'ಓಂ' ಉಪ್ಪಿಯ ರಿಯಲ್ ಲೈಫ್ ಗೆಳೆಯನದ್ದೇ ಕಥೆ: ಆ ಸ್ನೇಹಿತ ಯಾರು? ಆತನ ಹಿನ್ನೆಲೆ ಏನು?

'ಓಂ' ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾ ರೀ ರಿಲೀಸ್ ಆದಷ್ಟು ಬೇರೆ ಯಾವುದೂ ತೆರೆಕಂಡ ಉದಾಹರಣೆಗಳಿಲ್ಲ. ಈ ಸಿನಿಮಾ ಮರು ಬಿಡುಗಡೆ ಆದಾಗಲೆಲ್ಲನೂ ಗೆದ್ದಿರುವುದು ವಿಶೇಷ. ಶಿವರಾಜ್‌ಕುಮಾರ್ ಹಾಗೂ ಉಪೇಂದ್ರ ಕಾಂಬಿನೇಷನ್‌ನಲ್ಲಿ ತೆರೆಕಂಡಿದ್ದ 'ಓಂ' ಕನ್ನಡದ ದಿಕ್ಕನ್ನೇ ಬದಲಿಸಿದ ಸಿನಿಮಾ.

ಉಪೇಂದ್ರ ನಿರ್ದೇಶಿಸಿದ 'ಓಂ' ಬಿಡುಗಡೆಯಾಗಿ ಸುಮಾರು 29 ವರ್ಷಗಳಾಗಿದ್ದರೂ, ಇನ್ನೂ ಆ ಸಿನಿಮಾ ಬಗ್ಗೆ ಚರ್ಚೆಯಾಗುವುದು ನಿಂತಿಲ್ಲ. ಇಷ್ಟು ಸದ್ದು ಮಾಡಿದ ಸಿನಿಮಾ ಕಥೆ ರಿಯಲ್‌ ಸ್ಟಾರ್ ಉಪೇಂದ್ರ ಅವರ ಸ್ನೇಹಿತನದ್ದೇ ಅನ್ನೋದು ಇನ್ನೊಂದು ಇಂಟ್ರೆಸ್ಟಿಂಗ್ ಕಥೆ. ಉಪೇಂದ್ರ ಅವರ ಕಾಲೇಜು ದಿನಗಳಲ್ಲಿಯೇ ಈ ಸಿನಿಮಾದ ಕಥೆ ಹುಟ್ಟುಕೊಂಡಿತ್ತು. ಆ ಸಿನಿಮಾಗೆ 'ಪುರುಶಿ' ಅಂತ ಟೈಟಲ್ ಇಟ್ಟುಕೊಂಡಿದ್ದರು.

Evergreen Kannada movie Om is based on Upendra s real life friend do you know how is that

'ಓಂ' ಸಿನಿಮಾದ ಕಥೆ ಹುಟ್ಟಿಕೊಂಡ ರೋಚಕ ಸಂಗತಿಯನ್ನು ಉಪ್ಪಿಯ ಸ್ನೇಹಿತ ಮುರಳಿ ಮೋಹನ್ ನಿರೂಪಕ ಗೌರಿಶ್ ಅಕ್ಕಿ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದರು. 'ಓಂ' ಸಿನಿಮಾ ಸ್ಕ್ರಿಪ್ಟ್ ಯಾವಾಗ ಶುರುವಾಗಿತ್ತು? ಉಪ್ಪಿಯ ರಿಯಲ್‌ ಲೈಫ್ ಗೆಳೆಯ ಯಾರು? ಓಂ ಕಥೆ ಸಿಕ್ಕಿದ್ದು ಹೇಗೆ? ಅನ್ನೋದನ್ನು ರಿವೀಲ್ ಮಾಡಿದ್ದರು.

ಓಂ ಸಿನಿಮಾ ಸ್ಕ್ರಿಪ್ಟ್ ಕೆಲಸ ಅಸಲಿಗೆ 93ರಲ್ಲಿ ಶುರುವಾಗಿತ್ತು. ಆದರೆ, ಅದು ಹುಟ್ಟಿದ್ದನ್ನು ಉಪೇಂದ್ರ ಅವರ ಕಾಲೇಜು ದಿನಗಳಲ್ಲಿ. ಉಪ್ಪಿ ಹಾಗೂ ಮುರಳಿ ಮೋಹನ್ ಒಂದೇ ಕಾಲೇಜು ಆಚಾರ್ಯ ಪಾಠ ಶಾಲೆಯಲ್ಲಿ ಓದುತ್ತಿರುತ್ತಾರೆ. ಉಪೇಂದ್ರಗೆ ಸುದೀಂದ್ರ ಅಂತ ಅಣ್ಣ ಇದ್ದಾರೆ. ಅವರಿಗೆ ತುಂಬಾ ಜನ ಸ್ನೇಹಿತರು ಇದ್ದರು. ಅವರ ಮನೆ ಚಿಕ್ಕದಿದ್ದರೂ, ಆ ಮನೆಗೆ ತುಂಬಾ ಜನ ಸ್ನೇಹಿತರು ಬರುತ್ತಿದ್ದರು. ಅವರಲ್ಲಿ ಇಬ್ಬರು ಪುರುಶೋತ್ತಮ. ಈ ಪುರುಷೋತ್ತಮ ಒಂದು ಹುಡುಗಿ ವಿಷಯಕ್ಕೆ ಅಂಡರ್‌ವರ್ಲ್ಡ್‌ಗೆ ಎಂಟ್ರಿ ಆಗುತ್ತಾನೆ. ಅಲ್ಲಿಂದ 'ಓಂ' ಹಿಂದಿರುವ ಅಸಲಿ ನಾಯಕನ ಹುಟ್ಟಿಕೊಳ್ಳುತ್ತಾ ಹೋಗುತ್ತೆ. ಆ ವಿಷಯವನ್ನು ಮುರಳಿ ಮೋಹನ್ ರಿವೀಲ್ ಮಾಡಿದ್ದರು.

"ಆ ಹುಡುಗಿ ಮೊದಲು ಪುರುಷೋತ್ತಮನನ್ನು ಬಳಸಿಕೊಳ್ಳುತ್ತಾಳೆ. ಒಬ್ಬ ರೌಡಿ ಜೊತೆಯಲ್ಲಿ ಇದ್ದರೆ ಸೇಪ್ಟಿ ಇರುತ್ತೆ ಅಂದುಕೊಳ್ಳುತ್ತಾಳೆ. ಆ ಮೇಲೆ ಅವಳಿಗೆ ಆ ರೌಡಿ ಜೊತೆ ಇದ್ದಿದ್ದೇ ಕಷ್ಟ ಆಗುತ್ತೆ. ಹೀಗಾಗಿ ಅವಳು ಸ್ವಲ್ಪ ಬೇರೆ ಆಗುತ್ತಾ ಹೋಗುತ್ತಾಳೆ. ಆಗ ಅವಳಿಗೆ ಎಂಗೇಜ್ಮೆಂಟ್ ಆಗುತ್ತಿದ್ದಾಗ, ಇವನು ಹೋಗಿ ಗಲಾಟೆ ಮಾಡಿರುತ್ತಾನೆ. ಅವನು ರೌಡಿಸಂ ಲಿಂಕ್ ಇರುವ ಹುಡುಗ. ಜೈಲಿಗೆಲ್ಲ ಹೋಗಿ ಏನೇನೋ ಆಗಿರುತ್ತೆ. ಆಗ ಅವನು ತನ್ನ ವಿಷಯವನ್ನೆಲ್ಲ ಉಪ್ಪಿಗೆ ಹೇಳುತ್ತಿರುತ್ತಾನೆ." ಎಂದು ಮುರಳಿ ಮೋಹನ್ ಸಂದರ್ಶನದಲ್ಲಿ ಹೇಳಿದ್ದರು.

Evergreen Kannada movie Om is based on Upendra s real life friend do you know how is that

ಆ ಸಮಯದಲ್ಲಿ ಉಪ್ಪಿ ಅವನು ಹೇಳಿದ ಸನ್ನಿವೇಶಗಳನ್ನೆಲ್ಲ ಬರೆದಿಟ್ಟುಕೊಳ್ಳುತ್ತಿರುತ್ತಾರೆ. ಉಪ್ಪಿನೂ ಪುರುಷೋತ್ತಮನಿಗೆ ಅವನ ಲವ್ವರ್‌ಗೆ ಕೊಡುವುದಕ್ಕೆ ಕವನಗಳನ್ನು ಬರೆದುಕೊಡುತ್ತಿರುತ್ತಾರೆ. ಆತ ತರಹದ ಒಂದು ಸನ್ನಿವೇಶದಲ್ಲಿ ರಿಯಲ್ ಲೈಫ್ ಸ್ನೇಹಿತನ ಕಥೆ ಹುಟ್ಟಿಕೊಳ್ಳುತ್ತೆ. 'ಪುರುಶಿ' ಅಂತ ಒಂದು ಕಾನ್ಸೆಪ್ಟ್ ಹುಟ್ಟುತ್ತೆ. ಆದರೆ, ನಿರ್ಮಾಣ ಆಗಿ ರಿಲೀಸ್ ಆಗುವ ವೇಳೆ ಸೆನ್ಸಾರ್ ಸಮಸ್ಯೆ ಆಗಿತ್ತು.

"ಓಂ ಸಿನಿಮಾ ರಿಲೀಸ್ ಆದಾಗ ವಾತಾವರಣ ಬೇರೆನೇ ಇತ್ತು. ಯಾಕಂದ್ರೆ, ಸಿನಿಮಾ ಸೆನ್ಸಾರ್‌ನಲ್ಲಿ ಬ್ಯಾನ್ ಆಗಿತ್ತು. ಈ ಸಂಜೆ, ಸಂಜೆವಾಣಿಯಲ್ಲಿ ಸುದ್ದಿ ಬಂದು ಬಿಡ್ತು. ರಾಜ್‌ಕುಮಾರ್ ಕಂಪನಿ ಸಿನಿಮಾ ಪ್ರದರ್ಶನ ಮಾಡುವುದಕ್ಕೆ ಯೋಗ್ಯವಲ್ಲ ಅಂತ ಕೊಟ್ಟಿದ್ದರು." ಎಂದು ಆ ದಿನವನ್ನು ನೆನಪಿಸಿಕೊಳ್ಳುತ್ತಾರೆ.

ಸೆನ್ಸಾರ್ ಬೋರ್ಡ್‌ನವರು ಅವರೊಂದಿಷ್ಟು ಕಾರಣಗಳನ್ನು ಕೊಟ್ಟಿದ್ದರು. ನಿಮ್ಮ ಸಿನಿಮಾದಲ್ಲಿ ರೌಡಿಗಳು ರಾರಾಜಿಸುತ್ತಿದೆ ಎಂದಿದ್ದರು. ಹಾಗೇ ಅಲ್ಲಿವರೆಗೂ ಕಾಣಿಸಿಕೊಳ್ಳುತ್ತಿದ್ದ ಶಿವಣ್ಣನೇ ಬೇರೆ ಆಗಿದ್ದರು. ಜೊತೆ ರಾಜ್‌ಕುಮಾರ್ ಕಂಪನಿ ಸಿನಿಮಾ ಬೇರೆ. ಈ ಎಲ್ಲಾ ಕಾರಣಗಳಿಂದ ಓಂ ಸಿನಿಮಾ ಬಿಡುಗಡೆಗೂ ಮುನ್ನ ದೊಡ್ಡ ಹೈಪ್ ಕ್ರಿಯೇಟ್ ಮಾಡಿತ್ತು. ಇಷ್ಟೆಲ್ಲ ಅಡೆತಡೆಗಳನ್ನು ಎದುರಿಸಿ ಸಿನಿಮಾ 100 ದಿನಗಳನ್ನು ಪೂರೈಸಿತ್ತು. ಆಗ ಪಾರ್ವತಮ್ಮ ರಾಜ್‌ಕುಮಾರ್ ಸಿನಿಮಾ ಚೆನ್ನಾಗಿದೆ ಅಂತ ಹೇಳಿದ್ದರು.

"ಪಾರ್ವತಮ್ಮನವರು ಹೇಳಿದ್ರು. ತುಂಬಾ ಖುಷಿ ಆಯ್ತು. ನೀವೆಲ್ಲ ಕಷ್ಟ ಪಟ್ಟಿದ್ದಕ್ಕೆ ಪಿಚ್ಚರ್ ಹಿಟ್ ಆಯ್ತು. ಒಳ್ಳೆಯ ಹೆಸರು ಮಾಡುತ್ತಿದೆ. ಹಾಗೇ ದುಡ್ಡು ಮಾಡುತ್ತಿದೆ. ನೀವೆಲ್ಲ ಎಷ್ಟು ಕಷ್ಟ ಪಟ್ಟಿದ್ದೀರ ಅಂತ ನಮಗೆ ಗೊತ್ತು." ಎಂದು ಪಾರ್ವತಮ್ಮ ರಾಜ್‌ಕುಮಾರ್ ಹೇಳಿದ ಮಾತನ್ನು ಮುರಳಿ ಮೋಹನ್ ನೆನಪಿಸಿಕೊಂಡಿದ್ದಾರೆ.

More from Filmibeat

English summary
Om is based on Upendra's friend movie Purushottama
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X