ವಿಷ್ಣುವರ್ಧನ್, ಶ್ರೀದೇವಿ, ಪ್ರಕಾಶ್ ರಾಜ್ ನಟಿಸಿದ ಬೇಕಿದ್ದ 'ಆಲದಮರ' ಸೆಟ್ಟೇರಲಿಲ್ಲ ಯಾಕೆ? ಅಂತಹದ್ದೇನಾಯ್ತು?

ಕನ್ನಡದ ಕುಳ್ಳ ದ್ವಾರಕೀಶ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಜೋಡಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದ ಬಹುತೇಕ ಸಿನಿಮಾಗಳು ಇಂಡಸ್ಟ್ರಿ ಹಿಟ್‌. ಈ ಜೋಡಿ ಒಟ್ಟಿಗೆ ಒಂದು ಸಿನಿಮಾ ಅನೌನ್ಸ್ ಮಾಡಿದರೆ ಸಾಕು ಅದು ಹಿಟ್ ಅಂತ ಡಿಸೈಡ್ ಆಗಿಬಿಡುತ್ತಿದ್ದಂತ ಕಾಲವಿತ್ತು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ವಿಷ್ಣುದಾದ ಹಾಗೂ ದ್ವಾರಕೀಶ್ ಅವರದ್ದು ಎವರ್‌ಗ್ರೀನ್ ಜೋಡಿಗಳಲ್ಲಿ ಒಂದು.

ಒಂದಿಷ್ಟು ದಿನ ಮುನಿಸಿಕೊಂಡು ಜೋಡಿ ಬೇರೆಯಾಗಿತ್ತು. ಒಟ್ಟಿಗೆ ಸಿನಿಮಾ ಮಾಡುವುದನ್ನೇ ನಿಲ್ಲಿಸಿತ್ತು. ಇದರಿಂದ ಇಬ್ಬರಿಗೂ ನಷ್ಟ ಆಗಿದ್ದನ್ನು ಅರಿತು ಮತ್ತೆ 'ಆಪ್ತಮಿತ್ರ' ಸಿನಿಮಾ ಮೂಲಕ ಒಂದಾಗಿದ್ದರು. ಈ ಸಿನಿಮಾ 2004ರಲ್ಲಿ ತೆರೆಕಂಡು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಬರೆದಿತ್ತು. ಕಾಲವನ್ನು ತಡೆಯೋರು ಯಾರೂ ಇಲ್ಲ ಅಂತ ಈ ಜೋಡಿ ಗೆಲುವಿನ ನಗೆ ಬೀರಿದ್ದರು.

Dwarkeesh wants to do Aaladamara film with Vishnuvardhan Sridevi Prakash Raj but it couldn t happen

'ಆಪ್ತಮಿತ್ರ' ಸಿನಿಮಾ ಬಳಿಕ ಮತ್ತೆ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದವು ಎಂಬ ಸುದ್ದಿ ಹರಿದಾಡಿತ್ತು. ಹೀಗಾಗಿ ಮತ್ತೆ ಈ ಜೋಡಿ ಒಂದಾಗಲಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಇನ್‌ಸೈಡ್ ಸ್ಟೋರಿ ಬೇರೆನೇ ಇದೆ. ದ್ವಾರಕೀಶ್ ಹಾಗೂ ವಿಷ್ಣುದಾದ ಇಬ್ಬರೂ 'ಆಲದಮರ' ಎನ್ನುವ ಸಿನಿಮಾ ಮಾಡಬೇಕಿತ್ತು. ಟೈಟಲ್ ರಿಜಿಸ್ಟರ್ ಆಗಿತ್ತು. ವಿಷ್ಣುದಾದ ಜೊತೆ ಶ್ರೀದೇವಿ, ಪ್ರಕಾಶ್ ರಾಜ್‌ ಕೂಡ ಫಿಕ್ಸ್ ಆಗಿದ್ದರು. ಆದರೂ ಸಿನಿಮಾ ಸೆಟ್ಟೇರಲಿಲ್ಲ. ಯಾಕೆ ಎನ್ನುವುದನ್ನು ದ್ವಾರಕೀಶ್ ಪುತ್ರ ಯೋಗಿ ಡೈಲಿ ಮಾಧ್ಯಮ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ಮುಂದೆ ಓದಿ

ಆಪ್ತಮಿತ್ರ ಸಿನಿಮಾ ಬಳಿಕ ಬಹಳ ವರ್ಷಗಳ ಕಾಲ ಹೊಸ ಸಿನಿಮಾ ಮಾಡಲಿಲ್ಲ
ದ್ವಾರಕೀಶ್ 'ಆಪ್ತಮಿತ್ರ'ವನ್ನು ಜನರು ಮರೆಯಬೇಕು ಎಂದು ಬಯಸಿದ್ದರು
ವಿಷ್ಣುವರ್ಧನ್ ಸಿನಿಮಾಗಾಗಿ 'ಆಲದಮರ' ಟೈಟಲ್ ರಿಜಿಸ್ಟರ್ ಆಗಿತ್ತು
ವಿಷ್ಣುವರ್ಧನ್, ಶ್ರೀದೇವಿ, ಪ್ರಕಾಶ್ ರಾಜ್, ದ್ವಾರಕೀಶ್ ಸಿನಿಮಾ ಸೆಟ್ಟೇರಲಿಲ್ಲ

'ಆಪ್ತಮಿತ್ರ'ದಂತಹ ಮೆಗಾ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರೂ ತಕ್ಷಣವೇ ಇನ್ನೊಂದು ಸಿನಿಮಾ ಮಾಡಲಿಲ್ಲ. ಆರೇಳು ವರ್ಷದವರೆಗೂ ಸಿನಿಮಾ ಮಾಡದೇ ಇರುವುದಕ್ಕೆ ದ್ವಾರಕೀಶ್ ನಿರ್ಧರಿಸಿದ್ದರು. "ಆಪ್ತಮಿತ್ರ ಆದ್ಮೇಲೆ ಜನರು ಮರೆಯೋವರೆಗೂ ಸಿನಿಮಾ ಮಾಡುವುದು ಬೇಡ ಅಂತಿದ್ವಿ. ಆ ಸಿನಿಮಾ ಮಾಡುವಾಗ ಅಷ್ಟು ದೊಡ್ಡ ಹಿಟ್ ಆಗುತ್ತೆ ಅನ್ನೋದು ನಮಗೆ ಗೊತ್ತೇ ಇರಲಿಲ್ಲ. ಸಿನಿಮಾ ನಾವು ನಿರೀಕ್ಷೆ ಮಾಡದಷ್ಟು ಹಿಟ್ ಆಗಿ ಹೋಯ್ತು. ಈಗ ನಾವು ಏನೇ ಮಾಡಿದರೂ ಅದಕ್ಕೆ ಹೋಲಿಕೆ ಮಾಡುತ್ತಾರೆ. ಜನರು ಆಪ್ತಮಿತ್ರ ಮರೆಯಬೇಕು." ಎಂದು ದ್ವಾರಕೀಶ್ ಬಯಸಿದ್ದರು ಎನ್ನುತ್ತಾರೆ ಪುತ್ರ ಯೋಗಿ.

'ಆಪ್ತಮಿತ್ರ'ಗಿಂತ ಅದ್ಭುತ ಹಿಟ್‌ಗಳು ಬಂದಾಗ ಜನರು ಈ ಸಿನಿಮಾವನ್ನು ಮರೆಯುತ್ತಾರೆ. ಆಗ ಮತ್ತೊಂದು ಸಿನಿಮಾ ಅನೌನ್ಸ್ ಮಾಡೋಣ ಎನ್ನುವ ಪ್ಲಾನ್ ಇತ್ತು. ಕೊನೆಗೂ ಆ ಕಾಲ ಬಂದೇ ಬಿಟ್ಟಿತ್ತು. "2004ನಲ್ಲಿ ಆಪ್ತಮಿತ್ರ ಬಂತು. 2006 ಹಾಗೂ 2007ರಲ್ಲಿ 'ಮುಂಗಾರು ಮಳೆ', 'ಜೋಗಿ', 'ದುನಿಯಾ' ಹೀಗೆ ಮೇಜರ್ ಹಿಟ್ ಸಿನಿಮಾಗಳು ಬಂದವು. ಆಗ 2008ರಲ್ಲಿ ಈಗ ನಾವು ಕಮ್‌ ಬ್ಯಾಕ್ ಮಾಡಿ ಸಿನಿಮಾ ಮಾಡಬಹುದು ಅಂತ ನಾವು ಡಿಸೈಡ್ ಮಾಡಿದ್ವಿ. ಅದಕ್ಕೋಸ್ಕರ ಹೋಗಿ ನಾವು ಆಲದಮರ ಅಂತ ಟೈಟಲ್ ರಿಜಿಸ್ಟರ್ ಮಾಡಿದ್ವಿ. ವಿಷ್ಣುವರ್ಧನ್ ಅವರೊಂದಿಗೆ ಆ ಸಿನಿಮಾವನ್ನು ಮಾಡಲು ಅಪ್ಪ ಬಯಸಿದ್ದರು." ಎಂದು ದ್ವಾರಕೀಶ್ ಪುತ್ರ ರಿವೀಲ್ ಮಾಡಿದ್ದಾರೆ.

Dwarkeesh wants to do Aaladamara film with Vishnuvardhan Sridevi Prakash Raj but it couldn t happen

'ಆಲದಮರ' ಸಿನಿಮಾದಲ್ಲಿ ದ್ವಾರಕೀಶ್ ನಿರ್ದೇಶನ ಮಾಡುವವರಿದ್ದರು. ವಿಷ್ಣುದಾದ, ಶ್ರೀದೇವಿ ಹಾಗೂ ಪ್ರಕಾಶ್ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ, ಆ ಆಸೆ ಈಡೇರಲೇ ಇಲ್ಲ. "ಆಗ ಸುನಾಮಿ ಆಗಿತ್ತು. ಆ ವೇಳೆ ಎಷ್ಟೋ ಕಥೆಗಳು ಕೇಳಿದ ಮೇಲೆ ಅಪ್ಪನಿಗೆ ಒಂದು ಐಡಿಯಾ ಬಂತು. ಅದನ್ನು ಮಾಡೋಣ ಅಂತ ಡಿಸೈಡ್ ಮಾಡಿದೆವು. ಅಪ್ಪನೇ ನಿರ್ದೇಶನ ಮಾಡಬೇಕಿತ್ತು. ವಿಷ್ಣುವರ್ಧನ್, ಶ್ರೀದೇವಿ, ಪ್ರಕಾಶ್ ರಾಜ್ ಹಾಗೂ ದ್ವಾರಕೀಶ್ ಸ್ಟಾರ್ ಇತ್ತು. ಈ ಸಿನಿಮಾದಲ್ಲಿ ಯಾರೂ ವಿಲನ್ ಇರಲಿಲ್ಲ. ಯಜಮಾನ ತರ ಸಿನಿಮಾ. ಇನ್ನೇನು ಕೂತು ಕಥೆ ಮಾಡಿಸಬೇಕು ಅಂತ ಎಲ್ಲಾ ನಿರ್ಧಾರ ಆಗಿತ್ತು. 2009ರಲ್ಲಿ ವಿಷ್ಣುವರ್ಧನ್ ಅಂಕಲ್ ತೀರಿಕೊಂಡರು." ಎಂದು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ದ್ವಾರಕೀಶ್ ನಿರ್ದೇಶಿಸಬೇಕಿದ್ದ 'ಆಲದಮರ' ಸಿನಿಮಾ ಬಗ್ಗೆ ವಿಷ್ಣುವರ್ಧನ್ ಅವರೊಂದಿಗೆ ಡಿಸೆಂಬರ್ 15ರಂದು ಫೋನ್‌ನಲ್ಲಿ ಮಾತುಕಥೆ ನಡೆಸಿದ್ದರು. "ಡಿಸೆಂಬರ್ 30ಕ್ಕೆ ಬರುತ್ತೇನೆ. ನ್ಯೂ ಇಯರ್ ಪಾರ್ಟಿಯಿದೆ. ಅದಾದ್ಮೇಲೆ ಸಿಗೋಣ ಎಂದು ವಿಷ್ಣುವರ್ಧನ್ ಅಂಕಲ್‌ ಅಪ್ಪಗೆ ಹೇಳಿದ್ದರು." ಎಂದು ಯೋಗಿ ಸ್ಮರಿಸಿಕೊಳ್ಳುತ್ತಾರೆ. ಆದರೆ, ಅಷ್ಟರಲ್ಲೇ ವಿಷ್ಣುವರ್ಧನ್ ಇಹಲೋಕ ತ್ಯಜಿಸಿಬಿಟ್ಟರು.

More from Filmibeat

English summary
Dwarkeesh wants to do Aaladamara film with Vishnuvardhan, Sridevi, Prakash Raj, but it couldn't happen.
Read more about: dwarkeesh vishnuvardhan sridevi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X