ಉಪೇಂದ್ರಗೆ 'ರಿಯಲ್ ಸ್ಟಾರ್' ಟೈಟಲ್ ಸಿಕ್ಕಿದ್ದೇಗೆ? ಕಾರಣ 'ಓಂ' ಒಂದೇನಾ?

ಸ್ಯಾಂಡಲ್‌ವುಡ್‌ನಲ್ಲಿರುವ ಮೋಸ್ಟ್ ಕ್ರಿಯೇಟಿವ್ ಡೈರೆಕ್ಟರ್‌ಗಳ ಸಾಲಿನಲ್ಲಿ ಉಪೇಂದ್ರ ನಿಲ್ಲುತ್ತಾರೆ. ಉಪ್ಪಿ ನಿರ್ದೇಶನಕ್ಕೆ ಕೈ ಹಾಕಿದ್ರು ಅಂದ್ರೆ ಮುಗೀತು. ಆ ಸಿನಿಮಾ ನೋಡುವುದಕ್ಕೆ ಸಾಲುಗಟ್ಟಿ ನಿಲ್ಲುವ ಫ್ಯಾನ್ಸ್ ಬೇಸ್ ಬೇರೆನೇ ಇರುತ್ತೆ. 'ಯುಐ' ಸಿನಿಮಾ ಬಿಡುಗಡೆಗೂ ಕೂಡ ಅದೇ ಕ್ರೇಜ್ ಇದೆ.

ಉಪೇಂದ್ರ ಸಿನಿಮಾಗಳನ್ನು ಯೋಚನೆ ಮಾಡುವ ರೀತಿನೇ ಬೇರೆ. ಅವರ ನಿರ್ದೇಶನದ ಸಿನಿಮಾಗಳನ್ನು ಗೆಸ್ ಮಾಡುವುದಕ್ಕೆ ಆಗುವುದಿಲ್ಲ. ಲವ್‌ಸ್ಟೋರಿ, ಆಕ್ಷನ್ ಸಿನಿಮಾ ಅಂತ ಹೋದವರೇ ಅಲ್ಲ. ಸ್ಯಾಂಡಲ್‌ವುಡ್‌ನಲ್ಲಿ ಒಂದು ಟ್ರೆಂಡ್ ಇದ್ದರೆ, ಇವರೇ ಇನ್ನೊಂದು ಟ್ರೆಂಡ್ ಹುಟ್ಟಾಕುವುದಕ್ಕೆ ಹೊರಡುತ್ತಾರೆ. ಈ ಕಾರಣಕ್ಕೆ ಉಪ್ಪಿ ನಿರ್ದೇಶಿಸಿದ ಸಿನಿಮಾ ಬಗ್ಗೆ ಕೇವಲ ಕನ್ನಡ ಅಷ್ಟೇ ಅಲ್ಲ ತೆಲುಗು ಹಾಗೂ ತಮಿಳು ಭಾಷೆಯ ಸಿನಿಮಾಗಳಲ್ಲೂ ಕ್ರೇಜ್ ಇರುತ್ತೆ.

How did Upendra got Real star title from fans its just because of Om movie

ಇದೇ ಕಾರಣಕ್ಕೆ ಉಪೇಂದ್ರಗೆ ಅಭಿಮಾನಿಗಳು ಪ್ರೀತಿಯಿಂದ ರಿಯಲ್‌ಸ್ಟಾರ್ ಅಂತ ಬಿರುದು ಕೊಟ್ಟಿದ್ದಾರೆ. ಇವರ ಸಿನಿಮಾ ಮೇಕಿಂಗ್ ಸ್ಟೈಲ್‌ ಕಂಡು ಥ್ರಿಲ್ ಆಗಿರುವ ಫ್ಯಾನ್ಸ್ ಪ್ರೀತಿಯಿಂದ 'ರಿಯಲ್ ಸ್ಟಾರ್' ಅಂತ ಕರೆಯುತ್ತಾರೆ. ಹಾಗಿದ್ದರೆ, ಇವರ ನಿರ್ದೇಶಿಸಿದ ಸಿನಿಮಾದಿಂದಲೇ ರಿಯಲ್‌ಸ್ಟಾರ್ ಅಂತ ಹೆಸರು ಬಂತೇ? 'ಓಂ' ಒಂದೇ ಸಿನಿಮಾ ಕಾರಣನಾ?

ಉಪೇಂದ್ರ ರಿಯಲಿಸ್ಟಿಕ್ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಾರೆ ಅನ್ನೋದು ಗೊತ್ತಿದೆ. ಅದರಲ್ಲಿ ಮುಂಚೂಣಿಯಲ್ಲಿ ಸಿಗೋದು 'ಓಂ'. ಶಿವಣ್ಣನಿಗೆ ಆಕ್ಷನ್ ಕಟ್ ಹೇಳಿದ್ದ ಉಪೇಂದ್ರ ಕನ್ನಡ ಚಿತ್ರರಂಗಕ್ಕೆ ಎವರ್‌ಗ್ರೀನ್ ಸಿನಿಮಾವನ್ನು ಕೊಟ್ಟಿದ್ದರು. ಈ ಸಿನಿಮಾದಲ್ಲಿ ಉಪ್ಪಿ ರಿಯಲ್‌ ಲೈಫ್ ರೌಡಿಗಳನ್ನು 'ಓಂ' ಸಿನಿಮಾಗೆ ಕರೆದುಕೊಂಡು ಬಂದಿದ್ದರು. ಇದೇ ಸಿನಿಮಾದಿಂದಲೇ ಉಪ್ಪಿಗೆ ರಿಯಲ್‌ಸ್ಟಾರ್ ಅನ್ನೋ ಬಿರುದು ಎನ್ನಲಾಗಿತ್ತು.

ತನಗೆ 'ರಿಯಲ್‌ ಸ್ಟಾರ್' ಅನ್ನುವ ಬಿರುದು ಸಿಕ್ಕಿದ್ದು ಹೇಗೆ? ಅನ್ನೋದನ್ನು 'ಕಬ್ಜ' ಸಿನಿಮಾ ರಿಲೀಸ್ ವೇಳೆ ಸ್ವತ: ಉಪ್ಪಿನೇ ರಿವೀಲ್ ಮಾಡಿದ್ದರು. 'ಕಬ್ಜ' ಪ್ಯಾನ್ ಇಂಡಿಯಾ ರಿಲೀಸ್ ಆಗಿತ್ತು. ಈ ವೇಳೆ ಚೆನ್ನೈಗೆ ತಮ್ಮ ಸಿನಿಮಾದ ಪ್ರಚಾರಕ್ಕೆ ಹೋಗಿದ್ದರು. ಆ ವೇಳೆ ಪತ್ರಕರ್ತರು ರಿಯಲ್‌ ಸ್ಟಾರ್ ಟೈಟಲ್ ಸಿಕ್ಕಿದ್ದು ಹೇಗೆ? ಎಂದು ಪ್ರಶ್ನೆ ಮಾಡಿದ್ದರು. ಆ ಪ್ರಶ್ನೆ ಉಪ್ಪಿ, ರಿಯಲ್‌ ಆಗಿ ಸಿನಿಮಾಗಳನ್ನು ತೆಗೆಯುತ್ತೇನೆ ಅಂತ ತಮ್ಮ ಸಿನಿಮಾಗೆ ಈ ಟೈಟಲ್ ಕೊಟ್ಟಿರಬಹುದೆಂದು ಹೇಳಿದ್ದರು.

How did Upendra got Real star title from fans its just because of Om movie

'ಓಂ' ನೈಜ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದರು. ಹಾಗಂತ ಇದೊಂದೇ ಸಿನಿಮಾದಿಂದ ರಿಯಲ್‌ ಸ್ಟಾರ್ ಎಂಬ ಬಿರುದನ್ನು ಅಭಿಮಾನಿಗಳು ಕೊಟ್ಟಿಲ್ಲ. ಉಪ್ಪಿ ಹೀರೋ ಆಗಬೇಕು ಅಂತ ನಿರ್ಧರಿಸಿ 'ಎ' ಸಿನಿಮಾ ತೆಗೆದಿದ್ದರು. ಆ ಸಿನಿಮಾವನ್ನು ಕೂಡ ರಿಯಲಿಸ್ಟಿಕ್ ಆಗಿಯೇ ತೆಗೆದಿದ್ದರು. ಹಾಗೇ 'ಉಪೇಂದ್ರ' ಸಿನಿಮಾ ಕೂಡ ಪ್ರೇಕ್ಷಕರಿಗೆ ರಿಯಲಿಸ್ಟಿಕ್ ಆಗಿದೆ ಅನಿಸಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಉಪ್ಪಿ ಡೈಲಾಗ್‌ಗಳು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ್ದವು. ಉಪ್ಪಿ ಸಿನಿಮಾದಲ್ಲಿ ಸತ್ಯವನ್ನೇ ಹೇಳುತ್ತಾರೆ ಅಂತ ಫ್ಯಾನ್ಸ್ ಫಿದಾ ಆಗಿದ್ದರು.

'ಓಂ', 'ಎ', 'ಉಪೇಂದ್ರ', 'ಸ್ವಸ್ತಿಕ್' ಅಂತಹ ಸಿನಿಮಾಗಳನ್ನು ಕಣ್ತುಂಬಿಕೊಂಡಿದ್ದ ಅಭಿಮಾನಿಗಳು ಥ್ರಿಲ್ ಆಗಿದ್ದರು. ಹೊಸ ಶೈಲಿಯ ಸಿನಿಮಾಗಳು ಥ್ರಿಲ್ ಕೊಡುವುದಕ್ಕೆ ಶುರು ಮಾಡಿತ್ತು. ಈ ಕಾರಣಕ್ಕೆ ಉಪೇಂದ್ರಗೆ ಅಭಿಮಾನಿಗಳು ಪ್ರೀತಿಯಿಂದ ರಿಯಲ್‌ ಸ್ಟಾರ್ ಅಂತ ಟೈಟಲ್ ಕೊಟ್ಟಿದ್ದರು. ಅದು ಇಲ್ಲಿವರೆಗೂ ಹಾಗೇ ಉಳಿಸಿಕೊಂಡಿದ್ದಾರೆ. ಉಪ್ಪಿಯಂತೆ ಮತ್ಯಾರೂ ಇದೂವರೆಗೂ ಆಲೋಚನೆ ಮಾಡಿಲ್ಲ. ಸಿನಿಮಾ ತೆಗೆಯುವ ಸಾಹಸಕ್ಕೂ ಕೈ ಹಾಕಿಲ್ಲ.

More from Filmibeat

English summary
Upendra revealed about how he got Real star title
Read more about: upendra sandalwood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X