ವೀರಪ್ಪನ್

  ಫೋನ್ ಮಾಡಿದ ವೀರಪ್ಪನ್

  ಈ ಮಧ್ಯೆ ಒಂದು ದಿನ ಬೆಂಗಳೂರಿನಲ್ಲಿ ಟೆನ್ನಿಸ್ ಮ್ಯಾಚ್ ನೋಡುತ್ತಿದ್ದೆ, ಆಗ ನನ್ನ ಜೊತೆಗೆಯಿದ್ದ ರಾಘವೇಂದ್ರ ಶಾಸ್ತ್ರಿ ಅವರ ಮೊಬೈಲ್ ಗೆ ದೂರದ ಕಾಡಿನಿಂದ ಕರೆ. ನೋಡಿದರೆ ವೀರಪ್ಪನ್ ಮಾತು, ವಣಕ್ಕಂ ಅಂದೆ, ಆತನು ಕೂಡ ವಣಕ್ಕಂ ಅಂದ. ಆಮೇಲೆ 'ರಾಜ್ ಕುಮಾರ್ ಉಟ್ಟಿಡಂಗೋ' ಅಂತ ಕೇಳಿದೆ. ಅದಕ್ಕೆ ಸಾಧ್ಯವಿಲ್ಲ ನಾನು ಕೊಟ್ಟ ಷರತ್ತನ್ನು ಪರಿಪಾಲನೆ ಮಾಡಿದರೆ ಮಾತ್ರ ಬಿಡುಗಡೆ ಮಾಡುತ್ತೇನೆ ಇಲ್ಲದಿದ್ದರೆ ಕೊಂದುಹಾಕಿಬಿಡುತ್ತೇನೆ' ಅಂದ. ಆಮೇಲೆ ಟೈಂ ಕೇಳಿದೆ ನಾನೇ. ರಾಘವೇಂದ್ರ ಶಾಸ್ತ್ರಿ ಅವರು ವೀರಪ್ಪನ್ ಜೊತೆ ಸಂಧಾನ ನಡೆಸುವಾಗ ಸರ್ಕಾರಕ್ಕೆ ಅಮೂಲ್ಯ ಸಹಾಯ ಮಾಡಿದ್ದಾರೆ.

  ಕೊಳತ್ತೂರ್ ಮಣಿ ಸಂಪರ್ಕ

  ಕೊಳತ್ತೂರ್ ಮಣಿ ಸಂಪರ್ಕ

  ಈ ಮಧ್ಯೆ ಕೊಳತ್ತೂರ್ ಮಣಿ ಅಂತ ಒಬ್ಬರು ಇದ್ದಾರೆ. ಅವರದು ತಮಿಳುನಾಡಿನಲ್ಲಿ ಒಂದು ರಾಜಕೀಯ ಪಾರ್ಟಿ ಇದೆ. ಅವರಿಗೆ ವೀರಪ್ಪನ್ ಸಂಪರ್ಕವಿತ್ತು. ಅವರನ್ನು ಬೆಂಗಳೂರಿಗೆ ಕರೆಯಿಸಿ ಅವರ ಜೊತೆಯಲ್ಲಿ ಮಾತನಾಡಿ ''ನೀವು ಕಾಡಿಗೆ ಹೋಗಿ'' ಅಂತ ಹೇಳಿದೆ. ಅವರು ಆಯಿತು ಎಂದರು.

  ವೀರಪ್ಪನ್ ನಿಂದ ಕಿಡ್ನಾಪ್ ಆದ ಜಾಗದಲ್ಲೇ ಉದಯವಾಯಿತು 'ಡಾ.ರಾಜಕುಮಾರ್ ನಗರ'ವೀರಪ್ಪನ್ ನಿಂದ ಕಿಡ್ನಾಪ್ ಆದ ಜಾಗದಲ್ಲೇ ಉದಯವಾಯಿತು 'ಡಾ.ರಾಜಕುಮಾರ್ ನಗರ'

  ಇಷ್ಟ ಇಲ್ಲದಿದ್ದರೂ ಮಾತನಾಡಬೇಕಾಯಿತು

  ಇಷ್ಟ ಇಲ್ಲದಿದ್ದರೂ ಮಾತನಾಡಬೇಕಾಯಿತು

  ಈ ಮಧ್ಯೆ ನೆಡುಮಾರನ್ ಅಂತ ತೀವ್ರ ತಮಿಳುತನದ ಪ್ರತಿಪಾದಕರು. ರಾಜೀವಗಾಂಧಿ ಹತ್ಯೆ ಸಂದರ್ಭದಲ್ಲಿ ಅವರ ಹೆಸರು ಕೇಳಿಬರುತ್ತಿತ್ತು. ಕಾಂಗ್ರೆಸ್ ಪಕ್ಷದ ಸಿದ್ಧಾಂತದ ವಿರುದ್ಧವಾದ ವ್ಯಕ್ತಿಯ ಜೊತೆಗೆ ನಾನು ಮಾತನಾಡಲೇಬೇಕಾಯಿತು. ಇದು ಪರಿಸ್ಥಿತಿಯನ್ನು ಅವಲಂಬಿಸಿತ್ತು. ರಾಜ್ ಕುಮಾರ್ ರವರನ್ನು ಕರೆದುಕೊಂಡು ಬರುವುದು ನಮ್ಮಗಳ ಧ್ಯೇಯವಾಗಿತ್ತು. ವೀರಪ್ಪನ್ ಗೆ ಅವರ ಬಗ್ಗೆ ತುಂಬಾ ಗೌರವವಿದೆ ಅಂತ ಗೊತ್ತಾಯಿತು. ಅವರನ್ನು ಹೋಗಿ ನೋಡಿ ಏನಾದರೂ ಸಹಾಯ ಮಾಡಿ ಅಂತ ಹೇಳಿದೆ. ಅದಕ್ಕೆ ಅವರು 'ಬಹಳ ಕಷ್ಟವಿದೆ ಅವನು ಸುಲಭವಾಗಿ ಯಾವುದಕ್ಕೂ ಸಿಗುವವನಲ್ಲ ಆದರೂ ಪ್ರಯತ್ನ ಮಾಡುತ್ತೇನೆ, ಲೆಟರ್ ಗಿಟರ್ ಬರೆಯುತ್ತೇನೆ'' ಅಂದರು.

  ಪೊಲೀಸರ ಕೈಗೆ ಸಿಕ್ಕ ಆ ವ್ಯಕ್ತಿ ಯಾರು?

  ಪೊಲೀಸರ ಕೈಗೆ ಸಿಕ್ಕ ಆ ವ್ಯಕ್ತಿ ಯಾರು?

  ವೀರಪ್ಪನ್ ಅತ್ಯುತ್ತಮವಾದಂತಹ ಸಂಪರ್ಕಜಾಲವಿಟ್ಟುಕೊಂಡಿದ್ದ, ಬೇಕಾದಗ ನನಗೂ ಫೋನ್ ಮಾಡುತ್ತಿದ್ದ, ನಕ್ಕೀರನ್ ಗೋಪಾಲನ್ ಜೊತೆ ಮಾತನಾಡುತ್ತಿದ್ದ, ಕೊಳತ್ತೂರ್ ಮಣಿ ಹತ್ತಿರ ಮಾತನಾಡುತ್ತಿದ್ದ, ನೆಡಮಾರನ್ ಪತ್ರಕ್ಕೆ ಉತ್ತರ ಬರೆಯುತ್ತಿದ್ದ. ಈ ಮಧ್ಯೆ ಒಮ್ಮೆ ನಮ್ಮ ಪೊಲೀಸರು ಒಬ್ಬರನ್ನು ಹಿಡಿದುಕೊಂಡು ಬಂದರು....? ಯಾರು ಅವರು? ಅವರಿಂದ ಸರ್ಕಾರಕ್ಕೆ ಸಿಕ್ಕ ಮಾಹಿತಿ ಏನು? ವೀರಪ್ಪನ್ ಬಗ್ಗೆ ಆ ವ್ಯಕ್ತಿ ಬಿಟ್ಟುಕೊಟ್ಟ ಮಾಹಿತಿ ಏನು? ರಾಜ್ ಕಿಡ್ನಾಪ್ ಪ್ರಕರಣ ಮುಂದೆ ಏನಾಯಿತು ಎಂಬುದನ್ನು ಮತ್ತೊಂದು ಸ್ಟೋರಿಯಲ್ಲಿ ನೋಡೋಣ...ನಾಳೆ ನಿರೀಕ್ಷಿಸಿ.....

  ಈ ಹಿಂದಿನ ಸ್ಟೋರಿಯಲ್ಲಿ ರಾಜ್ ಕುಮಾರ್ ಕಿಡ್ನಾಪ್ ಪ್ರಕರಣದ ಆರಂಭದ ಘಟನೆಗಳಿವೆ. ಓದಲು ಈ ಲಿಂಕ್ ಕ್ಲಿಕ್ ಮಾಡಿ....

  English summary
  Karnataka Ex chief minister SM Krishna Wrote his own biography and he remembered Dr Rajkumar kidnap incident in this book.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X