"ಓ ನಲ್ಲ ಏನಿಲ್ಲ.." ವೈರಲ್ ರೀಲ್ಸ್ ಕ್ರಿಯೇಟರ್‌ ಬೇಜಾರಾಗಿದ್ದು ಏಕೆ? ರೀಲ್ಸ್‌ನಿಂದ ಹಣ ಗಳಿಸಿದ್ದೆಷ್ಟು?

ರಿಯಲ್‌ಸ್ಟಾರ್ ಉಪೇಂದ್ರ ನಟನೆಯ ಸಿನಿಮಾದ ಹಾಡು ಸೋಶಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ವೈರಲ್ ಆಗುತ್ತಿದೆ. ಉಪೇಂದ್ರ ಸಿನಿಮಾದ "ಓ ನಲ್ಲ.. ಏನಿಲ್ಲ ಏನಿಲ್ಲ.." ಅನ್ನೋ ಹಾಡಿನ ರೀಲ್ಸ್‌ಗೆ ನೆಟ್ಟಿಗರು ಮನಸೋತಿದ್ದಾರೆ. ರೀಲ್ಸ್ ಮಾಡುವವರೆಲ್ಲರೂ ಒಂದಲ್ಲ ಒಂದು ಕಾನ್ಸೆಪ್ಟ್ ಇಟ್ಕೊಂಡು "ಓ ನಲ್ಲ.. ಏನಿಲ್ಲ ಏನಿಲ್ಲ" ಹಾಡನ್ನು ಬಳಸುತ್ತಿದ್ದಾರೆ.

'ಉಪೇಂದ್ರ' ಸಿನಿಮಾ ರಿಲೀಸ್ ಆದ 25 ವರ್ಷಗಳ ಬಳಿಕ ಈ ಹಾಡು ಇಷ್ಟೊಂದು ವೈರಲ್ ಆಗುವುದಕ್ಕೆ ಕಾರಣ ರೀಲ್ಸ್ ಕ್ರಿಯೇಟರ್ ಮಾಡಿದ ಕನಕ. ಮೂಲಕ ಕಲ್ಯಾಣ ಕರ್ನಾಟಕ ಭಾಗದ ವಿಜಯನಗರದ ಕೊಟ್ಟೂರಿನ ಯುವ ಕನಕ. ಕಳೆದು ಕೆಲವು ವಾರಗಳಿಂದ ಈತ ಮಾಡಿದ ರೀಲ್ಸ್ ಅನ್ನು ಹಲವು ಮಂದಿ ರೀ ಕ್ರಿಯೇಟ್ ಮಾಡಿ ಫೇಮಸ್ ಆಗುತ್ತಿದ್ದಾರೆ.

How much money did the original creator Upendra movie O Nalla song reels get?

ಆದರೆ, ಈ ಹಾಡನ್ನು ಮೊದಲು ಕ್ರಿಯೇಟ್ ಮಾಡಿದ ಕನಕನಿಗೆ ಆರಂಭದಲ್ಲಿ ಬೇಜಾರು ಆಗಿತ್ತು. ಇಷ್ಟೊಂದು ಜನಪ್ರಿಯತೆ ಗಳಿಸಿದ್ದರೂ ಬೇಸರ ಯಾಕೆ? ಈ ರೀಲ್ಸ್‌ನಿಂದ ಕನಕನಿಗೆ ಎಷ್ಟು ಹಣ ಬಂತು? ಈ ಪ್ರಶ್ನೆಗಳಿಗೆ ಇತ್ತೀಚೆಗೆ ಗೆಳೆಯ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಬೇಸರ ಆಗಿದ್ದಿದ್ದು ಯಾಕೆ? ಎಷ್ಟು ಹಣ ಬಂತು? ಅನ್ನೋದನ್ನು ತಿಳಿಯಲು ಮುಂದೆ ಓದಿ..

ಕನಕ ಮಾಡಿದ "ಓ ನಲ್ಲ.. ನೀನಲ್ಲ" ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ, ಆರಂಭದಲ್ಲಿ ಈ ಹಾಡಿನ ಕ್ರೆಡಿಟ್ ಬೇರೆಯವರಿಗೆ ಹೋಗಿತ್ತು. ಓರಿಜಿನಲ್ ಕ್ರಿಯೇಟರ್ ಕನಕ ಆಗಿದ್ದರೂ, ಇವರ ವಿಡಿಯೋವನ್ನು ಕಟ್ ಮಾಡಿ ಬೇರೆಯವರು ತಮ್ಮಿಚ್ಚೆಯಂತೆ ರೀಲ್ಸ್ ಮಾಡಿದ್ದರು. ಇದು ಒರಿಜಿನಲ್ ಕ್ರಿಯೇಟರ್ ಆಗಿ ಕನಕಗೆ ಬೇಸರ ತರಿಸಿತ್ತು. ಅದಕ್ಕಾಗಿ ಮತ್ತೊಂದು ವಿಡಿಯೋ ಮಾಡಿದ್ದರು. ಆ ಬಳಿಕವೇ ಕನಕಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದನ್ನು ತನ್ನ ಗೆಳೆಯ ಯೂಟ್ಯೂಬ್ ಚಾನೆಲ್‌ಗೆ ತಿಳಿಸಿದ್ದಾರೆ.

"ಗುರು.. ಒಂದು ಟೈಮ್‌ನಲ್ಲಿ ಅವಳಾಗೇ ಬಂದ್ಲು.. ಅವಳಾಗೇ ಹೋದ್ಲು.. ಆದರೆ, ಹೋಗುವಾಗ ಒಂದೇ ಒಂದು ಮಾತು ಹೇಳಿದ್ಲು ಮಗ.. ಏನಂದ್ಲ ಲೇ.. ಅಂತಿತ್ತು. ಈಗ ಯಾರು ಒರಿಜಿನಲ್ ಕ್ರಿಯೇಟರ್ ಅಂತ ತೋರಿಸುತ್ತಿದ್ದಾರಲ್ಲ ಅವರು ನನ್ನನ್ನು ಕಟ್ ಮಾಡಿದ್ದಾರೆ. ಒಂದು ಟೈಮ್‌ನಲ್ಲಿ ಅವಳಾಗೇ ಬಂದ್ಲು.. ಅವಳಾಗೇ ಹೋದ್ಲು.. ಅನ್ನೋದನ್ನು ಕಟ್ ಮಾಡಿ, ಹೋಗುವಾಗ ಒಂದೇ ಒಂದು ಮಾತು ಹೇಳಿದ್ಲು ಮಗ.. ಅಲ್ಲಿಂದ ಹಾಕಿದ್ರು." ಎಂದು ಕನಕ ಹೇಳಿದ್ದಾರೆ.

ಹೀಗೆ ಮಾಡಿದ್ದರಿಂದ ಬೇರೆ ಕ್ರಿಯೇಟರ್‌ಗಳಿಗೆ ಮಿಲಿಯನ್ಸ್ ಲೆಕ್ಕದಲ್ಲಿ ವೀವ್ಸ್ ಬಂದಿತ್ತು. ಆದರೆ, ಒರಿಜಿನಲ್ ಕ್ರಿಯೇಟರ್ ಆಗಿದ್ದ ಕನಕಗೆ ಕ್ರೆಡಿಟ್ ಸಿಕ್ಕಿರಲಿಲ್ಲ. ವೀವ್ಸ್ ಕೂಡ ಬಂದಿರಲಿಲ್ಲ. "ಡ್ರೈವರ್‌ಗಳಿಂದಲೇ ಆ ಸಾಂಗ್ ವೈರಲ್ ಆಗಿತ್ತು. ಆ ಮೇಲೆ ಎಲ್ಲಾ ಕ್ರಿಯೇಟರ್‌ಗಳು ಶುರು ಮಾಡಿದ್ರು. ಆಗಲೇ ನನಗೆ ಬೇಜಾರಾಗಿತ್ತು. ಎಲ್ಲರೂ ಮಿಲಿಯನ್ ವೀವ್ಸ್ ತಗೋತಿದ್ದಾರೆ. ಒರಿಜನಲ್ ಕ್ರಿಯೇಟರ್‌ಗೆ ಸಿಕ್ಕಿಲ್ಲ ಅಂತ" ಎಂದು ಓ ನಲ್ಲ ಒರಿಜಿನಲ್ ಕ್ರಿಯೇಟರ್ ಹೇಳಿಕೊಂಡಿದ್ದಾರೆ.

ಹಾಗೇ "ಓ ನಲ್ಲ.." ಹಾಡಿನ ರೀಲ್ಸ್‌ನಿಂದ ಎಷ್ಟು ಹಣ ಸಂಪಾದನೆ ಮಾಡಿದ್ದಾರೆ ಅನ್ನೋ ಬಗ್ಗೆನೂ ಚರ್ಚೆಯಾಗುತ್ತಿದೆ. ಅದಕ್ಕೂ ಕನಕ ಉತ್ತರ ಕೊಟ್ಟಿದ್ದಾರೆ. "ವಿಡಿಯೋ ವೈರಲ್ ಆಯ್ತು ಅಂತ ಯಾರೂ ದುಡ್ಡು ಕೊಡಲ್ಲ. ಇನ್‌ಸ್ಟಾಗ್ರಾಂನವರು ದುಡ್ಡು ಕೊಡಲ್ಲ. ಹೆಸರು ಬರುತ್ತೆ ಅಷ್ಟೇ.. ಬರೀ ಬೆಟ್ಟಿಂಗ್ ಆಪ್‌ಗಳು ಬರುತ್ತವೆ. ಅದು ಕೆಲವೊಮ್ಮೆ ನೆಗೆಟಿವ್ ಆಗುತ್ತವೆ. ಕೆಲವೊಮ್ಮೆ ಪಾಸಿಟಿವ್ ಆಗುತ್ತವೆ. ಕೆಲವೊಮ್ಮೆ ಬೈಯಿಸಿಕೊಳ್ಳುತ್ತೇವೆ ಏನು ಮಾಡೋಕೆ ಆಗಲ್ಲ.. ಹೊಟ್ಟೆಪಾಡು" ಎಂದು ರೀಲ್ಸ್‌ನಿಂದ ಏನೂ ಹಣ ಸಿಕ್ಕಿಲ್ಲ ಎಂದು ಕನಕ ಹೇಳಿದ್ದಾರೆ.

More from Filmibeat

English summary
Upendra movie O Nalla song reels creator Kanaka was disappointed. Why?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X