ದ್ರೌಪದಿಯ ಸೀರೆ ಎಳೆದ ದೃಶ್ಯ: ದುರ್ಯೋಧನನಿಗೆ ಜಾಮೀನು ರಹಿತ ವಾರೆಂಟ್: ಏನಿದು ಘಟನೆ?
ಇದು 80ರ ದಶಕದ ಕೊನೆಯಲ್ಲಿ ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಿದ ಮೆಗಾ ಧಾರಾವಾಹಿ 'ಮಹಾಭಾರತ'. ಇದರಲ್ಲಿ ಬರುವ ಒಂದೊಂದು ಪಾತ್ರವೂ ಇಂದಿಗೂ ಎಲ್ಲರ ನೆನಪಿನಲ್ಲಿ ಉಳಿದಿದೆ. ಅರ್ಜುನ್, ಕೃಷ್ಣ, ದುರ್ಯೋಧನ, ಭೀಷ್ಮ, ದ್ರೌಪದಿ, ಧರ್ಮರಾಯ ಎಲ್ಲರೂ ಹೀಗೇ ಇದ್ದಿರಬಹುದು ಅಂತಲೇ ವೀಕ್ಷಕರು ನಂಬಿದ್ದರು.
1988 ರಲ್ಲಿ ಮೆಗಾ ಧಾರಾವಾಹಿ 'ಮಹಾಭಾರತ' ಪ್ರಸಾರವಾಗಿತ್ತು. ಬಿಆರ್ ಚೋಪ್ರಾ ಹಾಗೂ ಅವರ ಮಗ ರವಿ ಚೋಪ್ರಾ ನಿರ್ದೇಶಿಸಿದ್ದರು. ಮಹಾಭಾರತದ ಎಲ್ಲಾ ಸಂಚಿಕೆಗಳನ್ನು ವೀಕ್ಷಕರು ತಪ್ಪದೆ ವೀಕ್ಷಿಸಿದ್ದಾರೆ. ಆ ಮಟ್ಟಿಗೆ ಕ್ರೇಜ್ ಹುಟ್ಟಾಕಿತ್ತು. ಇತ್ತೀಚೆಗೆ ಲಾಕ್‌ಡೌನ್ ಆದ ವೇಳೆನೂ 'ಮಹಾಭಾರತ' ಧಾರಾವಾಹಿ ಮತ್ತೆ ಪ್ರಸಾರ ಆಗಿತ್ತು. ಆಗಲೂ ಮೆಚ್ಚುಗೆ ಗಳಿಸಿತ್ತು.

ಆದರೆ, ಎಲ್ಲರ ಮೆಚ್ಚುಗೆ ಗಳಿಸಿದ್ದ ' ಮಹಾಭಾರತ'ದಂತಹ ಧಾರಾವಾಹಿಯ ಒಂದು ಸಂಚಿಕೆ ಮಾತ್ರ ವಿವಾದಕ್ಕೆ ಒಳಗಾಗಿತ್ತು. ದ್ರೌಪದಿಯ ವಸ್ತ್ರಾಪಹರಣ ಮಾಡಿದ್ದು ದುಶ್ಯಾಸನ ಆದರೂ, ದುರ್ಯೋಧನ ಪಾತ್ರದ ಮಾಡಿದ್ದ ನಟನನ್ನು ಪೇಚಿಗೆ ಸಿಲುಕಿತ್ತು. ಅಸಲಿಗೆ ಈ ಕಥೆಯೇನು? ಅಂದು ಏನಾಗಿತ್ತು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ದ್ರೌಪದಿ ವಸ್ತ್ರಾಪಹರಣ ವಿವಾದವೇನು?
ಬಿಆರ್ ಚೋಪ್ರಾ ಅವರ 'ಮಹಾಭಾರತ' ಧಾರಾವಾಹಿ ಇಂದಿಗೂ ಹಲವು ಮಂದಿಯ ಫೇವರಿಟ್. ಒಂದೊಂದು ದೃಶ್ಯವನ್ನು ನೋಡಿ ಆನಂದಿಸುವವರು ಇಂದಿಗೂ ಇದ್ದಾರೆ. ಕೆಲವೆಡೆಗೆ 'ಮಹಾಭಾರತ' ಪ್ರಸಾರ ಆಗುವಾಗ ಟಿವಿಗೆ ಪೂಜೆ ಮಾಡಿದ ಘಟನೆನೂ ನಡೆದಿತ್ತು. ಜನರು ಆ ಮಟ್ಟಿಗೆ ಭಾವನಾತ್ಮಕವಾಗಿ ಹೊಂದಿಕೊಂಡಿದ್ದರು.
ಆದರೆ, ಮಹಾಭಾರತದ ಒಂದು ದೃಶ್ಯ ವಿವಾದಕ್ಕೆ ಸಿಲುಕಿತ್ತು. ದ್ರೌಪದಿಯ ವಸ್ತ್ರಾಪರಣ ಮಾಡುವ ಸನ್ನಿವೇಶದ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಸಂದರ್ಶವೊಂದರಲ್ಲಿ ಈ ಘಟನೆ ಬಗ್ಗೆ ದುರ್ಯೋಧನ ಪಾತ್ರಧಾರಿ ಪುನೀತ್ ಇಸ್ಸಾರ್ ಹೇಳಿಕೊಂಡಿದ್ದಾರೆ.

ಪುನೀತ್ ಇಸ್ಸಾರ್ ವಿರುದ್ಧ ಜಾಮೀನು ರಹಿತ ವಾರೆಂಟ್
ಮಹಾಭಾರತದಲ್ಲಿ ದ್ರೌಪದಿಯ ಸೀರೆ ಎಳೆಯುವ ದೃಶ್ಯ ಪ್ರಸಾರ ಆಗುತ್ತಿದ್ದಂತೆ ದುರ್ಯೋಧನ ಪಾತ್ರಧಾರಿಯ ಮೇಲೆ ಕೋಪಗೊಂಡಿದ್ದರು. ಪುನೀತ್ ಇಸ್ಸಾರ್ ಮಹಾಭಾರತದಲ್ಲಿ ದುರ್ಯೋಧನನಾಗಿ ನಟಿಸಿದ್ದರು. ಇವರ ಮೇಲೆ ಜನರು ಎಷ್ಟು ಕೋಪಗೊಂಡಿದ್ದರು ಎಂದರೆ, ವಾರಾಣಾಸಿಯಲ್ಲಿ ವ್ಯಕ್ತಿಯೊಬ್ಬ ದೂರು ದಾಖಲಿಸಿದ್ದರಿಂದ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು.
ಈ ಸಂಬಂಧ ದುರ್ಯೋಧನ ಪಾತ್ರಧಾರಿ ಪುನೀತ್ ಇಸ್ಸಾರ್ ಅವರನ್ನು ಪೊಲೀಸರು ಬಂಧಿಸಿದ್ದರು. ಯಾರೋ ಒಬ್ಬರು ನ್ಯಾಯಾಲದಲ್ಲಿ ದೂರು ದಾಖಲಿಸಿದ್ದಾರೆ ಅನ್ನೋ ಸುಳಿವು ಇರಲಿಲ್ಲ. ಅದ್ಯಾಕೆ ವಾರೆಂಟ್ ಜಾರಿಯಾಗಿದೆ ಅನ್ನೋದು ಪುನೀತ್ ಇಸ್ಸಾರ್‌ಗೆ ಅರ್ಥವೇ ಆಗಿರಲಿಲ್ಲ. ಇದರಿಂದ ಅವರಿಗೆ ಅಸಮಧಾನವಾಗಿತ್ತು.
ದ್ರೌಪದಿಯ ವಸ್ತ್ರಾಪಹರಣ ಮಾಡಿದ್ದಕ್ಕೆ ಕೇಸ್
'ಮಹಾಭಾರತ'ದಲ್ಲಿ ದ್ರೌಪದಿಯ ವಸ್ತ್ರಾಪರಣ ಮಾಡಿದ್ದಕ್ಕೆ ವಾರಾಣಾಸಿಯ ವ್ಯಕ್ತಿಯೊಬ್ಬನಿಗೆ ದು:ಖ ಆಗಿತ್ತು. ಈ ಕಾರಣಕ್ಕೆ ಆತ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿದ್ದ. ಈ ವಿಷಯ ಕೇಳಿ ದುರ್ಯೋಧನ ಪಾತ್ರ ಮಾಡಿದ್ದ ಪುನೀತ್ ಇಸ್ಸಾರ್ ಶಾಕ್ ಆಗಿತ್ತು. " ನೀವು ನನ್ನನ್ನು ಬಂಧಿಸುವ ಬದಲು ಮಹಾಭಾರತದ ಲೇಖಕ ವ್ಯಾಸರನ್ನು ಬಂಧಿಸಿ" ಎಂದು ಪುನೀತ್ ಇಸ್ಸಾರ್ ಸಂದರ್ಶನದಲ್ಲಿ ಹೇಳಿದ್ದರು.
ಈ ಪ್ರಕರಣವನ್ನು 'ಮಹಾಭಾರತ' ಮೆಗಾ ಧಾರಾವಾಹಿಯನ್ನು ನಿರ್ಮಿಸಿದ್ದ ಬಿ ಆರ್ ಚೋಪ್ರಾ ಹಾಗೂ ರವಿ ಚೋಪ್ರಾ ಮಧ್ಯ ಪ್ರವೇಶಿಸಿ ಇತ್ಯರ್ಥ ಪಡಿಸಿದ್ದರು. ವಿಚಿತ್ರದ ಅಂದ್ರೆ, 28 ವರ್ಷಗಳ ಬಳಿಕ ಮತ್ತೆ ಅದೇ ವ್ಯಕ್ತಿ ಕೇಸ್ ದಾಖಲಿಸಿದ್ದ. ಈ ಬಾರಿ ದುರ್ಯೋಧನನೊಂದಿಗೆ ಫೋಟೊ ತೆಗಿಸಿಕೊಳ್ಳಲು ಈ ಕೃತ್ಯಕ್ಕೆ ಮುಂದಾಗಿದ್ದ ಎಂದು ಹೇಳಿದ್ದಾರೆ.


Click it and Unblock the Notifications











