ಅಣ್ಣಾವ್ರೊಂದಿಗೆ ಭಾರತಿ ನಟಿಸಿದ ಮೊದಲ ಸಿನಿಮಾ ಯಾವುದು? ಆಗ ಅವರ ವಯಸ್ಸು ಎಷ್ಟಾಗಿತ್ತು?

ಡಾ.ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಮೇರು ನಟ. ಸುಮಾರು 212ಕ್ಕೂ ಅಧಿಕ ಸಿನಿಮಾಗಳಲ್ಲಿ ಅಣ್ಣಾವ್ರು ನಟಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇವರು ಕೊಟ್ಟಿರುವ ಕೊಡುಗೆ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಆದರೆ, ಇವರು ನಟಿಸಿದ ಪ್ರತಿಯೊಂದು ಸಿನಿಮಾದಲ್ಲೂ ಒಂದೊಂದು ಇಂಟ್ರೆಸ್ಟಿಂಗ್ ಕಥೆಯಿದೆ.

ಅಣ್ಣಾವ್ರು ಜೊತೆ ಕನ್ನಡದ ಹಲವು ನಟಿಯರು ನಟನೆ ಮಾಡಿದ್ದಾರೆ. ಲೀಲಾವತಿ, ಕಲ್ಪನಾ, ಜಯಂತಿ, ಭಾರತಿ ಇವರೆಲ್ಲರೂ ರಾಜ್‌ಕುಮಾರ್ ಅವರೊಂದಿಗೆ ನಟಿಸಿದ್ದಾರೆ. ಭಾರತಿಯವರು ಅಣ್ಣಾವ್ರೊಂದಿಗೆ ನಟಿಸಿದ ಸಿನಿಮಾಗಳು ವಿಶೇಷವಾಗಿ ನಿಲ್ಲುತ್ತವೆ. ಅದರಲ್ಲೂ ವರನಟನೊಂದಿಗೆ ನಟಿಸಿದ ಮೊದಲ ಸಿನಿಮಾವೇ ಹಲವು ವಿಶೇಷತೆಗಳೊಂದಿಗೆ ಕೂಡಿದೆ. ಈ ಬಗ್ಗೆ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಹರಿಹರಪುರ ಮಂಜುನಾಥ್ ವಿಸ್ತೃತವಾದ ವರದಿ ಪ್ರಸಾರ ಆಗಿದೆ. ಅಲ್ಲಿ ಹೇಳಲಾದ ಇಂಟ್ರೆಸ್ಟಿಂಗ್ ಸುದ್ದಿಯ ಝಲಕ್ ಇಲ್ಲಿದೆ.

How old was Bharti Vishnuvardhan when she acted in her first film with Rajkumar

26 ಸಿನಿಮಾಗಳಲ್ಲಿ ಅಣ್ಣಾವ್ರ ಜೊತೆ ನಟನೆ

ಅಣ್ಣಾವ್ರ ಜೊತೆ ನಟಿಸಿದ ನಾಯಕಿಯರಲ್ಲಿ ಲೀಲಾವತಿ, ಜಯಂತಿ, ಕಲ್ಪನಾ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಮೂವರು ನಾಯಕಿಯರು ರಾಜ್‌ಕುಮಾರ್ ಸಿನಿಮಾಗಳಲ್ಲಿ ನಾಯಕಿಯಾಗುವುದರ ಜೊತೆಗೆ ಬೇರೆ ಬೇರೆ ಪಾತ್ರಗಳಲ್ಲೂ ನಟಿಸಿದ್ದಾರೆ. ಆದರೆ, ಭಾರತಿ ಒಬ್ಬರೇ ನಾಯಕಿಯಾಗಿ ಮಾತ್ರ ಕಾಣಿಸಿಕೊಂಡಿದ್ದಾರೆಂದು ಹೇಳಿದ್ದಾರೆ. "ರಾಜ್‌ಕುಮಾರ್ ಅವರೊಂದಿಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಾಯಕಿ ಲೀಲಾವತಿಯವರು. ಆದರೆ, ಲೀಲಾವತಿ, ಜಯಂತಿ, ಕಲ್ಪನಾ ಈ ಮೂವರು ನಾಯಕಿಯರು ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿದ್ದರು. ಇವರಲ್ಲಿ ಭಾರತಿ ಮಾತ್ರ 26 ಚಿತ್ರಗಳಲ್ಲೂ ನಾಯಕಿಯಾಗಿಯೇ ಕಾಣಿಸಿಕೊಂಡಿದ್ದರು. " ಎಂದು ಹೇಳಿದ್ದಾರೆ.

ಅಣ್ಣಾವ್ರ ಜೊತೆ ನಟಿಸಿದ ಮೊದಲ ಸಿನಿಮಾ?

ರಾಜ್‌ಕುಮಾರ್ ಜೊತೆ ಭಾರತಿ ವಿಷ್ಣುವರ್ಧನ್ 'ಎಮ್ಮೆ ತಮ್ಮಣ್ಣ' ಹಾಗೂ 'ಮಧು ಮಾಲತಿ' ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಮೊದಲು ತೆರೆಕಂಡಿದ್ದು 'ಮಧು ಮಾಲತಿ'. "ಇಲ್ಲಿ 'ಮಧು ಮಾಲತಿ' ಪಾತ್ರದಲ್ಲಿಯೇ ಭಾರತಿ ನಟಿಸಿದ್ದರು. ರಾಜ್‌ಕುಮಾರ್ ಅವರೊಂದಿಗೆ ನಟಿಸಿದ ಮೊದಲ ಸಿನಿಮಾದಲ್ಲಿ ಅವರ ಪಾತ್ರದ ಹೆಸರನ್ನೇ ಇಡುವ ಅದೃಷ್ಟ ಒದಗಿ ಬಂದಿದೆ. " ಎಂದಿದ್ದಾರೆ.

How old was Bharti Vishnuvardhan when she acted in her first film with Rajkumar

ಮೊದಲು ಆಯ್ಕೆಯಾಗಿದ್ದು ಜಯಲಲಿತಾ

ಭಾರತಿ ವಿಷ್ಣುವರ್ಧನ್‌ಗಿಂತ ಮೊದಲು 'ಮಧು ಮಾಲತಿ' ಸಿನಿಮಾಗೆ ಜಯಲಲಿತಾ ಆಯ್ಕೆಯಾಗಿದ್ದರು. ಆದರೆ, ಸಿನಿಮಾ ಮುಂದಕ್ಕೆ ಹೋಗಿದ್ದರಿಂದ ಜಯಲಿಲಿತಾ ಹಿಂದೆ ಸರಿದಿದ್ದರು. "ಮಧು ಮಾಲತಿ ಸಿನಿಮಾ ಸೆಟ್ಟೇರಿದಾಗ ಮೊದಲ ಜಯಲಲಿತಾರನ್ನು ಆಯ್ಕೆ ಮಾಡಿರಲಾಗುತ್ತೆ. ಜಯಲಲಿತಾ ಅವರಿಗೆ ರಾಜ್‌ಕುಮಾರ್ ಸಿನಿಮಾದಲ್ಲಿ ನಟಿಸಬೇಕು ಅನ್ನುವ ಆಕಾಂಕ್ಷೆ ಇರುತ್ತೆ. ಆದರೆ, ಕಾರಣಾಂತರದಿಂದ ಚಿತ್ರದ ನಿರ್ಮಾಣ ಮುಂದಕ್ಕೆ ಹೋಗಿದ್ದರಿಂದ ಅವರು ತಮಿಳಿನಲ್ಲಿ ಬ್ಯುಸಿಯಾಗುತ್ತಾರೆ. ಹಾಗಾಗಿ ಅವರು ಬಂದು ಅಭಿನಯಿಸುವುದಕ್ಕೆ ಸಾಧ್ಯವಾಗಲಿಲ್ಲ." ಎಂದು ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಹೇಳುತ್ತಾರೆ.

ಭಾರತಿ ವಯಸ್ಸೆಷ್ಟು?

"ಮೆಜೆಸ್ಟಿಕ್‌ನ ಸಂಗಮ್ ಚಿತ್ರಮಂದಿರದಲ್ಲಿ ಮೊದಲ ಚಿತ್ರವಾಗಿ ಮಧು ಮಾಲತಿ ಬಿಡುಗಡೆಯಾಗುತ್ತೆ. ಈ ಸಿನಿಮಾದ ಹಾಡಿನಲ್ಲಿ ಶೋಡಶಿ ಅನ್ನೋ ಪದ ಬರುತ್ತೆ. ಅಂದರೆ, 16 ವರ್ಷದ ಯುವತಿ ಅಂತ. ಇಲ್ಲಿ ಕಾಕತಾಳೀಯ ಅಂದರೆ, 1950ರಲ್ಲಿ ಹುಟ್ಟಿದ್ದಾರೆ ಅಂತ ಕೆಲವು ಕಡೆ ಮಾಹಿತಿ ಇದೆ. ಇದನ್ನೇ ಇಟ್ಟುಕೊಂಡು ನೋಡುವುದಾದರೆ, ಈ ಸಿನಿಮಾ ರಿಲೀಸ್ ಆದಾಗ ಅವರಿಗೆ 16 ವರ್ಷ ವಯಸ್ಸಾಗಿರುತ್ತೆ." ಎನ್ನುತ್ತಾರೆ ಮಂಜುನಾಥ್.

More from Filmibeat

English summary
Bharathi Vishnuvardhan first movie with Dr.Rajkumar is Madhu Malathi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X