ಈ ನಾಲ್ಕು ಸಿನಿಮಾಗಳನ್ನು ಎಷ್ಟು ಮಂದಿ ಥಿಯೇಟರ್‌ಗಳಲ್ಲಿ ವೀಕ್ಷಿಸಿದ್ದರು? ಇಲ್ಲಿದೆ ಅಂಕಿ ಅಂಶಗಳು
ಕನ್ನಡ ಸಿನಿಮಾಗಳು ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿಲ್ಲ. ಆದರೆ, ಎರಡು ವರ್ಷಗಳ ಹಿಂದೆ ಭಾರತದಾದ್ಯಂತ ಕನ್ನಡ ಸಿನಿಮಾಗಳದ್ದೇ ಸದ್ದಿತ್ತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕನ್ನಡ ಸಿನಿಮಾಗಳದ್ದೇ ಚರ್ಚೆ ಆಗುತ್ತಿತ್ತು. ಸ್ಯಾಂಡಲ್‌ವುಡ್ ಸಿನಿಮಾಗಳ ಮೇಕಿಂಗ್ ಬಗೆನೇ ಮಾತಾಡುತ್ತಿದ್ದರು. ಆ ಮಟ್ಟಿಗೆ ಸದ್ದು ಮಾಡಿತ್ತು. ಇನ್ನೂ ಆ ಛಾಯೆಯನ್ನು ಹಾಗೆ ಉಳಿಸಿಕೊಂಡಿದೆ. ಇನ್ನು ಕೆಲವು ದಿನಗಳು ಇದೇ ಪರಿಸ್ಥಿತಿ ಮುಂದುವರೆದರೆ, ಮತ್ತೆ 'ಕೆಜಿಎಫ್ 2', 'ಕಾಂತಾರ' ಬಳಿಕ ಗಳಿಸಿದ ಘನತೆ ಮಣ್ಣು ಪಾಲಾಗುತ್ತದೆ.
ಕನ್ನಡ ಸಿನಿಮಾಗಳಿಗೆ ಕ್ಯಾರೇ ಎನ್ನದವರು ಕೂಡ ಮುಗಿಬಿದ್ದು ಥಿಯೇಟರ್‌ನಲ್ಲಿ ಸಿನಿಮಾಗಳನ್ನು ನೋಡಿದ್ದರು. ಭಾಷೆಯ ಭೇದ ಭಾವವನ್ನು ಬಿಟ್ಟಿ ಸಿನಿಮಾವನ್ನು ವೀಕ್ಷಣೆ ಮಾಡಿದ್ದರು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಇಷ್ಟೊಂದು ಮಂದಿ ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ ಉದಾಹರಣೆಯೇ ಇರಲಿಲ್ಲ. ಹಾಗಿದ್ದರೆ, ಥಿಯೇಟರ್‌ನಲ್ಲಿ ಅತೀ ಹೆಚ್ಚು ಮಂದಿ ಕನ್ನಡ ಚಿತ್ರವನ್ನು ವೀಕ್ಷಿಸಿದ ಟಾಪ್ 4 ಸಿನಿಮಾಗಳ ಅಂಕಿ ಅಂಶಗಳು ಇಲ್ಲಿವೆ.

ಕೆಜಿಎಫ್ ಚಾಪ್ಟರ್ 2
ಕನ್ನಡ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಶೈನ್ ಆಗುವಂತೆ ಮಾಡಿದ ಸಿನಿಮಾ 'ಕೆಜಿಎಫ್ 2'. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಈ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ಇಮೇಜ್ ಕೊಟ್ಟಿತ್ತು. ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಪ್ರಶಾಂತ್ ನೀಲ್ ನಿರ್ದೇಶಿಸಿದ್ದ 'ಕೆಜಿಎಫ್ ಚಾಪ್ಟರ್ 1' ಅದಾಗಲೇ ಐದು ಭಾಷೆಗಳಲ್ಲಿ ತಕ್ಕ ಮಟ್ಟಿಗೆ ಹೆಸರು ಮಾಡಿತ್ತು. ಹೀಗಾಗಿ ಪಾರ್ಟ್ 2 ಮೇಲೆ ನಿರೀಕ್ಷೆ ಹೆಚ್ಚಿತ್ತು. ಹೀಗಾಗಿ 'ಕೆಜಿಎಫ್ 2' ರಿಲೀಸ್ ಆಗುತ್ತಿದ್ದಂತೆ ಸಿನಿ ಪ್ರಿಯರು ಮುಗಿಬಿದ್ದು ಸಿನಿಮಾ ನೋಡಿದ್ದರು. ವಿಕ್ಕಿಪಿಡಿಯದ ಪ್ರಕಾರ, 'ಕೆಜಿಎಫ್ ಚಾಪ್ಟರ್ 2' ಸಿನಿಮಾವನ್ನು ಭಾರತದಾದ್ಯಂತ ಸುಮಾರು 5.05 ಕೋಟಿ ಮಂದಿ ಥಿಯೇಟರ್‌ನಲ್ಲಿ ವೀಕ್ಷಿಸಿದ್ದಾರೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ 1250 ಕೋಟಿ ರೂ. ಗಳಿಸಲು ಸಾಧ್ಯವಾಗಿತ್ತು. ಇದೂವರೆಗೂ ಅತೀ ಹೆಚ್ಚು ಮಂದಿ ಕನ್ನಡ ಸಿನಿಮಾವನ್ನು ನೋಡಿದವರ ಪೈಕಿ ಇದು ಮೊದಲ ಸ್ಥಾನದಲ್ಲಿದೆ.

ಕಾಂತಾರ
ರಿಷಬ್ ಶೆಟ್ಟಿಯನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ ಸಿನಿಮಾ 'ಕಾಂತಾರ'. ಈ ಸಿನಿಮಾವನ್ನು ಕೂಡ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿತ್ತು. ಆರಂಭದಲ್ಲಿ ಕೇವಲ ಕನ್ನಡ ಪ್ರೇಕ್ಷಕರಿಗಾಗಿಯೇ ಮಾಡಿದ್ದ ಸಿನಿಮಾ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಹೀಗಾಗಿ ತಕ್ಷಣವೇ ಕನ್ನಡವೂ ಸೇರಿ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡಲಾಯ್ತು. ಐದೂ ಭಾಷೆಗಳಲ್ಲೂ 'ಕಾಂತಾರ'ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈ ಸಿನಿಮಾವನ್ನು ಭಾರತದಾದ್ಯಂತ 1 ಕೋಟಿ ಮಂದಿ ಥಿಯೇಟರ್‌ನಲ್ಲಿ ವೀಕ್ಷಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 450 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅತೀ ಹೆಚ್ಚು ಮಂದಿ ಕನ್ನಡ ಸಿನಿಮಾವನ್ನು ನೋಡಿದವರ ಸಾಲಿನಲ್ಲಿ 'ಕಾಂತಾರ' 2ನೇ ಸ್ಥಾನದಲ್ಲಿದೆ.
ಕೆಜಿಎಫ್ ಚಾಪ್ಟರ್ 1
ಯಶ್ ನಟಿಸಿದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ ಚಾಪ್ಟರ್ 1'. ಈ ಸಿನಿಮಾ ಕನ್ನಡದ ಪಾಲಿಗೆ ದೊಡ್ಡ ಎಕ್ಸ್‌ಪೆರಿಮೆಂಟ್ ಆಗಿತ್ತು. ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಖಾನ್ ನಟಿಸಿದ್ದ 'ಜೀರೋ' ಸಿನಿಮಾದ ಎದುರು ರಿಲೀಸ್ ಮಾಡಿದ್ದರು. ಕನ್ನಡ ಸಿನಿಮಾವೊಂದು ಉತ್ತರ ಭಾರತದಲ್ಲಿ ಶಾರುಖ್ ಖಾನ್ ಸಿನಿಮಾಗೆ ಟಕ್ಕರ್ ಕೊಟ್ಟಿತ್ತು. ಕೆಜಿಎಫ್ 1 ಹಿಂದಿ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಒಟ್ಟು 75 ಲಕ್ಷಕ್ಕೂ ಅಧಿಕ ಮಂದಿ ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ನೋಡಿದ್ದರು.
ರಾಜಕುಮಾರ
ಪುನೀತ್ ರಾಜ್‌ಕುಮಾರ್ ನಟಿಸಿದ ಬ್ಲಾಕ್ ಬಸ್ಟರ್ ಸಿನಿಮಾ 'ರಾಜಕುಮಾರ'. ಬಹಳ ದಿನಗಳ ಬಳಿಕ ಬಾಕ್ಸಾಫೀಸ್‌ನಲ್ಲಿ 'ಮುಂಗಾರು ಮಳೆ' ಗಳಿಸಿದ ದಾಖಲೆಯನ್ನು ಪುನೀತ್ ಸಿನಿಮಾ ಮುರಿದಿತ್ತು. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ್ದ 'ರಾಜಕುಮಾರ' ಪ್ಯಾನ್ ಇಂಡಿಯಾ ಸಿನಿಮಾ ಅಲ್ಲದೇ ಹೋದರೂ ಈ ಸಿನಿಮಾವನ್ನು ಸುಮಾರು 65 ಲಕ್ಷ ಮಂದಿ ನೋಡಿದ್ದಾರೆಂದು ವಿಡಿಪಿಡಿಯಾದಲ್ಲಿ ಹೇಳಲಾಗಿದೆ. ಅಂದ್ಹಾಗೆ, ಈ ಸಿನಿಮಾ ಕರ್ನಾಟಕ ಬಾಕ್ಸಾಫೀಸ್‌ನಲ್ಲಿ 75 ಕೋಟಿ ರೂಪಾಯಿ ದಾಟಿದ ಮೊದಲ ಸಿನಿಮಾ ಎನಿಸಿಕೊಂಡಿದೆ.


Click it and Unblock the Notifications











