ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಚೇದನ ವಂದತಿ; ಹೆಚ್ಚಾಗ್ತಿದೆ 'ಗ್ರೇ ಡಿವೋರ್ಸ್'!
ಮಾಜಿ ವಿಶ್ವ ಸುಂದರಿ ಹಾಗೂ ಬಾಲಿವುಡ್ ನಟಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿಗಳು ಹಲವು ದಿನಗಳಿಂದ ಹರಿದಾಡುತ್ತಲೇ ಇದೆ. ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಮಾತು ಆಗಾಗ ಕೇಳಿ ಬರುತ್ತಲೇ ಇರುತ್ತೆ. ಇಂತಹ ವದಂತಿಗಳು ಬಂದಾಗಲೆಲ್ಲ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು ಬಾಯಿ ಮುಚ್ಚಿಸುತ್ತಿದ್ದರು.
ಆದ್ರೀಗ ಮತ್ತೆ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ವಿಚ್ಚೇದನದ ಬಗ್ಗೆ ಚರ್ಚೆ ಆರಂಭ ಆಗಿದೆ. ಅದಕ್ಕೆ ಕಾರಣ, ಅಭಿಷೇಕ್ ಬಚ್ಚನ್ ಲೈಕ್ ಮಾಡಿದ ಒಂದು ಪೋಸ್ಟ್. ಇತ್ತೀಚೆಗೆ ಲೇಖಕಿ ಹೀನಾ ಖಂಡೇಲ್ವಾಲ್ ವಿಚ್ಛೇದನದ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಆ ಪೋಸ್ಟ್ ಅನ್ನು ಅಭಿಷೇಕ್ ಬಚ್ಚನ್ ಲೈಕ್ ಮಾಡಿದ್ದರು. ಆ ಬೆನ್ನಲ್ಲೇ ಮತ್ತೆ ಇಬ್ಬರ ವಿಚ್ಛೇದನದ ಸುದ್ದಿ ಓಡಾಡುತ್ತಿದೆ.

ಈ ಬಾರಿ ಈ ಬಾಲಿವುಡ್ ಜೋಡಿಯ ಡಿವೋರ್ಸ್ ಬಗ್ಗೆ ಇಷ್ಟೊಂದು ದೊಡ್ಡ ಮಟ್ಟಕ್ಕೆ ಚರ್ಚೆ ಆಗುವುದಕ್ಕೆ ಕಾರಣವಿದೆ. ಅದು 'ಗ್ರೇ ಡಿವೋರ್ಸ್'. ಅಭಿಷೇಕ್ ಬಚ್ಚನ್ ಸದ್ಯ ಟ್ರೆಂಡಿಂಗ್‌ನಲ್ಲಿರುವ 'ಗ್ರೇ ಡಿವೋರ್ಸ್' ಅನ್ನು ಪ್ರಮೋಟ್ ಮಾಡುತ್ತಿರಬಹುದು ಎಂದೂ ನೆಟ್ಟಿಗರು ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅಷ್ಟಕ್ಕೂ ಟ್ರೆಂಡಿಂಗ್‌ನಲ್ಲಿರುವ ಗ್ರೇ ಡಿವೋರ್ಸ್ ಅಂದರೆ ಏನು?
ವಿಶ್ವದ ಹಲವೆಡೆ ಈಗಾಗಲೇ 'ಗ್ರೇ ಡಿವೋರ್ಸ್'ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಆತಂಕಕಾರಿ ಅಂದರೆ, 'ಗ್ರೇ ಡಿವೋರ್ಸ್' ಈಗ ಭಾರತದಲ್ಲಿಯೂ ಸದ್ಯ ಟ್ರೆಂಡಿಂಗ್‌ನಲ್ಲಿದೆ. ಅಸಲಿಗೆ ಏನಿದು 'ಗ್ರೇ ಡಿವೋರ್ಸ್'? ಅನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಇಲ್ಲವೇ ಇದೇ ಮೊದಲ ಬಾರಿಗೆ ನೀವು 'ಗ್ರೇ ಡಿವೋರ್ಸ್' ಅನ್ನುವ ಪದವನ್ನು ಕೇಳಿರಬಹುದು. ಆದ್ರೀಗ 'ಗ್ರೇ ಡಿವೋರ್ಸ್' ಭಾರತದಲ್ಲೂ ಟ್ರೆಂಡಿಂಗ್‌ನಲ್ಲಿದೆ.

ವಿಚ್ಚೇದನ ಅನ್ನೋದು ಭಾರತದ ಕಾಮನ್ ಆಗಿಬಿಟ್ಟಿದೆ. ಮದುವೆಯಾದ ಕೆಲವೇ ದಿನಗಳಲ್ಲಿ ವಿಚ್ಚೇದನಕ್ಕೆ ಮುಂದಾದ ಉದಾಹರಣೆಗಳಿವೆ. ಆದರೆ, ಒಮ್ಮೆ ವಯಸ್ಸು 50 ದಾಟಿದ ಮೇಲೆ ವಿಚ್ಚೇದನಕ್ಕೆ ಮುಂದಾಗುವವರ ಸಂಖ್ಯೆ ಬಹಳ ಕಡಿಮೆ ಇತ್ತು. ಆದ್ರೀಗ 50 ವಯಸ್ಸು ದಾಟಿದ ದಂಪತಿ ವಿಚ್ಚೇದನಕ್ಕೆ ಮುಂದಾಗುತ್ತಿದ್ದಾರೆ. ಇದನ್ನೇ 'ಗ್ರೇ ಡಿವೊರ್ಸ್' ಎಂದು ಹೇಳಲಾಗುತ್ತಿದೆ. ವಿಶ್ವದಾದ್ಯಂತ ಈ 'ಗ್ರೇ ಡಿವೋರ್ಸ್' ಮುಂದಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಅಷ್ಟಕ್ಕೂ 'ಗ್ರೇ ಡಿವೋರ್ಸ್'ಗೆ ಮುಂದಾಗುತ್ತಿರುವುದು ಯಾಕೆ? ಈ ಪ್ರಶ್ನೆಗೆ ಕೌನ್ಸಲರ್‌ಗಳು ತಮ್ಮದೇ ಉತ್ತರ ಕೊಡುತ್ತಾರೆ. 50ರ ಆಸುಪಾಸಿನಲ್ಲಿ ಕೆಲಸ ನಿಮಿತ್ತವೋ, ಮದುವೆ ಆಗಿಯೋ ಮಕ್ಕಳು ತಂದೆ-ತಾಯಿಯಿಂದ ಬೇರೆಯಾಗುತ್ತಾರೆ. ಇದರಿಂದ ದಾಂಪತ್ಯದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ ಎನ್ನುತ್ತಾರೆ. ಹಲವು ವರ್ಷಗಳಿಂದ ಜವಾಬ್ದಾರಿಗಳಿಗಾಗಿ ಸಂಸಾರ ಮಾಡುತ್ತಿದ್ದವರು ಬೇಸತ್ತು ಈ ನಿರ್ಧಾರಕ್ಕೆ ಬರುತ್ತಾರೆ ಎಂದು ಕೌನ್ಸಲರ್‌ಗಳು ಹೇಳುತ್ತಾರೆ.
ಹಾಗೇ ಆರ್ಥಿಕವಾಗಿ ಸಬಲರಾದವರು ಬೇರೆಯಾಗಲು ನಿರ್ಧರಿಸುತ್ತಾರೆ. ಸಂಸಾರಿಕ ಜೀವನದಿಂದಾಗಿ ಅದೂವರೆಗೂ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವುದಕ್ಕೆ ಸಾಧ್ಯವಾಗಿರುವುದಿಲ್ಲ. ಹಾಗಾಗಿ ಇನ್ಮುಂದೆ ಡ್ರೀಮ್ಸ್ ಚೇಜ್ ಮಾಡುವುದಕ್ಕೆ ವಯಸ್ಸು 50 ದಾಟಿದ ಬಳಿಕ ವಿಚ್ಛೇದನಕ್ಕೆ ಮುಂದಾಗುತ್ತಾರೆ ಎನ್ನಲಾಗಿದೆ. ಹಾಗೇ ಈ 'ಗ್ರೇ ಡಿವೋರ್ಸ್'ನಿಂದ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ಕೂಡ ಕೌನ್ಸಲರ್ಸ್ ಕೊಡುತ್ತಾರೆ. ಒಟ್ನಲ್ಲಿ ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ ವಿಚ್ಚೇದನ ವದಂತಿ ಮಧ್ಯೆ 'ಗ್ರೇ ಡಿವೋರ್ಸ್' ಕೂಡ ಸದ್ದು ಮಾಡುತ್ತಿದೆ.


Click it and Unblock the Notifications











