ಉಕ್ರೇನ್‌ನಲ್ಲಿ ಚಿತ್ರೀಕರಣಗೊಂಡಿರುವ ಭಾರತದ ಸಿನಿಮಾಗಳ್ಯಾವುವು? ಕನ್ನಡ ಚಿತ್ರದ ನಂಟೇನು?

ಭಾರತೀಯ ಚಿತ್ರರಂಗ ವಿದೇಶದಲ್ಲಿ ಚಿತ್ರೀಕರಣ ಮಾಡುವುದು ಹೊಸತೇನಲ್ಲ. ಒಂದು ಸೀನ್ ಅಥವಾ ಒಂದು ಹಾಡಿಗಾದರೂ ವಿದೇಶಕ್ಕೆ ಪಯಣ ಬೆಳೆಸುತ್ತೆ. ಅಮೆರಿಕ, ಲಂಡನ್, ಸ್ವಿಡ್ಜರ್‌ಲ್ಯಾಂಡ್, ಯುರೋಪ್‌ನ ಹಲವು ಭಾಗಗಳಲ್ಲಿ ಸಿನಿಮಾ ಶೂಟಿಂಗ್ ಮಾಡಿದೆ. ಆದರೆ, ಇತ್ತೀಚೆಗೆ ಉಕ್ರೇನ್ ಭಾರತೀಯ ಸಿನಿಮಾ ಮಂದಿಗೆ ಫೇವರಿಟ್ ಲೋಕೇಶನ್. ಆದರೆ, ಯುದ್ಧ ಆರಂಭ ಆದಲ್ಲಿಂದ ಉಕ್ರೇನ್ ಬಗ್ಗೆ ಭಾರತೀಯರಿಗೂ ಆತಂಕ ಶುರುವಾಗಿದೆ.

ಉಕ್ರೇನ್ ಯುರೋಪಿನ ಒಂದು ಸುಂದರವಾದ ದೇಶ. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಭಾರತೀಯ ಸಿನಿಮಾ ಮಂದಿ ಮರುಳಾಗಿದ್ದಾರೆ. ಉಕ್ರೇನ್‌ನಲ್ಲಿ ಪ್ರಾಕೃತಿಕ ಸೌಂದರ್ಯಕ್ಕೆ ಸಿನಿಮಾ ಮಂದಿ ಮರುಳಾಗಿದ್ದಾರೆ. ಆದರೆ, ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಈ ಸೌಂದರ್ಯವನ್ನು ಹಾಳು ಮಾಡುವ ಆತಂಕ ಎದುರಾಗಿದೆ. ಸುಂದರ ನಗರಗಳು ಯುದ್ಧಕ್ಕೆ ತುತ್ತಾಗಿ ತನ್ನ ಸೌಂದರ್ಯವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಸಿನಿಮಾ ಚಿತ್ರೀಕರಣದಿಂದ ಉಕ್ರೇನ್ ಭವಿಷ್ಯದಲ್ಲಿ ಪ್ರವಾಸಿಗರ ನೆಚ್ಚಿನ ದೇಶವಾಗಬಹುದಿತ್ತು. ಅದೆಲ್ಲದಕ್ಕೂ ತಣ್ಣೀರು ಎರಚಿದಂತಾಗಿದೆ. ಉಕ್ರೇನ್‌ನಲ್ಲಿ ಇತ್ತೀಚೆಗೆ ಚಿತ್ರೀಕರಣಗೊಂಡು ಸಿನಿಮಾಗಳ್ಯಾವುವು? ಕನ್ನಡ ಚಿತ್ರರಂಗಕ್ಕೂ ಉಕ್ರೇನ್‌ಗೂ ಏನ್ ಸಂಬಂಧ ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಸಲ್ಮಾನ್ ಖಾನ್ 'ಟೈಗರ್ 3'

ಸಲ್ಮಾನ್ ಖಾನ್ 'ಟೈಗರ್ 3'

ರಾಜ್‌ಕಪೂರ್ ಕಾಲದಿಂದಲೂ ಭಾರತೀಯ ಸಿನಿಮಾಗಳು ಉಕ್ರೇನ್‌ ಹಾಗೂ ಸುತ್ತಮುತ್ತಲಿನ ದೇಶಗಳಲ್ಲಿ ಚಿತ್ರೀಕರಣ ಮಾಡುತ್ತಿದೆ. ಸದ್ಯ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ನಟಿಸುತ್ತಿರುವ 'ಟೈಗರ್ 3' ಶೂಟಿಂಗ್ ಉಕ್ರೇನ್‌ನಲ್ಲಿ ನಡೆದಿದೆ. ಇಲ್ಲಿ ಸಿನಿಮಾದ ಹೈ ವೋಲ್ಟೇಜ್ ಆಕ್ಷನ್ ಸೀನ್‌ಗಳನ್ನು ಚಿತ್ರೀಕರಣ ಮಾಡಲಾಗಿದೆ ಎನ್ನುತ್ತಿದೆ ಬಾಲಿವುಡ್. 'ಟೈಗರ್ 3' ಬಾಲಿವುಡ್‌ನ ಆಕ್ಷನ್ ಫ್ಯಾಂಚೈಸಿಗಳಲ್ಲೊಂದು. ಹೀಗಾಗಿ ವಿದೇಶದಲ್ಲಿ ಹೆಚ್ಚು ಸಿನಿಮಾದ ಹಲವು ದೃಶ್ಯಗಳನ್ನು ಶೂಟ್ ಮಾಡುತ್ತಾರೆ. ಈ ಬಾರಿ ಚಿತ್ರತಂಡ ಉಕ್ರೇನ್ ಅನ್ನು ಆಯ್ಕೆ ಮಾಡಿಕೊಂಡಿತ್ತು.

'RRR' ಯುದ್ಧದ ಸನ್ನಿವೇಶ

'RRR' ಯುದ್ಧದ ಸನ್ನಿವೇಶ

ರಾಜಮೌಳಿ ನಿರ್ದೇಶಿಸಿದ 'RRR' ಚಿತ್ರದ ಚಿತ್ರೀಕರಣ ಉಕ್ರೇನ್‌ನಲ್ಲಿ ನಡೆದಿದೆ. ಈ ಸಿನಿಮಾದ ಕೊನೆಯ ಹಂತದ ಚಿತ್ರೀಕರಣವನ್ನು ಉಕ್ರೇನ್‌ನಲ್ಲಿ ಮಾಡಲಾಗಿದೆ. 2021ರಲ್ಲಿ ಉಕ್ರೇನ್‌ನ ಹಲವು ಭಾಗಗಲ್ಲಿ ಯುದ್ಧದ ಸನ್ನಿವೇಶಗಳನ್ನು ಚಿತ್ರೀಕರಣ ಮಾಡಲಾಗಿದೆ. ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ ಹಾಗೂ ಬ್ರಿಟಿಷರ ನಡುವಿನ ಯುದ್ಧದ ದೃಶ್ಯಗಳು ಶೂಟ್ ಆಗಿದ್ದು ಇಲ್ಲೇ. ಹೀಗಾಗಿ ಈ ಸಿನಿಮಾದಲ್ಲಿ ಉಕ್ರೇನ್‌ನ ಸುಂದರ ತಾಣಗಳನ್ನು ನೋಡಬಹುದಾಗಿದೆ.

ರಜನಿಕಾಂತ್ '2.0'

ರಜನಿಕಾಂತ್ '2.0'

ದಕ್ಷಿಣ ಭಾರತದ ಬಿಗ್ ಬಜೆಟ್ ಸಿನಿಮಾ '2.0'. ರಜನಿಕಾಂತ್ ಹಾಗೂ ಆಮಿ ಜಾಕ್ಸನ್, ಅಕ್ಷಯ್ ಕುಮಾರ್ ನಟಿಸಿದ್ದರು. ನಿರ್ದೇಶಕ ಶಂಕರ್ ಹಾಗೂ ಅವರ ತಂಡ ಉಕ್ರೇನ್‌ ಸಂದರ ತಾಣಗಳನ್ನು ಚಿತ್ರೀಕರಣ ಮಾಡಲು ತೆರಳಿತ್ತು. ಅಲ್ಲಿನ ಸುಂದರ ತಾಣಗಳನ್ನು ಶೂಟ್ ಮಾಡಿಕೊಂಡು ಭಾರತಕ್ಕೆ ಬಂದಿತ್ತು. ಬಳಿಕ ವಿಸ್ಯುಯಲ್ ಎಫೆಕ್ಟ್ ಮೂಲಕ ಭಾರತದಲ್ಲಿಯೇ ಆ ಹಾಡನ್ನು ಚಿತ್ರೀಕರಣ ಮಾಡಲಾಗಿತ್ತು.

ತಮಿಳು ಚಿತ್ರ 'ದೇವ್'

ತಮಿಳು ಚಿತ್ರ 'ದೇವ್'

2019ರಲ್ಲಿ ತೆರೆಕಂಡ ತಮಿಳು ರೊಮ್ಯಾಂಟಿಕ್ ಸಿನಿಮಾ 'ದೇವ್' ಚಿತ್ರದ ಚಿತ್ರೀಕರಣ ಉಕ್ರೇನ್‌ನಲ್ಲಿ ನಡೆದಿದೆ. ನಟ ಕಾರ್ತಿ ಹಾಗೂ ರಕುಲ್ ಪ್ರೀತ್ ಸಿಂಗ್ ರೊಮ್ಯಾಂಟಿಕ್ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿತ್ತು. 2018ರ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಚಿತ್ರೀಕರಣ ಮಾಡಲಾಗಿತ್ತು.

'99 ಸಾಂಗ್ಸ್'

'99 ಸಾಂಗ್ಸ್'

ಎ ಆರ್‌ ರೆಹಮಾನ್ ನಿರ್ಮಿಸಿದ್ದ '99 ಸಾಂಗ್ಸ್' ಸಿನಿಮಾ ಕೂಡ ಉಕ್ರೇನ್‌ನಲ್ಲಿ ಶೂಟ್ ಮಾಡಲಾಗಿದೆ. ಯುವ ಗಾಯಕರು ಯಶಸ್ಸು ಕಾಣಲು ಪರದಾಡುವ ಕಥೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ಈ ಚಿತ್ರದ ಹಾಡುಗಳನ್ನು ಉಕ್ರೇನ್‌ನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.

ಉಕ್ರೇನ್‌ನಲ್ಲಿ ವಿನ್ನರ್ ಶೂಟಿಂಗ್

ಉಕ್ರೇನ್‌ನಲ್ಲಿ ವಿನ್ನರ್ ಶೂಟಿಂಗ್

ಸಾಯಿ ಧರಂ ತೇಜ್ ಹಾಗೂ ರಕುಲ್ ಪ್ರೀತ್ ಸಿಂಗ್ ನಟಿಸಿದ ಸಿನಿಮಾ 'ವಿನ್ನರ್'. ಈ ಚಿತ್ರದ ಮೂರು ಹಾಡುಗಳನ್ನು ಉಕ್ರೇನ್‌ನ ಹಲವು ಭಾಗಗಳಲ್ಲಿ ಶೂಟ್ ಮಾಡಲಾಗಿತ್ತು.

ಉಕ್ರೇನ್‌ಗೂ ಕನ್ನಡ ಸಿನಿಮಾಗೂ ನಂಟೇನು?

ಉಕ್ರೇನ್‌ಗೂ ಕನ್ನಡ ಸಿನಿಮಾಗೂ ನಂಟೇನು?

ಉಕ್ರೇನ್‌ನಲ್ಲಿ ಕನ್ನಡದ ಯಾವುದೇ ಸಿನಿಮಾ ಶೂಟಿಂಗ್ ಮಾಡಿಲ್ಲ. ಆದರೂ, ಉಕ್ರೇನ್ ಜೊತೆ ಒಂದು ನಂಟಿದೆ. 2014ರಲ್ಲಿ ವರ್ಷಗಳ ಹಿಂದೆ ಕನ್ನಡದಲ್ಲಿ ತಿಪ್ಪಾಜಿ ಸರ್ಕಲ್ ಅನ್ನುವ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದ ಹಾಡೊಂದಕ್ಕೆ ಉಕ್ರೇನ್ ನಟಿಯನ್ನು ಕರೆದುಕೊಂಡು ಬರಲಾಗಿತ್ತು. ರತಿ ಮನ್ಮಥ ಎನ್ನುವ ಹಾಡಿನಲ್ಲಿ ಉಕ್ರೇನ್ ನಟಿ ಅನ್ನಾ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ನೃತ್ಯ ನಿರ್ದೇಶಕ ತ್ರಿಭುವನ್ ಈ ಹಾಡನ್ನು ಶೂಟ್ ಮಾಡಿದ್ದರು.

More from Filmibeat

English summary
Except Kannada movies RRR, tiger 3, 2.0, Dev, Indian films that were shot in Ukraine. South and Bollywood films were shot in Ukrain but not even single kannada movie shot in Ukrain, still it has connection.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X