For Quick Alerts
  ALLOW NOTIFICATIONS  
  For Daily Alerts

  ಎಸ್ ಎಂ ಕೃಷ್ಣ ಆತ್ಮಕಥೆಯಲ್ಲಿ ಡಾ ರಾಜ್ ಕಿಡ್ನಾಪ್ ಪ್ರಕರಣದ ರೋಚಕ ಕಥೆ ಬಹಿರಂಗ

  |

  ಕನ್ನಡ ಚಿತ್ರರಂಗದಲ್ಲಿ ಮತ್ತು ಕರ್ನಾಟಕದ ಇತಿಹಾಸದಲ್ಲಿ ವರನಟ ಡಾ ರಾಜ್ ಕುಮಾರ್ ಅವರ ಅಪಹರಣ ಪ್ರಕರಣ ಮರೆಯಲಾಗದ ಘಟನೆಯಾಗಿದೆ. 2000ನೇ ಇಸವಿ ಜುಲೈ 30 ರಂದು ರಾತ್ರಿ ಗಾಜನೂರಿನ ಫಾರ್ಮ್ ಹೌಸ್ನಿಂದ ಅಣ್ಣಾವ್ರನ್ನು ಕಿಡ್ನಾಪ್ ಮಾಡಿದ್ದ ವೀರಪ್ಪನ್ 108 ದಿನಗಳ ಬಳಿಕ ಬಿಡುಗಡೆ ಮಾಡಿದ್ದರು. ಈ ನಡುವೆ ರಾಜ್ಯದಲ್ಲಿ ಆತಂಕದ ಸನ್ನಿವೇಶಗಳು ಸೃಷ್ಟಿಯಾಗಿದ್ದವು. ರಾಜ್ಯಾದಂತ್ಯ ಪ್ರತಿಭಟನೆ, ಗಲಾಟೆ ಆರಂಭವಾಗಿದ್ದವು. ಸರ್ಕಾರಕ್ಕೆ ಇದು ಭಾರಿ ತಲೆನೋವು ತಂದಿತ್ತು.

  ರಾಜ್ ಕುಮಾರ್ ರನ್ನು ವೀರಪ್ಪನ್ ನಿಂದ ಬಿಡಿಸಲು ಅಂದಿನ ಕರ್ನಾಟಕದ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಸರ್ಕಾರ ಹರಸಾಹಸ ಪಟ್ಟಿತ್ತು. ಸರ್ಕಾರದ ವತಿಯಿಂದ ಅಣ್ಣಾವ್ರನ್ನು ಬಿಡಿಸಲು ಏನೆಲ್ಲಾ ಯೋಜನೆಗಳು ನಡೆದಿದ್ದವು, ಯಾವೆಲ್ಲ ಪ್ರಯತ್ನಗಳು ಸಾಗಿದ್ದವು ಎಂಬುದು ಮುಕ್ತವಾಗಿ ಯಾರಿಗೂ ಗೊತ್ತಿರಲಿಲ್ಲ.

  18 ವರ್ಷಗಳ ಬಳಿಕ ರಾಜ್ ಕಿಡ್ನಾಪ್ ತೀರ್ಪು : 9 ಆರೋಪಿಗಳು ಪ್ರಕರಣದಿಂದ ಖುಲಾಸೆ!18 ವರ್ಷಗಳ ಬಳಿಕ ರಾಜ್ ಕಿಡ್ನಾಪ್ ತೀರ್ಪು : 9 ಆರೋಪಿಗಳು ಪ್ರಕರಣದಿಂದ ಖುಲಾಸೆ!

  ಇದೀಗ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ''ಸ್ಮೃತಿವಾಹಿನಿ'' ಎಂಬ ಹೆಸರಿನಲ್ಲಿ ಆತ್ಮಕಥೆ ಬರೆದಿದ್ದಾರೆ. ಅಣ್ಣಾವ್ರು ಕಿಡ್ನಾಪ್ ಆದ ಬಳಿಕ ಏನೆಲ್ಲಾ ಆಯ್ತು, ರಾಜ್ ಅವರನ್ನು ಬಿಡಿಸಲು ಎಸ್ ಎಂ ಕೆ ಸರ್ಕಾರ ಏನು ಮಾಡಿತು ಎಂಬುದನ್ನು ವಿವರವಾಗಿ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ. ಮುಂದೆ ಓದಿ...

  (ಎಸ್ ಎಂ ಕೃಷ್ಣ ಅವರ 'ಸ್ಮೃತಿವಾಹಿನಿ' ಆತ್ಮಕಥೆಯಲ್ಲಿ ಬರೆದಿರುವಂತೆ ಯಥಾವತ್ತು ಸಾಲುಗಳನ್ನು ಇಲ್ಲಿ ಪ್ರಕಟಿಸಲಾಗಿದೆ)

  ಆಕಾಶ ಕಳಚಿ ಬಿದ್ದಂತ ಅನುಭವ

  ಆಕಾಶ ಕಳಚಿ ಬಿದ್ದಂತ ಅನುಭವ

  ದಿನನಿತ್ಯದಂತೆ ವಿಧಾನಸೌಧದಿಂದ ಅನುಗ್ರಹ ಮನೆಗೆ ಸಂಜೆ ಏಳು ಮೂವತ್ತು ಸಮಯ. ಕಾಫಿ ಕುಡಿಯುತ್ತಿದ್ದೆ, ಅಷ್ಟರಲ್ಲಿ ನಮ್ಮ ಆಪ್ತ ಸಹಾಯಕ ಪಾರ್ವತಮ್ಮ ರಾಜ್ ಕುಮಾರ್ ಮಾತನಾಡುತ್ತಾರೆ ಎನ್ನುತ್ತಾ ಫೋನ್ ಕೊಟ್ಟ. ಪಾರ್ವತಮ್ಮ ರಾಜ್ ಕುಮಾರ್ ಅವರು ಲೈನ್ ಗೆ ಬಂದರು. 'ಅಣ್ಣಾ, ರಾಜ್ ಕುಮಾರ್ ಅವರನ್ನು ವೀರಪ್ಪನ್ ಎತ್ತಿಕೊಂಡು ಹೋದ' ಎಂದರು. ಗಾಬರಿಯಾಗಿ 'ಏನ್ ಹೇಳ್ತಿದ್ದಿಯಾಮ್ಮಾ' ಅಂದೆ. ಈಗತಾನೆ ನಾನು ಮೈಸೂರಿಗೆ ಬಂದಿದ್ದೇನೆ. ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದೇನೆ. ಇನ್ನು ಎರಡೂವರೆ ಗಂಟೆ ಆಗಬಹುದು ಎಂದರು. ನನಗೆ ಒಮ್ಮೆಲೆ ಆಕಾಶ ಕಳಚಿ ಬಿದ್ದಂತಾಗಿ ಆತಂಕ ಶುರುವಾಯಿತು.

  ಸೇನಾನಿ ಹಾಗೂ ಕೃಪಾಕರ ಘಟನೆ ನೆನಪಾಯಿತು

  ಸೇನಾನಿ ಹಾಗೂ ಕೃಪಾಕರ ಘಟನೆ ನೆನಪಾಯಿತು

  ಪರಿಸ್ಥಿತಿ ಏನೇನು ಆಗುತ್ತದೋ ಅಂತ ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕಿದೆ. ಇದು ಯಾವ ರೀತಿ ಪರ್ಯಾವಸನಗೊಳ್ಳುತ್ತದೋ ಗೊತ್ತಿಲ್ಲ. ಪ್ರೇಮಾ ಜೊತೆಗೆ ಚರ್ಚಿಸಿದೆ. ನನ್ನ ಅಳಿಯ ಸಿದ್ಧಾರ್ಥನನ್ನು ಕರೆಸಿದೆ. ಅವನ ಸೋದರಿ ಸಂಬಂಧಿ ಸೇನಾನಿ ಹಾಗೂ ಕೃಪಾಕರ ಅವರಿಬ್ಬರು ಒಂದಿಷ್ಟು ದಿವಸ ಅಂದ್ರೆ ಜೆ ಎಚ್ ಪಟೇಲ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ವೀರಪ್ಪನ್ ಸೆರೆಯಲ್ಲಿದ್ದರು. ಅವರನ್ನು ವೀರಪ್ಪನ್ ಎತ್ತಿಕೊಂಡೆ ಹೋಗಿದ್ದ. ಇಬ್ಬರು ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರು. ಸೇನಾನಿಯೋ ಅಥವಾ ಕೃಪಾಕರನೋ ವೀರಪ್ಪನ್ ಗೆ ಮಾತನಾಡುವಷ್ಟು ಸಂಪರ್ಕವಿದೆಯೇ ಎನ್ನುವುದು ನನ್ನ ವಿಚಾರವಾಗಿತ್ತು. ಅಷ್ಟೊತ್ತಿಗೆ ಇಂಟೆಲಿಜೆನ್ಸ್ ನ ಮುಖ್ಯಸ್ಥರು ಡಿಜೆ ಗೃಹಮಂತ್ರಿ ಹಾಗೂ ಗೃಹಕಾರ್ಯದರ್ಶಿ, ಮುಖ್ಯಕಾರ್ಯದರ್ಶಿ ಎಲ್ಲಾ ಬಂದರು. ಪಾರ್ವತಮ್ಮ ರಾಜ್ ಕುಮಾರ್ ಬಂದರು.

  ಘಟನೆ ವಿವರಿಸಿದ ಪಾರ್ವತಮ್ಮ

  ಘಟನೆ ವಿವರಿಸಿದ ಪಾರ್ವತಮ್ಮ

  ಅಂದು ಸಂಜೆ ಪಾರ್ವತಮ್ಮ ಮತ್ತು ರಾಜ್ ಕುಮಾರ್ ಇಬ್ಬರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ಗಾಜನೂರಿನ ತಮ್ಮ ಮನೆಯಲ್ಲಿ ಮಲಗಿದ್ದರು. ಅದು ರಾಜ್ ಕುಮಾರ್ ಅವರ ಹುಟ್ಟೂರು. ಯಾರೋ ಬಾಗಿಲು ತಟ್ಟಿದರು. ಬಾಗಿಲು ತೆಗೆದರೆ ವೀರಪ್ಪನ್ ಮತ್ತು ಆತನ ಸಹಚರರು, ಹೆಗಲ ಮೇಲೆ ಬಂದೂಕು ನಾಲ್ಕು ಜನರ ಜೊತೆ ಒಳಗೆ ಬಂದ ವೀರಪ್ಪನ್ ನನ್ನ ಜೊತೆ ರಾಜ್ ಕುಮಾರ್ ಬರಬೇಕು ಇಲ್ಲವಾದಲ್ಲಿ ಸುಟ್ಟು ಬಿಡುತ್ತೇನೆ ಎಂದು ಹೇಳಿದ್ದಾನೆ. ರಾಜ್ ಕುಮಾರ್ 'ಅಗತ್ಯವಾಗಿ ಆಗಲಿ ಎಲ್ಲಿಗೆ ಬೇಕಾದರೂ ಬರುತ್ತೇನೆ' ಎಂದು ಹೇಳಿದ್ದಾರೆ.

  ಕರುಣಾನಿಧಿಗೆ ಫೋನ್ ಮಾಡಿದೆ

  ಕರುಣಾನಿಧಿಗೆ ಫೋನ್ ಮಾಡಿದೆ

  ರಾಜ್ ಕುಮಾರ್, ಪಾರ್ವತಮ್ಮ ಅವರ ತಮ್ಮ ಗೋವಿಂದರಾಜು, ಸಹಾಯಕ ನಿರ್ದೇಶಕ ನಾಗಪ್ಪ ಮರಡಗಿ ಅವರುಗಳನ್ನು ಕರೆದುಕೊಂಡ ಹೋದನು. ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಆ ಹಳ್ಳಿಯಲ್ಲಿ ದೂರವಾಣಿ ಸಂಪರ್ಕ ಇಲ್ಲ. ತಕ್ಷಣ ಮೈಸೂರಿಗೆ ಬಂದು ಅಲ್ಲಿಂದ ನಮಗೆ ದೂರವಾಣಿಯನ್ನು ಮಾಡಿದ್ದಾರೆ. ಅವರು ರಾತ್ರಿ ಒಂದು ಗಂಟೆಗೆ ಬಂದು ಇದೆಲ್ಲಾ ಹೇಳಿದರು. ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರಿಗೆ ದೂರವಾಣಿ ಮಾಡಿದೆ. ಅವರು 'ನಾ ಎನ್ನಂಗು ಪಣ್ರುದು' ಅಂತ ಕೇಳಿದರು. 'ನೇವೇನಾದರೂ ಮಾಡಲೇಬೇಕು ನಾಳೇ ಬರುತ್ತಿದ್ದೇನೆ' ಎಂದು ಹೇಳಿದೆ.

  ಮದ್ರಾಸ್ ಗೆ ಹೋಗಿ ಸಿಎಂ ಭೇಟಿ

  ಮದ್ರಾಸ್ ಗೆ ಹೋಗಿ ಸಿಎಂ ಭೇಟಿ

  ಮಾರನೇ ದಿನ ನಾನು ಮದ್ರಾಸ್ ಗೆ ಹೋಗಿ ಕರುಣಾನಿಧಿ ಅವರನ್ನು ಭೇಟಿ ಮಾಡಿದೆ. ನಾನು ಹೋಗುವಷ್ಟೊತ್ತಿಗೆ ತಮಿಳುನಾಡಿನ ಮುಖ್ಯಕಾರ್ಯದರ್ಶಿ, ಗೃಹಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಇಂಟೆಲಿಜೆನ್ಸ್ ಮುಖ್ಯಸ್ಥರು, ಅರಣ್ಯ ಅಧಿಕಾರಿಗಳು ಎಲ್ಲರನ್ನು ಕೂಡಿಸಿಕೊಂಡಿದ್ದರು ಕರುಣಾನಿಧಿಯವರು. ನೀವು ಏನಾದರೂ ಮಾಡಬೇಕು ಎಂದು ಮತ್ತೆ ಕೇಳಿದೆ.

  ವೀರಪ್ಪನ್ ನಿಂದ ಕಿಡ್ನಾಪ್ ಆದ ಜಾಗದಲ್ಲೇ ಉದಯವಾಯಿತು 'ಡಾ.ರಾಜಕುಮಾರ್ ನಗರ'ವೀರಪ್ಪನ್ ನಿಂದ ಕಿಡ್ನಾಪ್ ಆದ ಜಾಗದಲ್ಲೇ ಉದಯವಾಯಿತು 'ಡಾ.ರಾಜಕುಮಾರ್ ನಗರ'

  ನಕ್ಕೀರನ್ ಗೋಪಾಲ್ ಸಂಪರ್ಕ

  ನಕ್ಕೀರನ್ ಗೋಪಾಲ್ ಸಂಪರ್ಕ

  ಆಗ ಅವರು ಯೋಚನೆ ಮಾಡಿದರು. ಯಾರನ್ನಾದರೂ ಒಬ್ಬರನ್ನು ಅವರ ಹತ್ತಿರ ಕಳುಹಿಸಬೇಕು. ನಕ್ಕೀರನ್ ಗೋಪಾಲ್ ಅಂತ ಒಬ್ಬ ಪತ್ರಕರ್ತ ಇದ್ದ. ಅವನು ಆಗಾಗ್ಗೆ ವೀರಪ್ಪನ್ ಭೇಟಿ ಮಾಡಿ ಸಂಬಂಧಪಟ್ಟಂತೆ ಸುದ್ದಿಯನ್ನ ಕೂಡ ಪ್ರಕಟಿಸುತ್ತಿದ್ದ. ಅದು ತಮಿಳು ಓದುಗರಿಗೆ ತುಂಬಾ ಆಕರ್ಷಣೀಯವಾಗಿತ್ತು ಎಂದರು. ನಕ್ಕೀರನ್ ಗೋಪಾಲ್ ಅವರನ್ನ ಕರೆಸಿದೆವು. ಪ್ರಾರಂಭದಲ್ಲಿ ಆತ ಕಾಡಿಗೆ ಹೋಗಿ ವೀರಪ್ಪನ್ ಅವರನ್ನು ನೋಡಲಿಕ್ಕೆ ಅಂತ ಅಂಥ ಉತ್ಸಾಹವೇನು ತೋರಿಸಲಿಲ್ಲ. ನಾವೇ ಅವನಿಗೆ ಪ್ರಾರ್ಥಿಸಿ ಏನಾದರೂ ಮಾಡಿ ವೀರಪ್ಪನ್ ಸಂಪರ್ಕ ಮಾಡಿ ಅಂತ ಹೇಳಿ, ಸಂಜೆ ಬೆಂಗಳೂರಿಗೆ ಬಂದೆ.

  ಪ್ರತಿಭಟನೆ ಶುರುವಾಗಿತ್ತು

  ಪ್ರತಿಭಟನೆ ಶುರುವಾಗಿತ್ತು

  ಏರ್ ಪೋರ್ಟ್ ನಿಂದ ಮನೆಗೆ ಬರಬೇಕಾದರೆ ಅನೇಕ ವೃತ್ತಗಳಲ್ಲಿ ಟೈರ್ ಸುಟ್ಟು ಪ್ರತಿಭಟನೆ ಮಾಡುತ್ತಿದ್ದರು. ಗಾಸಿಪ್ ಗಳು, ನನಗೆ ತಕ್ಷಣ ಆರನೆಯ ಇಂದ್ರಿಯ ಕೆಲಸ ಮಾಡಿತು. ಇದನ್ನು ಕಂಟ್ರೋಲ್ ಮಾಡದೆ ಇದ್ದರೆ 1991ರಲ್ಲಿ ನಡೆದ ಕಾವೇರಿ ಜಲವಿವಾದ ಘಟನೆ ಮರುಕಳಿಸಬಹುದು.

  ಡಾ.ರಾಜ್ ಬಗ್ಗೆ ಗೊತ್ತಿರಬೇಕಾದ ವಿಚಾರ: ನೀವು ತಿಳಿಯಿರಿ, ಬೇರೆಯವರಿಗೂ ಹೇಳಿರಿಡಾ.ರಾಜ್ ಬಗ್ಗೆ ಗೊತ್ತಿರಬೇಕಾದ ವಿಚಾರ: ನೀವು ತಿಳಿಯಿರಿ, ಬೇರೆಯವರಿಗೂ ಹೇಳಿರಿ

  ಮುಂದೆ ಏನು ಆಯ್ತು?

  ಮುಂದೆ ಏನು ಆಯ್ತು?

  ಆತಂಕದಿಂದಲೇ ಬೆಂಗಳೂರಿಗೆ ಬಂದ ಎಸ್ ಎಂ ಕೃಷ್ಣ ಅವರಿಗೆ ಭವಿಷ್ಯ ಕಾಣ್ತಿತ್ತು. ಇದನ್ನು ಹೇಗೆ ನಿಭಾಯಿಸುವುದು ಹೇಗೆ ಎಂಬ ಗೊಂದಲವೂ ಸವಾಲು ಆಗಿತ್ತು. ಹಾಗಿದ್ರೆ, ಬೆಂಗಳೂರಿಗೆ ಬಂದ ಬಳಿಕ ಎಸ್ ಎಂ ಕೃಷ್ಣ ಏನು ಮಾಡಿದ್ರು? ಮುಂದೆ ಏನ್ ಆಯ್ತು? ಎಂಬುದನ್ನು ಮುಂದಿನ ಸ್ಟೋರಿಯಲ್ಲಿ ಪ್ರಕಟ ಮಾಡಲಾಗುತ್ತೆ....ನಿರೀಕ್ಷಿಸಿ....

  English summary
  Karnataka Ex chief minister SM Krishna Wrote his own biography and he remembered Dr Rajkumar kidnap incident in this book.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X