ಹೃತಿಕ್-ಕರೀನಾ ನಡುವೆ 'ಅಫೇರ್'? ಪದೇ ಪದೆ ಲಂಡನ್‌ಗೆ ಪಯಣ ಬೆಳೆಸಿದ್ದು ನಿಜವೇ? ಹೃತಿಕ್ ರೆಸ್ಪಾನ್ಸ್ ಏನು?
ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಇಂದು (ಜನವರಿ 10) ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 50ನೇ ವರ್ಷಕ್ಕೆ ಕಾಲಿಟ್ಟಿರೋ ನಟನಿಗೆ ಶುಭಾಶಯಗಳ ಸುರಿಮಳೆಯೇ ಸಿಕ್ಕಿದೆ. ಇಷ್ಟು ವಯಸ್ಸಾದರೂ, ಹೃತಿಕ್ ರೋಷನ್ ಇನ್ನೂ ತಮ್ಮ ದೇಹವನ್ನು ಕಟು ಮಸ್ತಾಗಿಯೇ ಇಟ್ಟಿಕೊಂಡಿದ್ದಾರೆ. ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ಪ್ರೇಕ್ಷಕರನ್ನು ಗೆಲ್ಲುತ್ತಿದ್ದಾರೆ.
ಹೃತಿಕ್ ರೋಷನ್ ಸಿನಿಮಾ ಜರ್ನಿ ಕೂಡ ಸಖತ್ ಇಂಟ್ರೆಸ್ಟಿಂಗ್. 'ಕಹೋ ನಾ ಪ್ಯಾರ್ ಹೇ' ಸಿನಿಮಾದಿಂದ ಆರಂಭ ಆದ ಸಿನಿಪಯಣ 'ಫೈಟರ್'ವರೆಗೂ ಬಂದು ನಿಂತಿದೆ. ಹೃತಿಕ್ ಸಿನಿಮಾ ಜರ್ನಿಯಲ್ಲೂ ಸೋಲು ಗೆಲುವುಗಳಿಗೇನು ಕಮ್ಮಿಯಿಲ್ಲ. ಇದರ ಜೊತೆ ಜೊತೆಗೇನೆ ರೂಮರ್‌ಗಳು ಕೂಡ ಹೃತಿಕ್ ರೋಷನ್ ಅನ್ನು ಬಿಟ್ಟಿಲ್ಲ.

'ಕಹೋ ನಾ ಪ್ಯಾರ್ ಹೇ' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗುತ್ತಿದ್ದಂತೆ ಹೃತಿಕ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಹೃತಿಕ್ ರೋಷನ್ ರೂಮರ್‌ಗಳಿಗೆ ಸಿಕ್ಕಿಕೊಂಡಿರಲಿಲ್ಲ. ಆದರೆ, ಬಾಲಿವುಡ್ ನಟ, ಅದರಲ್ಲೂ ಹ್ಯಾಂಡ್ಸಮ್ ಹೀರೊ ಬೇರೆ. ಇವರನ್ನು ಇಷ್ಟ ಪಡೆದವರೇನು ಇರಲಿಲ್ಲ. ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಹೃತಿಕ್ ರೋಷನ್ ಬಾಲಿವುಡ್ ನಟಿಯೊಂದಿಗೆ 'ಅಫೇರ್' ಇಟ್ಟುಕೊಂಡಿದ್ದಾರೆ ಅಂತ ಗುಲ್ಲೆದ್ದಿತ್ತು.
ಹೃತಿಕ್ ರೋಷನ್ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಜೊತೆ ಸಿನಿಮಾ ಮಾಡುತ್ತಿದ್ದರು. ಆ ವೇಳೆ ಹೃತಿಕ್ ಹಾಗೂ ಕರೀನಾ ಕಪೂರ್ ಇಬ್ಬರೂ ರೊಮ್ಯಾಂಟಿಕ್ ಮೂಡ್‌ನಲ್ಲಿ ಇದ್ದಾರೆಂಬ ಸುದ್ದಿ ಹರಿದಾಡಿತ್ತು. ಹೃತಿಕ್ ಹಾಗೂ ಕರೀನಾ ಕಪೂರ್ ಹೆಸರು ತಳುಕು ಹಾಕಿಕೊಳ್ಳುವುದಕ್ಕೂ ಕಾರಣವಿತ್ತು.
ಒಂದು ಕಾಲದಲ್ಲಿ ಹೃತಿಕ್ ರೋಷನ್ ಹಾಗೂ ಕರೀನಾ ಕಪೂರ್ ಇಬ್ಬರೂ ಒಟ್ಟಿಗೆ ಸಿನಿಮಾಗಳನ್ನು ಮಾಡುತ್ತಿದ್ದರು. 'ಕಭೀ ಖುಷಿ ಕಭೀ ಗಮ್', 'ಮುಜ್‌ಸೇ ದೋಸ್ತಿ ಕರೋಗೆ', 'ಮೇ ಪ್ರೇಮ್ ಕಿ ದೀವಾನಿ ಹೂಂ' ಅಂತಹ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಈ ಮೂರೂ ಸಿನಿಮಾಗಳಲ್ಲಿಯೂ ಇಬ್ಬರ ಜೋಡಿಯಾಗಿಯೇ ನಟಿಸಿದ್ದರು. ಈ ಜೋಡಿ ಕೂಡ ಸಿನಿಪ್ರಿಯರಿಗೆ ಇಷ್ಟ ಆಗಿತ್ತು. ಈ ಸಂದರ್ಭದಲ್ಲಿ ಹೃತಿಕ್ ಹಾಗೂ ಕರೀನಾ ಕಪೂರ್ ಇಬ್ಬರು ಡೇಟಿಂಗ್ ಮಾಡುತ್ತಿದ್ದರು ಅಂತ ಗುಲ್ಲೆದ್ದಿತ್ತು.

ಇಷ್ಟೇ ಅಲ್ಲದೇ ಇವರಿಬ್ಬರ ಬಗ್ಗೆ ವರದಿಯೊಂದು ಪ್ರಸಾರ ಆಗಿತ್ತು. ನಟಿ ಕರೀನಾ ಕಪೂರ್ ಆಗಾಗ್ಗೆ ಹೃತಿಕ್ ರೋಷನ್ ಸಿನಿಮಾ ಸೆಟ್ಟಿಗೆ ಭೇಟಿ ನೀಡಲು ಲಂಡನ್‌ಗೆ ಹೋಗಿ ಬರುತ್ತಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಹೃತಿಕ್ ರೋಷನ್ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದರು. "ಇದು ಸಂಪೂರ್ಣ ಕಟ್ಟುಕಥೆ" ಎಂದು ಹೃತಿಕ್ ರೋಷನ್ ಪ್ರತಿಕ್ರಿಯೆ ನೀಡಿದ್ದರು. ಇಷ್ಟೇ ಅಲ್ಲದೆ ಕರೀನಾ ಕಪೂರ್ ಒಳ್ಳೆಯ ವ್ಯಕ್ತಿತ್ವದ ಹುಡುಗಿ. ಅಚಲವಾದ ಪ್ರಾಮಾಣಿಕತೆಯಿಂದ ಆಗಾಗ ಅವರನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತೆ" ಎಂದು ಪ್ರತಿಕ್ರಿಯೆ ನೀಡಿದ್ದರು.
ಸದ್ಯ ಇಬ್ಬರೂ ತಮ್ಮ ಬದುಕಿನಲ್ಲಿ ಬೇರೆ ಬೇರೆ ಹಾದಿಯಲ್ಲಿ ಸಾಗುತ್ತಿದ್ದಾರೆ. ಕರೀನಾ ಕಪೂರ್ ಬಾಲಿವುಡ್ ನಟ ಸೈಫ್ ಅಲಿ ಖಾನ್‌ರನ್ನು ವಿವಾಹವಾಗಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇತ್ತ ಹೃತಿಕ್ ರೋಷನ್ ವಿಚ್ಛೇದನದ ಬಳಿಕ ಸಬಾ ಅಜಾದ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಇದೆ.
ಹೃತಿಕ್ ರೋಷನ್ ಸಿನಿಮಾ 'ಫೈಟರ್' ಬಿಡುಗಡೆ ಸಜ್ಜಾಗಿದೆ. ಹಾಗೇ 'ವಾರ್ 2' ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನು ಕರೀನಾ ಕಪೂರ್ ಖಾನ್ ಕೂಡ 'ದಿ ಕ್ರ್ಯೂ' ಹಾಗೂ 'ಬಕಿಂಗ್ಹ್ಯಾಮ್ ಮರ್ಡರ್ಸ್' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗೇ ಇನ್ನೊಂದು ಕಡೆ ಯಶ್ ನಟಿಸುತ್ತಿರುವ 'ಟಾಕ್ಸಿಕ್' ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಅನ್ನೋ ಮಾತು ಇದೆ.


Click it and Unblock the Notifications










