'ಮುಂಗಾರು ಮಳೆ' ಬಾಕ್ಲಾಬಸ್ಟರ್‌.. 'ಗಾಳಿಪಟ' ಸಿನಿಮಾಗಾಗಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಕೊಟ್ಟ ಸಂಭಾವನೆ ಎಷ್ಟು?

ಸಿನಿಮಾ ಸ್ಟಾರ್‌ಗಳು ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೆಯುತ್ತಾರೆ? ಕುತೂಹಲ ಸಿನಿಮಾ ಪ್ರೇಮಿಗಳಿಗೆ ಇದ್ದೇ ಇರುತ್ತೆ. ಯಾರಿಗೆ ಎಷ್ಟು ಸಂಭಾವನೆ? ಯಾರಿಗೆ ಅತೀ ಹೆಚ್ಚು ಸಂಭಾವನೆ? ಹೀಗೆ ಸಿನಿಮಾ ತಾರೆಯರ ಸಂಭಾವನೆ ಆಗಾಗ ಹಾಟ್‌ ಟಾಪಿಕ್ ಆಗುತ್ತೆ. ಇತ್ತೀಚೆಗೆ ನಿರ್ದೇಶಕ ಕಮ್ ನಿರ್ಮಾಪಕ ದಯಾಳ್ ಪದ್ಮನಾಭನ್ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ 'ಗಾಳಿಪಟ'ದ ಸಂಭಾವನೆಯನ್ನು ರಿವೀಲ್ ಮಾಡಿದ್ದಾರೆ.

'ಮುಂಗಾರು ಮಳೆ' ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾವಿದು. ಇನ್ನೇನು ಕನ್ನಡ ಚಿತ್ರರಂಗದ ಕಥೆ ಮುಗೀತು ಅನ್ನೋ ಕಾಲದಲ್ಲಿ ಇದೇ ಯೋಗರಾಜ್‌ ಭಟ್ ಹಾಗೂ ಗಣೇಶ್ ಜೋಡಿ ಸ್ಯಾಂಡಲ್‌ವುಡ್ ಗತಿಯನ್ನೇ ಬದಲಿಸಿದ್ದರು. ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಸಿನಿಮಾ ಮಾಡಿದ್ದರು. ಅಲ್ಲಿಂದ ಇವರಿಬ್ಬರೂ ಬೇಡಿಕೆ ಹೆಚ್ಚಾಗಿದ್ದು ಸುಳ್ಳಲ್ಲ.

After Mungaru Male how much Golden Star Ganesh and Yogaraj Bhat got remuneration for Gaalipata film

ಆದರೆ, ದಯಾಳ್ ಹೇಳುವಂತೆ 'ಮುಂಗಾರು ಮಳೆ' ಬಳಿಕ ಇಬ್ಬರೂ ಮುನಿಸಿಕೊಂಡಿದ್ದರು. ಗಣೇಶ್ ಹಾಗೂ ಯೋಗರಾಜ್ ಭಟ್ ಇಬ್ಬರನ್ನೂ ಒಂದು ಮಾಡಿ 'ಗಾಳಿಪಟ' ಮಾಡುವಂತೆ ಮಾಡಿದ್ದು ದಯಾಳ್. ಹಾಗೇ ಇವರಿಬ್ಬರೂ ಅತೀ ಹೆಚ್ಚು ಸಂಭಾವನೆ ಕೊಡುವಂತೆ ಮಾಡಿದ್ದು ಕೂಡ ಇವರೇ. ಇತ್ತೀಚೆಗಿನ ಸಂದರ್ಶನದಲ್ಲಿ ಗಣೇಶ್‌ ಎಷ್ಟು ಸಂಭಾವನೆ ಕೊಟ್ಟಿದ್ದರು? ಯೋಗರಾಜ್ ಭಟ್ ಕೊಟ್ಟ ಡಬಲ್ ಸಂಭಾವನೆ ಎಷ್ಟು? ಅನ್ನೋದನ್ನು ರಿವೀಲ್ ಮಾಡಿದ್ದಾರೆ.

'ಮುಂಗಾರು ಮಳೆ' ಭಾರತದ ಎಲ್ಲಾ ಚಿತ್ರರಂಗ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಬಿದ್ದು ಎದ್ದೇಳಲು ಪರದಾಡುತ್ತಿದ್ದ ಚಿತ್ರರಂಗಕ್ಕೆ ಹೊಸ ಇಮೇಜ್ ಕೊಟ್ಟ ಸಿನಿಮಾ. ಈ ಸಿನಿಮಾದಿಂದಲೇ ಗಣೇಶ್ ಗೋಲ್ಡನ್ ಸ್ಟಾರ್ ಆಗಿದ್ದು. ಯೋಗರಾಜ್‌ ರಾಜ್ ಮೆಗಾ ದುಬಾರಿ ಡೈರೆಕ್ಟರ್ ಆಗಿದ್ದು. ಇಷ್ಟೊಂದು ಸದ್ದು ಮಾಡಿದ ಬಳಿಕ ಸಂಭಾವನೆ ಕೂಡ ಹೆಚ್ಚಾಗುತ್ತೆ. 'ಮುಂಗಾರು ಮಳೆ'ಗೆ ತೆಗೆದುಕೊಂಡ ಸಂಭಾವನೆ 'ಗಾಳಿಪಟ'ಕ್ಕೆ ಒಪ್ಪುವುದಿಲ್ಲ. ಹಾಗಿದ್ದರೆ, ಇಬ್ಬರಿಗೂ ಸಿಕ್ಕ ಸಂಭಾವನೆ ಎಷ್ಟು?

ದಯಾಳ್ ಪದ್ಮನಾಭನ್ ಸುದ್ದಿ ಮನೆ ಯೂಟ್ಯೂಬ್ ಚಾನೆಲ್‌ಗೆ ಇತ್ತೀಚೆಗೆ ಸಂದರ್ಶನ ನೀಡಿದ್ದರು. ಅದರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ 72 ಲಕ್ಷ ರೂಪಾಯಿ ಸಂಭಾವನೆ ಫಿಕ್ಸ್ ಮಾಡಿದ್ವಿ ಎಂದು ಹೇಳಿದ್ದಾರೆ. 16 ವರ್ಷಗಳ ಹಿಂದೆ ಕನ್ನಡದ ನಟನಿಗೆ ಸಿಕ್ಕಿದ ಅತೀ ದೊಡ್ಡ ಸಂಭಾವನೆ ಎಂದೇ ಹೇಳಬಹುದು. ಈಗಿನ ಲೆಕ್ಕಚಾರಕ್ಕೆ ಹೋಲಿಸಿದರೆ, ಅದು ಐದಾರು ಕೋಟಿಗೆ ಸಮ.

After Mungaru Male how much Golden Star Ganesh and Yogaraj Bhat got remuneration for Gaalipata film

ಇನ್ನು ಯೋಗರಾಜ್‌ ಭಟ್ 'ಗಾಳಿಪಟ' ಸಿನಿಮಾದಿಂದಲೇ ಭಾರತದ ದುಬಾರಿ ನಿರ್ದೇಶಕರ ಪಟ್ಟಿಗೆ ಸೇರಿಕೊಂಡಿದ್ದರು. ದಯಾಳ್ ಪದ್ಮನಾಭನ್ ಹೇಳುವ ಪ್ರಕಾರ, ಯೋಗರಾಜ್ ಭಟ್‌ಗೆ 'ಗಾಳಿಪಟ' ನಿರ್ದೇಶನ ಮಾಡುವುದಕ್ಕೆ ಗಣೇಶ್‌ಗೆ ಕೊಟ್ಟ ಸಂಭಾವನೆಗಿಂತ ಡಬಲ್ ಕೊಡಲಾಗಿತ್ತು. ಅಂದರೆ, 1.3 ಕೋಟಿ ರೂಪಾಯಿ. ಹೀಗಾಗಿ ಆಗಿನ ಕಾಲಕ್ಕೆ ಅತೀ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕರ ಪಟ್ಟಿಯಲ್ಲಿ ಯೋಗರಾಜ್ ಭಟ್ ಅಂದೇ ಸೇರಿಕೊಂಡಿದ್ದರು.

ಯೋಗರಾಜ್‌ ಭಟ್ ಹಾಗೂ ಗಣೇಶ್ ಅವರದ್ದು ಹಿಟ್ ಕಾಂಬಿನೇಷನ್ ಅಂತ ಮತ್ತೊಮ್ಮೆ ಪ್ರೂವ್ ಆಗಿತ್ತು. ತೆಲುಗು ನಿರ್ಮಾಪಕರು ನಿರ್ಮಾಣ ಮಾಡಿದ್ದ ಈ ಸಿನಿಮಾ 175 ದಿನ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು. ಕೆಲವು ಮೂಲಗಳ ಪ್ರಕಾರ 4.5 ರಿಂದ 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸಿನಿಮಾ 12 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ವರದಿಯಾಗಳಾಗಿವೆ. ಇಂದಿಗೂ 'ಗಾಳಿಪಟ' ಸ್ಯಾಂಡಲ್‌ವುಡ್‌ ಬೆಸ್ಟ್ ಸಿನಿಮಾಗಳ ಪಟ್ಟಿ ಸೇರಿಕೊಂಡಿದೆ.

More from Filmibeat

English summary
Explore the remuneration details of Golden Star Ganesh and Yogaraj Bhat for the film Gaalipata, following the success of Mungaru Male;
Read more about: ganesh yogaraj bhat gaalipata
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X