Year Ender 2024; ಈ ಗೂಗಲ್‌ನಲ್ಲಿ ಹುಡುಕಲ್ಪಟ್ಟ ಟಾಪ್ 10 ಸಿನಿಮಾಗಳಿವು; ಕನ್ನಡ ಚಿತ್ರಗಳಿಗಿಲ್ಲವೇ ಬೆಲೆ?

ಹೊಸ ವರ್ಷವನ್ನು ಸ್ವಾಗತ ಮಾಡುವುದಕ್ಕೆ ವಿಶ್ವದಾದ್ಯಂತ ಜನರು ಸಜ್ಜಾಗುತ್ತಿದ್ದಾರೆ. 2025ಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. 2025 ಹೊಸ ವರ್ಷದ ಆಚರಣೆಯನ್ನು ಸಂಭ್ರಮಿಸುವುದಕ್ಕೂ ಮುನ್ನ 2024ರಲ್ಲಿ ಏನಾಯ್ತು ಅನ್ನುವುದನ್ನು ನೋಡದೇ ಇರುವುದಕ್ಕೆ ಆಗುತ್ತಾ? ಅದರಲ್ಲೂ ಸಿನಿಮಾ ಕ್ಷೇತ್ರದಲ್ಲಿ ಒಮ್ಮೆ ರಿಕಾಲ್ ಮಾಡಲೇಬೇಕು.

ನಾವು ಏನೇ ಹುಡುಕಬೇಕು ಅಂದರೆ ಮೊದಲ ನಮ್ಮ ಕಣ್ಣಿಗೆ ಬೀಳೋದು ಗೂಗಲ್. ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೂ ಗೂಗಲ್ ನಮಗೆ ಗುರು ಇದ್ದಂತೆ. ಅದಕ್ಕೆ 2024ರಲ್ಲಿ ಯಾವ್ಯಾವ ಸಿನಿಮಾ ಬಗ್ಗೆ ಅತೀ ಹೆಚ್ಚು ಬಾರಿ ಹುಡುಕಾಡಿದ್ದಾರೆ ಅನ್ನುವ ಪಟ್ಟಿಯನ್ನು ಗೂಗಲ್ ರಿಲೀಸ್ ಮಾಡಿದೆ. ಆ ಟಾಪ್ 10 ಸಿನಿಮಾಗಳಲ್ಲಿ ಕನ್ನಡ ಸಿನಿಮಾ ಇದೆಯಾ ಇಲ್ವಾ? ತಿಳಿಯಲು ಮುಂದೆ ಓದಿ.

Google shared Top 10 Most Searched Movies in India in 2024 here is the list

ಟಾಪ್ 1 'ಸ್ತ್ರೀ 2'

ಶ್ರದ್ಧಾ ಕಪೂರ್ ಹಾಗೂ ರಾಜ್‌ಕುಮಾರ್ ರಾವ್ ನಟಿಸಿದ 'ಸ್ತ್ರೀ 2'. ಇದು 2024ರಲ್ಲಿ ಅತೀ ಹೆಚ್ಚು ಬಾರಿ ಗೂಗಲ್‌ನಲ್ಲಿ ಹುಡುಕಾಡಿದ ಸಿನಿಮಾಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹಾಗೇ ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಿತ್ತು.

ಟಾಪ್ 2 'ಕಲ್ಕಿ 2898 AD'

ಡಾರ್ಲಿಂಗ್ ಪ್ರಭಾಸ್ ನಟನೆಯ ಮೋಸ್ಟ್ ಎಕ್ಸ್‌ಪೆನ್ಸೀವ್ ಪ್ಯಾನ್ ಇಂಡಿಯಾ ಸಿನಿಮಾ 'ಕಲ್ಕಿ 2898 AD'. ಪ್ರಭಾಸ್ ಸಿನಿಮಾವನ್ನು ಗೂಗಲ್‌ನಲ್ಲಿ ಅತೀ ಹೆಚ್ಚು ಬಾರಿ ವೀಕ್ಷಿಸಿದ್ದು ಎರಡನೇ ಸ್ಥಾನದಲ್ಲಿದೆ. ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ದಾಖಲೆ ಗಳಿಕೆ ಮಾಡಿತ್ತು.

ಟಾಪ್ 3 '12th ಫೇಲ್'

2005ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಬದುಕನ್ನು ಆಧರಿಸಿದ ಸಿನಿಮಾ '12th ಫೇಲ್'. ವಿದು ವಿನೋದ್ ಚೋಪ್ರಾ ನಿರ್ಮಿಸಿ, ನಿರ್ದೇಶಿಸಿದ ಈ ಸಿನಿಮಾಗೆ ಜನ ಮನ್ನಣೆ ಸಿಕ್ಕಿತ್ತು. ಬಾಲಿವುಡ್ ನಟ ವಿಕ್ರಾಂತ್ ಮಾಸ್ಸೆ ನಾಯಕನಾಗಿ ಈ ಸಿನಿಮಾದಲ್ಲಿ ನಟಿಸಿದ್ದರು.

ಟಾಪ್ 4 'ಲಾಪತಾ ಲೇಡೀಸ್'

ಆಮಿರ್ ಖಾನ್ ಹಾಗೂ ಕಿರಣ್ ರಾವ್ ನಿರ್ಮಾಣದ ಸಿನಿಮಾ 'ಲಾಪತಾ ಲೇಡೀಸ್'ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಬಹಳ ದಿನಗಳ ಬಳಿಕ ಕಿರಣ್ ರಾವ್ ನಿರ್ದೇಶಿಸಿದ ಈ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಅಷ್ಟೇ ಅಲ್ಲದೆ ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ. ಇದು ಟಾಪ್ 4ನೇ ಸ್ಥಾನದಲ್ಲಿದೆ.

ಟಾಪ್ 5 'ಹನುಮಾನ್'

ತೆಲುಗು ಚಿತ್ರರಂಗದ ಯುವ ಪ್ರತಿಭೆಯ ಸಿನಿಮಾ 'ಹನುಮಾನ್' ಕೂಡ ಈ ವರ್ಷ ಗೂಗಲ್ ಟ್ರೆಂಡಿಂಗ್‌ನಲ್ಲಿ ಇತ್ತು. ಹೊಸಬರ ಸಿನಿಮಾ ಆಗಿದ್ದರೂ ಜನರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಗೂಗಲ್ ಸರ್ಚ್‌ನಲ್ಲಿ ಟಾಪ್ 5ನೇ ಸ್ಥಾನದಲ್ಲಿದೆ.

Google shared Top 10 Most Searched Movies in India in 2024 here is the list

ಟಾಪ್ 6 'ಮಹಾರಾಜ'

ವಿಜಯ್ ಸೇತುಪತಿ ನಟಿಸಿದ ತಮಿಳು ಸಿನಿಮಾ 'ಮಹಾರಾಜ' ಕೂಡ ಪ್ರೇಕ್ಷಕರನ್ನು ಸೆಳೆದಿದೆ. ಗೂಗಲ್‌ನಲ್ಲಿ ಈ ಸಿನಿಮಾ ಬಗ್ಗೆ 2024ರಲ್ಲಿ ಹೆಚ್ಚು ಹುಡುಕಾಟ ನಡೆಸಿದ್ದಾರೆ. ಹೀಗಾಗಿ ಗೂಗಲ್ ಸರ್ಚ್‌ನಲ್ಲಿ ಟಾಪ್ 6ನೇ ಸ್ಥಾನದಲ್ಲಿದೆ.

ಟಾಪ್ 7 'ಮಂಜುಮ್ಮೆಲ್ ಬಾಯ್ಸ್'

ಗೂಗಲ್ ಟಾಪ್ ಸರ್ಚ್‌ನಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ 'ಮಂಜುಮ್ಮೆಲ್ ಬಾಯ್ಸ್' ಕೂಡ ಇದೆ. ಇದು ಟಾಪ್ 7ನೇ ಸ್ಥಾನದಲ್ಲಿ ಇದೆ.

ಟಾಪ್ 8 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್'

ದಳಪತಿ ವಿಜಯ್ ನಟನೆಯ ಸಿನಿಮಾ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಕೂಡ ಗೂಗಲ್‌ ಸರ್ಚ್‌ನ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಸಿನಿಮಾ ಟಾಪ್ 8ನೇ ಸ್ಥಾನದಲ್ಲಿದೆ.

ಟಾಪ್ 9 ' ಸಲಾರ್'

ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ ಸಿನಿಮಾ 'ಸಲಾರ್' ಸಾಕಷ್ಟು ಸದ್ದು ಮಾಡಿತ್ತು. ಈ ಜೋಡಿ ಮೊದಲ ಸಿನಿಮಾ ಬಾಕ್ಸಾಫೀಸ್‌ನಲ್ಲಿ 700 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿತ್ತು. ಈ ಸಿನಿಮಾ 2024ರ ಗೂಗಲ್ ಸರ್ಚ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ಟಾಪ್ 10 ' ಆವೇಶಂ'

ಮಲಯಾಳಂ ನಟ ಫಹಾದ್ ಫಾಸಿಲ್ ಸಿನಿಮಾ 'ಆವೇಶಂ' ಗೂಗಲ್‌ ಸರ್ಚ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಈ ವರ್ಷ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಎರಡು ಮಲಯಾಳಂ ಸಿನಿಮಾಗಳಲ್ಲಿ 'ಆವೇಶಂ' ಕೂಡ ಒಂದು.

ಈ ಬಾರಿ ಕನ್ನಡದ ಒಂದೇ ಒಂದು ಸಿನಿಮಾ ಕೂಡ ಗೂಗಲ್‌ ಸರ್ಚ್‌ನ ಟಾಪ್ ಪಟ್ಟಿಯಲ್ಲಿ ಇಲ್ಲ. ದಕ್ಷಿಣ ಭಾರತದ ನಾಲ್ಕು ಭಾಷೆಗಳ ಪೈಕಿ ಮೂರು ಭಾಷೆಯ ಸಿನಿಮಾಗಳು ಕಾಣಿಸುತ್ತವೆ. ಆದರೆ, ಕನ್ನಡದ ಒಂದೇ ಒಂದು ಸಿನಿಮಾ ಕೂಡ ಈ ಪಟ್ಟಿಯಲ್ಲಿ ಇಲ್ಲ. ಮುಂದಿನ ವರ್ಷವಾದರೂ ಆ ಪಟ್ಟಿಯಲ್ಲಿ ಕನ್ನಡ ಸಿನಿಮಾ ನೋಡುವ ಆಸೆ ಕನ್ನಡಿಗರದ್ದು.

More from Filmibeat

English summary
Google shared Top 10 Most Searched Movies in India in 2024 here is the list
Read more about: year ender 2024 google movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X